LATEST NEWS
ಮಂಗಳೂರು ಲೇಡಿಸ್ ಕ್ಲಬ್ ಜಟಾಪಟಿ: ಕಾಂಗ್ರೆಸ್-ಬಿಜೆಪಿ ಮಧ್ಯೆ ಕೆಸರೆರಚಾಟ..!
Published
3 years agoon
By
Adminಮಂಗಳೂರು: ಮನಪಾ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ನ ಸದಸ್ಯರೊಬ್ಬರು ಮಹಿಳಾ ಪರ ಸಂಘಟನೆಯನ್ನು ದೂರುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣಿಗೆ ಉನ್ನತ ಸ್ಥಾನಮಾನ ಕೊಟ್ಟ ದೇಶ ಭಾರತ. ಆದರೆ ಕಳೆದ ದಿನದೆರಡು ಹಿಂದೆ ಮನಪಾ ಸಾಮಾನ್ಯ ಸಭೆಯಲ್ಲಿ ನಗರದ ಬಾವುಟ ಗುಡ್ಡೆಯಲ್ಲಿರುವ ಮಹಿಳಾ ಪರ ಸಂಘಟನೆಯಾದ ಲೇಡಿಸ್ ಕ್ಲಬ್ ಅನ್ನು ದೂರುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ.
ಮಹಿಳಾ ಸಂಘಟನೆ ದೂರಿರುವುದು ನಮಗೆ ಬೇಸರ ತರಿಸಿದೆ. ಸಭೆಯಲ್ಲಿ ಕಾಮಗಾರಿಯ ಲೋಪದ ಬಗ್ಗೆ ಮಾತನಾಡುವುದು ಬಿಟ್ಟು ಮಹಿಳಾ ಪರ ಸಂಘಟನೆ ಬಗ್ಗೆ ಮಾತನಾಡಿದ್ದಾರೆ. ಇದು ದ.ಕ ಜಿಲ್ಲೆ ಮಹಿಳೆಯರಿಗೆ ನೋವಿನ ಸಂಗತಿ. ಈ ಹಿಂದೆ ಸದನದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದರು. ಆ ಕಾಮಗಾರಿ ಮಾಡುವಾಗ ಅದನ್ನು ಅಲ್ಲೇ ನಿಲ್ಲಿಸಬಹುದಿತ್ತು. ಆದರೆ ಆಗ ಮಾತನಾಡದೇ ಈಗ ಏಕೆ ಮಾತನಾಡಿದ್ದಾರೆ. ಅವರ ಈ ಮಾತನ್ನು ನಾವು ಖಂಡಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ರೂಪ ಡಿ. ಬಂಗೇರ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ಸೇವಂತಿ ಶ್ರಿಯಾನ್, ದಕ್ಷಿಣ ಮಂಡಲ ಮಹಿಳಾ ಮೋರ್ಚದ ಅಧ್ಯಕ್ಷೆ ಪೂರ್ಣಿಮಾ ರಾವ್, ಮನಪಾ ಸದಸ್ಯೆ ಪೂರ್ಣಿಮ, ಲೀಲಾವತಿ ಉಪಸ್ಥಿತಿ
ಹೆಸರು ಹೇಳಲು ಹಿಂಜರಿದ ಮಹಿಳಾ ಮಣಿಗಳು
ಸುದ್ದಿಗೋಷ್ಠಿಯುದ್ದಕ್ಕೂ ಮನಪಾ ಸದಸ್ಯ ಎಂದು ಹೆಸರು ಹೇಳದೇ ಆರೋಪ ಮಾಡಿದರು. ಈ ವೇಳೆ ಪತ್ರಕರ್ತರು ಯಾವ ಮನಪಾ ಸದಸ್ಯ ಎಂದು ಕೇಳಿದಾಗ ಹೆಸರು ಹೇಳಲು ಹಿಂಜರಿದ ಬಿಜೆಪಿ ಮಹಿಳಾ ನಾಯಕರು, ಕೊನೆಗೆ ವಿನಯ್ ರಾಜ್ ಎಂದು ಹೆಸರು ಹೇಳಿದರು.
ಮನಪಾ ಸಭೆಯಲ್ಲಿ ಹೇಳಿದ್ದೇನು?
ಎರಡು ದಿನಗಳ ಹಿಂದೆ ಮಂಗಳೂರು ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಎ.ಸಿ ವಿನಯ್ರಾಜ್ ಮಾತನಾಡಿ, ಸ್ಮಾರ್ಟ್ ಸಿಟಿಯ ಕಾಮಗಾರಿಯ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಅಥವಾ ವಿರೋಧ ಪಕ್ಷದವರಿಗೆ ಮಾಹಿತಿ ನೀಡುವುದಿಲ್ಲ.
ಡಿಸೈನ್ ಬಗ್ಗೆ ಮಾಹಿತಿ ಇಲ್ಲ. ಡಿಸೈನ್ ಅನ್ನು ಆನ್ಸ್ಪಾಟ್ ಬದಲಾಗುತ್ತದೆ. ಒಂದು ಲೇಡೀಸ್ ಕ್ಲಬ್ಬಿಗೋಸ್ಕರ ಒಂದೂವರೆ ಕೋಟಿ ಖರ್ಚು ಮಾಡಿದ್ದೀರಿ. ಐದು ಫೀಟ್ ಎತ್ತರದ ಗೋಡೆಯನ್ನು 7 ಅಡಿ ಮಾಡಿ ಫೈಂಟ್ ಮಾಡಿಸಿದ್ದೀರಿ.
ಅದೂ ರಾಜ್ಯ ಸರ್ಕಾರದಿಂದ 100 ವರ್ಷಕ್ಕೆ ಲೀಸ್ಗೆ ಬಂದಿರುವ ಆಸ್ತಿ, ಅವರು ನಮಗೆ ಟರ್ಮ್ಸ್ ಮತ್ತು ಕಂಡೀಷನ್ ಹಾಕುತ್ತಿದ್ದಾರೆ. ಮಂಗಳೂರು ನಗರಕ್ಕೆ ಅಥವಾ ಪಾಲಿಕೆಗೆ ಲೇಡಿಸ್ ಕ್ಲಬ್ನ ಕೊಡುಗೆ ಏನು? ಎಂದು ಪ್ರಶ್ನಿಸಿದರು.
ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಗದ್ದಲವೇರ್ಪಟ್ಟಿತು. ಈ ವೇಳೆ ಎದ್ದು ನಿಂತ ಉಳಿದ ಕಾಂಗ್ರೆಸ್ ಸದಸ್ಯರು ವಿನಯ್ರಾಜ್ ಅವರು ಮಹಿಳೆಯರ ಬಗ್ಗೆ ಮಾತನಾಡಿಲ್ಲ ಬದಲಾಗಿ ಒಂದೂವರೆ ಕೋಟಿ ವ್ಯಯಿಸಿದ್ದನ್ನು ಪ್ರಶ್ನಿಸಿದರು ಎಂದು ಸಮಜಾಯಿಷಿ ನೀಡಿದರೂ ಬಿಜೆಪಿಗರು ಕೇಳುವ ಸ್ಥಿತಿಯಲ್ಲಿರಲಿಲ್ಲ.
LATEST NEWS
ಮತ್ತೆ ತಾಯಿ ಮಡಿಲು ಸೇರಿದ ಅಪಹರಣಕ್ಕೊಳಗಾಗಿದ್ದ ನವಜಾತ ಶಿಶು; ಇಬ್ಬರು ಕಳ್ಳಿಯರು ಅರೆಸ್ಟ್
Published
30 minutes agoon
27/11/2024By
NEWS DESK4ಮಂಗಳೂರು/ಕಲಬುರಗಿ : ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಅಪಹರಣಕ್ಕೊಳಗಾಗಿದ್ದ ನವಜಾತ ಶಿಶುವನ್ನು 36 ಗಂಟೆಗಳಲ್ಲಿ ರಕ್ಷಿಸಿ, ಮತ್ತೆ ತಾಯಿಯ ಮಡಿಲು ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗುವನ್ನು ಅಪಹರಣ ಮಾಡಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಹೆಚ್.ನಸ್ರೀನ್ ಮತ್ತು ಫಾತೀಮಾ ಬಂಧಿತ ಆರೋಪಿಗಳು.
ಸೋಮವಾರ(ನ.25)ಮುಂಜಾನೆ ಮಹಿಳೆಯರಿಬ್ಬರು ಜಿಮ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ನವಜಾತ ಶಿಶುವನ್ನು ಅಪಹರಿಸಿ ಪರಾರಿಯಾಗಿದ್ದರು. ಈ ಘಟನೆ ರಾಜ್ಯದ್ಯಂತ ಭಾರಿ ಸುದ್ದಿಯಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಪೊಲೀಸರು ಕಳ್ಳಿಯರನ್ನು ಬಂಧಿಸಿದ್ದಾರೆ.
ನರ್ಸ್ ವೇಷದಲ್ಲಿ ಬಂದಿದ್ದ ಕಳ್ಳಿಯರು :
ಕಸ್ತೂರಿ ಎಂಬವರು ಸೋಮವಾರ ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ ಮಗು ಆರೋಗ್ಯವಾಗಿದ್ದರು. ಆದರೆ, ನರ್ಸ್ ವೇಷದಲ್ಲಿ ಬಂದ ಮಹಿಳೆಯರು, ರಕ್ತ ಪರೀಕ್ಷೆ ಮಾಡಬೇಕು, ಮಗುವನ್ನು ಕರೆ ತನ್ನಿ ಎಂದು ಹೇಳಿದ್ದಾರೆ. ಇದನ್ನು ನಂಬಿ ಕಸ್ತೂರಿ ಅವರ ಸಂಬಂಧಿ ರಕ್ತ ತಪಾಸಣೆಗಾಗಿ ಮಗುವಿನೊಂದಿಗೆ ಹೋಗಿದ್ದರು. ಈ ವೇಳೆ ಮಹಿಳೆಯರು ಮಗುವನ್ನು ನಮಗೆ ಕೊಡಿ ಎಂದಿದ್ದಾರೆ. ಅದರಂತೆ ಮಹಿಳೆ ಮಗುವನ್ನು ಅವರಿಗೆ ಕೊಟ್ಟಿದ್ದಾರೆ. ಮಗು ಪಡೆದ ಕಳ್ಳಿಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ : ಬೆಚ್ಚಿ ಬೀಳಿಸಿದ ಯುವತಿ ಕೊ*ಲೆ ಪ್ರಕರಣ; ಪ್ರೇಯಸಿಯ ಶ*ವದೊಂದಿಗೆ ಒಂದು ದಿನ ಕಳೆದಿದ್ದ ಯುವಕ!
ಈ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ, ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
International news
ನೀವು ಕೂಡ ಕ್ರಿಕೆಟ್ ಅಂಪೈರ್ ಆಗಬಹುದು; ಲಕ್ಷ ಲಕ್ಷ ಸಂಬಳ !
Published
45 minutes agoon
27/11/2024By
NEWS DESK3ಮಂಗಳೂರು : ಭಾರತದಲ್ಲಿ ಕ್ರಿಕೆಟ್ ಗೆ ಎಷ್ಟು ಕ್ರೇಜ್ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಾಲ್ಯದಲ್ಲಿ ಕ್ರಿಕೆಟ್ ಆಡುವ ಪ್ರತಿಯೊಬ್ಬರು ಕೂಡ ಭಾರತದ ಪರ ಆಡುವ ಕನಸನ್ನು ಕಾಣುತ್ತಾರೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಕನಸು ಈಡೇರದಿದ್ದರೂ ನೀವು ಅಂಪೈರ್ ಆಗುವ ಮೂಲಕ ನಿಮ್ಮ ಕನಸನ್ನು ಸಾಕಾರಗೊಳಿಸಬಹುದು.
ಕೆಲವೇ ಕೆಲವು ಜನರಿಗೆ ಮಾತ್ರ ಅಂಪೈರ್ ಆಗುವುದು ಹೇಗೆಂದು ಗೊತ್ತಿದೆ. ಕ್ರಿಕೆಟ್ ಅಂಪೈರ್ ಆಗಲು ಕೆಲವೊಂದು ಪ್ರಕ್ರಿಯೆಗಳಿವೆ. ಕ್ರಿಕೆಟ್ ಕೌಶಲ್ಯವನ್ನು ಮಾತ್ರವಲ್ಲದೇ ದೈಹಿಕ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕೂಡ ಮುಖ್ಯವಾಗಿರುತ್ತದೆ.
ಅಂಪೈರ್ ಆಗಲು ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ?
ಸ್ಥಳೀಯ ಮಟ್ಟದಲ್ಲಿ ನಡೆಯುವ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಬೇಕು. ಆ ಮೂಲಕ ಅಂಪೈರಿಂಗ್ ಮಾಡುವ ಅನುಭವವನ್ನು ಪಡೆದುಕೊಳ್ಳಬೇಕು. ಇಲ್ಲಿ ಸಿಗುವ ಅನುಭವ ಅಂಪೈರ್ ವಿಭಾಗದಲ್ಲಿ ನಿಮ್ಮನ್ನು ಎತ್ತರ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ನಂತರ ಕ್ರಿಕೆಟ್ ಅಂಪೈರ್ ಆಗಲು ಬಯಸಿದ ಅಭ್ಯರ್ಥಿಗಳು ತಮಗೆ ಸಂಬಂಧಿತ ‘ರಾಜ್ಯ ಕ್ರಿಕೆಟ್ ಸಂಸ್ಥೆ’ಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಸ್ಥಳೀಯ ಪಂದ್ಯಗಳಲ್ಲಿ ಅನುಭವ ಪಡೆಯುವುದು ಮುಖ್ಯವಾಗಿದೆ.
ಇದನ್ನೂ ಓದಿ: ತಂದೆ-ತಾಯಿಯನ್ನು ಕೂಡಿ ಹಾಕಿ ಮಗಳು ಪ್ರಿಯಕರನೊಂದಿಗೆ ಪರಾರಿ !!
ನೀವು ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗೆ ನೀವು ಸಾಕಷ್ಟು ಅನುಭವ ಪಡೆದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಡೆಸುವ ಹಂತ-1 ಪರೀಕ್ಷೆಗೆ ಹೆಸರನ್ನು ಕಳುಹಿಸಲಾಗುತ್ತದೆ. ನಂತರ ಮೂರು ದಿನಗಳ ಕಾಲ ಬಿಸಿಸಿಐ ತರಬೇತಿ ನೀಡುತ್ತದೆ. ನಾಲ್ಕನೇ ದಿನ ಲಿಖಿತ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡುತ್ತದೆ.
ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವಿಶೇಷ ತರಬೇತಿಗೆ ಕರೆಯುತ್ತದೆ. ಅಲ್ಲಿ ಆಟದ ನಿಯಮಗಳು ಮತ್ತು ಇತರೆ ಪ್ರಮುಖ ವಿಷಯಗಳ ಬಗ್ಗೆ ತರಬೇತಿ ನೀಡುತ್ತದೆ. ನಂತರ ಅಭ್ಯರ್ಥಿಗಳು ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಹಂತದ ಪರೀಕ್ಷೆಗಳಲ್ಲಿ ಯಶಸ್ವಿಯಾದರೆ ಮಾತ್ರ ಹಂತ-2 ಪರೀಕ್ಷೆಗೆ ಅರ್ಹರಾಗುತ್ತೀರಿ.
ಎರಡನೇ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ವೈದ್ಯಕೀಯ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ದೈಹಿಕ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ ಬಿಸಿಸಿಐ ನಿಮ್ಮನ್ನು ಅಂಪೈರ್ ಎಂದು ಪ್ರಕಟಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಅರ್ಹ ಕ್ರಿಕೆಟ್ ಅಂಪೈರ್ ಆಗಬಹುದು. ವಿವಿಧ ಹಂತಗಳಲ್ಲಿ ಪಂದ್ಯಗಳನ್ನು ನಿರ್ವಹಿಸಬಹುದು.
ಅಂಪೈರ್ ಗೆ ಸಿಗುವ ಸಂಬಳ ಎಷ್ಟು :
ಅಂಪೈರ್ ಗಳ ವೇತನವು ಅವರ ದರ್ಜೆ, ಅನುಭವ ಮತ್ತು ಹಿರಿತನದ ಮೇಲೆ ಅವಲಂಬಿತವಾಗಿರುತ್ತದೆ. ಬಿಸಿಸಿಐನ ವರದಿಗಳ ಪ್ರಕಾರ ಎ+ ಮತ್ತು ಎ ಗ್ರೇಡ್ ಅಂಪೈರ್ ಗಳು ದೇಶಿಯ ಪಂದ್ಯಗಳಿಗೆ ದಿನಕ್ಕೆ 40,000 ರೂಪಾಯಿ ಪಡೆಯುತ್ತಾರೆ. ಬಿ ಮತ್ತು ಸಿ ದರ್ಜೆಯ ಅಂಪೈರ್ ಗಳಿಗೆ ದಿನಕ್ಕೆ 30,000 ರೂಪಾಯಿ ನೀಡಲಾಗುತ್ತದೆ.
ಅಂಪೈರ್ ನ ದಾಖಲೆ ಉತ್ತಮವಾಗಿದ್ದರೆ ಅವರನ್ನು ಐಸಿಸಿ ಪ್ಯಾನಲ್ ಗೆ ಸೇರಿಸಬಹುದು. ಐಸಿಸಿಯು ಪ್ರತಿ ಪಂದ್ಯಕ್ಕೆ 1.50 ರಿಂದ 2.20 ಲಕ್ಷ ರೂಪಾಯಿ ನೀಡುತ್ತದೆ. ವಾರ್ಷಿಕವಾಗಿ 75 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ.
ನಿಮಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇದ್ದು, ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ವಂಚಿತರಾದರೆ, ನಿಮಗೆ ಅಂಪೈರ್ ವೃತ್ತಿಯನ್ನು ಆಯ್ದುಕೊಳ್ಳಬಹುದು.
LATEST NEWS
ಸರಕಾರಿ ಕೆಲಸದ ಹುಡುಗನೇ ಬೇಕೆಂದು ಮಂಟಪದಲ್ಲೇ ವರನನ್ನು ತಿರಸ್ಕರಿಸಿದ ವಧು !!
Published
50 minutes agoon
27/11/2024ಮಂಗಳೂರು/ಉತ್ರರ ಪ್ರದೇಶ: ತಾವು ಮದುವೆಯಾಗುವ ಹುಡುಗ ಹ್ಯಾಂಡ್ಸಮ್ ಆಗಿರ್ಬೇಕು, ಉತ್ತಮ ಸಂಬಳವನ್ನು ಪಡೆಯುವ ಉದ್ಯೋಗದಲ್ಲಿರಬೇಕು ಎಂದು ಹೆಚ್ಚಿನ ಹುಡುಗಿಯರು ಬಯಸುತ್ತಾರೆ. ಇನ್ನೂ ಕೆಲವರು ಹುಡುಗ ಹೇಗಿದ್ದರೂ ಪರವಾಗಿಲ್ಲ ಆದರೆ ಅವನಿಗೆ ಸರ್ಕಾರಿ ಕೆಲಸ ಇದ್ರೆ ಸಾಕಪ್ಪಾ ಎನ್ನುತ್ತಾರೆ. ಅದೇ ರೀತಿಯ ಘಟನೆಯೊಂದು ಉತ್ರರ ಪ್ರದೇಶದ ಫರೂಕಾಬಾದ್ನಲ್ಲಿ ನಡೆದಿದೆ.
ಯುವತಿಯೊಬ್ಬಳು ತನಗೆ ಸರ್ಕಾರಿ ಕೆಲಸದಲ್ಲಿರುವ ಗಂಡನೇ ಬೇಕೆಂದು ಮದುವೆ ಮಂಟಪದಲ್ಲಿಯೇ ಖಾಸಗಿ ಕಂಪೆನಿಯಲ್ಲಿ ತಿಂಗಳಿಗೆ 1.2 ಲಕ್ಷ ಸಂಬಳ ಗಳಿಸುವ ವರನನ್ನು ತಿರಸ್ಕರಿಸಿ, ಆಗಬೇಕಿದ್ದ ಮದುವೆಯನ್ನೇ ಮುರಿದಿದ್ದಾಳೆ. ಸಂಪ್ರದಾಯಬದ್ಧವಾಗಿ ವರ ಮಾಲೆಯನ್ನು ವಿನಿಯಮ ಮಾಡಿಕೊಂಡ ಬಳಿಕ ವರ ಸರ್ಕಾರಿ ಕೆಲಸದಲ್ಲಿಲ್ಲ ಎಂಬ ವಿಚಾರ ತಿಳಿದು ವಧು ಮದುವೆಯಾಗುವುದಿಲ್ಲ ಎಂದಿದ್ದಾಳೆ.
ಬ್ರೋಕರ್ ಮಾತು ನಂಬಿದ್ದ ಯುವತಿ :
ವರದಿಗಳ ಪ್ರಕಾರ, ವಧುವಿನ ಕುಟುಂಬವು ಛತ್ತೀಸ್ಗಢದ ಬಲರಾಮ್ಪುರದ ಹುಡುಗನೊಂದಿಗೆ ಮದುವೆಯನ್ನು ಏರ್ಪಡಿಸಿದ್ದರು. ಮದುವೆ ಬ್ರೋಕರ್ ‘ಹುಡುಗ ಸರ್ಕಾರಿ ಇಂಜಿನಿಯರ್, ಆತನ ಹೆಸರಲ್ಲಿ ಆರು ನಿವೇಶನಗಳಿವೆ ಜೊತೆಗೆ ಕೃಷಿ ಭೂಮಿಯೂ ಕೂಡಾ ಇದೆ’ ಎಂದು ಹೇಳಿ ಮದುವೆಗೆ ಒಪ್ಪಿಸಿದ್ದರು. ವಾಸ್ತವದಲ್ಲಿ ಹುಡುಗನ ಕುಟುಂಬ ಕನೌಜ್ನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಜೊತೆಗೆ ವರನಿಗೆ ಯಾವುದೇ ಸರ್ಕಾರಿ ಕೆಲಸ ಕೂಡಾ ಇರಲಿಲ್ಲ ಬದಲಾಗಿ ಆತ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ.
ಮಂಟಪದಲ್ಲೇ ಮುರಿದು ಬಿದ್ದ ಮದುವೆ :
ಮದುವೆಯ ದಿನ ವರ ಮಾಲೆಯನ್ನು ವಿನಿಮಯ ಮಾಡಿಕೊಂಡ ಬಳಿಕ ವಧುವಿಗೆ ಈ ಸತ್ಯ ತಿಳಿದಿದ್ದು, ‘ನನಗೆ ಈ ಹುಡುಗ ಬೇಡ’ ಎಂದು ಮದುವೆಯನ್ನು ನಿರಾಕರಿಸಿದ್ದಾಳೆ. ನಂತರ ಎರಡೂ ಕುಟುಂಬದವರು ವಧುವಿನ ಮನವೊಲಿಸಲು ಪ್ರಯತ್ನಿಸಿದರೂ ಆಕೆ ‘ನನಗೆ ಈತ ಬೇಡ್ವೇ ಬೇಡಾ’ ಎಂದು ಪಟ್ಟು ಹಿಡಿದಿದ್ದಾಳೆ. ಅಷ್ಟೇ ಅಲ್ಲದೆ ವರ ತನ್ನ ಸ್ಯಾಲರಿ ಸ್ಲಿಪ್ ತೋರಿಸಿ ‘ನೋಡು. ನನಗೆ ಸರ್ಕಾರಿ ಕೆಲಸ ಇಲ್ಲಂದ್ರೆ ಏನಂತೆ ನಾನು ತಿಂಗಳಿಗೆ 1.2 ಲಕ್ಷ ಸಂಪಾದನೆ ಮಾಡುತ್ತೇನೆ’ ಎಂದು ಹೇಳಿದ್ದಾನೆ. ಇವರ ಯಾವ ಮಾತಿಗೂ ಬಗ್ಗದ ವಧು ‘ನಾನು ಮದುವೆಯಾದ್ರೆ ಸರ್ಕಾರಿ ಕೆಲಸದ ಹುಡುಗನನ್ನೇ’ ಎಂದು ಹೇಳಿದ್ದಾಳೆ.
ಬಳಿಕ ಎರಡೂ ಕುಟುಂಬದವರು ಮಾತುಕತೆ ನಡೆಸಿ ಮದುವೆಗಾದ ಖರ್ಚನ್ನು ಸಮಪಾಲು ಮಾಡೋಣ ಎಂಬ ಒಪ್ಪಂದಕ್ಕೆ ಬಂದು ಮದುವೆಯನ್ನು ನಿಲ್ಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
LATEST NEWS
ನಂಬಿದವರ ಕೈ ಬಿಡದ ಪದಾಳ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ
ನಿಮ್ಮ ನಾಯಿಗಳನ್ನು ಪಾರ್ಕ್ಗೆ ಕೊಂಡೊಯ್ಯುತ್ತೀರಾ? ಹೈಕೋರ್ಟ್ ಹೊಸಮಾರ್ಗಸೂಚಿ ಗಮನಿಸಿ!
ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿ ಕೊಟ್ಟ ಈ ಮಹಿಳೆ ಯಾರು ?
ಎಟಿಎಂ ಹೊತ್ತೊಯ್ದರೂ ಸಿಗದ ಹಣ; ನೀಲಗಿರಿ ತೋಪಿನಲ್ಲಿ ಯಂತ್ರ ಬಿಟ್ಟು ಪರಾರಿಯಾದ ಖದೀಮರು
ಬೆಚ್ಚಿ ಬೀಳಿಸಿದ ಯುವತಿ ಕೊ*ಲೆ ಪ್ರಕರಣ; ಪ್ರೇಯಸಿಯ ಶ*ವದೊಂದಿಗೆ ಒಂದು ದಿನ ಕಳೆದಿದ್ದ ಯುವಕ!
ಟ್ರಕ್ಗೆ ಸ್ಕಾರ್ಪಿಯೊ ಡಿ*ಕ್ಕಿ – ಭೀಕರ ಅಪಘಾ*ತಕ್ಕೆ ಐವರು ವೈದ್ಯರ ದುರ್ಮ*ರಣ
Trending
- Baindooru5 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION6 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS4 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru4 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ