Connect with us

    BELTHANGADY

    ಬೆಳ್ತಂಗಡಿ: 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಲಕ್ಷ ನಗದು ಕಳವು

    Published

    on

    ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ಗ್ರಾಮದ ಹಳೆಕೋಟೆ ಎಂಬಲ್ಲಿ ಮನೆಯೊಂದರಿಂದ ರೂ. 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಲಕ್ಷ ನಗದು ಕಳವು ಗೈದ ಘಟನೆ ಸೆ.24ರಂದು ವರದಿಯಾಗಿದೆ.

    ಬೆಳ್ತಂಗಡಿ ಹಳೇಕೋಟೆ ನಿವಾಸಿ ಪ್ರಸನ್ನ ಕುಮಾರ್ ಎಂಬವರ ಮನೆಯಿಂದ ಈ ಕಳ್ಳತನ ನಡೆಸಲಾಗಿದೆ. ಸೆ. 13ರಿಂದ ಸೆ.24 ರ, ಬೆಳಿಗ್ಗಿನ ಜಾವದ ಅವಧಿಯಲ್ಲಿ ಕಳ್ಳರು ಈ ಕೃತ್ಯ ನಡೆಸಲಾಗಿದೆ.

    ಮನೆಯೊಳಗೆ ಪ್ರವೇಶಿಸಿದ ಕಳ್ಳರು ಮನೆಯ ಹಾಲ್ ನ ಟಿ.ವಿ ಸ್ಟಾಂಡ್ ನಲ್ಲಿಟ್ಟಿದ್ದ ರೂಪಾಯಿ 5,05,000 ಮೌಲ್ಯದ ಚಿನ್ನಾಭರಣಗಳು ಹಾಗೂ ರೂ. 500000/- ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಪ್ರಸನ್ನ ಕುಮಾರ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾದ ಕ್ರಮಾಂಕ: 82/2024 ಕಲಂ: 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

    BELTHANGADY

    ಬೆಳ್ತಂಗಡಿ : ನೇಣು ಬಿಗಿದು ದಂಪತಿ ಆತ್ಮ*ಹತ್ಯೆ

    Published

    on

    ಬೆಳ್ತಂಗಡಿ : ದಂಪತಿ ನೇ*ಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಾಶಿಪಟ್ನ ಗ್ರಾಮದ ಉರ್ದು ಗುಡ್ಡೆಯಲ್ಲಿ ನಡೆದಿದೆ. ಉರ್ದುಗುಡ್ಡೆ ನಿವಾಸಿಗಳಾದ ನೋಣಯ್ಯ ಪೂಜಾರಿ (63) ಹಾಗೂ ಬೇಬಿ (46) ಆತ್ಮ*ಹತ್ಯೆ ಮಾಡಿಕೊಂಡವರು.


    ಮನೆ ಸಮೀಪ ಇರುವ ಕಾಡಿನಲ್ಲಿ ದಂಪತಿ ನೇ*ಣಿಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳಿಂದ ನೋಣಯ್ಯ ಪೂಜಾರಿ ತಲೆ ನೋವಿನಿಂದ ಬಳಲುತ್ತಿದ್ದು, ಬೇಬಿ ಅವರಿಗೆ ಮಕ್ಕಳಿಲ್ಲದ ಕೊರಗು ಇತ್ತು ಎಂದು ತಿಳಿದು ಬಂದಿದೆ.
    ನೋಣಯ್ಯ ಪೂಜಾರಿಯವರಿಗೆ ಇದು ಎರಡನೇ ವಿವಾಹವಾಗಿದ್ದು , ಮೊದಲ ಪತ್ನಿ 10 ವರ್ಷದ ಹಿಂದೆಯೇ ಸಾವನ್ನಪ್ಪಿದ್ದು, ಮೊದಲ ಪತ್ನಿಗೆ 5 ಜನ ಗಂಡು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ. ಆತ್ಮ*ಹತ್ಯೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    BANTWAL

    ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಪಲ್ಟಿ ; ಇಬ್ಬರಿಗೆ ಗಾಯ

    Published

    on

    ಪುಂಜಾಲಕಟ್ಟೆ; ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆಯಲ್ಲಿ ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಮುಗುಚಿ ಕೆಳಗೆ ಬಿದ್ದಿದೆ.


    ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಆರ್‌ಎಎಫ್ ನ ಲಗೇಜು ತುಂಬಿದ ಲಾರಿ ಭದ್ರಾವತಿಯಿಂದ ಬಿ.ಸಿ.ರೋಡ್‌ ಗೆ ಬರುತ್ತಿರುವಾಗ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಹಾಗೂ ಮತ್ತೋರ್ವ ಸಿಬ್ಬಂದಿ ಸಾಂತಪ್ಪ ನಾಯಕ್‌ರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    Continue Reading

    BELTHANGADY

    ಬೆಳ್ತಂಗಡಿ: ತಂದೆ ತೀರ್ಪುಗಾರ… ಮಗಳಿಗೆ ಪ್ರಥಮ ಸ್ಥಾನ

    Published

    on

    ಬೆಳ್ತಂಗಡಿ: ಜೀವ ವಿಮಾ ಕಂಪನಿಯ ಬೆಳ್ತಂಗಡಿ ಶಾಖಾ ವತಿಯಿಂದ ಹಮ್ಮಿಕೊಳ್ಳಲಾದ ಹೈಸ್ಕೂಲ್ ವಿಭಾಗದ ಚಲನಚಿತ್ರ ಗಾಯನ ಸ್ಪರ್ಧೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪ ಕೇಳಿಬಂದಿದೆ.

    ಗಾಯನ ಸ್ಪರ್ಧೆಯ ಇಬ್ಬರು ತೀರ್ಪುಗಾರರಲ್ಲಿ ಸುರೇಶ್ ಎ.ಡಿ ಎಂಬುವರ ಒಬ್ಬರಾಗಿದ್ದರು. ಇವರು ಸುಗಮ ಸಂಗೀತ ತರಗತಿಯನ್ನು ಕೂಡಾ ನಡೆಸುತ್ತಿದ್ದು, ಮೊನ್ನೆ ನಡೆದ ಗಾಯನ ಸ್ಪರ್ಧೆಯಲ್ಲಿ ಪಕ್ಷಪಾತೀಯ ಧೋರಣೆಯನ್ನು ಅನುಸರಿಸುವ ಮೂಲಕ ಸ್ಪರ್ಧೆಗೆ ಕಳಂಕವನ್ನು ತಂದಿದ್ದಾರೆ. ತನ್ನ ಮಗಳಿಗೆ ಪ್ರಥಮ ಹಾಗೂ ತನ್ನ ಸಂಗೀತ ತರಗತಿಯ ವಿದ್ಯಾರ್ಥಿಗಳಿಗೆ ಎರಡನೇ ಮತ್ತು ಮೂರನೇ ಬಹುಮಾನ ನೀಡಿದ್ದಾರೆಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಜೀವ ವಿಮಾ ಕಂಪನಿಯ ಬೆಳ್ತಂಗಡಿ ಶಾಖಾ ಪ್ರಬಂಧಕರಲ್ಲಿ ಮಾತನಾಡಿಸಿದಾಗ ಅವರು, ಉಡಾಫೆಯಿಂದ ವರ್ತಿಸಿ ಕಾಲ್ ಕಟ್ ಮಾಡಿದ್ದಾರೆ. ಕಲೆ,ಚಿತ್ರಕಲೆ,ಸಾಹಿತ್ಯ, ಸಂಗೀತ, ಪಂದ್ಯಾವಳಿ ಮೊದಲಾದವುಗಳ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಹೆತ್ತವರಾಗಲಿ,ಮನೆಯವರಾಗಲಿ ಇಲ್ಲವೇ ಕುಟುಂಬದವರಾಗಲಿ ಅಥವಾ ಅವರ ತರಬೇತುದಾರರಾಗಲಿ,ಗುರುಗಳಾಗಲಿ ತೀರ್ಪುಗಾರರಾಗುವಂತಿಲ್ಲ ಇದು ಸ್ಪರ್ಧೆಯ ನಿಯಮಾವಳಿ. ಹೀಗಿರುವಾಗ ಮಗಳು ಹಾಗೂ ತನ್ನ ಶಿಷ್ಯಂದಿರುವ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿದ್ದು ತಪ್ಪು ಮತ್ತು ಈ ಬಗ್ಗೆ ಆಯೋಜಕರಲ್ಲಿ ಮಾತನಾಡಿಸಿದಾಗ ಅವರು ಉಡಾಫೆಯಿಂದ ವರ್ತಿಸಿದ್ದು ಕೂಡಾ ಸರಿಯಲ್ಲ ಎಂದು ಆರೋಪಿಸಲಾಗಿದೆ.

    ಜೀವ ವಿಮಾ ಕಂಪನಿ ಭಾರತದ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಪಬ್ಲಿಕ್ ಸೆಕ್ಟರ್ ಆಗಿರುತ್ತದೆ. ಇಂತಹ ಕಂಪನಿಯ ಪ್ರಬಂಧಕರು ತಾರತಮ್ಯ ನೀತಿಯನ್ನು ಅನುಸರಿಸುವುದು ಮತ್ತು ಸಾರ್ವಜನಿಕರಲ್ಲಿ ಉಡಾಫೆಯಿಂದ ವರ್ತಿಸುವುದು ಕಂಪನಿಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ ಹಾಗಾಗಿ ಕಂಪನಿಯ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

    Continue Reading

    LATEST NEWS

    Trending