Connect with us

  LATEST NEWS

  ಸೂರ್ಯಕಾಂತ್‌ ಜಯ ಸುವರ್ಣರಿಗೆ ಬೆಸ್ಟ್‌ ಚೇರ್‌ಮೆನ್ ಪ್ರಶಸ್ತಿ..! ಭಾರತ್‌ಬ್ಯಾಂಕ್‌ಗೆ ಹೆಮ್ಮೆಯ ಗರಿ

  Published

  on

  ಮಂಗಳೂರು:   ಸೂರ್ಯಕಾಂತ್ ಜಯಸುವರ್ಣ ಅವರ ಅಧ್ಯಕ್ಷತೆಯಲ್ಲಿ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವ ಭಾರತ್‌ ಬ್ಯಾಂಕ್‌ ಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿದೆ. “ಭಾರತ ರತ್ನ ಸಹಕಾರಿತ ಸನ್ಮಾನ-2024” ರಲ್ಲಿ ಬಹು-ರಾಜ್ಯ ಅನುಸೂಚಿತ ಸಹಕಾರಿ ಬ್ಯಾಂಕ್‌ಗಳ ವಿಭಾಗದಲ್ಲಿ “ಕೊ-ಅಪರೇಟಿವ್‌ ಬ್ಯಾಂಕ್‌ ಸಮ್ಮಿಟ್‌” ನಲ್ಲಿ ಬೆಸ್ ಚೇರ್‌ಮೆನ್‌ ಅವಾರ್ಡ್‌ಅನ್ನು ಸೂರ್ಯಕಾಂತ್‌ ಜಯಸುವರ್ಣ ಪಡೆದುಕೊಂಡಿದ್ದಾರೆ. ಮುಂಬೈನ ಗ್ರ್ಯಾಂಡ್ ಲಲಿತ್ ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಸಂವಹನ ಸಚಿವಾಲಯದ ಮಹಾನಿರ್ದೇಶಕ ಸುಮ್ನೇಶ್ ಜೋಶಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

  suryakanth jaya suvarna

  ಈ ಹಿಂದೆ 1991ರಲ್ಲಿ ಬ್ಯಾಂಕ್ ಜವಬ್ದಾರಿಯನ್ನು ಹೊತ್ತಿದ್ದ ಜಯ ಸುವರ್ಣರವರಿಗೆ ‘ಬೆಸ್ಟ್ ಚ್ಯಾರ್‌ಮ್ಯಾನ್ ಅವಾರ್ಡ್‌’ ಲಭಿಸಿತ್ತು. ಕೊ-ಅಪರೇಟಿವ್‌ ಬ್ಯಾಂಕ್‌ಗಳಲ್ಲಿ ಭಾರತ್ ಬ್ಯಾಂಕ್  ಮೊಟ್ಟ ಮೊದಲು ಆರ್‌ಬಿಐನಿಂದ ಮಾನ್ಯತೆ ಪಡೆದ ಹೆಗ್ಗಳಿಕೆ ಕೂಡಾ ಇದೆ. ಇದೀಗ ಜಯ ಸುವರ್ಣರವರ ಬಳಿಕ ಕಾರ್ಪರೇಟ್‌ ಬ್ಯಾಂಕ್‌ ವಲಯದಲ್ಲಿ ಬೆಸ್ಟ್ ಚ್ಯಾರ್‌ಮ್ಯಾನ್ ಅವಾರ್ಡ್‌ ಅನ್ನು ಸೂರ್ಯಕಾಂತ್ ಜಯಸುವರ್ಣ ತಮ್ಮದಾಗಿಸಿಕೊಂಡಿದ್ದಾರೆ.

  ನಿನ್ನೆ(23) ಭಾರತ್‌ ಬ್ಯಾಂಕ್‌ ಗೆ 25 ವರ್ಷ ಪೂರೈಸಿದ ಸಂಭದ್ರದ ದಿನವಾಗಿದ್ದು ಅಂದೇ ಈ ಪ್ರಶಸ್ತಿ ಲಭಿಸಿರುವುದು ಬಹಳ ವಿಶೇಷ. ಭಾರತ್ ಬ್ಯಾಂಕ್ ಇಂದು ದೇಶದ ಹಲವು ರಾಜ್ಯಗಳಲ್ಲಿ 100 ಕ್ಕೂ ಅಧಿಕ ಬ್ರಾಂಚ್‌ಗಳನ್ನು ಹೊಂದಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ.

  Read More..; ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ‘ಐಟಿ ರಿಸ್ಕ್ ಮ್ಯಾನೇಜ್ಮೆಂಟ್’ ಪ್ರಶಸ್ತಿಯ ಗರಿ

  ಬ್ಯಾಂಕ್‌ನ ಹಿನ್ನೆಲೆ:

  1978 ರಲ್ಲಿ ನಾರಾಯಣಗುರುಗಳ ಆಶಯದಂತೆ ಸಮಾಜದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಭಾರತ್ ಬ್ಯಾಂಕ್‌ ಮುಂಬೈನಲ್ಲಿ ಹುಟ್ಟು ಪಡೆದಿತ್ತು.  1991 ರಲ್ಲಿ ಜಯ ಸುವರ್ಣ ಅವರು ಬ್ಯಾಂಕ್ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡ ಬಳಿಕ ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ದಿಯತ್ತ ಮುಖ ಮಾಡಿತ್ತು.  ಈ ಕಾರಣದಿಂದಾಗಿ 1996 ರಲ್ಲಿ 193 ಕೋಟಿಯ ವ್ಯವಹಾರ ನಡೆಸುವುದರೊಂದಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ರಿಸರ್ವ್‌ ಬ್ಯಾಂಕ್ ಆಫ್‌ ಇಂಡಿಯಾದ  ಶೆಡ್ಯೂಲ್ ಬ್ಯಾಂಕ್‌ ಸ್ಥಾನಮಾನ ಪಡೆದ ಕೋಪರೇಟಿವ್ ಬ್ಯಾಂಕ್‌ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 1998 ರಲ್ಲಿ ಕರ್ನಾಟಕ್ಕೆ ಪಾದಾರ್ಪಣೆ ಮಾಡಿದ ಭಾರತ್ ಕೋಪರೇಟಿವ್‌ ಬ್ಯಾಂಕ್‌ ಬೆಂಗಳೂರಿನಲ್ಲಿ ತನ್ನ ಬ್ರಾಂಚ್ ತೆಗೆದು, 1999 ರಲ್ಲಿ ಮಂಗಳೂರಿನ ಹಂಪನಕಟ್ಟೆಯಲ್ಲಿ ತನ್ನ 25 ನೇ ಬ್ರಾಂಚ್ ಆರಂಭಿಸಿತ್ತು. ಜಯ ಸುವರ್ಣ ಅವರ ನೇತೃತ್ವದಲ್ಲಿ ಅಭಿವೃದ್ದಿಯ ಪಥದಲ್ಲಿ ಸಾಗಿದ ಭಾರತ್ ಬ್ಯಾಂಕ್ ಇಂದು ದೇಶದ ಅನೇಕ ರಾಜ್ಯಗಳಲ್ಲಿ ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ.  ಇದೀಗ ಸೂರ್ಯಕಾಂತ ಜಯ ಸುವರ್ಣ ಅವರು ಭಾರತ್ ಬ್ಯಾಂಕ್‌ನ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಬ್ಯಾಂಕ್‌ ನ ಅಭಿವೃದ್ದಿಯೊಂದಿಗೆ ದೇಶದಲ್ಲಿ ನೂರಕ್ಕೂ ಹೆಚ್ಚು ಬ್ರಾಂಚ್‌ಗಳನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದಾರೆ.  ಜೊತೆಗೆ ಲಕ್ಷಾಂತರ ಗ್ರಾಹಕರಿಗೆ ತನ್ನ ಉತ್ತಮ ಸೇವೆಯ ಮೂಲಕ ಮೆಚ್ಚುಗೆಯನ್ನು ಭಾರತ್ ಬ್ಯಾಂಕ್ ಗಳಿಸಿಕೊಂಡಿದೆ.

  LATEST NEWS

  ಏರ್ ಪೋರ್ಟ್ ಗೆ ಪ್ರಿಯಕರ ಡ್ರಾಪ್ ಮಾಡಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿದ ಯುವತಿ!

  Published

  on

  ಮಂಗಳೂರು : ಇತ್ತೀಚೆಗಿನ ದಿನಗಳಲ್ಲಿ ಸಂಬಂಧಗಳು ಅರಳಲು ಹೆಚ್ಚು ಸಮಯ ಪಡೆಯುತ್ತಿಲ್ಲ. ಜೊತೆಗೆ ಮುರಿಯಲೂ ಕೂಡ. ಸಣ್ಣದೊಂದು ಮನಸ್ತಾಪ ಸಂಬಂಧವನ್ನು ದೂರ ಮಾಡುತ್ತದೆ. ಇತ್ತೀಚೆಗೆ ಇಂತಹುದೇ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ ಗೆಳತಿಯೊಬ್ಬಳು ತನ್ನ ಪ್ರಿಯಕರನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾಳೆ.


  ಫ್ಲೈಟ್ ಮಿಸ್​​ ಆಗಲು ಪ್ರಿಯಕರ ಕಾರಣ :

  ವರದಿಗಳ ಪ್ರಕಾರ, ಈ ಘಟನೆ ನಡೆದಿರುವುದು ನ್ಯೂಜಿಲೆಂಡ್ ನಲ್ಲಿ. ಪ್ರಿಯಕರ ತನ್ನನ್ನು ವಿಮಾನ ನಿಲ್ದಾಣಕ್ಕೆ ಬಿಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಯುವತಿಯೊಬ್ಬಳು ಪ್ರಕರಣ ದಾಖಲಿಸಿದ್ದಾಳೆ. ಆತನಿಂದಾಗಿ ತನ್ನ ಫ್ಲೈಟ್ ಮಿಸ್​​ ಆಯ್ತು, ಇದಲ್ಲದೇ ಮರುದಿನ ಬೇರೆ ಫ್ಲೈಟ್ ನಲ್ಲಿ ಹೋಗಲು ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗಿತ್ತು ಎಂಬುದು ಯುವತಿಯ ದೂರು.

  ಪ್ರಿಯಕರನ ಮೇಲೆ ತೀವ್ರ ಕೋಪಕೊಂಡಿದ್ದ ಯುವತಿ ಆರು ವರ್ಷಗಳ ತನ್ನ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಾಳೆ. ಅಲ್ಲದೆ, ವಿಮಾನಕ್ಕಾಗಿ ಪಾವತಿಸಿದ ಹಣವನ್ನು ಆತ ನೀಡುವಂತೆ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾಳೆ.

  ಇದನ್ನೂ ಓದಿ :  ನನ್ನದೂ ತಪ್ಪಿದೆ, ಯುವ ಹೇಳಿದ್ದಕ್ಕೆ ನಾನು ಮುಂದುವರೆದೆ…ಸಪ್ತಮಿ ಗೌಡ ಆಡಿಯೋ ವೈರಲ್!?

  ಕೋರ್ಟ್ ಸಲಹೆ ಏನು?

  ಯುವತಿಯ ವಾದವನ್ನು ಆಲಿಸಿದ ನ್ಯಾಯಾಧೀಶ ರೆಫ್ರಿ ಕ್ರಿಶ್ಯಾ ಕೌವಿ, ಯುವತಿ ಹೇಳಿದ ಅಪರಾಧಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಾಗ್ದಾನವನ್ನು ಉಲ್ಲಂಘಿಸಿದ್ದಕ್ಕಾಗಿ ಯಾರನ್ನೂ ಶಿಕ್ಷಿಸುವುದು ಅಸಾಧ್ಯ ಎಂದು ತೀರ್ಪು ನೀಡಿದ್ದಾರೆ.
  ಅಲ್ಲದೇ, ಇಂತಹ ಸಣ್ಣ ವಿಚಾರಗಳಿಗೆ ಸಂಬಂಧ ಕಡಿದುಕೊಳ್ಳುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.

  Continue Reading

  LATEST NEWS

  ಸೂರಜ್ ರೇವಣ್ಣ ಪರ ದೂರು ನೀಡಿದ್ದ ಶಿವಕುಮಾರ್ ನಾಪತ್ತೆ!

  Published

  on

  ಮಂಗಳೂರು/ಹಾಸನ : ಸೂರಜ್ ರೇವಣ್ಣ ಅವರನ್ನು ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜ*ನ್ಯ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಈ ಪ್ರಕರಣವನ್ನೂ ಸಿಐಡಿ ತನಿಖೆಗೂ ವಹಿಸಲಾಗಿದೆ.

  ಆದರೆ, ಇತ್ತ ಹೊಳೆನರಸೀಪುರದಲ್ಲಿ ಸಂತ್ರಸ್ತನ ವಿರುದ್ಧವೇ ದೂರು ದಾಖಲಾಗಿದ್ದು, ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎನ್ನುವಾತ ಸಂತ್ರಸ್ತನ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆದ್ರೆ, ಇದೀಗ ಸಂತ್ರಸ್ತನ ದೂರಿನ ಅನ್ವಯ ಸೂರಜ್​ನನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆಯೇ ಆಪ್ತ ಶಿವಕುಮಾರ್ ನಾಪತ್ತೆಯಾಗಿದ್ದಾನೆ.


  ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ ನಂತರ ಶಿವಕುಮಾರ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿವಕುಮಾರ್ ನಾಪತ್ತೆಯಾಗಿದ್ದಾನೆ.

  ಇದನ್ನೂ ಓದಿ : ನಾಳೆಯಿಂದ ಸಂಸತ್ ಅಧಿವೇಶನ..! ಎನ್‌ಡಿಎ ಮುಂದಿದೆ ಹಲವು ಸವಾಲು..!

  ಸಂತ್ರಸ್ತನ ವಿರುದ್ಧ ಶಿವಕುಮಾರ್​​ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಹೋಗಿಯೇ ಸೂರಜ್ ರೇವಣ್ಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ಈ ಪ್ರಕರಣ ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

  Continue Reading

  LATEST NEWS

  ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಿಬಿಐಗೆ ವಹಿಸಿದ ಕೇಂದ್ರ

  Published

  on

  ಮಂಗಳೂರು/ ನವದೆಹಲಿ : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ನಡೆದಿರುವ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ಒಪ್ಪಿಸಿದೆ.


  ಈ ಮಧ್ಯೆ ಭಾನುವಾರ ( ಜೂನ್ 23 ) ದಂದು ನೀಟ್ ಯುಜಿ ಪರೀಕ್ಷೆಯಲ್ಲಿ ಗ್ರೇಸ್ ಅಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ಆರಂಭವಾಗಬೇಕಾಗಿತ್ತಾದ್ರೂ ಇದೀಗ ಪರೀಕ್ಷೆಯನ್ನು ಮುಂದೂಡಿರುವುದಾಗಿ ತಿಳಿಸಿದೆ. ಇದರಿಂದ ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು(ಜೂ.23) ಪರೀಕ್ಷೆ ನಡೆಸಿ ಜೂನ್ 30 ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಲಾಗಿತ್ತಾದ್ರೂ, ಈಗ ಪರೀಕ್ಷೆಯನ್ನೇ ಏಕಾ ಏಕಿ ರದ್ದು ಮಾಡಿದ್ದು ಯಾಕೆ? ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.

  ಇದನ್ನೂ ಓದಿ : ಸಂಸದ ಹೆಚ್ ಡಿಕೆ ನಿರ್ಧಾರಕ್ಕೆ ಬ್ರೇಕ್; ದೇವದಾರಿ ಗಣಿಗಾರಿಕೆ ತಡೆಗೆ ರಾಜ್ಯ ಸರ್ಕಾರ ಸೂಚನೆ

  ಆದ್ರೆ ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

  Continue Reading

  LATEST NEWS

  Trending