Connect with us

    LATEST NEWS

    ಕಪ್ಪು ಮಗು ಹುಟ್ಟಿದ್ದಕ್ಕೆ ಹೆಂಡತಿ ಮೇಲೆ ಅನುಮಾನ; ಡೈವೋರ್ಸ್​ ಕೇಳಿದ ಗಂಡ!

    Published

    on

    ಬೀಜಿಂಗ್: ಚೀನಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಮಗೆ ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಅನುಮಾನಗೊಂಡ ವ್ಯಕ್ತಿ ಹೆಂಡತಿಯಿಂದ ವಿಚ್ಛೇದನ ಕೋರಿದ್ದಾನೆ. ತಾನು, ತನ್ನ ಹೆಂಡತಿ ಇಬ್ಬರೂ ಬಿಳಿ ಬಣ್ಣದವರಾಗಿದ್ದರೂ ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಆ ಗಂಡ ಡಿಎನ್​ಎ ಪರೀಕ್ಷೆಗೆ ಒತ್ತಾಯಿಸಿದ್ದಾನೆ. ಹೆಂಡತಿಯ ಚಾರಿತ್ರ್ಯ ಸರಿಯಿಲ್ಲವೆಂದು ಆತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.

    ಸುಮಾರು 1 ತಿಂಗಳ ಹಿಂದೆ 30 ವರ್ಷದ ಮಹಿಳೆ ಸಿ-ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಅವರಿಗೆ ಕಪ್ಪು ಬಣ್ಣದ ಮಗು ಹುಟ್ಟಿತ್ತು. ಆಕೆ ಮತ್ತು ಆಕೆಯ ಗಂಡ ಬಿಳಿ ಬಣ್ಣದವರಾಗಿದ್ದು, ಕಪ್ಪು ಮಗು ಹೇಗೆ ಹುಟ್ಟಿತು ಎಂದು ಆಕೆಯ ಪತಿ ಆಘಾತಕ್ಕೊಳಗಾದ. ಇದೇ ಕಾರಣವನ್ನಿಟ್ಟುಕೊಂಡು ಆತ ವಿಚ್ಛೇದನ ಕೋರಿದ್ದಾನೆ.

    ಈ ಘಟನೆಯನ್ನು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಸಲಹೆ ಕೇಳಿದ್ದಾರೆ. ತನ್ನ ಪತಿ ಮೊದಲು ಮಗುವನ್ನು ನೋಡಲು ಬಂದಾಗ ಅವನು ಆಶ್ಚರ್ಯಚಕಿತನಾದನು. ಕಪ್ಪು ಬಣ್ಣದ್ದೆಂಬ ಕಾರಣಕ್ಕೆ ಮಗುವನ್ನು ಹಿಡಿಯಲು ನಿರಾಕರಿಸಿದನು ಎಂದು ಆಕೆ ವಿವರಿಸಿದ್ದಾಳೆ. ನಂತರ ಡಿಎನ್ಎ ಪರೀಕ್ಷೆ ನಡೆಸಿ ಮಗು ಆತನಿಗೇ ಹುಟ್ಟಿದ್ದು ಎಂದು ದೃಢಪಡಿಸುವಂತೆ ಒತ್ತಾಯಿಸಿದನು. ಅದು ನಮ್ಮಿಬ್ಬರದೇ ಮಗು ಎಂದು ಎಷ್ಟೇ ಹೇಳಿದರೂ ಆತ ಕೇಳಲಿಲ್ಲ ಎಂದು ಆಕೆ ಹೇಳಿದ್ದಾಳೆ.

    ಮಗುವಿನ ಕಪ್ಪು ಮೈಬಣ್ಣದಿಂದ ತನಗೂ ಆಶ್ಚರ್ಯವಾಯಿತು ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಆದರೆ, ಮಗುವಿನ ಬಣ್ಣದ ಕಾರಣಕ್ಕೆ ನಾನು ಹೆತ್ತ ಮಗುವನ್ನು ಕೈಬಿಡುವುದಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ. ಆಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ವಿಷಯವನ್ನು ಚರ್ಚಿಸಿದರೆ, ಇತರರು ಬಿಳಿ ಚರ್ಮದ ದಂಪತಿಗಳು ಕಪ್ಪು ಚರ್ಮದ ಮಗುವನ್ನು ಹೊಂದುವುದು ಅಸಾಮಾನ್ಯವೇನಲ್ಲ ಎಂದಿದ್ದಾರೆ.

    LATEST NEWS

    ಮಂಗಳೂರು ಮೂಲದ ಉದ್ಯಮಿಯಿಂದ ನೇಪಾಳದಲ್ಲಿ ಮಸೀದಿ ನಿರ್ಮಾಣ

    Published

    on

    ನೇಪಾಳ: ಮಂಗಳೂರಿನ ಸುರತ್ಕಲ್ ಮೂಲದ ಉದ್ಯಮಿಯೊಬ್ಬರು ನೇಪಾಳದಲ್ಲಿ ಮಸೀದಿ ನಿರ್ಮಾಣ ಮಾಡಿದ್ದಾರೆ.

    ಸುರತ್ಕಲ್, ಕೃಷ್ಣಾಪುರ ನಿವಾಸಿಯಾಗಿರುವ ಮುಹಮ್ಮದ್ ಹನೀಫ್ ತಂದೆ ತಾಯಿ ಹೆಸರಿನಲ್ಲಿ ಮಸೀದಿ ನಿರ್ಮಾಣ ಮಾಡಿಸಿದ್ದಾರೆ.

    ತಂದೆ ಮೊಹಿಯುದ್ದೀನ್ ಹಾಗೂ ತಾಯಿ ಬಿಫಾತಿಮ ಹೆಸರಲ್ಲಿ ನೇಪಾಳದ ಸನ್ಸರಿ ಜಿಲ್ಲೆ ಜಲ್ ಪಾ ಪುರ್ ಗ್ರಾಮದಲ್ಲಿ ಮಸೀದಿ ನಿರ್ಮಿಸಿ ಕಳೆದ ಶುಕ್ರವಾರ ಬೆಳಗ್ಗಿನ ನಮಾಝಿಗೆ ಲೋಕಾರ್ಪಣೆ ಮಾಡಿದ್ದಾರೆ. ಮಸ್ಜಿದ್ ಮುಹಿಯುದ್ದೀನ್ ಬಿಫಾತಿಮ ಎಂದು ಮಸೀದಿಗೆ ಹೆಸರಿಡಲಾಗಿದೆ.

    Continue Reading

    LATEST NEWS

    ಮಣಿಪಾಲ: ಅಸುರಕ್ಷಿತ ಡಾಮರು, ಜಲ್ಲಿ ಸಾಗಾಟ; ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು

    Published

    on

    ಮಣಿಪಾಲ: ಅಸುರಕ್ಷಿತವಾಗಿ ಡಾಮರು, ಜಲ್ಲಿ ಸಾಗಿಸುತ್ತಿದ್ದ ಕೇರಳ ನೋಂದಣಿಯ ಲಾರಿಯೊಂದನ್ನು ಮಣಿಪಾಲ ಠಾಣಾ ಪೊಲೀಸರು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಜಲ್ಲಿ ತುಂಬಿಸಿಕೊಂಡು ಪೆರಂಪಳ್ಳಿ ರಸ್ತೆ ಮೂಲಕ ಲಾರಿ ಸಾಗುತ್ತಿತ್ತು. ಈ ವೇಳೆ ಜಲ್ಲಿಗಳು ರಸ್ತೆಗೆ ಬಿದ್ದು, ಇತರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು.

    ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಬಾಗಿಲು ಕಡೆಗೆ ಹೋಗುತಿದ್ದ ಈ ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಚಾಲಕ ಸೂಚನೆ ಧಿಕ್ಕರಿಸಿ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ಲಾರಿಯನ್ನು ಬೆನ್ನಟ್ಟಿದ ಪೊಲೀಸರು ಕಕ್ಕುಂಜೆ ರೈಲ್ವೇ ಸೇತುವೆಯ ಬಳಿ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಲಾರಿ ಚಾಲಕ ಸಂಗನಗೌಡ ಪಾಟೀಲ್‌ ವಿರುದ್ಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಸ್ಯ ನಟ ಮಂಜು ಪಾವಗಡ; ಗಣ್ಯರಿಂದ ಶುಭ ಹಾರೈಕೆ

    Published

    on

    ಕನ್ನಡ ಕಿರುತೆರೆ ನಟ, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಂಜು ಪಾವಗಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಮೂಲದ ನಂದಿನಿ ಜೊತೆ ಮಂಜು ಪಾವಗಡ ಸಪ್ತಪದಿ ತುಳಿದಿದ್ದಾರೆ.

    ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಗುರು ಹಿರಿಯರ ಸಮ್ಮುಖದಲ್ಲಿ ಮಂಜು ಮತ್ತು ನಂದಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಪಾವಗಡದಲ್ಲಿ ಮದುವೆ ಸಮಾರಂಭ ನಡೆದಿದೆ.

    ನಿನ್ನೆ ಮತ್ತು ಇವತ್ತು ಮದುವೆ ಕಾರ್ಯಕ್ರಮಗಳು ನಡೆದವು. ಇದೀಗ ಮಂಜು ಪಾವಗಡ ಮದುವೆ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು, ಗಣ್ಯರು ಶುಭ ಹಾರೈಸುತ್ತಿದ್ದಾರೆ. ಮಂಜು ಅವರ ಕೈಹಿಡಿದ ಹುಡುಗಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾರೆ.

    ಹಾಸ್ಯ ನಟನಾಗಿ ಮಂಜು ಪಾವಗಡ ಅವರು ಕಿರುತೆರೆ ವೀಕ್ಷಕರ ನೆಚ್ಚಿನ ನಟರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಸರಳತೆ, ಹಾಸ್ಯ ಪ್ರಜ್ಞೆಯಿಂದಲೇ ಮನೆ ಮಾತಾಗಿರುವ ನಟ ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಇತ್ತೀಚೆಗೆ ಮಂಜು ಪಾವಗಡ ಬೆಂಗಳೂರಿನಲ್ಲಿ ತಮ್ಮ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ.

    Continue Reading

    LATEST NEWS

    Trending