Connect with us

LATEST NEWS

ಭಾಂಗ್‌ ನಿಷೇಧಿತ ಮಾದಕ ಪದಾರ್ಥವಲ್ಲ: ಕರ್ನಾಟಕ ಹೈಕೋರ್ಟ್‌

Published

on

ಬೆಂಗಳೂರು: ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್) ಕಾಯಿದೆಯಡಿ ಭಾಂಗ್‌ ಅನ್ನು ನಿಷೇಧಿತ ಮಾದಕ ಪದಾರ್ಥ ಅಥವಾ ಪಾನೀಯ ಎಂಬುದಾಗಿ ಘೋಷಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.


ಜು.1 ರಂದು 29 ಕೆ.ಜಿ ಭಾಂಗ್ ಹಾಗೂ 400 ಗ್ರಾಂ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬಿಹಾರ ಮೂಲದ ರೋಶನ್ ಕುಮಾರ್ ಮಿಶ್ರಾನನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಆರೋಪಿಗೆ ಜಾಮೀನು ಮಂಜೂರು ಮಾಡಿದೆ
“ಚರಸ್, ಗಾಂಜಾ ಅಥವಾ ಗಾಂಜಾ ಎಲೆಗಳಿಂದ ಭಂಗಿಯನ್ನು ಉತ್ಪಾದಿಸಲಾಗುತ್ತದೆ ಎಂಬುದನ್ನು ಸಾಬೀತುಪಡಿಸುವ ವೈಜ್ಞಾನಿಕ ಸಾಕ್ಷ್ಯಗಳು ನ್ಯಾಯಾಲಯದ ಮುಂದಿಲ್ಲ. ಎನ್‌ಡಿಪಿಎಸ್ ಕಾಯಿದೆಯಡಿ ಗಾಂಜಾ ಎಲೆ ಮತ್ತು ಬೀಜವನ್ನು ‘ಗಾಂಜಾ’ ವ್ಯಾಖ್ಯಾನದಿಂದ ಹೊರಗಿಡಲಾಗಿದೆ.

ಭಂಗಿಯು ನಿಷೇಧಿತ ಮಾದಕ ದ್ರವ್ಯ ಅಥವಾ ಪಾನೀಯ ಎಂಬುದಾಗಿ ಎನ್‌ಡಿಪಿಎಸ್ ಕಾಯಿದೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಆರೋಪಿಯಿಂದ 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಆದರೆ, ಅದು ಸಣ್ಣ ಪ್ರಮಾಣದಾಗಿದ್ದು, ಜಾಮೀನು ಪಡೆಯಲು ಆರೋಪಿಯು ಅರ್ಹ” ಎಂದು ಪೀಠ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್ ಮನೋಜ್ ಕುಮಾರ್ ಅವರು “ಭಾಂಗ್ ಪಾನೀಯ ಪದಾರ್ಥವಾಗಿದೆ. ಅದನ್ನು ಉತ್ತರ ಭಾರತದಲ್ಲಿ ಮಾರಾಟ ಮಾಡುವುದು ಸಾಮಾನ್ಯ.

ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಆ ಪಾನೀಯವನ್ನು ಸೇವಿಸಲಾಗುತ್ತದೆ. ಎನ್‌ಡಿಪಿಎಸ್ ಕಾಯಿದೆಯಡಿ ಭಾಂಗ್ ನಿಷೇಧಿತ ಪದಾರ್ಥವಲ್ಲ” ಎಂದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಗಾಂಜಾ ಎಲೆಗಳಿಂದ ಭಾಂಗ್ ಉತ್ಪಾದಿಸಲಾಗುತ್ತದೆ. ಅದು ಗಾಂಜಾ ವ್ಯಾಖ್ಯಾನದಡಿಗೆ ಒಳಪಡುತ್ತದೆ. ಆದ್ದರಿಂದ, ಆರೋಪಿಗೆ ಜಾಮೀನು ನೀಡಬಾರದು” ಎಂದು ಕೋರಿದ್ದರು.

DAKSHINA KANNADA

ದೇವರಿಗೆ ತುಪ್ಪದಲ್ಲಿ ದೀಪ ಹಚ್ಚುವುದು ಶುಭವೇ..?

Published

on

ಮಂಗಳೂರು: ಮನೆಯ ದೇವರ ಕೊಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪ, ಎಣ್ಣೆ, ಸಾಸಿವೆ, ಎಳ್ಳು ಅಥವಾ ಮಲ್ಲಿಗೆಯ ಎಣ್ಣೆಯ ದೀಪವನ್ನು ಹಚ್ಚುವ ಪದ್ಧತಿ ಇದೆ. ಈ ರೀತಿಯಾಗಿ ಪ್ರತಿಯೊಂದು ಎಣ್ಣೆಯ ದೀಪವನ್ನು ಸುಡುವುದು ವಿಭಿನ್ನ ಮಹತ್ವವನ್ನು ಹೊಂದಿದೆ. ತುಪ್ಪದ ದೀಪವನ್ನು ಹಚ್ಚುವುದು ದುಬಾರಿಯಾದ ಕಾರಣ ಜನರು ಎಣ್ಣೆಯ ದೀಪಗಳನ್ನು ಹೆಚ್ಚು ಹಚ್ಚುತ್ತಾರೆ. ಎಣ್ಣೆ ಅಥವಾ ತುಪ್ಪದ ದೀಪಕ್ಕಿಂತ ಯಾವುದರ ದೀಪ ಹಚ್ಚುವುದು ಹೆಚ್ಚು ಮಂಗಳಕರ ಎಂಬುದನ್ನು ತಿಳಿದುಕೊಳ್ಳೋಣ.

ಯಾವ ದೀಪವನ್ನು ಬೆಳಗಬೇಕು?

ತುಪ್ಪದ ದೀಪವನ್ನು ಯಾವಾಗಲೂ ಹೂವಿನಾಕಾರದ ದೀಪದಲ್ಲಿ ಬಿಳಿ ಎಂಬ ಬೆಳಕಿನಿಂದ ಬೆಳಗಿಸಲಾಗುತ್ತದೆ ಮತ್ತು ಎಣ್ಣೆ ದೀಪವನ್ನು ಉದ್ದವಾದ ದೀಪದಿಂದ ಬೆಳಗಿಸಲಾಗುತ್ತದೆ. ಆದರೆ, ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚಿದರೆ ಅದರಲ್ಲಿ ಕೆಂಪು ಅಥವಾ ಹಳದಿ ದೀಪವನ್ನು ಬಳಸಬೇಕು.

ಯಾವ ದೀಪ ಸೂಕ್ತ?

ತುಪ್ಪದ ದೀಪವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಆದರೆ ಇಷ್ಟಾರ್ಥಗಳ ಈಡೇರಿಕೆಗಾಗಿ ಎಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಹೊಂದಲು ತುಪ್ಪದ ದೀಪವನ್ನು ಹಚ್ಚುವುದು ಹೆಚ್ಚು ಪ್ರಯೋಜನಕಾರಿ. ಇದರಿಂದ ದೇವರುಗಳು ಮತ್ತು ದೇವತೆಗಳು ಸಂತೋಷಪಡುತ್ತಾರೆ.

ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಮಂಗಳಕರ

ಮನೆ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಎಲ್ಲಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಜೊತೆಗೆ ಮನೆಯ ವಾಸ್ತು ದೋಷಗಳು ಸಹ ನಿವಾರಣೆಯಾಗುತ್ತದೆ. ಇದು ಎಲ್ಲಾ ರೀತಿಯ ನೋವನ್ನು ನಾಶಪಡಿಸುತ್ತದೆ. ಶಿವ ಪುರಾಣದ ಪ್ರಕಾರ ಪ್ರತಿದಿನ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ಹೇಳಲಾಗಿದೆ.

ತುಪ್ಪದ ದೀಪವನ್ನು ಹಚ್ಚಿದರೆ ಗಾಳಿಯು ಶುದ್ಧವಾಗುತ್ತದೆ ಮತ್ತು ಗಾಳಿಯಲ್ಲಿರುವ ರೋಗಾಣುಗಳು ನಾಶವಾಗುತ್ತದೆ. ಇದರ ಸುವಾಸನೆಯು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ. ತುಪ್ಪವು ಚರ್ಮದ ರಕ್ತ ಕಣಗಳನ್ನು ಸಕ್ರಿಯಗೊಳಿಸುವ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ಇದರಿಂದಾಗಿ ಯಾವುದೇ ಚರ್ಮ ರೋಗಗಳು ಬರುವುದಿಲ್ಲ.

Continue Reading

LATEST NEWS

ತಾಯಿಯನ್ನು ಕೊಂ*ದ ಮಗನಿಗೆ ವಿಶಿಷ್ಟ ಶಿಕ್ಷೆ; ಅಪರೂಪದ ಆದೇಶ ನೀಡಿದ ಹೈಕೋರ್ಟ್

Published

on

ಮಂಗಳೂರು/ ಬೆಂಗಳೂರು : ಸಾಮಾನ್ಯವಾಗಿ ಕೊ*ಲೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ, ಜೀವಾವಧಿ ಶಿಕ್ಷೆ ಅಥವಾ ಇನ್ಯಾವುದೋ ಕಠಿಣ ಶಿಕ್ಷೆ ನೀಡಬಹುದು. ಆದ್ರೆ, ಇಲ್ಲಿ ಕೋರ್ಟ್ ವಿಭಿನ್ನ ರೀತಿಯ ಶಿಕ್ಷೆ ವಿಧಿಸಿದೆ. ಹೌದು, ಕುಡಿದ ಮತ್ತಿನಲ್ಲಿ ತಾಯಿಯನ್ನು ಮಗ ಕೊಂ*ದಿದ್ದ.


ಏನಿದು ಪ್ರಕರಣ?

2015 ರ ಏಪ್ರಿಲ್ 14 ರಂದು ಕೊಡಗು ಜಿಲ್ಲೆಯ ಮಡಿಕೇರಿಯ ಸಂಪಾಜೆ ಹೊರ ಠಾಣೆ ವ್ಯಾಪ್ತಿಯಲ್ಲಿ ಮಗನೊಬ್ಬ ತಾಯಿಯ ಹ*ತ್ಯೆ ಮಾಡಿದ್ದ. ಗಂಗಮ್ಮ ಕೊ*ಲೆಗೀಡಾದ ಮಹಿಳೆ. ಅನಿಲ್ ಕೃತ್ಯ ಎಸಗಿದ ಮಗ. ಪ್ರತಿದಿನ ಕುಡಿದು ಬರುತ್ತಿದ್ದ ಮಗ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುವುದನ್ನು ತಾಯಿ ಆಕ್ಷೇಪಿಸಿದ್ದಳು. ಇದರಿಂದ ಕೋಪಗೊಂಡ ಮಗ ಗಂಗಮ್ಮ ದೊಣ್ಣೆಯಿಂದ ಹೊಡೆದಿದ್ದಾನೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಪೊಲೀಸರು ಮರಣ ಪೂರ್ವ ಹೇಳಿಕೆಯನ್ನು ಪಡೆದಿದ್ದರು. ಅಷ್ಟರಲ್ಲೇ ಗಂಗಮ್ಮ ಅಸುನೀಗಿದ್ದರು.

ತೀರ್ಪು ಕೊಟ್ಟ ಹೈಕೋರ್ಟ್ :

ಈ ಪ್ರಕರಣವು ಕೊಡಗು ಜಿಲ್ಲಾ 1ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯವು ಈ ಪ್ರಕರಣದಿಂದ ಅನಿಲ್‌ನನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಡಿಕೇರಿ ಗ್ರಾಮೀಣ ಸರ್ಕಲ್‌ ಇನ್ಸ್‌ಪೆಕ್ಟರ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ಮರು ವಿಚಾರಣೆಗೆ ಮನವಿ ಮಾಡಿದ್ದರು. ಇದೀಗ ಹೈಕೋರ್ಟ್‌ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದೆ.

ಶಿಕ್ಷೆ ಏನು ?

ಹೈಕೋರ್ಟ್‌ ವಿಚಾರಣೆ ನಡೆಸಿ ಐಪಿಸಿ ಸೆಕ್ಷನ್‌ 304 (2) ರ ಪ್ರಕಾರ ಅನಿಲ್‌ನನ್ನು ದೋಷಿ ಎಂದು ಘೋಷಿಸಿದೆ. ಈಗಾಗಲೇ, ಅನಿಲ್‌ 2 ವರ್ಷಗಳ ಜೈಲು ವಾಸ ಅನುಭವಿಸಿದ್ದಾನೆ. ಆತ ಕುಡಿದ ಮತ್ತಿನಲ್ಲಿ ತಾಯಿಗೆ ಹಲ್ಲೆ ನಡೆಸಿದ್ದು, ಆಕೆಯನ್ನು ಕೊ*ಲ್ಲುವ ಉದ್ದೇಶದಿಂದ ಅಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ : ಮೌನ ಮುರಿದ ಪ್ರಧಾನಿ ಮೋದಿ; ಹೇಳಿದ್ದೇನು?

ಆತನ ಪಾಪಕ್ಕೆ ಪ್ರಾಯಶ್ಚಿತ್ತ ಆಗುವ ರೀತಿಯಲ್ಲಿ ಹೈಕೋರ್ಟ್‌ ಶಿಕ್ಷೆ ವಿಧಿಸಿದೆ. ಆರು ತಿಂಗಳ ಕಾಲ ಸಮುದಾಯ ಸೇವೆಯ ಶಿಕ್ಷೆಯ ನೀಡಿ ಅಪರೂಪದ ಆದೇಶ ನೀಡಿದೆ. ಸಂಪಾಜೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹೌಸ್‌ ಕೀಪಿಂಗ್‌, ತೋಟಗಾರಿಕೆ ಇತ್ಯಾದಿ ಸಮುದಾಯದ ಸೇವೆಯ ಶಿಕ್ಷೆ ನೀಡಿದೆ. ಒಂದು ವೇಳೆ ಈ ಆದೇಶ ಪಾಲಿಸದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದಿದೆ.

Continue Reading

LATEST NEWS

ಪ್ರಜ್ವಲ್ ರೇವಣ್ಣ ಪ್ರಕರಣ : ಮೌನ ಮುರಿದ ಪ್ರಧಾನಿ ಮೋದಿ; ಹೇಳಿದ್ದೇನು?

Published

on

ನವದೆಹಲಿ : ಸದ್ಯ ದೇಶದಲ್ಲಿ ಹಾಸನ ಜೆಡಿಎಸ್ – ಬಿಜೆಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಇದೀಗ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ವಿಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.


ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರ ಮಾನ, ಪ್ರಾಣದ ವಿಚಾರದಲ್ಲಿ ಪ್ರಜ್ವಲ್‌ ರೇವಣ್ಣ ಅಂತವರನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕ್ರಮ ಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತುಕೊಂಡಿದೆ. ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದಿದ್ದರೆ ನಿಗಾ ಇಡಬೇಕಿತ್ತು ಮತ್ತು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸರನ್ನು ಇಡಬೇಕಿತ್ತು. ರಾಜಕೀಯ ಲಾಭ ಪಡೆದುಕೊಳ್ಳಲು ಆರೋಪಿ ದೇಶ ಬಿಟ್ಟು ಹೋಗುವವರೆಗೂ ಸುಮ್ಮನಿದ್ದು, ವ್ಯರ್ಥ ಕಾಲಹರಣ ಮಾಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅವಧಿಯ ವೀಡಿಯೋ :

ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ ಕ್ರಮ ಜರುಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇದೆ. ಸಹಸ್ರಾರು ವಿಡಿಯೋಗಳ ಇವೆ ಎಂದಾದರೆ ಅವು ಜೆಡಿಎಸ್ ಪಕ್ಷ, ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಅವಧಿಯದ್ದಾಗಿವೆ ಎನ್ನುವುದು ತಿಳಿದುಬಂದಿದೆ. ಅವರು ಅಧಿಕಾರದಲ್ಲಿ ಇದ್ದಾಗ ಆ ವಿಡಿಯೋಗಳನ್ನು ಒಟ್ಟುಗೂಡಿಸಿಕೊಂಡು, ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಕ್ಕಲಿಗರು ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಆ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ವೀಡಿಯೋ ಪ್ರಕರಣದಲ್ಲಿ ಎಲ್ಲವೂ ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಮೋದಿ ಆರೋಪಿಸಿದ್ದಾರೆ.

Continue Reading

LATEST NEWS

Trending