bengaluru
Bengaluru: ಸ್ಕೂಟರ್ ಅಡ್ಡಗಟ್ಟಿ 1.70 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ
Published
1 year agoon
By
Adminಚಿನ್ನದ ವ್ಯಾಪಾರಿಯನ್ನು ಸ್ಕೂಟರ್ ಅಡ್ಡಗಟ್ಟಿ ದುಷ್ಕರ್ಮಿಗಳು ದರೋಡೆ ಮಾಡಿ ಎಸ್ಕೇಪ್ ಆದ ಘಟನೆ ನಗರದ ಕೆ.ಆರ್. ಮಾರ್ಕೆಟ್ ಫ್ಲೈಓವರ್ ನಲ್ಲಿ ನಡೆದಿದೆ.
ಬೆಂಗಳೂರು: ಚಿನ್ನದ ವ್ಯಾಪಾರಿಯನ್ನು ಸ್ಕೂಟರ್ ಅಡ್ಡಗಟ್ಟಿ ದುಷ್ಕರ್ಮಿಗಳು ದರೋಡೆ ಮಾಡಿ ಎಸ್ಕೇಪ್ ಆದ ಘಟನೆ ನಗರದ ಕೆ.ಆರ್. ಮಾರ್ಕೆಟ್ ಫ್ಲೈಓವರ್ ನಲ್ಲಿ ನಡೆದಿದೆ.
3 ಕೆಜಿ 780 ಗ್ರಾಂ ತೂಕದ ಸುಮಾರು 1.70 ಕೋಟಿ ರೂ. ಮೌಲ್ಯದ ಚಿನ್ನವನ್ನು ದರೋಡೆಕೋರರು ದೋಚಿದ್ದಾರೆ.
ಚಿನ್ನದ ವ್ಯಾಪಾರಿಯೊಬ್ಬರು ತಮ್ಮ ಸ್ಕೂಟರ್‌ನಲ್ಲಿ ಚಿನ್ನ ಇಟ್ಟುಕೊಂಡು ಫ್ಲೈಓವರ್‌ನಲ್ಲೇ ಹೋಗುತ್ತಿದ್ದರು.
ಈ ವೇಳೆ ಮತ್ತೊಂದು ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅರೋಪಿಗಳು, ಫ್ಲೈಓವರ್ ಮೇಲೆ ಚಲಿಸುತಿದ್ದ ಬೈಕ್‌ಗೆ ಅಡ್ಡ ಬಂದು ಬೈಕ್ ಸ್ಲೋ ಮಾಡಿಸಿದ್ದಾರೆ.
ಈ ಕೂಡಲೇ ನೇರವಾಗಿ ಸ್ಕೂಟರ್‌ನಲ್ಲಿದ್ದ ಚಿನ್ನದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ದರೋಡೆಗೊಳಗಾದ ವ್ಯಾಪಾರಿ ಕಾಟನ್‌ಪೇಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಸಿಸಿಟಿವಿ ಇರಲಿಲ್ಲ.
ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
bengaluru
ಪಟಾಕಿ ದುರಂತ: ಡಬ್ಬದ ಮೇಲೆ ಯುವಕನನ್ನು ಕೂರಿಸಿ ಬಾಂಬ್ ಸಿಡಿಸಿದ್ರು; ಸ್ಥಳದಲ್ಲೇ ಸಾ*ವು!
Published
3 weeks agoon
04/11/2024By
NEWS DESK2ಬೆಂಗಳೂರು: ದೀಪಾವಳಿ ದಿನದಂದು ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕ ಬ*ಲಿಯಾದ ಘಟನೆ ಬೆಳಕಿಗೆ ಬಂದಿದೆ. ಕೋಣನಕುಂಟೆಯ ವೀವರ್ಸ್ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ.
ಪಟಾಕಿ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ಸ್ನೇಹಿತರು ಹುಡುಗಾಟ ಮಾಡಲು ಹೋಗಿ ಸ್ನೇಹಿತನನ್ನೇ ಕಳೆದುಕೊಂಡಿದ್ದಾರೆ. ಶಬರೀಶ್ ಎಂಬ ಯುವಕ ಸ್ನೇಹಿತರೊಂದಿಗೆ ಹುಚ್ಚಾಟ ಮಾಡಲು ಹೋಗಿ ಬ*ಲಿಯಾಗಿದ್ದಾನೆ.
ದೀಪಾವಳಿ ದಿನದಂದು ಶಬರೀಶ್ ಹಾಗೂ ಸ್ನೇಹಿತರು ಪಟಾಕಿ ಹೊಡೆಯುತ್ತಿದ್ದರು. ಈ ವೇಳೆ ಪಟಾಕಿ ಇಟ್ಟು ಅದರ ಮೇಲೆ ಡಬ್ಬ ಇಟ್ಟು ಕೂರಲು ಚಾಲೆಂಜ್ ಹಾಕಿದ್ದರು. ಮದ್ಯಪಾನ ಮಾಡಿದ್ದ ಶಬರೀಶ್ ಅದೇ ರೀತಿ ಮಾಡಿದ್ದಾನೆ. ಪಟಾಕಿ ಸಿಡಿದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದಾನೆ.
ಗಾಯಾಳು ಶಬರೀಶನನ್ನು ಆಸ್ಪತ್ರೆಗೆ ದಾಖಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಶಬರೀಶ್ ಸಾ*ವನ್ನಪ್ಪಿದ್ದಾನೆ. ಸದ್ಯ ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
bangalore
ಅಬ್ಬಬ್ಬಾ! ಖತರ್ನಾಕ್ ಗರ್ಲ್ ಫ್ರೆಂಡ್; ಪ್ರಿಯಕರನನ್ನೇ ರಾಬರಿ ಮಾಡಿಸಿದ ಯುವತಿ, ಯಾಕೆ ಗೊತ್ತಾ!?
Published
2 months agoon
29/09/2024By
NEWS DESK4ಮಂಗಳೂರು/ ಬೆಂಗಳೂರು: ಇತ್ತೀಚೆಗೆ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕೆಲವೊಂದು ಪ್ರಕರಣಗಳು ವಿಚಿತ್ರವಾಗಿರುತ್ತವೆ. ಇಲ್ಲೊಬ್ಬಾಕೆ ಪ್ರಿಯತಮನ ಮೊಬೈಲ್‌ನಲ್ಲಿದ್ದ ತನ್ನ ಫೋಟೋ ಹಾಗೂ ವೀಡಿಯೊಗಳನ್ನು ಡಿಲೀಟ್ ಮಾಡಿಸಲೆಂದು ರಾಬರಿ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿನಿಮೀಯ ರೀತಿ ಪ್ರಿಯತಮೆಯೇ ಪ್ರಿಯಕರನ ಮೇಲೆ ರಾಬರಿ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ.
ಬೆಳ್ಳಂದೂರು ಪೊಲೀಸರು ಟೆಕ್ಕಿ ಶ್ರುತಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ಆ್ಯಕ್ಸಿಡೆಂಟ್ – ಡ್ರಾಮಾ :
ಕಳೆದ ಸೆಪ್ಟೆಂಬರ್ 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶ್ರುತಿ ಭೇಟಿಗೆ ತೆರಳಿದ್ದ. ಭೇಟಿಯಾಗಿ ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದ ಅಪರಿಚಿತರು ವಂಶಿಕೃಷ್ಣರೆಡ್ಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಜಗಳ ತೆಗೆದ ಅಪರಿಚಿತರು ಆತನ ಬಳಿಯಿದ್ದ ಮೊಬೈಲ್ ಕಸಿದಿದ್ದರು. ಅಲ್ಲದೇ, ವಂಶಿ ಜತೆಯಲ್ಲಿಯೇ ಇದ್ದ ಶ್ರುತಿಯ ಮೊಬೈಲ್ ಅನ್ನು ಕಸಿದುಕೊಂಡಿದ್ದರು. ಬಳಿಕ ದೂರು ಕೊಡುವುದು ಬೇಡ ಮೊಬೈಲ್ ಹೋದರೆ ಹೋಯಿತು ಎಂದು ಬಾಯ್‌ಫ್ರೆಂಡ್ ವಂಶಿ ಮುಂದೆ ಶ್ರುತಿ ನಾಟಕವಾಡಿದ್ದಾಳೆ.
ಆದರೆ, ಇಷ್ಟಕ್ಕೆ ಸುಮ್ಮನಾಗದ ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ತೆರಳಿ ಕಾರಿನ ನಂಬರ್ ಸಮೇತ ದೂರು ನೀಡಿದ್ದರು.
ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಇದನ್ನು ಓದಿ:ಪುತ್ತೂರು ಕಾಂಗ್ರೆಸ್ ಮುಖಂಡನ ಅಶ್ಲೀ*ಲ ವೀಡಿಯೋ ವೈರಲ್..!
ಬೇಡವಾಗಿದ್ದ ಬಾಯ್ ಫ್ರೆಂಡ್ :
ಇತ್ತೀಚೆಗೆ ಪ್ರಿಯತಮ ವಂಶಿಕೃಷ್ಣನಿಂದ ದೂರವಾಗಲು ಶ್ರುತಿ ಯತ್ನಿಸಿದ್ದಳು. ಆದರೆ, ವಂಶಿಕೃಷ್ಣನ ಮೊಬೈಲ್‌ನಲ್ಲಿ ಶ್ರುತಿಯ ಫೋಟೋಗಳಿದ್ದವು. ನೇರವಾಗಿ ಹೇಳಿದರೆ ಎಲ್ಲಿ ವಂಶಿಕೃಷ್ಣ ವಿರೋಧ ವ್ಯಕ್ತಪಡಿಸುತ್ತಾನೋ ಎಂಬ ಭಯದಿಂದ ಶ್ರುತಿ ಮೊಬೈಲ್ ರಾಬರಿ ಮಾಡುವ ಯೋಜನೆ ರೂಪಿಸಿದ್ದಾರೆ. ಸದ್ಯ ಆರೋಪಿ ಟೆಕ್ಕಿ ಶ್ರುತಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದು, ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಗಳೂರು/ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪ್ರಕರಣ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಸೆಂಟ್ರಲ್ ಜೈಲ್ಗೆ ಮೊಬೈಲ್ ರವಾನೆ ಮಾಡುತ್ತಿದ್ದ ಖೈದಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೋಲಾರದ ಕೆಜಿಎಫ್ ನ ವಿಜಯ್ನನ್ನು ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಆಗ್ನೇಯ ವಿಭಾಗದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದರು.
ಜೈಲಿನೊಳಗೆ ವಿಜಯ್ ಸಿಬ್ಬಂದಿಯೊಬ್ಬರ ನೆರವು ಪಡೆದು ಸ್ಮಾರ್ಟ್ ಫೋನ್ಗಳನ್ನು ಹೊರಗಿನಿಂದ ಖರೀದಿಸಿಕೊಂಡು ಅವುಗಳನ್ನು ಜೈಲಿನಲ್ಲಿರುವ ಇತರ ಖೈದಿಗಳಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ವಿಜಯ್ ಮೊಬೈಲ್ ಪೂರೈಸುವುದಕ್ಕೆ ಸಾಕ್ಷ್ಯಗಳು ಸಿಕ್ಕ ಬೆನ್ನಲ್ಲೇ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಸ್ಟಡಿಯಲ್ಲಿದ್ದ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್ ಹಾಗೂ ವೇಲು ಅವರ ವಿಚಾರಣೆಯೂ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ವಿಜಯ್ ಜೈಲು ಅಧಿಕಾರಿಗಳ ಸಹಾಯದಿಂದಲೇ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್ಗಳು ಸಾವಿರಾರು ಹಣ ಕೊಟ್ಟು ಈತನಿಂದ ಮೊಬೈಲ್ ಖರೀದಿಸುತ್ತಿದ್ದರು ಎಂಬ ವಿಚಾರದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೆ. 15 ರಂದು ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 26 ಮೊಬೈಲ್ ಪತ್ತೆಯಾಗಿದ್ದವು. ಇನ್ನಷ್ಟು ತನಿಖೆ ನಡೆಸಿದಾಗ ವಿಜಯ್ ಮೊಬೈಲ್ ಪೂರೈಸುತ್ತಿದ್ದ ಎಂಬುವುದು ಖಚಿತವಾಗಿದೆ ಎಂದು ವರದಿಯಾಗಿದೆ
LATEST NEWS
‘ಓಲಾ ಎಲೆಕ್ಟ್ರಿಕ್ ಕಂಪನಿ’ಯಿಂದ 500 ಉದ್ಯೋಗಿಗಳು ವಜಾ
ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?
ನೀವು ಹೀಗೆ ಮಾಡಿದ್ರೆ ‘ಗೂಗಲ್ ಪೇ’ನಲ್ಲಿ ಸುಲಭವಾಗಿ 1,000 ರೂಪಾಯಿ ಪಡೆಯಬಹುದು
ತಾಯಂದಿರಿಂಲೇ ಮಕ್ಕಳ ಅ*ಪಹರಣ; ಉದ್ದೇಶ ಕೇಳಿದ್ರೆ ನೀವೆ ಶಾಕ್ ಆಗ್ತೀರ !!
ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ
ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ