Connect with us

    DAKSHINA KANNADA

    ಬೋಳಾರ ಸುಬ್ಬಯ್ಯ ಶೆಟ್ಟಿಗೆ ‘ಬೋಳಾರ ಪ್ರಶಸ್ತಿ’ ಪ್ರದಾನ

    Published

    on

    ಮಂಗಳೂರು: ಬೆಳ್ಳಿಪಾಡಿ ಸತೀಶ ರೈ, ಶೋಭಾ ರೈ ಮತ್ತು ಸಾಯಿಶರಣ್ ಹಾಗೂ ನವಜೋಡಿ ಸಾಯೀಲ್ ದಂಪತಿಯ ಸೇವಾರ್ಥವಾಗಿ ಪಾವಂಜೆ ಮೇಳದವರಿಂದ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ “ಶ್ರೀ ದೇವೀಮಹಾತ್ಮೆ” ಯಕ್ಷಗಾನ ಮಂಗಳೂರಿನಲ್ಲಿ ನಡೆಯಿತು.

    ಈ ಸಂದರ್ಭದಲ್ಲಿ ಬೋಳಾರದ ಯಕ್ಷಗಾನ ಸಂಯೋಜಕರಾದ ಸಾಯಿ ಪ್ರೊಡಕ್ಷನ್ಸ್ & ಇವೆಂಟ್ ಕಂಪೆನಿಯ ವತಿಯಿಂದ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟಿಯವರಿಗೆ ಹಳೇಕೋಟೆ ಮಾರಿಯಮ್ಮ ಕ್ಷೇತ್ರದಲ್ಲಿ ಬೋಳಾರ ಪ್ರಶಸ್ತಿ -2022 ನೀಡಿ ಸನ್ಮಾನಿಸಲಾಯಿತು.

    ಗೌರವಧನದೊಂದಿಗೆ ಭ್ರಾಮರಿಯ ರಜತ ಪದಕ ನೀಡಿ ಗೌರವಿಸಲಾಯಿತು.
    ಕಳೆದ 50 ವರ್ಷಗಳಿಂದ ಕದ್ರಿ , ಸುಂಕದಕಟ್ಟೆ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಅನೇಕ ಮೇಳಗಳಲ್ಲಿ ವೇಷಧಾರಿಯಾಗಿ ದುಡಿದು ಕಳೆದೆರಡು ವರ್ಷಗಳಿಂದ ಬೆಂಕಿನಾಥೇಶ್ವರ ಮೇಳಗಳಲ್ಲಿ ಕಲಾಸೇವೆ ಮಾಡುತ್ತಿದ್ದಾರೆ.

    ಬೋಳಾರ ಮಾರಿಗುಡಿಯ ಸರಸ್ವತೀ ಯಕ್ಷಗಾನ ಸಂಘವನ್ನು ಹಲವಾರು ವರ್ಷ ಅದ್ಭುತ ಕಲಾವಿದನಾಗಿ , ಅಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಸುಬ್ಬಯ್ಯ ಶೆಟ್ಟಿಯನ್ನು ಅವರ ಪತ್ನಿಯೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

    ತನ್ನ ಸಂಮಾನ ಹಾರವನ್ನು ಪತ್ನಿ ಲೀಲಾವತಿಯವರಿಗೆ ಹಾಕಿ ತನ್ನ ಯಕ್ಷಪರ್ಯಟನೆಗೆ ಶುಭದೊಸಗೆಯಲ್ಲಿ ಸಹಕಾರ ನೀಡಿದ ಸಹಧರ್ಮಿಣಿಯನ್ನು ಅಭಿನಂದಿಸಿದರು.

    ಬೆಳ್ಳಿಪಾಡಿ ಸತೀಶ್ ರೈ ,ಶೋಭಾ ರೈ , ಸಾಯಿಶರಣ ರೈ , ಸಾದೂರು ಕಲ್ಲಂಜ ಶಂಕರ ಶೆಟ್ಟಿ , ತಾರಾನಾಥ ಶೆಟ್ಟಿ ಬೋಳಾರ ,ಪ್ರದೀಪ್ ಆಳ್ವ ಕದ್ರಿ,ಮುಲ್ಕಿ ಕರುಣಾಕರ ಶೆಟ್ಟಿ , ಅಶೋಕ ಶೆಟ್ಟಿ ಮಾರಿಗುಡಿ ಉಪಸ್ಥಿತರಿದ್ದರು.

    DAKSHINA KANNADA

    ಪಡೀಲ್‌ ಕಣ್ಣೂರು ಬಳಿ ಭೀಕರ ವಾಹನ ಅಪಘಾ*ತ; ಕೇಬಲ್ ಟೆಕ್ನಿಷಿಯನ್ ವಿಧಿವ*ಶ

    Published

    on

    ಮಂಗಳೂರು : ಪಡೀಲ್‌ ಕಣ್ಣೂರು ಬಳಿ ನಡೆದ ರಸ್ತೆ ಅಪಘಾ*ತದಲ್ಲಿ ನಮ್ಮ ಕುಡ್ಲ ವಾಹಿನಿಯ ಸಹಸಂಸ್ಥೆ ವಿಝಾರ್ಡ್‌ ಕೇಬಲ್‌ ನೆಟ್ ವರ್ಕ್‌ನ ಸಿಬಂದಿ ಹರೀಶ್ (45) ವಿಧಿವ*ಶರಾಗಿದ್ದಾರೆ. ಕರ್ತವ್ಯ ನಿಮಿತ್ತ ಫರಂಗಿಪೇಟೆಗೆ ತೆರಳಿದ್ದ ಹರೀಶ್ ಪಡೀಲ್‌ ಕಣ್ಣೂರು ಬಳಿ ಬೈಕ್ ನಿಲ್ಲಿಸಿದ್ದ ವೇಳೆ ವೇಗವಾಗಿ ಬಂದ ಡಸ್ಟರ್‌ ಕಾರೊಂದು ಬೈಕ್‌ಗೆ ಡಿ*ಕ್ಕಿ ಹೊಡೆದಿದೆ.


    ಮಹಿಳೆಯೊಬ್ಬರು ಕಾರು ಚಲಾಯಿಸುತ್ತಿದ್ದು, ಬೈಕ್‌ಗೆ ಡಿ*ಕ್ಕಿ ಹೊಡೆದ ಬಳಿಕ ಅಲ್ಪ ದೂರ ಚಲಿಸಿದ ಕಾರಣ ಬೈಕ್ ಸಹಿತ ಹರೀಶ್ ಕಾರಿನ ಅಡಿಗೆ ಸಿಲುಕಿಕೊಂಡಿದ್ದರು. ಈ ಭೀಕರ ಅಪಘಾ*ತದಲ್ಲಿ ಗಂಭೀರ ಗಾಯಗೊಂಡಿದ್ದ ಹರೀಶ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

    ಹರೀಶ್ ಕಲ್ಲಾಪು ಅವರು ಹಲವಾರು ವರ್ಷಗಳಿಂದ ವಿಝಾರ್ಡ್‌ ಕೆಬಲ್ ನೆಟ್‌ವರ್ಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ : ಕಾರ್ಕಳ : ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿ*ಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾ*ವು

    ಅಗಲಿದ ಸಿಬ್ಬಂದಿಗೆ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರು ಹಾಗೂ ಸಿಬಂದಿ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃ*ತ ಹರೀಶ್‌ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

    Continue Reading

    DAKSHINA KANNADA

    ಕದ್ದ ಫೋನ್ ಸ್ವಿಚ್ ಆಫ್ ಆಗಿದ್ರೂ ಸುಲಭದಲ್ಲಿ ಕಂಡುಹಿಡಿಯಬಹುದು.. ಹೇಗೆ ಗೊತ್ತಾ?

    Published

    on

    ಮಂಗಳೂರು: ನಿಮ್ಮ ಸ್ಮಾರ್ಟ್‌ಫೋನ್ ಕದ್ದರೆ ಮತ್ತು ಕಳ್ಳರು ಆ ಫೋನನ್ನು ಸ್ವಿಚ್ ಆಫ್ ಮಾಡಿದರೆ ಅದನ್ನು ಹುಡುಕುವುದು ದೊಡ್ಡ ಕಷ್ಟ. ಆದರೆ ಮುಂಬರುವ ಗೂಗಲ್‌ನ ನವೀಕರಣ, ಆಂಡ್ರಾಯ್ಡ್ ಬಳಕೆದಾರರ ಫೋನ್ ಸ್ವಿಚ್ ಆಫ್ ಆಗಿದ್ದರೂ ಅವರ ಸ್ಮಾರ್ಟ್‌ಫೋನ್ ನಿಖರವಾದ ಸ್ಥಳವನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ.

    ಗೂಗಲ್ ಶೀಘ್ರದಲ್ಲೇ ತನ್ನ ಆಂಡ್ರಾಯ್ಡ್ 15 ಅಪ್ಡೇಟ್ ಅನ್ನು ತರಲಿದೆ. ಇದನ್ನು ಇನ್​ಸ್ಟಾಲ್ ಮಾಡಿದ ನಂತರ ಆಂಡ್ರಾಯ್ಡ್ ಬಳಕೆದಾರರು ಸ್ವಿಚ್ ಆಫ್ ಮಾಡಿದ ನಂತರವೂ ತಮ್ಮ ಫೋನ್ ಅನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಿರಲಿಲ್ಲ.

    ಗೂಗಲ್ ಕಂಪನಿಯು ಆಂಡ್ರಾಯ್ಡ್ 15 ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಗೂಗಲ್‌ನ ಮುಂಬರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಆಂಡ್ರಾಯ್ಡ್ 15 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಉತ್ತಮ ವೈಶಿಷ್ಟ್ಯವನ್ನು ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ಫೋನ್ ಸ್ವಿಚ್ ಆಫ್ ಆಗಿದ್ದರೂ ಅದನ್ನು ಪತ್ತೆ ಮಾಡುವ ಆಯ್ಕೆ ಕೂಡ ಒಂದು.

    ಗೂಗಲ್​ನ ಮುಂಬರುವ OS ಆಂಡ್ರಾಯ್ಡ್ 15 ನಲ್ಲಿ ಪಾಸ್‌ವರ್ಡ್ ಮೂಲಕ ಹುಡುಕುವ ವೈಶಿಷ್ಟ್ಯವು ಲಭ್ಯವಿರುತ್ತದೆ. ಈ ಹೊಸ ವ್ಯವಸ್ಥೆಯು ಪೂರ್ವ ಕಂಪ್ಯೂಟೆಡ್ ಬ್ಲೂಟೂತ್ ಬೀಕನ್ ಆಗಿರುತ್ತದೆ. ಇದು ಸಾಧನದ ಮೆಮೊರಿಯಿಂದ ನಿಯಂತ್ರಿಸಲ್ಪಡುತ್ತದಂತೆ. ಇದಕ್ಕಾಗಿ ಫೋನ್​ನ ಹಾರ್ಡ್‌ವೇರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

    ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಆಂಡ್ರಾಯ್ಡ್ ತಜ್ಞ ಮಿಶಾಲ್ ರೆಹಮಾನ್ ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಜೊತೆಗೆ ಗೂಗಲ್‌ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಆಂಡ್ರಾಯ್ಡ್ 15 ಓಎಸ್ ಬಿಡುಗಡೆಗೆ ಯಾವುದೇ ನಿಖರವಾದ ದಿನಾಂಕವನ್ನು ಗೂಗಲ್ ಬಹಿರಂಗಪಡಿಸಿಲ್ಲ.

    Continue Reading

    DAKSHINA KANNADA

    ಮಾವಿನಹಣ್ಣು ತಿಂದ ನಂತರ ತಪ್ಪಿಯೂ ಈ ಆಹಾರಗಳನ್ನು ಸೇವಿಸಬಾರದು

    Published

    on

    ಮಂಗಳೂರುಈಗ ಮಾರುಕಟ್ಟೆಯಲ್ಲಿ ಹಣ್ಣಿನ ರಾಜ ಮಾವಿನ ಹಣ್ಣಿದ್ದೇ ಹವಾ. ಎಲ್ಲೆಲ್ಲಿ ನೋಡಿದರೂ ಮಾವಿನಹಣ್ಣುಗಳೇ ಕಾಣುತ್ತದೆ. ಸಖತ್ ಟೇಸ್ಟಿ ಆಗಿರುವ ಮಾವಿನಹಣ್ಣು ಎಲ್ಲರಿಗೂ ಫೇವರಿಟ್.

    ಮಾವಿನಹಣ್ಣು ಕೇವಲ ರುಚಿ ಮಾತ್ರವಲ್ಲ. ಇದು ಹಲವು ಪೋಷಕಾಂಶಗಳ ಆಗರವಾಗಿದೆ. ಆದರೆ ಮಾವಿನಹಣ್ಣು ತಿಂದ ತಕ್ಷಣ ತಪ್ಪಿಯೂ ಈ ಆಹಾರಗಳನ್ನು ಸೇವಿಸಬಾರದು. ಇದರಿಂದ ಆರೋಗ್ಯ ಕೆಡಬಹುದು. ಹಾಗಾದರೆ ಮಾವಿನಹಣ್ಣು ತಿಂದ ನಂತರ ಯಾವೆಲ್ಲಾ ಪದಾರ್ಥಗಳನ್ನು ತಿನ್ನಬಾರದು ಎಂಬುದನ್ನು ತಿಳಿಯೋಣ.

    ಮೊಸರು

    ಮಾವಿನಹಣ್ಣು ತಿಂದ ತಕ್ಷಣ ಮೊಸರು ತಿನ್ನಬಾರದು. ಮಾವಿನಹಣ್ಣು ಹೀಟ್. ಮೊಸರು ತಂಪು. ಹಾಗಾಗಿ ಈ ಎರಡನ್ನೂ ಒಂದೇ ಸಮಯಕ್ಕೆ ಅಥವಾ ಮಾವು ತಿಂದು ಮೊಸರು ತಿನ್ನುವುದು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಕಾಡಬಹುದು.

    ಹಾಗಲಕಾಯಿ

    ಮಾವಿನಹಣ್ಣು ತಿಂದ ನಂತರ ಹಾಗಲಕಾಯಿ ತಿನ್ನಬಾರದು. ಮಾವಿನಕಾಯಿ ತಿಂದ ತಕ್ಷಣ ಹಾಗಲಕಾಯಿ ತಿನ್ನುವುದರಿಂದ ವಾಕರಿಕೆ, ವಾಂತಿಯಂತಹ ಸಮಸ್ಯೆ ಎದುರಾಗಬಹುದು.

    ಹಾಲು

    ಮಾವು ತಿಂದ ನಂತರ ತಪ್ಪಿಯೂ ಹಾಲು ಕುಡಿಯಬಾರದು.

    ಮಸಾಲೆಯುಕ್ತ ಪದಾರ್ಥ

    ಮಾವಿನಹಣ್ಣು ತಿಂದ ತಕ್ಷಣ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗಬಹುದು. ಇದು ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

    ಮಾಂಸಾಹಾರ ಸೇವನೆ

    ಮಾವಿನಹಣ್ಣು ತಿಂದ ನಂತರ ಮಾಂಸಾಹಾರ ತಿನ್ನಬಾರದು. ಮಾವು ತಿಂದು ಕೋಳಿ, ಮೀನು, ಮೊಟ್ಟೆ ಇಂತಹದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು.

    ಕೋಲ್ಡ್ ಡ್ರಿಂಕ್ಸ್

    ಮಾವಿನಹಣ್ಣು ತಿಂದ ನಂತರ ಕೋಲ್ಡ್ ಡ್ರಿಂಕ್ಸ್ ಕುಡಿಯಬಾರದು. ಜೊತೆಗೆ ಹೆ್ಚ್ಚು ಸಕ್ಕರೆ ಇರುವ ಪದಾರ್ಥಗಳನ್ನು ಕೂಡ ತಿನ್ನುವುದನ್ನು ತಪ್ಪಿಸಬೇಕು.

    Continue Reading

    LATEST NEWS

    Trending