Connect with us

    ದಿ.ಮಹೇಂದ್ರ ಕುಮಾರರಿಗೆ ರಕ್ತದಾನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ  ಬ್ಲಡ್ ಹೆಲ್ಪ್ ಲೈನ್ 

    Published

    on

    ದಿ.ಮಹೇಂದ್ರ ಕುಮಾರರಿಗೆ ರಕ್ತದಾನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ  ಬ್ಲಡ್ ಹೆಲ್ಪ್ ಲೈನ್

    ಮಂಗಳೂರು : ಪ್ರಗತಿ ಪರ ಚಿಂತಕ, ‘ನಮ್ಮ ಧ್ವನಿ’ ಸಂಸ್ಥಾಪಕ ಮಹೇಂದ್ರ ಕುಮಾರ್ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ವತಿಯಿಂದ ರಕ್ತದಾನ ಕಾರ್ಯಕ್ರಮ ನಡೆಯಿತು.

    ದಿ.ಮಹೇಂದ್ರ ಕುಮಾರ್ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಪವಿತ್ರ ರಂಝಾನ್ ತಿಂಗಳ ವೃತ ಹಿಡಿದು ಉಪವಾಸ ತೊರೆದ ನಂತರ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಹಯೋಗದೊಂದಿಗೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು ರಕ್ತ ನಿಧಿಯ ಸದಸ್ಯರಾದ ಮುನೀರ್ ಕಣ್ಣೂರು,ಸಿನಾನ್ ಕಣ್ಣೂರು,ನಿಝಾರ್ ಕಣ್ಣೂರು ಸಹಿತ 12 ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ರಿಯಾಝ್ ಸೃಷ್ಟಿಕರ್ತನು ಮಹೇಂದ್ರ ಕುಮಾರ್ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಅವರ ಸ್ಪೂರ್ತಿ ಯಿಂದ ರಕ್ತದಾನ ಮಾಡಿ ಜೀವದಾನಿಯಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

    ಕೊರೋನಾ ಭೀತಿಯ ನಡುವೆಯೂ ಎಲ್ಲಾ ಸುರಕ್ಷತೆಯ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ರಕ್ತದಾನ ಮಾಡಲು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು ರಕ್ತ ನಿಧಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

     

    Click to comment

    Leave a Reply

    Your email address will not be published. Required fields are marked *

    LATEST NEWS

    ತಿಮ್ಮಪ್ಪನ ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಕಲಬೆರಕೆ; ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್..!!

    Published

    on

    ಆಂಧ್ರಪ್ರದೇಶ/ಮಂಗಳೂರು: ತಿರುಪತಿ ಲಡ್ಡು ವಿಚಾರದಲ್ಲಿ ಇಡೀ ದೇಶದಲ್ಲೇ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ತಿರುಪತಿ ತಿರುಮಲಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡುವ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವನ್ನು ಕಲಬೆರಕೆ ಮಾಡಲಾಗುತ್ತಿತ್ತು ಅನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ತಿರುಪತಿ ಲಡ್ಡು ಅಪವಿತ್ರ ಆಗಿದೆ ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಂಡಿದ್ದಾರೆ.

    ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ತುಪ್ಪದ ಜೊತೆಗೆ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಬಳಕೆ ಮಾಡಿರೋದು ಲ್ಯಾಬ್​ ಟೆಸ್ಟ್​ನಲ್ಲಿ ಕನ್ಫರ್ಮ್​ ಆಗಿದೆ. ಇನ್ನು ಈ ಬಗ್ಗೆ ತನಿಖೆಗಾಗಿ ವಿಶೇಷ ತಂಡ ರಚಿಸುವುದಾಗಿ ಪವನ್‌ ಕಲ್ಯಾಣ್ ಹೇಳಿದ್ದಾರೆ. ಅಲ್ಲದೇ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದಿರುವ ಅಪವಿತ್ರದ ಪರಿಹಾರಕ್ಕಾಗಿ ಪವನ್ ಕಲ್ಯಾಣ್‌ರವರು ವ್ರತಕೈಗೊಂಡಿದ್ದಾರೆ.

    11 ದಿನಗಳ ಕಾಲ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲು ನಿರ್ಧರಿಸಿದ್ದಾರೆ. ಏಡುಕುಂಡಲವಾಡ ಕ್ಷಮಿಸು ಅಂತ ಪವನ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲಿದ್ದಾರೆ. ಇಂದು ಗುಂಟೂರಿನ ವೆಂಕ ದೇವಾಲಯದಲ್ಲಿ ಆಂಧ್ರ ಉಪಮುಖ್ಯಮಂತ್ರಿ ದೀಕ್ಷೆಯನ್ನು ಆರಂಭಿಸಲಿದ್ದಾರೆ. 11 ದಿನದ ಬಳಿಕ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಪವನ್ ಭೇಟಿ ನೀಡಿ ವ್ರತವನ್ನು ಕೈಬಿಡಲಿದ್ದಾರೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೇ ವಿಚಾರಕ್ಕೆ ಟ್ವೀಟ್ ಮಾಡಿರೋ ಡಿಸಿಎಂ ಪವನ್ ಕಲ್ಯಾಣ್, ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆ ಮಾಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು..! ವೈಎಸ್‌ಆರ್ ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

    ಇನ್ಮುಂದೆ ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪ್ರತ್ಯೇಕ ಸಮಿತಿ ರಚಿಸಬೇಕು. ಸನಾತನ ಧರ್ಮ ರಕ್ಷಣಾ ಮಂಡಳಿಯನ್ನ ತಕ್ಷಣವೇ ಆರಂಭಿಸಬೇಕು. ಸನಾತನ ಧರ್ಮವನ್ನು ಅವಮಾನಿಸುವ ವಿಷಯಗಳನ್ನು ಕೊನೆಗಾಣಿಸಲು ಒಗ್ಗಟ್ಟಾಗಿ ಹೋರಾಡಬೇಕು ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ.

    ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ

    ಪವನ್ ಕಲ್ಯಾಣ್ ಟ್ವೀಟ್‌ಗೆ ನಟ ಪ್ರಕಾಶ್ ರಾಜ್ ಗೇಲಿ ಮಾಡಿದ್ದಾರೆ. ಸನಾತನ ಮಂಡಳಿ ಮಾಡೋದು ಬಿಟ್ಟು ಈ ಕೃತ್ಯ ಎಸಗಿದವರಿಗೆ ಮೊದಲು ಶಿಕ್ಷೆ ಕೊಡಿಸಿ ಅಂತ ಟೀಕೆ ಮಾಡಿದ್ದಾರೆ. “ಮಾನ್ಯ ಉಪ ಮುಖ್ಯಮಂತ್ರಿಗಳೇ.. ಈ ಘಟನೆ ನಿಮ್ಮ ಆಡಳಿತಾವಧಿಯಲ್ಲಿಯೇ ನಡೆದಿದೆ. ಈಗಾಗಲೇ ದೇಶದಲ್ಲಿ ಹಲವು ಸಮಸ್ಯೆಗಳಿವೆ. ಮತ್ತೆ ನೀವು ಹೊಸ ಸಮಸ್ಯೆಗಳನ್ನು ಇಲ್ಲಿಗೆ ತರುವುದು ಬೇಡ. ಮೊದಲು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸುವ ಕಡೆ ನಿಮ್ಮ ಗಮನವಿರಲಿ” ಎಂದು ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

    Continue Reading

    DAKSHINA KANNADA

    ಮೂಡುಬಿದಿರೆ : ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರ ಬಂಧನ

    Published

    on

    ಮೂಡುಬಿದಿರೆ : ಆತ ಒಬ್ಬ ಖತರ್ನಾಕ್‌ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ಹಲವು ಪೊಲೀಸ್ ಠಾಣೆಯಲ್ಲಿ 42 ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿತ್ತು. ಹಲವು ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ವಾರೆಂಟ್ ಇದ್ರೂ ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್‌ ಆಗ್ತಾನೆ ಇದ್ದ. ಇತ್ತೀಚೆಗೆ ಆಗಸ್ಟ್‌ ತಿಂಗಳಲ್ಲಿ ಮೂಡುಬಿದ್ರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆತ ವೃದ್ಧ ಮಹಿಳೆಯರನ್ನು ಗುರಿಯಾಗಿಸಿ ಅವರ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದ.

    ಮೂಡಬಿದ್ರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ನಿರ್ಮಲಾ ಪಂಡಿತ್ ಎಂಬ 70 ವರ್ಷದ ವೃದ್ದೆಯ 24 ಗ್ರಾಂ ಚಿನ್ನದ ಸರ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಾರ್ನಾಡು ಗ್ರಾಮದ ಬಸದಿ ಬಳಿ 82 ವರ್ಷ ಪ್ರಾಯದ ಪ್ರೇಮಾ ಎಂಬ ವೃದ್ಧೆಯ 24 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಈ ಎರಡೂ ಪ್ರಕರಣದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಈ ಕೃತ್ಯ ನಡೆಸಿದ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು.

    ಇದನ್ನೂ ಓದಿ :ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾ*ತ; ಸವಾರ ಸಾ*ವು

    ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿದಾಗ ಇದು ಖತರ್ನಾಕ್‌ ಖದೀಮ ಚೆಂಬುಗುಡ್ಡೆಯ ಹಬೀಬ್‌ ಹಸನ್‌ ಕೃತ್ಯ ಎಂಬುದು ಗೊತ್ತಾಗಿದೆ. ಈತನ ಮೇಲೆ ವಿವಿಧ ಠಾಣೆಯಲ್ಲಿ 15 ಕ್ಕೂ ಹೆಚ್ಚು ಬಂಧನದ ವಾರೆಂಟ್ ಇದ್ರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಇದೀಗ ಮೂಡುಬಿದ್ರೆಯಲ್ಲಿ ಕೊ*ಲೆ ಆರೋಪಿ ಬಂಟ್ವಾಳದ ಉಮ್ಮರ್ ಸಿಯಾಫ್ ಎಂಬಾತನ ಜೊತೆ ಸೇರಿ ಸರ ಕಳ್ಳತನಕ್ಕೆ ಇಳಿದಿದ್ದ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃ*ತ್ಯಕ್ಕೆ ಬಳಿಸಿದ್ದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.

    Continue Reading

    LATEST NEWS

    8 ವರ್ಷಗಳ ಬಳಿಕ ಆಗಮಿಸಿದ ಹಿಮಕರಡಿ ಹತ್ಯೆ

    Published

    on

    ಮಂಗಳೂರು/ರೇಕ್ಯವಿಕ್‌; ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ತೋಳಗಳ ಹಿಂಡು ಪುಟ್ಟ ಮಕ್ಕಳನ್ನು ಬೇಟೆಯಾಡುತ್ತಿವೆ. ಆರು ತೋಳಗಳಲ್ಲಿ ಐದನ್ನು ಸೆರೆಹಿಡಿದರೂ, ಈಗ ಒಂಟಿಯಾಗಿರುವ ತೋಳ ದಾಳಿ ನಿಂತಿಲ್ಲ. ಆದರೂ ಅದನ್ನು ಸಾಯಿಸದೆ ಸರ್ಕಾರವು ಎಲ್ಲವನ್ನೂ ಜೀವಂತ ಹಿಡಿಯುವ ಪ್ರಯತ್ನದಲ್ಲಿದೆ. ತೀರಾ ಅಪರೂಪದ್ದಾಗಿರುವ ಹಿಮ ಕರಡಿಗಳು ಅಳಿವಿನ ಅಂಚಿನಲ್ಲಿವೆ. ಐಸ್‌ಲ್ಯಾಂಡ್‌ನಲ್ಲಿ ಮನೆಯೊಂದರ ಸಮೀಪ ಬಂದ ಅಪರೂಪದ ಹಿಮಕರಡಿಯನ್ನು ಪೊಲೀಸರು ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.

    ಹಿಮ ಪ್ರದೇಶಗಳು ಕರಗುತ್ತಿದ್ದು, ಇಲ್ಲಿ ಮಾತ್ರ ವಾಸಿವ ಪ್ರಾಣಿಗಳು ನಶಿಸುವ ಅಪಾಯಕ್ಕೆ ಸಿಲುಕಿವೆ. ಅಪರೂಪದಲ್ಲಿ ಅಪರೂಪ ಎನಿಸಿರುವ ಈ ಪ್ರಾಣಿಗಳನ್ನು ಕೂಡ ಮನುಷ್ಯ ಆಹುತಿ ಪಡೆಯುತ್ತಿರುವುದು ಆತಂಕ ಮೂಡಿಸಿದೆ. ಐಸ್‌ಲ್ಯಾಂಡ್‌ನ ಕುಗ್ರಾಮವೊಂದರ ಮನೆಯ ಹೊರಗೆ ಬಲು ಅಪರೂಪದ ಹಿಮ ಕರಡಿಯೊಂದು ಕಾಣಿಸಿಕೊಂಡಿದ್ದು,
    ಒಂಟಿ ವೃದ್ಧೆಯ ನಿವಾಸದ ಬಳಿ ಈ ಹಿಮಕರಡಿ ಕಂಡುಬಂದಿದ್ದು, ಭಯಭೀತರಾಗಿ ತಮ್ಮ ಪುತ್ರಿಗೆ ಮಾಹಿತಿ ನೀಡಿದರು.
    ಸ್ಥಳಕ್ಕಾಗಮಿಸಿದ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. 2016 ರ ಬಳಿಕ ಮೊದಲ ಬಾರಿ ಹಿಮಕರಡಿ ಪತ್ತೆಯಾಗಿರುವುದು ಸುದ್ದಿಯಾಗಿದೆ.

    Continue Reading

    LATEST NEWS

    Trending