Connect with us

    LATEST NEWS

    ಮನೆ ಬಳಿ ಪಾರಿವಾಳ ಬಂದ್ರೆ ಎಚ್ಚರ ಎಚ್ಚರ! ಹೀಗೂ ನಡೆಯುತ್ತೆ ಕಳವು

    Published

    on

    ಮಂಗಳೂರು/ಬೆಂಗಳೂರು : ಸಾಮಾನ್ಯವಾಗಿ ಪಾರಿವಾಳಗಳನ್ನು ಹವ್ಯಾಸವಾಗಿ ಸಾಕುವವರಿದ್ದಾರೆ. ಕೆಲವರು ಟೂರ್ನಮೆಂಟ್ ಗಳಲ್ಲಿ ಭಾಗವಹಿಸುವ ಸಲುವಾಗಿಯೂ ಪಾರಿವಾಳಗಳನ್ನು ಪೋಷಿಸುತ್ತಾರೆ. ಆದರೆ, ಇಲ್ಲೊಬ್ಬ ಮನೆಗೆ ಕನ್ನ ಹಾಕುವ ಸಲುವಾಗಿಯೇ ಪಾರಿವಾಳ ಸಾಕಿದ್ದ.  ಹೌದು, ವಸತಿ ಸಮುಚ್ಚಯಗಳ ಮೇಲೆ ಪಾರಿವಾಳ ಹಾರಿಸಿ ಪುನಃ ಪಾರಿವಾಳ ಹಿಡಿಯುವ ನೆಪದಲ್ಲಿ ಕಟ್ಟಡ ಪ್ರವೇಶಿಸಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಕಳ್ಳನನ್ನು ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

    ಸಾಂದರ್ಭಿಕ ಚಿತ್ರ

    ತಿಗಳರಪೇಟೆಯ ಮಂಜುನಾಥ ಅಲಿಯಾಸ್‌ ಪಾರಿವಾಳ ಮಂಜ (38) ಬಂಧಿತ ಆರೋಪಿ. ಹಲವು ವರ್ಷಗಳಿಂದ ಮನೆಕಳ್ಳತನ ಮಾಡಿಕೊಂಡಿದ್ದ ಆರೋಪಿ ಮಂಜನ ವಿರುದ್ಧ ನಗರದ ಬೇರೆ ಬೇರೆ ಠಾಣೆಗಳಲ್ಲಿ ಸುಮಾರು 55ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿವೆ.

    ಕಳ್ ಮಂಜನ ಕೈ ಚಳಕ :

    ಆರೋಪಿ ಮಂಜುನಾಥ ಏಳೆಂಟು ಪಾರಿವಾಳಗಳನ್ನು ಸಾಕಿದ್ದ. ಕಳ್ಳತನಕ್ಕೆ ತೆರಳುವ ಪಾರಿವಾಳಗಳನ್ನು ತನ್ನ ಜತೆ ಇರಿಸಿಕೊಂಡು ಸುತ್ತಾಡುತ್ತಿದ್ದ. ಭದ್ರತಾ ಸಿಬ್ಬಂದಿ ಇಲ್ಲದ ಕಟ್ಟಡಗಳನ್ನು ಗುರುತಿಸಿ ಪಾರಿವಾಳಗಳನ್ನು ಕಟ್ಟಡಕ್ಕೆ ಹಾರಿಸುತ್ತಿದ್ದ. ಬಳಿಕ ಪಾರಿವಾಳ ಹಿಡಿಯುವ ಸಲುವಾಗಿ ಕಟ್ಟಡ ಪ್ರವೇಶಿಸುತ್ತಿದ್ದ. ಈ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಬೀಗ ಮುರಿದು  ಚಿನ್ನಾಭರಣಗಳನ್ನು ದೋಚುತ್ತಿದ್ದ.

    ಇದನ್ನೂ ಓದಿ : ಸುಗಂಧ ದ್ರವ್ಯವನ್ನು ನೇರವಾಗಿ ಚರ್ಮಕ್ಕೆ ಬಳಸುವವರೇ, ಕ್ಯಾನ್ಸರ್ ಅಪಾಯ ಹೆಚ್ಚಾದೀತು ಹುಷಾರ್

    ಅಕಸ್ಮಾತ್‌ ಆಗಿ ಯಾರಾದರೂ ನೋಡಿ ಪ್ರಶ್ನಿಸಿದರೆ ‘ನನ್ನ ಪಾರಿವಾಳ ಕಟ್ಟಡಕ್ಕೆ ಹಾರಿ ಬಂದಿದೆ. ಹಿಡಿದುಕೊಂಡು ಹೋಗುತ್ತೇನೆ’ ಎಂದು ಹೇಳುತ್ತಿದ್ದನಂತೆ. ಹೀಗಾಗಿ ಯಾರಿಗೂ ಈತನ ಮೇಲೆ ಅನುಮಾನ ಬರುತ್ತಿರಲಿಲ್ಲ.  ಕದ್ದ ಆಭರಣಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು  ಮಾಹಿತಿ ನೀಡಿದ್ದಾರೆ.

    ಪಾರಿವಾಳ ಅಸ್ತ್ರ

    ಆರೋಪಿ ಮಂಜನ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಅತ್ಯಧಿಕವಾಗಿ ಪಾರಿವಾಳಗಳನ್ನು ಬಳಸಿ ಹಗಲಿನಲ್ಲಿ ಕಳವು ಮಾಡಿರುವ ಕೇಸ್ ಗಳಿವೆ. ಇತ್ತೀಚೆಗೆ, ಸಿಟಿ ಮಾರ್ಕೆಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣದ ಬೆನ್ನು ಬಿದ್ದ ಪೊಲೀಸರು ತಮಿಳುನಾಡಿನಲ್ಲಿ ವಾಸವಿದ್ದ ಮಂಜನನ್ನು ಬಂಧಿಸಿದಾಗ ಇತರ ಕೇಸ್ ಗಳು ಬೆಳಕಿಗೆ ಬಂದಿವೆ. ಆರೋಪಿ ಕಳವು ಮಾಡಿದ್ದ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಒಂದು ಬೈಕ್‌ ವಶಪಡಿಸಿಕೊಳ್ಳಲಾಗಿದೆ.

     

    Click to comment

    Leave a Reply

    Your email address will not be published. Required fields are marked *

    LATEST NEWS

    ವರದಕ್ಷಿಣೆಗಾಗಿ ಗೃಹಣಿಯ ಕತ್ತು ಹಿಸುಕಿ ಕೊ*ಲೆ

    Published

    on

    ಮಂಗಳೂರು/ಹುಬ್ಬಳ್ಳಿ: ತವರು ಮನೆಯಿಂದ ವರದಕ್ಷಿಣೆ ತರದ್ದಕ್ಕೆ ಗಂಡನ ಮನೆಯವರು ಗೃಹಿಣಿಯ ಕತ್ತು ಹಿಸುಕಿ ಕೊ*ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿಶಾಲ ನಗರದಲ್ಲಿ ನಡೆದಿದೆ.

    ಹೀನಾ ಕೌಸರ(28) ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಗೃಹಿಣಿ. ಎರಡೂ ವರ್ಷದ ಹಿಂದೆ ಮಹಮ್ಮದ್ ಅಜರುದ್ದೀನ್ ಎಂಬಾತನೊಂದಿಗೆ ಹೀನಾ ಮದುವೆಯಾಗಿತ್ತು. ಮದುವೆಯ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಇತ್ತು. ನಂತರ ಮಹಮ್ಮದ್ ಕುಟುಂಬಸ್ಥರು ಹೀನಾಗೆ ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
    ಈ ಹಿಂದೆ ಹಲವು ಬಾರಿ ಮಹಮ್ಮದ್ ಕುಟುಂಬಸ್ಥರಿಗೆ ಹಿರಿಯರು ಬುದ್ಧಿವಾದ ಹೇಳಿದ್ದರು. ಆದರೂ ಹೀನಾಳಿಗೆ ವರದಕ್ಷಿಣೆ ಕಿರುಕುಳ ಮಾತ್ರ ಮುಂದುವರೆದಿತ್ತು.
    ಭಾನುವಾರವೂ ವರದಕ್ಷಿಣೆ ತರುವಂತೆ ಹೀನಾಳೊಂದಿಗೆ ಮಹಮ್ಮದ್ ಕುಟುಂಬಸ್ಥರು ಜಗಳವಾಡಿದ್ದರು. ಗಂಡ ಮಹಮ್ಮದ್ ಅಜರುದ್ದೀನ್, ಅತ್ತೆ ಫರಿದಾಬಾನು, ಮಾವ ಕರೀಮ್‌ಸಾಬ್, ಹಾಗೂ ನಾದಿನಿ ಶಬ್ಬೋ ಸೇರಿ ಆಕೆಯನ್ನು ಕ*ತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಿ ಹೀನಾ ತಂದೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

     

    Continue Reading

    LATEST NEWS

    ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮ*ಹತ್ಯೆ

    Published

    on

    ಮಂಗಳೂರು/ಕೊಲಾರ: ಪತಿ ಮತ್ತು ಆತನ ಕುಟುಂಬಸ್ಥರಿ0ದ ನಿರಂತರ ವರದಕ್ಷಿಣಿ ಕಿರುಕುಳದಿಂದಾಗಿ ಬೇಸತ್ತು ಮಹಿಳೆ ಕೆರೆಗೆ ಹಾರಿ ಆತ್ಮ*ಹತ್ಯೆಗೆ ಶರಣಾದ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ.

    ಆತ್ಮ*ಹತ್ಯೆಗೆ ಶರಣಾದ ಮಹಿಳೆಯನ್ನು ಕೊಲಾರದ ಕೆಜಿಎಫ್‌ನ ಕಂಗನಲ್ಲೂರು ಗ್ರಾಮದ ಸೌಮ್ಯ (25) ಎಂದು ಗುರುತಿಸಲಾಗಿದೆ.
    ಅ. 6ರ ಭಾನುವಾರ ಬಂಗಾರಪೇಟೆ ಪಟ್ಟಣದ ಅಮರಾವತಿ ಬಡಾವಣೆಯಲ್ಲಿರುವ ತಾಯಿಯ ಮನೆಗೆ ಬಂದಿದ್ದ ಸೌಮ್ಯ, ರಾತ್ರಿ ಮನೆಯಿಂದ ಹೊರ ಬಂದು ಕೆರೆಗೆ ಹಾರಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಎರಡು ವರ್ಷದ ಹಿಂದೆ ಸುನಿಲ್ ಕುಮಾರ್ ಎಂಬಾತನ ಜೊತೆ ಸೌಮ್ಯ ಮದುವೆಯಾಗಿದ್ದರು.
    ಮೃ*ತ ಮಹಿಳೆಯ ಪೋಷಕರು ಆಕೆಯ ಪತಿ ಸುನಿಲ್ ಕುಮಾರ್ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಸೌಮ್ಯ ಆತ್ಮ*ಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Continue Reading

    LATEST NEWS

    ವಿದ್ಯುತ್ ತಂತಿ ಸ್ಪರ್ಶಿಸಿ ಮಗು ಸಹಿತ ಎರಡು ಕರಡಿ ಮೃ*ತ್ಯು

    Published

    on

    ಮಂಗಳೂರು/ಹಾಸನ: ವಿದ್ಯುತ್ ತಂತಿ ಸ್ಪರ್ಶಿಸಿ 3 ಕರಡಿಗಳು ಮೃ*ತಪಟ್ಟ ಘಟನೆ ಅರಸೀಕೆರೆ ತಾಲೂಕಿನ ಕಲ್ಲುಸಾಗರಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಡವಾಗಿ ಸ್ಥಳೀಯರ ಗುರುತಿಸಿದ್ದಾರೆ.


    ಹಾಸನದ ಗುಡ್ಡಗಾಡು ಪ್ರದೇಶಗಳಲ್ಲಿ ಕರಡಿಗಳು ಹೆಚ್ಚಾಗಿದ್ದು, ಕಳೆದ 6 ತಿಂಗಳಲ್ಲಿ ಸುಮಾರು ಐದಾರು ಮಂದಿ ದಾಳಿ ಮಾಡಿ ಗಾಯ**ಗೊಳಿಸಿದ್ದವು.


    ಅರಣ್ಯ ಪ್ರದೇಶದ ಬಳಿ ವಿದ್ಯುತ್ ಕಂಬದಿಂದ ತಂಡಾಗಿ ಬಿದ್ದಿದ್ದ ತಂತಿ ತುಳಿದ ಹಿನ್ನಲೆ ತಾಯಿ ಮತ್ತು ಮರಿ ಕರಡಿಯ ಜೊತೆ ಗಂಡು ಕರಡಿ ಸಾವಿಗೀಡಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

    Continue Reading

    LATEST NEWS

    Trending