ಮಂಗಳೂರು: ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಟೆಡೆಕ್ಸ್‌ನ ಭಾಷಣ ಸರಣಿ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೇ 22ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಫಾದರ್ ಡಾ ಪ್ರವೀಣ್ ಮಾರ್ಟಿಸ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಟೆಡ್ ಒಂದು ಲಾಭರಹಿತ ಜಾಗತಿಕ ಮಾನ್ಯತೆಯನ್ನು ಹೊಂದಿರುವ ಸ್ವತಂತ್ರ್ಯ ಸಂಸ್ಥೆಯಾಗಿದ್ದು, ಕಿರು ಭಾಷಣ, ಉಪನ್ಯಾಸಕ್ಕೆಂದೇ ಹುಟ್ಟಿಕೊಂಡಿರುವ ವೇದಿಕೆ ಆಗಿದೆ. ಚಿಂತನಾಲಹರಿಗಳನ್ನು, ಜ್ಞಾನವನ್ನು ಉಪನ್ಯಾಸ, ಭಾಷಣಗಳ ಮೂಲಕ ಹರಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪಂಕಜ್ ಮೋದಿ, ರಾಹುಲ್ ಜಾಧವ್, ಶಶಿಧರ ಡೋಂಗ್ರೆ, ರಮಾ ವೈದ್ಯನಾಥನ್, ರಿಧಾ ಗ್ಯಾಟ್ವೋ, ಸತ್ಯ ಥರಿಯನ್, ಹ್ಯಾರಿಸ್ ಅಬೂಬಕ್ಕರ್, ಜಾಸ್ಮಿರ್ ಥಾಕೂರ್ ಮೊದಲಾದ ಅಂತಾರಾಷ್ಟ್ರೀಯ ಖ್ಯಾತಿಯ ಪ್ರಮುಖ ಭಾಷಣಕಾರರನ್ನು ಆಹ್ವಾನಿಸಲಾಗಿದೆ ಎಂದರು.
ಅಂದು ಬೆಳಗ್ಗೆ 8.20ಕ್ಕೆ ನೋಂದಣಿ ಆರಂಭವಾಗಲಿದೆ, 9 ಗಂಟೆಯಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಹೆಸರು ನೋಂದಣಿಗಾಗಿ 8722969426 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ರಿಜಿಸ್ಟ್ರಾರ್ ಆಲ್ವಿನ್ ಡೇಸಾ, ಲತೀಶಾ, ಚಂದ್ರಕಲಾ ಮೊದಲಾದವರಿದ್ದರು.
https://www.ted.com/tedx/events/48296