Connect with us

BANTWAL

ಬಂಟ್ವಾಳ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Published

on

ಬಂಟ್ವಾಳ ಮಾಣಿ ಪೆರಾಜೆ ಗ್ರಾಮದ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬಂಟ್ವಾಳ : ಬಂಟ್ವಾಳ ಮಾಣಿ ಪೆರಾಜೆ ಗ್ರಾಮದ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಲೆಯ ಬಾಲ ವಿಕಾಸ ಸಭಾಂಗಣದ ದಿ| ಪಾಳ್ಯ ಅನಂತರಾಮ ರೈ ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಯವರು ಯೋಗ ಶಿಬಿರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪ ಬೆಳಗಿಸಿ ಆಶೀರ್ವಚನ ನೀಡಿ ಯೋಗದ ಮಹತ್ವವನ್ನು ತಿಳಿಸಿದರು.

ಜೀವ-ದೇವನ ಸಂಬಂಧ ಯೋಗದಲ್ಲಿದೆ. ಬದುಕನ್ನು ಹೇಗೆ ರೂಪಿಸಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳುವುದು ಅಗತ್ಯವಿದೆ.

ಶಿಸ್ತು ಸ್ವಚ್ಛತೆ ಇದ್ದಲ್ಲಿ ಸದಾಚಾರ ಸಂಪನ್ನತೆಯಾಗುತ್ತದೆ. ಮನಸ್ಸಿನ ಸ್ವಾಸ್ಥ್ಯಕ್ಕೆ ಯೋಗ ಅಗತ್ಯ. ಬಾಲವಿಕಾಸ ವಿದ್ಯಾಸಂಸ್ಥೆ ವ್ಯಕ್ತಿ ವಿಕಾಸದ ಜೊತೆಗೆ ರಾಷ್ಟ್ರ ವಿಕಾಸಕ್ಕೆ ನಾಂದಿಯಾಗಲಿದೆ.

ಸತ್ಪ್ರಜೆ ಎನ್ನುವ ನಾಣ್ಯ ಚಲಾವಣೆ ಯಾಗಲು ಪೋಷಕರು ಹಾಗೂ ಶಿಕ್ಷಕರು ಜೊತೆಗಿರಬೇಕು ಎಂದು ಒಡಿಯೂರು ಸ್ವಾಮೀಜಿಯವರು ನುಡಿದರು.
.ಈಗಿನ ಕಾಲಘಟ್ಟಕ್ಕೆ ತಕ್ಕುದಾದ ಒಂದು ಸುಸಜ್ಜಿತವಾದ ವ್ಯವಸ್ಥೆ ಈ ಶಿಕ್ಷಣ ಸಂಸ್ಥೆಯಲ್ಲಿರುವುದು ಸಂತಸತಂದಿದೆ.

ಪ್ರಹ್ಲಾದರಿಗೆ ರಾಷ್ಟ್ರೀಯ ಪ್ರಜ್ಞೆ ಹುಟ್ಟಿದ್ದರಿಂದ ಈ ಸಂಸ್ಥೆಯ ಉಗಮವಾಗಿದೆ. ಬಾಲವಿಕಾಸ ಶಿಕ್ಷಣ ಸಂಸ್ಥೆ ಇತರರಿಗೆ ಮಾದರಿಯಾಗಿದೆ. ನಾನು ಎಂಬುದನ್ನು ಬಿಟ್ಟು ನಮ್ಮದು ಎನ್ನುವುದು ನಮ್ಮಲ್ಲಿ ಬರಬೇಕು.

ನಮ್ಮ ಮನಸ್ಸಿನಲ್ಲಿ ಶಾಂತಿ ಕಾಪಾಡುವ ಕೆಲಸವಾಗಬೇಕು. ಸಂಸ್ಥೆಯಿಂದ ಮಕ್ಕಳನ್ನು ಭಾರತ ರಥದ ಸಾರಥಿಯನ್ನಾಗಿ ಮಾಡುವ ಕೆಲಸವಾಗಲಿ. ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತಬೇಕು.

ಆಗ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ. ಸರಿಯಾದ ಆಲೋಚನೆ ಇದ್ದರೆ ರಾಷ್ಟ್ರ ನಿರ್ಮಾಣ ಸಾಧ್ಯ.

ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಪಾತ್ರವೇನು ಎನ್ನುವುದನ್ನು ಅರಿಯುವ ಕೆಲಸವಾಗಬೇಕು. ಮನುಷ್ಯನ ಮನಸ್ಸಿನಲ್ಲಿ ಸ್ವಚ್ಛತೆಯ ಅಗತ್ಯವಿದೆ. ವಿಕಾಸ ಎನ್ನುವುದು ಅದ್ಭುತ ಶಬ್ದ. ಸಂಸ್ಥೆ ಇನ್ನಷ್ಟು ವಿಕಾಸಗೊಳ್ಳಲಿ ಎಂದರು.

ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಪ್ರಹ್ಲಾದ್ ಜೆ. ಶೆಟ್ಟಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗುರುವಿನ ಸಂದೇಶದಿಂದ ವಿದ್ಯಾರ್ಥಿಗಳ ಬಾಳು ಬೆಳಗಲಿ.

ಶಿಸ್ತು- ಸಂಯಮ ಇದ್ದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿ ಯಾಗಲು ಸಾಧ್ಯ. ಸಂಸ್ಥೆ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಲಿ. ವಿದ್ಯಾರ್ಥಿಗಳ ಕನಸು ನನಸಾಗುವ ದಿನ ಈ ಯೋಗ ದಿನವಾಗಲಿ ಎಂದರು.

ಯೋಗ ಶಿಕ್ಷಕರಾದ ವಿಜೇಶ್ ಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಸನಗಳನ್ನು ಪ್ರದರ್ಶಿಸಿದರು.

ಟ್ರಸ್ಟ್ ನ ಉಪಾಧ್ಯಕ್ಷರಾದ ಯತಿರಾಜ್ ಎನ್, ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿ, ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಕಸ್ತೂರಿ ಪಿ. ಶೆಟ್ಟಿ, ವೈದ್ಯರಾದ ಮನೋಹರ ರೈ, ಸಂಸ್ಥೆಯ ಹಿತೈಷಿ ಉಗ್ಗಪ್ಪ ಶೆಟ್ಟಿ ಕೊಂಬಿಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿದರು. ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಪ್ರಹ್ಲಾದ್ ಜೆ. ಶೆಟ್ಟಿ ಹಾಗೂ ಅವರ ಪತ್ನಿ ಸುಜಯ ಪಿ.ಶೆಟ್ಟಿರವರು ಸ್ವಾಮೀಜಿಗೆ ಫಲಪುಷ್ಪ ನೀಡಿ ಗೌರವಿಸಿದರು.ಶಾಲಾ ಆಡಳಿತಾಧಿಕಾರಿ ರವೀಂದ್ರ ರ‍್ಬೆ, ಸ್ವಾಗತಿಸಿದರು.

ಸಹಶಿಕ್ಷಕಿಯರಾದ ಸುಧಾ ಎನ್.ರಾವ್ ಹಾಗೂ ಸುಪ್ರಿಯಾ ಡಿ.ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ. ಶೆಟ್ಟಿ ವಂದಿಸಿದರು.

BANTWAL

ULLALA : ನೇಣಿಗೆ ಶರಣಾದ ಇಬ್ಬರು ಪುಟ್ಟ ಮಕ್ಕಳ ತಂದೆ

Published

on

ಉಳ್ಳಾಲ :   ಎರಡು ಪುಟ್ಟ ಮಕ್ಕಳ ತಂದೆಯೋರ್ವರು ನೇಣಿಗೆ ಶರಣಾದ ಘಟನೆ ಉಳ್ಳಾಲದ ಕುಂಪಲದ ಹನುಮಾನ್ ನಗರದಲ್ಲಿ ಸೋಮವಾರ(ಏ. 29) ಮುಂಜಾನೆ ನಡೆದಿದೆ. 44 ವರ್ಷ ಯೋಗೀಶ್ ಆತ್ಮಹ*ತ್ಯೆಗೈದ ವ್ಯಕ್ತಿ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಯೋಗೀಶ್ ಸೋಮವಾರ ಬೆಳಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದ ನಲ್ವತ್ತು ಸಾವಿರ ರೂಪಾಯಿಗಳನ್ನ ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ಪೀಡನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ಅವಮಾನದಲ್ಲಿ ಯೋಗೀಶ್ ಆತ್ಮಹ*ತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ಉಳ್ಳಾಲ ಠಾಣಾ ಪೊಲೀಸರು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.

ಯೋಗೀಶ್ ಪತ್ನಿಯೂ ಆತ್ಮಹತ್ಯೆಗೆ ಯತ್ನ:

ಯೋಗೀಶ್ ಸಾ*ವನ್ನಪ್ಪಿದನ್ನು ಕಂಡ ಪತ್ನಿಯೂ ನೇಣು ಬಿಗಿದು ಆತ್ಮ ಹ*ತ್ಯೆಗೈಯಲು ಮುಂದಾಗಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನ ತಡೆದು ಸಂತೈಸಿದ್ದಾರೆ. ಮೃ*ತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು, ಪತ್ನಿ, ತಾಯಿಯನ್ನು ಅಗಲಿದ್ದಾರೆ.

Continue Reading

BANTWAL

ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

Published

on

ಬಂಟ್ವಾಳ : ಕಲ್ಲಡ್ಕ ಬಾಳ್ತಿಲ ಗ್ರಾಮದಲ್ಲಿದೆ ಕಾರಣಿಕದ ಕರ್ಲುರ್ಟಿ ಕ್ಷೇತ್ರ. ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ.  ಈ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ.

ಪವಾಡ ತೋರಿದ್ದ ಕಲ್ಲುರ್ಟಿ :

ಈಗಾಗಲೇ ತಿಳಿಸಿದಂತೆ ಈ ದೈವಸ್ಥಾನ ಹಿಂದು -ಮುಸಲ್ಮಾನ ಭಾಂದವರ ಭಾವೈಕ್ಯತೆಯ ಸಾನಿಧ್ಯ. ಕುದ್ರೆಬೆಟ್ಟುವಿನ ಒಂದು ಮುಸನ್ಮಾನ ಕುಟುಂಬ ಕಲ್ಲುರ್ಟಿ ದೈವವನ್ನು ನಂಬುತ್ತಿದ್ದರು. ಐಸಮ್ಮ ಎಂಬ ಮಹಿಳೆಯ ಕುಟುಂಬ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಕುಟುಂಬಕ್ಕೆ ಆ ಜಾಗದಲ್ಲಿ ಅಗೋಚರ ಶಕ್ತಿಯೊಂದು ಇರುವುದು ತಿಳಿಯುತ್ತದೆ. ನಂತರ ಅವರು ‘ಕಲ್ಲುರ್ಟಿ’ಯನ್ನು ಕಲ್ಲಿನ ರೂಪದಲ್ಲಿ ನಂಬಲು ಆರಂಭಿಸುತ್ತಾರೆ. ಕಷ್ಟ ಎಂದು ತನ್ನಲ್ಲಿಗೆ ಬಂದವರಿಗೆ ಐಸಮ್ಮ ಕಲ್ಲುರ್ಟಿಯ ಸ್ಮರಿಸಿ ಕಪ್ಪು ದಾರ ನೀಡುತ್ತಿದ್ದರು. ಇದರಿಂದ ಅವರ ತೊಂದರೆಗಳೆಲ್ಲ ನಿವಾರಣೆಯಾಗುತ್ತಿತ್ತು ಎಂಬ ನಂಬಿಕೆಯಿದೆ.

 

ಮನೆಯಲ್ಲಿ ವಿಶೇಷ ಅಡುಗೆ ಮಾಡಿದರೆ, ಆಕೆ ದೈವಕ್ಕೆ ಬಡಿಸದೇ ಸೇವಿಸುತ್ತಿರಲಿಲ್ಲ. ಒಂದುವೇಳೆ ತಪ್ಪಿದ್ದಲ್ಲಿ ಅಡುಗೆ ಮಾಡಿಟ್ಟಿದ್ದ ಪಾತ್ರೆಯೇ ದೈವದ ಕಲ್ಲಿನತ್ತ ಚಲಿಸುತ್ತಿತ್ತಂತೆ. ಆದರೆ, ಕಾಲಕ್ರಮೇಣ ಆ ಕುಟುಂಬ ಮನೆಯನ್ನು ಮಾರಿ ಬೇರೆ ಕಡೆ ಹೊರಟು ಹೋಗಿದ್ದರು.

ಮತ್ತೆ ಬೆಳಕಿಗೆ ಬಂದ ಕ್ಷೇತ್ರ :

ಆ ಮುಸಲ್ಮಾನ ಕುಟುಂಬವೇನೋ ಹೊರಟು ಹೋಯಿತು. ಶಕ್ತಿ ಅಲ್ಲೇ ಉಳಿಯಿತು. ಈ ಘಟನೆ ನಡೆದು ಹಲವು ದಶಕಗಳೇ ಕಳೆದಿವೆ. 15 ವರ್ಷಗಳಿಂದ ಇಲ್ಲಿ ಹಲವು ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಮಣಿಕಂಠ ಯುವಶಕ್ತಿ ಕೇಂದ್ರ ಭಜನಾ ಮಂದಿರವೊಂದನ್ನು ಸ್ಥಾಪಿಸುವ ಕೆಲಸ ಆರಂಭಿಸಿತ್ತು. ಆದರೆ, ಇದಕ್ಕೆ ತಡೆ ಬರಲಾರಂಭಿಸಿದಾಗ, ಮಂದಿರದಲ್ಲಿ ಪ್ರಶ್ನೆ ಇಟ್ಟಾಗ ‘ಯುವಶಕ್ತಿ’ ಯ ಯುವಕರು ತಾಯಿ ಕಲ್ಲುರ್ಟಿಯನ್ನು ನಂಬಬೇಕು ಎಂಬ ಅಪ್ಪಣೆಯಾಯಿತು.

ನಾವು ಬಿಟ್ಟೆವೆಂದು ದೈವ ಬಿಡುವುದೇ..? ಪೂ – ನೀರ್(ಹೂ-ನೀರು) ಸಲ್ಲದೇ ಹೋದಲ್ಲಿ ಹೇಗೆ? ಅಂತೆಯೇ, ಹಳೆಯ ದೈವಸ್ಥಾನ ಜೀರ್ಣೋದ್ಧಾರಗೊಂಡು ಹೊಸ ರೂಪ ಪಡೆದು ನಿಂತಿದೆ.

20 ದಿನಗಳಲ್ಲಿ ನಡೆಯಿತು ಜೀರ್ಣೋದ್ಧಾರ :

ದೈವದ ಅಭಯ ಯುವಕರ ಮೇಲಿತ್ತು. ಇಡೀ ಊರೇ ಅಚ್ಚರಿ ಪಡುವಂತೆ ತಾಯಿಯ ದೈವಸ್ಥಾನದ ಕಾರ್ಯ ನಡೆಯಿತು.  ಕೇವಲ 20 ದಿನಗಳಲ್ಲಿ ಅಪ್ಪೆ ಕಲ್ಲುರ್ಟಿಯ ಕ್ಷೇತ್ರ ತಲೆ ಎತ್ತಿ ನಿಂತಿತು ಅಂದರೆ ನೀವು ನಂಬಲೇ ಬೇಕು. ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಹಗಲಿರುಳು ಯುವಕರು ಶ್ರಮಿಸಿದ್ದಾರೆ. ಹುಬ್ಬೇರಿಸುವಂತಹ ಕೆಲಸ ಮಾಡಿದ ಶ್ರೀ ಮಣಿಕಂಠ ಯುವಶಕ್ತಿ ತಂಡದ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಕಾರ್ಯಕ್ರಮಗಳ ವಿವರ :

ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮೇ.3 ರಂದು ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ. ಮೇ.02 ರಂದು ಬೆಳಿಗ್ಗೆ ಶ್ರೀ ಮಣಿಕಂಠ ಸನ್ನಿಧಾನದಲ್ಲಿ ಗಣಹೋಮ, ಸಂಜೆ ಶಾಸ್ತ್ರ, ಕಲ್ಪೋಕ್ತ ಪೂಜೆ, ವಾಸ್ತು ಹೋಮಾದಿ ಅಧಿವಾಸ ನಡೆಯಲಿದೆ. ಸಂಜೆ 6.30 ರಿಂದ ‘ನಮ್ಮ ಕುಡ್ಲ’ ವಾಹಿನಿ ಖ್ಯಾತಿಯ ‘ಯಕ್ಷ ತೆಲಿಕೆ’ ಕಾರ್ಯಕ್ರಮ ನಡೆಯಲಿದೆ.

ಮೇ.03 ರಂದು ಬೆಳಿಗ್ಗೆ ಗಣಹೋಮ ಬಳಿಕ 10.00 ರಿಂದ 10.25ರ ಒಳಗೆ ಒದಗುವ ಮಿಥುನ ಲಗ್ನದ ಸುಮೂಹೂರ್ತದಲ್ಲಿ ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ ಇವರ ವೈದಿಕತ್ವದಲ್ಲಿ ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆ, ಸಾನಿಧ್ಯ ನವಕ ಕಲಶಾಭಿಷೇಕ, ಪರ್ವ ಸೇವೆ ನಡೆಯಲಿದೆ.

ಇದನ್ನೂ ಓದಿ : ಪುತ್ತೂರು: ಮಳೆಗಾಗಿ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ; ಶಾಸಕರು ಭಾಗಿ

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆದು, ರಾತ್ರಿ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.

Continue Reading

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

LATEST NEWS

Trending