bengaluru
Bengaluru: ಬಿಎಂಟಿಸಿ ಬಸ್ ಹರಿದು ಮಗು ಸಾವು..!
ತಂದೆಯ ಜೊತೆ ಮಗಳು ಶಾಲೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಬಿಎಂಟಿಸಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದು ಬಾಲಕಿ ರೋಡ್ ಗೆ ಬಿದ್ದ ಪರಿಣಾಮ ಆಕೆಯ ಮೇಲೆ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರು: ತಂದೆಯ ಜೊತೆ ಮಗಳು ಶಾಲೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಬಿಎಂಟಿಸಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದು ಬಾಲಕಿ ರೋಡ್ ಗೆ ಬಿದ್ದ ಪರಿಣಾಮ ಆಕೆಯ ಮೇಲೆ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಲ್ ಸ್ಕೂಲ್ ನ ಪ್ರಿ ಕೆಜಿ ವಿದ್ಯಾರ್ಥಿನಿ ಪೂರ್ವಿ ರಾವ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.
ಪೂರ್ವಿಯನ್ನು ಶಾಲೆಗೆ ಬಿಡಲೆಂದು ಆಕೆಯ ತಂದೆ ಪ್ರಸನ್ನ ಅವರು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಉತ್ತರಹಳ್ಳಿ ಮುಖ್ಯರಸ್ತೆಯ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದಿದೆ.
ಇದರಿಂದ ಬೈಕ್ ಬಿದ್ದು, ಬೈಕ್ ನಲ್ಲಿದ್ದ ಪ್ರಸನ್ನ ಅವರು ದ್ವಿಚಕ್ರ ವಾಹನದ ಎಡಬದಿಗೆ ಬಿದ್ದರೆ ಮಗಳು ಪೂರ್ವಿ ಬಲಬದಿ ಬಿದ್ದಿದ್ದಾರೆ.
ಪೂರ್ವಿ ಬಲ ಬದಿ ಬಿದ್ದ ಕಾರಣ ಈ ವೇಳೆ ಆಕೆ ಮೇಲೆ ಬಸ್ ಹರಿದುಹೋಗಿದೆ.
ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
bengaluru
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕನ್ನಡ ಖ್ಯಾತ ನಟ ವಿಜಯ ರಾಘವೇಂದ್ರ ಸೆ.24ರಂದು ಭೇಟಿ ನೀಡಿದರು.
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ ರಾಘವೇಂದ್ರ ಅವರು ಭೇಟಿ ನೀಡಿದರು.
ಬಳಿಕ ತಾಯಿ ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಿದರು.
ಈ ಸಂದರ್ಭ ದೇವಳದ ವತಿಯಿಂದ ವಿಜಯ ರಾಘವೇಂದ್ರ ಅವರನ್ನು ಗೌರವಿಸಲಾಯಿತು.
ಈ ಹಿಂದೆ ಯಾವತ್ತೂ ನಟ ರಾಘು ಕಟೀಲು ಕ್ಷೇತ್ರಕ್ಕೆ ಪತ್ನಿ ಸ್ಪಂದನ ಜೊತೆ ಭೇಟಿ ನೀಡುತ್ತಿದ್ದರು.
ಆದರೆ ಈ ಬಾರಿ ಪತ್ನಿಯ ಅಗಲಿಕೆಯ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ನಟ ಭೇಟಿ ನೀಡಿದ್ದು, ಮುಖದಲ್ಲಿ ಪತ್ನಿಯ ಅಗಲಿಕೆಯ ನೋವು ಕಂಡು ಬರ್ತಾ ಇತ್ತು.
bengaluru
ಬೆಂಗಳೂರಿನಲ್ಲಿ ಅನಾವರಣಗೊಂಡ ತುಳುನಾಡ ಸಂಸ್ಕೃತಿ -ಶಾಸಕ ಪೂಂಜಾ ಮೆಚ್ಚುಗೆ
ಬೆಂಗಳೂರು: ತುಳುನಾಡ ಜವನೆರ್ ಬೆಂಗಳೂರು ರಿಜಿಸ್ಟರ್ ಆಯೋಜಿಸಿರುವ ರಾಜಬೂಡುಡು ಕುಡೊರ ಗರ್ದ್ ಗಮ್ಮತ್ ದ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಎಂಬ ಕಾರ್ಯಕ್ರಮವು ಸೆ.24ರಂದು ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಸಭಾಭವನದಲ್ಲಿ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಅತಿಥಿ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಗುವನ್ನು ತೊಟ್ಟಿಲಿಗೆ ಹಾಕಿ ತೂಗುವ ಮೂಲಕ ಮತ್ತೊಮ್ಮೆ ವಿಶೇಷವಾಗಿ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಕಾರ್ಯಕ್ರಮಕ್ಕೆ ಅತಿಥಿಗಳು ಚಾಲನೆ ನೀಡಿದರು.
ನಂತರ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ – ಬೆಳೆಸುವ ಕಾರ್ಯವನ್ನು ತುಳುನಾಡ ಜವನೆರ್ ಬೆಂಗಳೂರು ಇವರ ತಂಡ ಮಾಡ್ತ ಇರುವುದು ಶ್ಲಾಘನೀಯ ಎಂದರು.
ಇದೇ ವೇಳೆ ವೇಳೆ ಕಾರ್ಯಕ್ರದಮಲ್ಲಿ ಹಲವಾರು ಮಂದಿ ಅತಿಥಿ ಗಣ್ಯರು ಬೆಂಗಳೂರಿನಲ್ಲಿ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಸಂಘಟನೆ ಕುರಿತು ಸಂದರ್ಭೋಚಿತವಾಗಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಈ ಸಂದರ್ಭ ತುಳುನಾಡ ಜವನೆರ್ ಸಂಘಟನೆಯಿಂದ ಸನ್ಮಾನಿಸಿ ಸನ್ಮಾನಿಸ ಗೌರವಿಸಲಾಯಿತು.
ಇದಕ್ಕೂ ಮೊದಲು ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಕುಣಿತ ಭಜನೆ, ಹುಲಿ ವೇಷದ ತಂಡಗಳಿಂದ ಹುಲಿ ವೇಷದ ಕುಣಿತ ಪ್ರದರ್ಶನಗೊಂಡಿತು.
ಬಳಿಕ ಸಂಗೀತಗಾರದ ವಿದ್ಯಾಭೂಷಣ್ ಮತ್ತವರ ತಂಡದಿಂದ “ರಂಗಗ್ ಪದರಂಗ್” ಎನ್ನುವ ಭಕ್ತ ಗಾನೆ ಸುಧೆ ಮೂಡಿ ಬಂತು.
ಜೈ ತುಳುನಾಡು ರಿಜಿಸ್ಟರ್ ಬೆಂಗಳೂರು ಶಾಖೆ ಇವರ ತುಳುಲಿಪಿಯ ಕುರಿತಾದ “ತುಳು ಬರುವುದ ಐಸಿರ” ಎನ್ನುವ ಕೃತಿಯನ್ನು ವಿದ್ಯಾಭೂಷಣ್ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮಕ್ಕಳಿಗಾಗಿ ಕೃಷ್ಣ ವೇಷ ಮಕ್ಕಳ ವೇಷ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ಮುದ್ದು ಮಕ್ಕಳು ಈ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ನಂತರ ವಿಠಲ್ ನಾಯಕ್ ಅವರ ತಂಡದಿಂದ ಗೀತಾ ಸಾಹಿತ್ಯ ಸಂಭ್ರಮ ಸೇರಿದಂತೆ,ಇನ್ನಿತರ ಹಲವಾರು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂತು.
ಒಟ್ಟಿನಲ್ಲಿ ತುಳುನಾಡಿ ಸಂಪೂರ್ಣ ಸಂಸ್ಕೃತಿ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡು ನೋಡುಗರ ಮನಸೊರೆಗೊಂಡಿತು.
ಅಧ್ಯಕ್ಷ ಮಹೇಶ್ ಬೈಲೂರು ಅತಿಥಿಗಳನ್ನು ಸ್ವಾಗತಿಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಪಿಎಂಪಿ ನಿಕಟ ಪೂರ್ವ ಅಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಕಳದ ಬಾಲಾಜಿ ಶಿಬಿರದ ಬಾಲಕೃಷ್ಣ ಹೆಗಡೆ, ಬಂಟರ ಸಂಘದ ಗೌರವ ಕಾರ್ಯದರ್ಶಿ ಅನಂದ್ ರಾಮ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಅತಿಥಿ-ಗಣ್ಯರು ಪಾಲ್ಗೊಂಡಿದ್ದರು.
bangalore
ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?
ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನಲ್ಲಿ ರಕ್ಷಿತ್ ವೈಟ್ ಟೀ-ಶರ್ಟ್ ಮೇಲೆ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು. ಈ ಲುಕ್ ಇದೀಗ ರಿಪೀಟ್ ಆಗಿದ್ದು ಹುಡುಗಿ ಮಾತ್ರ ಚೇಂಜ್ ಆಗಿದ್ದಾರೆ.
ಬೆಂಗಳೂರು : ಸದ್ಯ ರಕ್ಷಿತ್ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಅವರ ಸಿನೆಮಾ ಸಪ್ತ ಸಾಗರಾದಾಚೆ ಅಂತೂ ಹೆವ್ವಿ ಸೌಂಡ್ ಮಾಡ್ತಿದ್ದು, ನೆರೆಯ ಭಾಷೆಗಳಿಗೂ ರಿಮೇಕ್ ಆಗಿ ಜನರ ಮನಸ್ಸು ಗೆದ್ದಿದೆ.
ಈ ನಡುವೆ ರಕ್ಷಿತ್ ಶೆಟ್ಟಿ ಮತ್ತೆ ಲವ್ವಲ್ಲಿ ಬಿದ್ರಾ ಅನ್ನೋ ಗುಮಾನಿ ಕೂಡ ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲಿ ಚರ್ಚೆಯಾಗುತ್ತಿದೆ.
ರಕ್ಷಿತ್ ಶೆಟ್ಟಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಹುಡುಗೀನ ನೋಡಿ ನಕ್ಕಿದ್ರೂ ಅದು ಬಿಗ್ ಹೆಡ್ ಲೈನ್ ಆಗಿ ಬಿಡುತ್ತೆ.
ಇದೀಗ ನೆಟ್ಟಿಗರು ಎಷ್ಟು ಸ್ಮಾರ್ಟ್ ಆಗಿದ್ದಾರೆ ಅಂದ್ರೆ 4-5 ವರ್ಷಗಳ ಹಿಂದಿನ ರಕ್ಷಿತ್ ಶೆಟ್ಟಿ ಫೋಟೋ ಹುಡುಕಿ ಈಗ ಸ್ವೀಟ್ ಮೀಮ್ಸ್ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಡುತ್ತಿದ್ದಾರೆ.
ಹೌದು! ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನಲ್ಲಿ ರಕ್ಷಿತ್ ವೈಟ್ ಟೀ-ಶರ್ಟ್ ಮೇಲೆ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು.
ಈ ಲುಕ್ ಇದೀಗ ರಿಪೀಟ್ ಆಗಿದ್ದು ಹುಡುಗಿ ಮಾತ್ರ ಚೇಂಜ್ ಆಗಿದ್ದಾರೆ.
ಅಂದು ಪಕ್ಕದಲ್ಲಿ ರಶ್ಮಿಕ ಮಂದಣ್ಣ ಇದ್ರೆ ಇಂದು ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.
ರೊಮ್ಯಾಂಟಿಕ್ ಆಕ್ಷನ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಮತ್ತು ರಕ್ಮಿಣಿ ವಸಂತ್ ನಟಿಸಿದ್ದು , ಸಿನಿಮಾ ಹಿಟ್ ಆದ ಬೆನ್ನಲ್ಲೆ ಸಾಕಷ್ಟು ಪ್ರೆಸ್‌ಮೀಟ್ ಮತ್ತು ಸಕ್ಸಸ್ ಮೀಟ್ ಗಳಲ್ಲಿ ಈ ಜೋಡಿ ಕಾಣಿಸಿಕೊಳ್ಳೋದು ಮಾಮೂಲು.
ಆದ್ರೆ ಕಿರಿಕ್ ಪಾರ್ಟಿ ಟೈಮಲ್ಲಿ ಹಾಕಿದ ಬಟ್ಟೆಯನ್ನೇ ಇದೀಗ ಮತ್ತೆ ಶೆಟ್ರು ರಿಪೀಟ್ ಮಾಡಿರೋದನ್ನ ನೋಡಿ ಶೆಟ್ರು ಸೋ ಸಿಂಪಲ್ ಅಂತಿದ್ದಾರೆ.
ಒಟ್ನಲ್ಲಿ ಇದನ್ನು ನೋಡಿದ ನೆಟ್ಟಿಗರು ಹುಡುಗಿ ಚೇಂಜ್ ಆದ್ರೂ ಡ್ರೆಸ್ ಇನ್ನೂ ಚೇಂಜ್ ಆಗಿಲ್ಲ ಅಲ್ವಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದ್ರೆ ಅಂದು ರಕ್ಷಿತ್ ಶೆಟ್ಟಿ ಹಾಕಿದ ಶರ್ಟಿಗೂ ಈಗ ವೈರಲ್ ಆಗುತ್ತಿರುವ ಶರ್ಟಿಗೂ ವ್ಯತ್ಯಾಸ ಇರೋದಂತೂ ಅಕ್ಷರಶಃ ಸತ್ಯ.
- DAKSHINA KANNADA6 days ago
Suratkal: ಸಮುದ್ರ ವಿಹಾರಕ್ಕೆ ತೆರಳಿದ ಮೂವರಲ್ಲಿ ಓರ್ವ ಸಮುದ್ರ ಪಾಲು..!
- BANTWAL6 days ago
Bantwala: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು..!
- DAKSHINA KANNADA7 days ago
ಮೂಲ್ಕಿ: ಮಟ ಮಟ ಮಧ್ಯಾಹ್ನ ಮನೆಯ ಅಂಗಳಕ್ಕೆ ಬಂದು ಚೂರಿ ತೋರಿಸಿ ಚಿನ್ನದ ಕರಿಮಣಿ ಎಗರಿಸಿ ಪರಾರಿ..!
- LATEST NEWS5 days ago
Udupi: ಪತಿಗೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಪತ್ನಿ..!