ಮಂಗಳೂರು: ಕುದ್ರೋಳಿ ಗೋಕರ್ಣ ಕ್ಷೇತ್ರದಲ್ಲೊ ಒಬ್ಬರು ಇದ್ದಾರೆ. ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಬೇಕು. ಬರ್ಬೇಕಾದ್ರೆ ಕಾಂಗ್ರೆಸ್ ಅಂಗಳದಲ್ಲಿ ಒಂದು ಜಾಗ ಬೇಕು ಅಲ್ವಾ. ಅದಕ್ಕಾಗಿ ಇದನ್ನು ಎಬ್ಬಿಸಿ ಜಾಗ ಕೊಡ್ತಾರಾ ಅಂತ ನೋಡ್ತಾರೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಗೆ ತಯಾರು ಮಾಡಿದ ಷಡ್ಯಂತ್ರ ಇದು. ನಾರಾಯಣ ಗುರುಗಳ ಭಾಗವನ್ನು ಎಸ್‌ಎಸ್‌ಎಲ್‌ಸಿ ಪಠ್ಯದಲ್ಲಿ ಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌ನವರು ಗುಲ್ಲು ಹಬ್ಬಿಸುತ್ತಿದ್ದಾರೆ.
ಶಿಕ್ಷಣ ಸಚಿವ ನಾಗೇಶ್, ಸಚಿವ ಸುನಿಲ್ ಕುಮಾರ್, ಸಚಿವ ಕೋಟಾ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರು ಇದರ ಸ್ಪಷ್ಟನೆ ನೀಡಿದ್ದರೂ ಈ ಸುದ್ದಿಯನ್ನು ಬೇರೆ ಬೇರೆ ರೂಪದಲ್ಲಿ ಮುಂದಿಟ್ಟು ಮತ್ತಷ್ಟು ಉದ್ದಕ್ಕೆ ಎಳೆಯುತ್ತಿದ್ದಾರೆ. ನಾರಾಯಣ ಗುರುಗಳ ಬದುಕಿನ ಪಠ್ಯ 7ನೇ ತರಗತಿಯಲ್ಲಿ ಇದೆ.
ಶಿವಮೊಗ್ಗ, ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿಯಲ್ಲಿ ನಾರಾಯಣ ವಸತಿ ಶಾಲೆ ಪ್ರಾರಂಭಕ್ಕೆ ಅನುಮತಿ ನೀಡಿದೆ. ಇದರ ಬಗ್ಗೆ ಯಾರೋ ಒಬ್ಬ ಕಾಂಗ್ರೆಸ್ಸಿಗ ಅಥವಾ ನಾರಾಯಣ ಗುರು ಅನುಯಾಯಿ ಸ್ವಾಗತಿಸಲೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕುದ್ರೋಳಿಯ ಒಬ್ಬ ಕೋಶಾಧಿಕಾರಿ ಇದ್ದಾರೆ.
ಅವರ ಹೆಸರು ಪದ್ಮರಾಜ್ ಅಂತ. ಅವ್ರು ಬಹಳ ಬಿಟ್ರು, ಲೇಡಿಹಿಲ್ ನಾರಾಯಣ ಗುರು ವೃತ್ತ ಆಗಬೇಕು ಎನ್ನುವಾಗ ಅದನ್ನು ಪ್ರಪ್ರಥಮವಾಗಿ ವಿರೋಧಿಸಿದ ವ್ಯಕ್ತಿ ಯಾರೆಂದರೆ ಪದ್ಮರಾಜ್.
ಲೋಬೋ ಬೀದಿಗಿಳಿದು ಹೋರಾಟ ಮಾಡುತ್ತೇನೆಂದರು. ನಿಮಗೆ ನಾರಾಯಣ ಗುರು ಬಗ್ಗೆ ಮಾತನಾಡುವುದನ್ನು ಯಾವ ಹಕ್ಕಿದೆ ಎಂದು ಮಾಜಿ ಶಾಸಕರನ್ನು ಪ್ರಶ್ನಿಸಿದ ಬಂಟ್ವಾಳ್ ಇದೇ ವೇಳೆ ಮಾಜಿ ಸಚಿವ ರಮಾನಾಥ್ ರೈ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು.