BANTWAL
ಬಂಟ್ವಾಳ: ಮತಾಂತರ ನಿಷೇಧ ಕಾಯ್ದೆ ವಿರುದ್ಧ ಖಡಕ್ ಎಚ್ಚರಿಕೆ ನೀಡಿದ ಕಲ್ಲಡ್ಕ ಭಟ್
ಹಿಂದಿನ ಸರಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸು ತೆಗೆಯಲು ಮುಂದಾಗಿದ್ದು, ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಅರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಹೇಳಿದ್ದಾರೆ.
ಬಂಟ್ವಾಳ: ಹಿಂದಿನ ಸರಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸು ತೆಗೆಯಲು ಮುಂದಾಗಿದ್ದು, ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಅರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಹೇಳಿದ್ದಾರೆ.
ಬಂಟ್ವಾಳದ ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹಿಂದಿನ ಸರಕಾರದಲ್ಲಿ ಬೇರೆ ಪಕ್ಷ ಆಡಳಿತ ಮಾಡುತ್ತಿತ್ತು ಎನ್ನುವ ಕಾರಣಕ್ಕೆ ಅವರ ವಿರುದ್ದವಾಗಿ ನಾವೇನು ಮಾಡಬೇಕು ಎಂಬ ಸಣ್ಣ ಯೋಚನೆ ಮಾಡಿದ ಸರಕಾರ ಹಿಂದಿನ ಸರಕಾರದ ಒಳ್ಳೆಯ ಜನಪರವಾದ ಯೋಜನೆಗಳೆಲ್ಲವನ್ನು ಹಿಂದೆಕ್ಕೆ ಪಡೆಯಲು ಹೊರಟಿದೆ.
ಈಗಿನ ಸರಕಾರ ಹಿಂದಿನ ಸರಕಾರದ ಉತ್ತಮ ವಿಚಾರಗಳನ್ನು ಉಳಿಸಿಕೊಂಡು ಅಕಸ್ಮಾತ್ ಕೆಟ್ಟ ಯೋಜನೆಗಳಿದ್ದರೆ ಅದನ್ನು ತೆಗೆಯಲು ಮುಂದಾಗಿದ್ದರೆ ನಾವು ಸರಿ ಎಂದು ಹೇಳಬಹುದಿತ್ತು.
ಆದರೆ ಇವರು ಬೇರೆ ಪಕ್ಷ ಆಡಳಿತದ ಅವಧಿಯಲ್ಲಿ ಜಾರಿಗೆ ಬಂದ ಯೋಜನೆಗಳನ್ನು ಉದ್ದೇಶಪೂರ್ವಕವಾಗಿ ತೆಗೆದು ಬೇರೆಯೇ ದಿಕ್ಕಿನಲ್ಲಿ ಹೋಗಲು ಮುಂದಾಗಿದೆ ಎಂದು ಅರೋಪಿಸಿದರು.
ಇದರಲ್ಲಿ ಬಹಳ ಮುಖ್ಯವಾಗಿ ಮತಾಂತರ ನಿಷೇಧ ಕಾಯ್ದೆ ವಾಪಸು ತೆಗೆಯಲು ಮುಂದಾಗಿರುವುದು ಬೇಸರ ಬಹಳ ಬೇಸರ ತಂದಿದೆ ಎಂದರು.
ಇನ್ನೂ ಹಿಂದೂ ಸಮಾಜ ಎಲ್ಲವನ್ನು,ಎ ಲ್ಲರನ್ನು ಒಪ್ಪಿಕೊಳ್ಳುವ ಸಮಾಜ, ಆದರೆ ಮೋಸ ವಂಚನೆಯಿಂದ ಮತಾಂತರ ಮಾಡಿದರೆ ಸಮಾಜ ಸಹಿಸಲ್ಲ ಎಂದು ಇದೇ ವೇಳೆ ಸರಕಾರದ ವಿರುದ್ಧ ಗುಡುಗಿದ್ರು.
BANTWAL
ULLALA : ನೇಣಿಗೆ ಶರಣಾದ ಇಬ್ಬರು ಪುಟ್ಟ ಮಕ್ಕಳ ತಂದೆ
ಉಳ್ಳಾಲ : ಎರಡು ಪುಟ್ಟ ಮಕ್ಕಳ ತಂದೆಯೋರ್ವರು ನೇಣಿಗೆ ಶರಣಾದ ಘಟನೆ ಉಳ್ಳಾಲದ ಕುಂಪಲದ ಹನುಮಾನ್ ನಗರದಲ್ಲಿ ಸೋಮವಾರ(ಏ. 29) ಮುಂಜಾನೆ ನಡೆದಿದೆ. 44 ವರ್ಷ ಯೋಗೀಶ್ ಆತ್ಮಹ*ತ್ಯೆಗೈದ ವ್ಯಕ್ತಿ.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಯೋಗೀಶ್ ಸೋಮವಾರ ಬೆಳಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದ ನಲ್ವತ್ತು ಸಾವಿರ ರೂಪಾಯಿಗಳನ್ನ ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ಪೀಡನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ಅವಮಾನದಲ್ಲಿ ಯೋಗೀಶ್ ಆತ್ಮಹ*ತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.
ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!
ಉಳ್ಳಾಲ ಠಾಣಾ ಪೊಲೀಸರು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.
ಯೋಗೀಶ್ ಪತ್ನಿಯೂ ಆತ್ಮಹತ್ಯೆಗೆ ಯತ್ನ:
ಯೋಗೀಶ್ ಸಾ*ವನ್ನಪ್ಪಿದನ್ನು ಕಂಡ ಪತ್ನಿಯೂ ನೇಣು ಬಿಗಿದು ಆತ್ಮ ಹ*ತ್ಯೆಗೈಯಲು ಮುಂದಾಗಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನ ತಡೆದು ಸಂತೈಸಿದ್ದಾರೆ. ಮೃ*ತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು, ಪತ್ನಿ, ತಾಯಿಯನ್ನು ಅಗಲಿದ್ದಾರೆ.
BANTWAL
ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!
ಬಂಟ್ವಾಳ : ಕಲ್ಲಡ್ಕ ಬಾಳ್ತಿಲ ಗ್ರಾಮದಲ್ಲಿದೆ ಕಾರಣಿಕದ ಕರ್ಲುರ್ಟಿ ಕ್ಷೇತ್ರ. ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ. ಈ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ.
ಪವಾಡ ತೋರಿದ್ದ ಕಲ್ಲುರ್ಟಿ :
ಈಗಾಗಲೇ ತಿಳಿಸಿದಂತೆ ಈ ದೈವಸ್ಥಾನ ಹಿಂದು -ಮುಸಲ್ಮಾನ ಭಾಂದವರ ಭಾವೈಕ್ಯತೆಯ ಸಾನಿಧ್ಯ. ಕುದ್ರೆಬೆಟ್ಟುವಿನ ಒಂದು ಮುಸನ್ಮಾನ ಕುಟುಂಬ ಕಲ್ಲುರ್ಟಿ ದೈವವನ್ನು ನಂಬುತ್ತಿದ್ದರು. ಐಸಮ್ಮ ಎಂಬ ಮಹಿಳೆಯ ಕುಟುಂಬ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಕುಟುಂಬಕ್ಕೆ ಆ ಜಾಗದಲ್ಲಿ ಅಗೋಚರ ಶಕ್ತಿಯೊಂದು ಇರುವುದು ತಿಳಿಯುತ್ತದೆ. ನಂತರ ಅವರು ‘ಕಲ್ಲುರ್ಟಿ’ಯನ್ನು ಕಲ್ಲಿನ ರೂಪದಲ್ಲಿ ನಂಬಲು ಆರಂಭಿಸುತ್ತಾರೆ. ಕಷ್ಟ ಎಂದು ತನ್ನಲ್ಲಿಗೆ ಬಂದವರಿಗೆ ಐಸಮ್ಮ ಕಲ್ಲುರ್ಟಿಯ ಸ್ಮರಿಸಿ ಕಪ್ಪು ದಾರ ನೀಡುತ್ತಿದ್ದರು. ಇದರಿಂದ ಅವರ ತೊಂದರೆಗಳೆಲ್ಲ ನಿವಾರಣೆಯಾಗುತ್ತಿತ್ತು ಎಂಬ ನಂಬಿಕೆಯಿದೆ.
ಮನೆಯಲ್ಲಿ ವಿಶೇಷ ಅಡುಗೆ ಮಾಡಿದರೆ, ಆಕೆ ದೈವಕ್ಕೆ ಬಡಿಸದೇ ಸೇವಿಸುತ್ತಿರಲಿಲ್ಲ. ಒಂದುವೇಳೆ ತಪ್ಪಿದ್ದಲ್ಲಿ ಅಡುಗೆ ಮಾಡಿಟ್ಟಿದ್ದ ಪಾತ್ರೆಯೇ ದೈವದ ಕಲ್ಲಿನತ್ತ ಚಲಿಸುತ್ತಿತ್ತಂತೆ. ಆದರೆ, ಕಾಲಕ್ರಮೇಣ ಆ ಕುಟುಂಬ ಮನೆಯನ್ನು ಮಾರಿ ಬೇರೆ ಕಡೆ ಹೊರಟು ಹೋಗಿದ್ದರು.
ಮತ್ತೆ ಬೆಳಕಿಗೆ ಬಂದ ಕ್ಷೇತ್ರ :
ಆ ಮುಸಲ್ಮಾನ ಕುಟುಂಬವೇನೋ ಹೊರಟು ಹೋಯಿತು. ಶಕ್ತಿ ಅಲ್ಲೇ ಉಳಿಯಿತು. ಈ ಘಟನೆ ನಡೆದು ಹಲವು ದಶಕಗಳೇ ಕಳೆದಿವೆ. 15 ವರ್ಷಗಳಿಂದ ಇಲ್ಲಿ ಹಲವು ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಮಣಿಕಂಠ ಯುವಶಕ್ತಿ ಕೇಂದ್ರ ಭಜನಾ ಮಂದಿರವೊಂದನ್ನು ಸ್ಥಾಪಿಸುವ ಕೆಲಸ ಆರಂಭಿಸಿತ್ತು. ಆದರೆ, ಇದಕ್ಕೆ ತಡೆ ಬರಲಾರಂಭಿಸಿದಾಗ, ಮಂದಿರದಲ್ಲಿ ಪ್ರಶ್ನೆ ಇಟ್ಟಾಗ ‘ಯುವಶಕ್ತಿ’ ಯ ಯುವಕರು ತಾಯಿ ಕಲ್ಲುರ್ಟಿಯನ್ನು ನಂಬಬೇಕು ಎಂಬ ಅಪ್ಪಣೆಯಾಯಿತು.
ನಾವು ಬಿಟ್ಟೆವೆಂದು ದೈವ ಬಿಡುವುದೇ..? ಪೂ – ನೀರ್(ಹೂ-ನೀರು) ಸಲ್ಲದೇ ಹೋದಲ್ಲಿ ಹೇಗೆ? ಅಂತೆಯೇ, ಹಳೆಯ ದೈವಸ್ಥಾನ ಜೀರ್ಣೋದ್ಧಾರಗೊಂಡು ಹೊಸ ರೂಪ ಪಡೆದು ನಿಂತಿದೆ.
20 ದಿನಗಳಲ್ಲಿ ನಡೆಯಿತು ಜೀರ್ಣೋದ್ಧಾರ :
ದೈವದ ಅಭಯ ಯುವಕರ ಮೇಲಿತ್ತು. ಇಡೀ ಊರೇ ಅಚ್ಚರಿ ಪಡುವಂತೆ ತಾಯಿಯ ದೈವಸ್ಥಾನದ ಕಾರ್ಯ ನಡೆಯಿತು. ಕೇವಲ 20 ದಿನಗಳಲ್ಲಿ ಅಪ್ಪೆ ಕಲ್ಲುರ್ಟಿಯ ಕ್ಷೇತ್ರ ತಲೆ ಎತ್ತಿ ನಿಂತಿತು ಅಂದರೆ ನೀವು ನಂಬಲೇ ಬೇಕು. ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಹಗಲಿರುಳು ಯುವಕರು ಶ್ರಮಿಸಿದ್ದಾರೆ. ಹುಬ್ಬೇರಿಸುವಂತಹ ಕೆಲಸ ಮಾಡಿದ ಶ್ರೀ ಮಣಿಕಂಠ ಯುವಶಕ್ತಿ ತಂಡದ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಕಾರ್ಯಕ್ರಮಗಳ ವಿವರ :
ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮೇ.3 ರಂದು ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ. ಮೇ.02 ರಂದು ಬೆಳಿಗ್ಗೆ ಶ್ರೀ ಮಣಿಕಂಠ ಸನ್ನಿಧಾನದಲ್ಲಿ ಗಣಹೋಮ, ಸಂಜೆ ಶಾಸ್ತ್ರ, ಕಲ್ಪೋಕ್ತ ಪೂಜೆ, ವಾಸ್ತು ಹೋಮಾದಿ ಅಧಿವಾಸ ನಡೆಯಲಿದೆ. ಸಂಜೆ 6.30 ರಿಂದ ‘ನಮ್ಮ ಕುಡ್ಲ’ ವಾಹಿನಿ ಖ್ಯಾತಿಯ ‘ಯಕ್ಷ ತೆಲಿಕೆ’ ಕಾರ್ಯಕ್ರಮ ನಡೆಯಲಿದೆ.
ಮೇ.03 ರಂದು ಬೆಳಿಗ್ಗೆ ಗಣಹೋಮ ಬಳಿಕ 10.00 ರಿಂದ 10.25ರ ಒಳಗೆ ಒದಗುವ ಮಿಥುನ ಲಗ್ನದ ಸುಮೂಹೂರ್ತದಲ್ಲಿ ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ ಇವರ ವೈದಿಕತ್ವದಲ್ಲಿ ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆ, ಸಾನಿಧ್ಯ ನವಕ ಕಲಶಾಭಿಷೇಕ, ಪರ್ವ ಸೇವೆ ನಡೆಯಲಿದೆ.
ಇದನ್ನೂ ಓದಿ : ಪುತ್ತೂರು: ಮಳೆಗಾಗಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿಪರ್ಜನ್ಯ ಜಪ; ಶಾಸಕರು ಭಾಗಿ
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆದು, ರಾತ್ರಿ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.
BANTWAL
ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!
ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.
- FILM6 days ago
PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!
- DAKSHINA KANNADA6 days ago
ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!
- FILM6 days ago
ರಾಮ-ಸೀತೆಯಂತೆ ಕಾಣಿಸಿಕೊಂಡ ರಣ್ಬೀರ್, ಸಾಯಿ ಪಲ್ಲವಿ.. ರಾಮಾಯಣ ಸಿನಿಮಾ ಸೆಟ್ಟಿನ ಫೋಟೋ ಲೀಕ್
- DAKSHINA KANNADA6 days ago
ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣ; ಮೂಡುಬಿದಿರೆ ಸ್ವಾಮೀಜಿ ಭಾಗಿ