Connect with us

  MANGALORE

  ಮನಪಾ ವ್ಯಾಪ್ತಿಯಲ್ಲಿ 1 ಕೋಟಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

  Published

  on

  ಮಂಗಳೂರು: ಮಹಾನಗರ ಪಾಲಿಕೆಯ ಕದ್ರಿ ದಕ್ಷಿಣ ವಾರ್ಡಿನಲ್ಲಿ 1 ಕೋಟಿ ವೆಚ್ಚದಲ್ಲಿ ರಾಜಕಾಲುವೆಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.


  ಈ ಕುರಿತು ಮಾತನಾಡಿದ ಅವರು, ಕದ್ರಿ ಹಿಂದೂ ರುದ್ರಭೂಮಿಯಿಂದ ಕದ್ರಿ ರಾಕ್ಸ್ ವರೆಗೆ ರಾಜಕಾಲುವೆಯ

  ತಡೆಗೋಡೆ ಅಭಿವೃದ್ಧಿಗೆ ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ.

  ಈ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಯನ್ನು ಮನಗಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಕಾಮತ್ ಹೇಳಿದರು.

  ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಶಕಿಲಾ ಕಾವಾ, ಪ್ರಮುಖರಾದ ದಿನೇಶ್ ದೇವಾಡಿಗ, ಶ್ರೀಕಾಂತ್ ರಾವ್, ಶಾಲಿನಿ ವಿಶ್ವನಾಥ್ ಆಚಾರ್, ಕೃಷ್ಣ ಶೆಟ್ಟಿ, ವಸಂತ್ ಜೆ ಪೂಜಾರಿ, ದೇವಿಚರಣ್ ಶೆಟ್ಟಿ,

  ಮನೀಷ್ ಪಾಂಡ್ಯ, ಗೋಪಾಲ ಕೃಷ್ಣ ರಾವ್, ತುಳಸಿದಾಸ್ ಕದ್ರಿ, ಪ್ರದೀಪ್ ಆಚಾರ್ಯ, ಸೋಮನಾಥ್ ದೇವಾಡಿಗ, ಯಶವಂತ ನಾಯಕ್,

  ಗಾಡ್ವಿನ್,‌ಕೇಶವ ಕದ್ರಿ,‌ಪ್ರಕಾಶ್, ಚಂದ್ರಕಾಂತ್,

  ಜಗದೀಶ್ ಕದ್ರಿ, ಅವಿನಾಶ್ ರೈ, ಹೇಮಚಂದ್ರ, ಸಚಿನ್ ಕದ್ರಿ, ಕೌಶಿಕ್, ವಿವೇಕ್ ಕದ್ರಿ, ವಿನಯ್ ಕದ್ರಿ, ದಿವಾಕರ್ ಕದ್ರಿ, ಶಿವಪ್ಪ ನಂತೂರು, ರಂಜನ್, ಸತ್ಯನಾರಾಯಣ ರಾವ್, ನರೇಶ್ ರಾವ್,

  ವಿಜಯ್ ಭಂಡಾರಿ, ಸಂಜೀವ ಅಡ್ಯಾರ್, ವೆಂಕಟೇಶ್, ಕೌಶಿಕ್, ಅನಂತ್ ಅಂಚನ್, ನಾಗೇಶ್ ಕದ್ರಿ, ರವಿ, ದಿನೇಶ್ ದೇವಾಡಿಗ ಕಂಬ್ಳ, ರಾಘವೇಂದ್ರ ಬಿರ್ವತ್ತಾಯ, ಭೋಜ, ಜನಾರ್ದನ, ಸುನಿಲ್, ಅನಿಲ್, ದೀಪಕ್, ಅರುಣ್ ಕದ್ರಿ, ರೋಷನ್ ಮುಂತಾದವರು ಉಪಸ್ಥಿತರಿದ್ದರು.

  DAKSHINA KANNADA

  ಕುಟುಂಬ ರಾಜಕಾರಣದ ಬಗ್ಗೆ ಮತ್ತೆ ಕಿಡಿಕಾರಿದ ಕೆಎಸ್ ಈಶ್ವರಪ್ಪ

  Published

  on

  ಮಂಗಳೂರು: ಕರ್ನಾಟಕದಲ್ಲಿ ಅಪ್ಪ ಮಕ್ಕಳನ್ನು ಪಕ್ಷದಿಂದ ಮುಕ್ತ ಮಾಡಬೇಕು ಎಂಬ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಪಕ್ಷದ ಶುದ್ಧೀಕರಣ ಆಗಬೇಕು. ಖಂಡಿತಾ ಆಗುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

   

   

  ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ರಘುಪತಿ ಭಟ್ ಪರ ಅವರು ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ತಿಲಾಂಜಲಿ ಇಟ್ಟು ಬಿಜೆಪಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸಂಸ್ಕೃತಿ ಕರ್ನಾಟಕ ಬಿಜೆಪಿಯಲ್ಲಿ ಬಂದಿರೋದು ನೋವು ತಂದಿದೆ ಎಂದರು.

  ಕರ್ನಾಟಕದಲ್ಲಿ ಹಿಂದುತ್ವ ಹಿಂದೆ ಸರಿದು ಜಾತೀಯತೆಗೆ ಸರಿಯುತ್ತಿರುವ ಸಂದರ್ಭ, ಪಕ್ಷ, ಹಿಂದುತ್ವ ಎಂದು ಬಯಸುವ ಎಲ್ಲ ಕಾರ್ಯಕರ್ತರು ರಘುಪತಿ ಭಟ್ ಪರ ಕೆಲಸ ಮಾಡಬೇಕು. ಬಿಜೆಪಿ ಶುದ್ಧೀಕರಣ ಆಗಬೇಕು. ರಘುಪತಿ ಗೆಲ್ಲುತ್ತಾರೆ. ಹಿಂದುತ್ವಕ್ಕೆ ಆಗುತ್ತಿರುವ ಅವಮಾನ, ರಘುಪತಿ ಭಟ್ ಹಾಗೂ ನನಗೆ ಆಗಿರುವ ಅನ್ಯಾಯ ಬಗ್ಗೆ ಎಲ್ಲರೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಬಂದ ಅಭ್ಯರ್ಥಿ ಗೆ ಟಿಕೆಟ್ ನೀಡಿರುವುದಕ್ಕೆ ಅರ್ಥವೇ ಇಲ್ಲ. ಹಿಂದುತ್ವದ ನೆಲೆ ಸ್ವಾರ್ಥಿಗಳ ಕೈ ಸೇರಿದೆ. ಇದನ್ನು ಮತ್ತೆ ಪಡೆಯಲು ಎಲ್ಲರೂ ಕೆಲಸ ಮಾಡಬೇಕು ಎಂದರು.

  ಇದು ವಿಶೇಷವಾದ ಚುನಾವಣೆ. ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತದಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದರೆ ರಾಜ್ಯದಲ್ಲಿ ಅದಕ್ಕೆ ತಿಲಾಂಜಲಿ ಇಟ್ಟು ಕಾರ್ಯ ನಿರ್ವಹಿಸುತ್ತಿದೆ. ಜನತಾ ಪಕ್ಷ ಕಟ್ಟಿದ್ದು ಇತಿಹಾಸ. ವಿಶ್ವವನ್ನು ಒಂದು ಗೂಡಿ ಸುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಕುಟುಂಬ ರಾಜಕೀಯದ ವಿರುದ್ಧ ಕೆಲಸ ಆಗುತ್ತಿದ್ದರೆ, ಕರ್ನಾಟಕದಲ್ಲಿ ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ಇದರ ನೋವಲ್ಲಿ ಕಾರ್ಯಕರ್ತರಿದ್ದಾರೆ ಎಂದರು.

  ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಮಿತಿಮೀರಿದೆ. ವಿಧಾನಸಭಾ ಚುನಾವಣೆಯ ವೇಳೆಯೂ 45 ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ಉಡುಪಿಯ ರಘುಪತಿ ಭಟ್ ಗೆ ನೋವಾಗಿದೆ. ನನಗಾದರೂ ದೆಹಲಿಯಿಂದ ಕರೆ ಬಂದಿತ್ತು. ರಘುಪತಿ ಭಟ್ ಗೆ ಅದೂ ಬಂದಿಲ್ಲ. ಅವರು ಪಕ್ಷ ನಿಷ್ಠೆ ಬಿಟ್ಟಿಲ್ಲ. ಈ ಚುನಾವಣೆಯಲ್ಲಿ ಮತ್ತೆ ಅನ್ಯಾಯವಾಗಿದೆ ಎಂದರು.

  Continue Reading

  DAKSHINA KANNADA

  ಮುಲ್ಕಿ: ಮೈಲಿಗಲ್ಲಿಗೆ ಡಿ*ಕ್ಕಿ ಹೊಡೆದು ಪಲ್ಟಿಯಾದ ಕಾರು

  Published

  on

  ಮುಲ್ಕಿ : ಚಾಲಕನ ನಿಯಂತ್ರಣ ತಪ್ಪಿ ಮೈಲಿಗಲ್ಲಿಗೆ ಕಾರು ಡಿ*ಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪ ಕಾರ್ನಾಡ್ ಬೈಪಾಸ್ ಬಳಿ ನಡೆದಿದೆ. ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿತ್ತು.

  ಕಾರ್ನಾಡ್ ಬೈಪಾಸ್ ಬಳಿ ಕಾರ್ ಶೋರೂಮ್ ಎದುರುಗಡೆ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಮೈಲ್ ಗಲ್ಲಿಗೆ ಡಿ*ಕ್ಕಿ ಹೊಡೆದು ಪಲ್ಟಿಯಾಗಿದೆ. ಕೂಡಲೇ ಸ್ಥಳೀಯರು ಧಾವಿಸಿ ಕಾರಿನೊಳಗೆ ಸಿಲುಕಿಕೊಂಡ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಅಪಘಾ*ತದಿಂದ ಕಾರಿಗೆ ಸಂಪೂರ್ಣ ಹಾನಿಯಾಗಿದೆ.

  ಇದನ್ನೂ ಓದಿ : ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ಕರೆಂಟ್ ಶಾಕ್

  Continue Reading

  DAKSHINA KANNADA

  ಶಾಸಕರ ಸಹಿತ ಕಾನೂನಿನ ಮುಂದೆ ಎಲ್ಲರೂ ಒಂದೇ : ಎಸ್ ಪಿ ರಿಷ್ಯಂತ್‌

  Published

  on

  ಧರ್ಮಸ್ಥಳ : ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರ ಬಂಧನ ಹೈಡ್ರಾಮಾದಲ್ಲಿ ಪೊಲೀಸರು ಅನಗತ್ಯವಾಗಿ ಮನೆಗೆ ನುಗ್ಗಿದ್ದಾರೆ ಎಂಬ ಆರೋಪಕ್ಕೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಅಧೀಕ್ಷಕ ರಿಷ್ಯಂತ್‌ ಸಿ.ಬಿ. ಮಾಧ್ಯಮಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.


  ಪೂಂಜಾ ಅವರ ಮನೆಗೆ ಆರಂಭದಲ್ಲಿ ನೋಟೀಸ್‌ ನೀಡುವ ಸಲುವಾಗಿ ಮೂವರು ತೆರಳಿದ್ದರು. ಆದರೆ ಅಲ್ಲಿ ಅವರು ಠಾಣೆಗೆ ಬಾರದೆ, ಜನ ಸೇರಿದ್ದರಿಂದ ಭದ್ರತೆಗಾಗಿ ಹೆಚ್ಚುವರಿ ತಂಡ ಕಳುಹಿಸಬೇಕಾಯಿತು. ಬಳಿಕ ಅಲ್ಲಿನ ರಸ್ತೆ ಕಿರಿದಾಗಿದ್ದರಿಂದ ನೀವು ತೆರಳಿದರೆ ಅಲ್ಲಿ ಜನ ಕ್ಲಿಯರ್‌ ಆಗುತ್ತದೆ ಮುಂದೆ ನಾವು ಠಾಣೆಗೆ ಹಾಜರಾಗುವುದಾಗಿ ತಿಳಿಸಿದ್ದರಿಂದ ನಾವು ಬಂದಿದ್ದೇವೆ. ಬೇರೇನೂ ಇಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ಲಿ 500 ಮಂದಿ ಸೇರಿಸಿದರೂ ಅಥವಾ 1 ಲಕ್ಷ ಮಂದಿ ಸೇರಿದರೂ ಒಂದೇ ಎಂದರು. ಶಾಸಕರು ಕಾನೂನಿಗೆ ತಲೆಬಾಗಲೇ ಬೇಕು. ನೋಟೀಸ್‌ನೀಡಿದ್ದೇವೆ, ಸಮಯ ಕೇಳಿದ್ದಾರೆ, ಉಳಿದಂತೆ ಅವರಿಗೆ ಬಿಟ್ಟ ವಿಚಾರ ಎಂದರು.

  ಇದನ್ನೂ ಓದಿ : ಪೆನ್ ಡ್ರೈವ್ ಕೇಸ್: ಕೊನೆಗೂ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ! ಪ್ರಕರಣದ ಬಗ್ಗೆ ಹೇಳಿದ್ದೇನು?

  ತಲೆಮರೆಸಿಕೊಂಡವರ ಬಂಧಿಸುತ್ತೇವೆ :

  ಬೆಳ್ತಂಗಡಿ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸ್ಥಳದಲ್ಲಿ ಕೆಲಸಗಾರರು ಹೇಳಿದಂತೆ ಸಂಬಂಧಪಟ್ಟ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಅಮಾಯಕರು ಎನ್ನುವುದು ತಪ್ಪು, ಅವರವರ ಪ್ರಕಾರ ಎಲ್ಲರೂ ಅಮಾಯಕರೇ, ಹಾಗಾಗುವುದಿಲ್ಲ, ನ್ಯಾಯಾಲಯಕ್ಕೆ ಬೇಕಾಗಿರುವುದು ಸಾಕ್ಷಿ, ಅದಕ್ಕೆ ಬೇಕಾದ ಸಾಕ್ಷಿ ನೀಡುತ್ತೇವೆ. ಅಲ್ಲಿ ಒಂದು ಖಾಸಗಿ ಸ್ಥಳವಿದ್ದು, ಮತ್ತೊಂದು ವರ್ಗ ಸ್ಥಳ, ತಹಶೀಲ್ದಾರ್‌ ಪರಿಶೀಲಿಸಿ ವರದಿ ನೀಡಿದ್ದಾರೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

  Continue Reading

  LATEST NEWS

  Trending