Friday, August 19, 2022

ಅಪ್ರಾಪ್ತರನ್ನು ಬಳಸಿ ಬೈಕ್ ಕದಿಯುತ್ತಿದ್ದ ಕಾನ್ಸ್ಟೇಬಲ್ ಇದೀಗ ಪೊಲೀಸ್ ಅತಿಥಿ

ಬೆಂಗಳೂರು: ಪೊಲೀಸರೇ ಬೈಕ್ ಕಳ್ಳತನಕ್ಕೆ ಇಳಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಕಾನ್ಸ್ಟೆಬಲ್ ಒಬ್ಬ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಬೈಕ್ ಗಳನ್ನು ಕಳ್ಳತನ ಮಾಡಿಸುತ್ತಿದ್ದ ಕಾನ್‍ಸ್ಟೇಬಲ್‍ನನ್ನು ಅದೇ ಇಲಾಖೆಯ ಪೊಲೀಸರೇ ಬಂಧಿಸಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ.


ಪೊಲೀಸ್ ಕಾನ್‍ಸ್ಟೇಬಲ್ ಹೊನ್ನಪ್ಪ ರವಿ ಬಂಧಿತ ಆರೋಪಿ. ಈತ ಅಪ್ರಾಪ್ತರನ್ನು ಬಳಸಿಕೊಂಡು ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದ. ಈವರೆಗೂ ಹೊನ್ನಪ್ಪ ರವಿ ಮಾರಾಟ ಮಾಡಿದ್ದ 53 ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೊನ್ನಪ್ಪ, ರಾಜಸ್ಥಾನದ ರಮೇಶ್, ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.


2016ರ ಬ್ಯಾಚ್‍ನ ಸಿವಿಲ್ ಕಾನ್‍ಸ್ಟೇಬಲ್ ಆಗಿರುವ ಹೊನ್ನಪ್ಪ ರವಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆನ್ಲೈನ್ ನಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಗಳನ್ನೇ ಹೊನ್ನಪ್ಪ ಕಳ್ಳತನ ಮಾಡಿಸುತ್ತಿದ್ದ. ಹೊನ್ನಪ್ಪ ಮಾರಾಟ ಮಾಡಿದ ಬೈಕ್‍ನಿಂದ ಬಂದ ಹಣದಲ್ಲಿ ಐದರಿಂದ ಆರು ಸಾವಿರ ಹಣವನ್ನು ಹುಡುಗರಿಗೆ ನೀಡುತ್ತಿದ್ದ.
ಸದ್ಯ ಕಾನ್‍ಸ್ಟೇಬಲ್‍ನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಮಾಗಡಿ ರೋಡ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಪರಾಧಗಳನ್ನು ನಿಯಂತ್ರಿಸಬೇಕಾದ ಆರಕ್ಷಕನೇ ಕಳ್ಳನಾಗಿರುವುದು ವಿಪರ್ಯಾಸ.

LEAVE A REPLY

Please enter your comment!
Please enter your name here

Hot Topics

ಫಾಝಿಲ್ ಕೊಲೆ ಪ್ರಕರಣ: ಆರೋಪಿ ಹರ್ಷಿತ್‌ಗೆ 14 ದಿನ ನ್ಯಾಯಾಂಗ ಬಂಧನ

ಮಂಗಳೂರು: ನಗರ ಹೊರವಲಯದ ಸುರತ್ಕಲ್‌ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದ್ದ ಆರೋಪಿ ಹರ್ಷಿತ್‌ಗೆ ಜೆಎಂಎಫ್ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿ ಹರ್ಷಿತ್ ಮೇಲೆ ಫಾಝಿಲ್ ಅವರ...

ಸಿದ್ದರಾಮಯ್ಯಗೆ ಮೊಟ್ಟೆ ಎಸೆತ ಪ್ರಕರಣ: 9 ಮಂದಿಯ ಬಂಧನ

ಕುಶಾಲನಗರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೋಳಿ ಮೊಟ್ಟೆ ಎಸೆದ ಘಟನೆ ಕುರಿತು ವಶಕ್ಕೆ ತೆಗೆದುಕೊಳ್ಳಲಾದ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು...

ಕೆಎಂಎಫ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು 3.50 ಕೋ.ರೂ ವಂಚಿಸಿದ ರಾಮ್‌ಪ್ರಸಾದ್‌ ಸೇರಿ ನಾಲ್ವರ ವಿರುದ್ಧ FIR

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು 100ಕ್ಕೂ ಅಧಿಕ ಮಂದಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್‌ ಪ್ರಸಾದ್‌ ಸೇರಿ ಒಟ್ಟು ನಾಲ್ವರ ಮೇಲೆ ಮಂಗಳೂರು ನಗರ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಮ್‌ ಪ್ರಸಾದ್‌...