Connect with us

    ‘ಮದ್ಯ’ ದೊರೆ ಮಲ್ಯ, ಚೋಕ್ಸಿ ಸೇರಿ 50 ಉದ್ಯಮಿಗಳ ಕೋಟಿಗಟ್ಟಲೇ ಸಾಲ ಮನ್ನಾ..

    Published

    on

    ‘ಮದ್ಯ’ದ ದೊರೆ ಮಲ್ಯ, ಚೋಕ್ಸಿ ಸೇರಿ 50 ಉದ್ಯಮಿಗಳ ಕೋಟಿಗಟ್ಟಲೇ ಸಾಲ ಮನ್ನಾ..

    ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಆರೋಪಿ ನೀರವ್‌ ಮೋದಿಯ ಚಿಕ್ಕಪ್ಪ ಮೆಹುಲ್ ಚೋಕ್ಸಿ, ಭಾರತದಿಂದ ಪರಾರಿಯಾಗಿ ವಿದೇಶದಲ್ಲಿ ನೆಲೆಸಿರುವ

    ಮದ್ಯದ ದೊರೆ ವಿಜಯ್ ಮಲ್ಯ ಸೇರಿದಂತೆ 50 ಮಂದಿ ಪ್ರಮುಖ ಸುಸ್ತಿದಾರರ 68,607 ಕೋಟಿ ರೂ. ವಸೂಲಾಗದ ಸಾಲವನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮನ್ನಾ (ರೈಟಾಫ್) ಮಾಡಿದೆ.

    ಬ್ಯಾಂಕ್ ಗಳಿಗೆ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾದ ವ್ಯಕ್ತಿಗಳ ಪೈಕಿ ಯಾರ ಸಾಲವನ್ನು ಸರ್ಕಾರ ಎಷ್ಟು ಪ್ರಮಾಣದಲ್ಲಿ ರೈಟಾಫ್ ಮಾಡಿದೆ?,

    ಈ ಮಾಹಿತಿ ನೀಡಿ ಎಂದು ಆರ್.‌ಟಿ.ಐ ಕಾರ್ಯಕರ್ತ ಸಾಕೇತ್ ಗೋಖಲೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ಆರ್.‌ಬಿ.ಐ ಈ ಉತ್ತರವನ್ನು ನೀಡಿದೆ.

    ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಳಿದ್ದ ಪ್ರಶ್ನೆಗೆ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯ ಖಾತೆಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ಉತ್ತರ ನೀಡಲು ನಿರಾಕರಿಸಿದ್ದರು.

    ಈ ಕಾರಣಕ್ಕೆ ನಾನು ಆರ್‌.ಟಿ.ಐ ಅಡಿ ಅರ್ಜಿ ಸಲ್ಲಿಸಿದ್ದೆ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

    2015 ಡಿಸೆಂಬರ್ 16ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಆರ್.‌ಬಿ.ಐ ವಿದೇಶಿ ಸುಸ್ತಿಗಾರರ ಮಾಹಿತಿಯನ್ನು ನೀಡಿಲ್ಲ.

    ಸುಸ್ತಿದಾರರು ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾಲವನ್ನು ಪಡೆದು ವಂಚಿಸಿದ್ದಾರೆ. ಈ ಪೈಕಿ ಕೆಲವರು ದೇಶ ಬಿಟ್ಟು ಪರಾರಿಯಾಗಿದ್ದು ಅವರ ವಿರುದ್ಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದವರು ಪ್ರತಿಕ್ರಿಯೆ ನೀಡಿದ್ದಾರೆ.

    ಅತಿ ಹೆಚ್ಚು ಸಾಲ ಮನ್ನಾ ಮಾಡಿಸಿಕೊಂಡ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮೆಹುಲ್ ಚೋಕ್ಸಿ ಇದ್ದಾರೆ.

    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ಸಾಲ ಮರು ಪಾವತಿಸದೆ ಬಾರ್ಬಡೋಸ್‍ ನಲ್ಲಿ ತಲೆ ಮರೆಸಿಕೊಂಡಿರುವ,

    ಮೆಹುಲ್ ಚೋಕ್ಸಿ ಅವರ ಗೀತಾಂಜಲಿ ಜೆಮ್ಸ್‍ನ 5,492 ಕೋಟಿ ರೂ.ಗಿಲಿ ಇಂಡಿಯಾ ಲಿಮಿಟೆಡ್‍ ನ 1,447 ಕೋಟಿ ರೂ. ಹಾಗೂ ನಕ್ಷತ್ರ ಬ್ರಾಂಡ್ಸ್ ನ 1,109 ಕೋಟಿ ರೂ. ಸಾಲ ಮನ್ನಾವಾಗಿದೆ.

    ಲಂಡನ್‍ನಲ್ಲಿದ್ದು ಕಾನೂನು ಹೋರಾಟ ನಡೆಸುತ್ತಿರುವ ವಿಜಯ್ ಮಲ್ಯ ಅವರ ಕಿಂಗ್‍ಫಿಶರ್ ಏರ್‍ಲೈನ್ಸ್‍ನ 1,943 ಕೋಟಿ ರೂ., ರುಚಿ ಸೋಯಾ ಕಂಪನಿಯ 2,212 ಕೋಟಿ ರು. ಸುಸ್ತಿಸಾಲ ಕೂಡ ಮನ್ನಾ ಮಾಡಲಾಗಿದೆ.

    ಯಾರ ಸಾಲ ಎಷ್ಟು ಮನ್ನಾ?

    ಮೆಹುಲ್ ಚೋಕ್ಸಿ – 8,048 ಕೋಟಿ ರೂ.
    ಆರ್‍ಇಐ ಅಗ್ರೋ ಲಿ. 4,314 ಕೋಟಿ ರೂ.
    ವಿನ್ಸಮ್ ಡೈಮಂಡ್ಸ್ – 4,076 ಕೋಟಿ ರೂ.

    ರೊಟೋಮ್ಯಾಕ್ ಗ್ಲೋಬಲ್ – 2,850 ಕೋಟಿ ರೂ.
    ಕುಡೋಸ್ ಕೆಮಿ, ಪಂಜಾಬ್ – 2,326 ಕೋಟಿ ರೂ.
    ರುಚಿ ಸೋಯಾ ಇಂಡಸ್ಟ್ರೀಸ್ – 2,212 ಕೋಟಿ ರೂ.
    ಜೂಮ್ ಡೆವಲಪರ್ಸ್ – 2,012 ಕೋಟಿ ರೂ.
    ಕಿಂಗ್‍ಫಿಶರ್ ಏರ್‍ಲೈನ್ಸ್ – 1,943 ಕೋಟಿ ರೂ.
    ಫಾರೆವರ್ ಪ್ರಿಶಿಯಸ್ ಜುವೆಲ್ಲರಿ -1,962 ಕೋಟಿ ರೂ.

    ಒಟ್ಟು 18 ಕಂಪನಿಗಳು 1 ಸಾವಿರ ಕೋಟಿ ಸಾಲ ಮಾಡಿದ್ದರೆ, 25 ಕಂಪನಿಗಳು 1 ಸಾವಿರ ಕೋಟಿ ರೂ.ಗಿಂತ ಕಡಿಮೆ ಸಾಲ ಮಾಡಿದೆ. 50 ಮಂದಿ ಸುಸ್ತಿದಾರರ ಪೈಕಿ 6 ಮಂದಿ ವಜ್ರ ಮತ್ತು ಚಿನ್ನದ ಉದ್ಯಮಗಳನ್ನು ನಡೆಸಿದವರಾಗಿದ್ದಾರೆ.

    ಏನಿದು ರೈಟ್‌ ಆಫ್.‌?:


    ಸರ್ಕಾರಗಳು ರೈತರ ಸಾಲಮನ್ನಾ ಮಾಡಿದಂತೆ ಉದ್ಯಮಿಗಳ ಸಾಲವನ್ನು ಬ್ಯಾಂಕುಗಳು ಮನ್ನಾ ಮಾಡುವುದಿಲ್ಲ. ಕೋಟ್ಯಂತರ ರೂ ಸಾಲ ಮಾಡಿ ದೇಶ ತೊರೆದ ಉದ್ಯಮಿಗಳನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಬ್ಯಾಂಕುಗಳು ಮೊದಲೇ ಗುರುತಿಸುತ್ತದೆ. ಬ್ಯಾಂಕ್‌ ಗಳು ಮರು ವಸೂಲಾಗುವ ಸಾಧ್ಯತೆಯೇ ಕ್ಷೀಣಿಸಿದ ಸುಸ್ತಿ ಸಾಲಗಳನ್ನು ತಮ್ಮ ಬ್ಯಾಲೆನ್ಸ್‌ ಶೀಟ್‌ನಿಂದ ಪ್ರತ್ಯೇಕಗೊಳಿಸಲು ‘ರೈಟ್‌ ಆಫ್‌’ ಪದ್ಧತಿಯನ್ನು ಬಳಸುತ್ತವೆ. ಇದು ಲೆಕ್ಕಪತ್ರಗಳ ಅನುಕೂಲಕ್ಕಾಗಿ ಬಳಸಬಹುದಾದ ವಿಧಾನ. ಇದರಿಂದ ಬ್ಯಾಂಕ್‌ ಗಳಿಗೆ ತೆರಿಗೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಆದರೆ ರೈಟ್‌ ಆಫ್‌ ಎಂದರೆ ಸಾಲ ಮನ್ನಾ ಅಲ್ಲ. ಸಾಲ ವಸೂಲಾತಿಯನ್ನು ಮುಂದೆಯೂ ಮಾಡಬಹುದು.

    Click to comment

    Leave a Reply

    Your email address will not be published. Required fields are marked *

    LATEST NEWS

    ದೇವಳಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಿ-ಪೇಜಾವರ ಶ್ರೀ

    Published

    on

    ಉಡುಪಿ: ಧಾರ್ಮಿಕ ಶ್ರದ್ದಾ ಕೇಂದ್ರಗಳು ಸರ್ಕಾರದ ಕೈಯಲ್ಲಿ ಇರಬಾರದು. ಅದು ಹಿಂದೂ ಸಂಸ್ಥೆಗಳ ಕೈಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ತಿರುಪತಿ ಲಡ್ಡು ಪ್ರಸಾದ ಘಟನೆಯಿಂದ ಸತ್ಯವಾಗಿ ನಮಗೆ ಕಾಣುತ್ತದೆ. ಹೀಗಾಗಿ ದೇವಸ್ಥಾನವನ್ನು ಶೀಘ್ರವಾಗಿ ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಬೇಕು ಎಂದು ಪೇಜಾವರ ವಿಶ್ವಪ್ರಸನ್ನ ಶ್ರೀಗಳು ಹೇಳಿದರು.

    ತಿರುಪತಿ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಲಡ್ಡು ಪ್ರಸಾದಕ್ಕೆ ದನದ ತುಪ್ಪದ ಬದಲು ಪ್ರಾಣಿ ಜನ್ಯ ಕೊಬ್ಬಿನ ಮಿಶ್ರಣ ಬಳಕೆ ಮಾಡಿರುವ ವಿಚಾರ ಕೇಳಿ ಖೇದವಾಗಿದೆ. ಮೀನಿನ ಎಣ್ಣೆ, ಹಂದಿ ಹಸುವಿನ ಕೊಬ್ಬ ಬಳಸಿ ಪ್ರಸಾದ ತಯಾರಿಸಿರುವುದು ಸಮಾಜಕ್ಕೆ ಭಗವಂತನಿಗೆ ಬಗೆದಿರುವ ಅಪಚಾರ. ಇಂತಹ ಕೆಲಸಕ್ಕೆ ಸರ್ಕಾರ ಮುಂದಾಗಿದ್ದು ಖಂಡನೀಯ ಎಂದರು.

    ತಿಮ್ಮಪ್ಪನ ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಕಲಬೆರಕೆ; ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್..!!

    ತಿರುಪತಿ ಶ್ರೀನಿವಾಸನನ್ನು ಗೋರಕ್ಷಕ ಎಂದು ಕಾಣುತ್ತೇವೆ. ಅಂತಹ ಶ್ರೀನಿವಾಸ ದೇವರಿಗೆ ಹಸು ಕೊಬ್ಬು ಬಳಸಿದ ಪ್ರಸಾದ ನೀಡಿರುವುದು ಅಪರಾಧ. ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಮಾಡಿರುವ ಹಲ್ಲೆ ಇದು. ಹಿಂದೂಗಳು ಉಪಯೋಗ ಅನರ್ಹವಾಗಿರುವ ವಸ್ತುಗಳನ್ನು ತಯಾರಿಸುವ ಅಡ್ಡೆಗಳನ್ನು ಕಂಡುಹಿಡಿದು ಶಿಕ್ಷಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

    Continue Reading

    LATEST NEWS

    ಹುಡುಗಿಗಾಗಿ ನಡೀತು ಜಗಳ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ ಯುವಕ

    Published

    on

    ಮಂಗಳೂರು/ಬೆಂಗಳೂರು : ಇತ್ತೀಚೆಗೆ ಕೊ*ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅದೂ ಹುಡುಗಿಯ ವಿಚಾರಕ್ಕೆ.

    ಉಡುಪಿ ಮೂಲದ ವರುಣ್ ಕೋಟ್ಯಾನ್ ಕೊ*ಲೆಯಾದವನು. ದಿವೇಶ್ ಕೊ*ಲೆಗೈದ ಆರೋಪಿ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದುದೇ ಈ ಹ*ತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಅವರಿಬ್ಬರು ರೂಮ್ ಮೇಟ್ಸ್ ಆಗಿದ್ದು, ಇಬ್ಬರ ನಡುವೆ ಪ್ರೀತಿ ವಿಚಾರಕ್ಕೆ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ದಿವೇಶ್‌, ವರುಣ್‌ಗೆ ಚಾ*ಕುವಿನಿಂದ ಇರಿದು ಕೊ*ಲೆ ಮಾಡಿದ್ದಾನೆ.

    ಇದನ್ನೂ ಓದಿ : ಮೂಡುಬಿದಿರೆ : ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರ ಬಂಧನ

     ಹುಡುಗಾಗಿ ನಡೆಯಿತು ಜಗಳ:

    ವರುಣ್ ಹಾಗೂ ದಿವೇಶ್ ಇಬ್ಬರು ಸ್ನೇಹಿತರು.  ಸಂಜಯ್ ನಗರದ ಗೆದ್ದಲಹಳ್ಳಿ ಬಾಡಿಗೆ ಮನೆಯಲ್ಲಿ ಕಳೆದ ಒಂದು ವರ್ಷದಿಂದ ವಾಸವಿದ್ದರು. ಯುವತಿ ಮೊದಲು ದಿವೇಶ್‌ನನ್ನ ಪ್ರೀತಿ ಮಾಡುತ್ತಿದ್ದಳು. ಬಳಿಕ ಅದೇ ಯುವತಿ ವರುಣ್‌ನ ಪ್ರೀತಿಸಲು ಶುರು ಮಾಡಿದ್ದಳಂತೆ. ಈ ವಿಚಾರಕ್ಕೆ ನಿನ್ನೆ ಶುಕ್ರವಾರ(ಸೆ.20) ರಾತ್ರಿ ಯುವಕರ ನಡುವೆ ಜಗಳವಾಗಿದೆ.  ಶನಿವಾರ ಬೆಳಗ್ಗೆಯೂ ಜಗಳವಾಡಿಕೊಂಡು ಇಬ್ಬರು ಹೊರ ಬಂದಿದ್ದಾರೆ. ಈ ವೇಳೆ ಆರೋಪಿ ದಿವೇಶ್‌, ವರುಣ್ ನನ್ನು  ಕಲ್ಲು ಎತ್ತಿ ಹಾಕಿ  ಕೊ*ಲೆ ಮಾಡಿದ್ದಾನೆ.  ದಿವೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ.

    Continue Reading

    LATEST NEWS

    ತಿಮ್ಮಪ್ಪನ ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಕಲಬೆರಕೆ; ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್..!!

    Published

    on

    ಆಂಧ್ರಪ್ರದೇಶ/ಮಂಗಳೂರು: ತಿರುಪತಿ ಲಡ್ಡು ವಿಚಾರದಲ್ಲಿ ಇಡೀ ದೇಶದಲ್ಲೇ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ತಿರುಪತಿ ತಿರುಮಲಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡುವ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವನ್ನು ಕಲಬೆರಕೆ ಮಾಡಲಾಗುತ್ತಿತ್ತು ಅನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ತಿರುಪತಿ ಲಡ್ಡು ಅಪವಿತ್ರ ಆಗಿದೆ ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಂಡಿದ್ದಾರೆ.

    ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ತುಪ್ಪದ ಜೊತೆಗೆ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಬಳಕೆ ಮಾಡಿರೋದು ಲ್ಯಾಬ್​ ಟೆಸ್ಟ್​ನಲ್ಲಿ ಕನ್ಫರ್ಮ್​ ಆಗಿದೆ. ಇನ್ನು ಈ ಬಗ್ಗೆ ತನಿಖೆಗಾಗಿ ವಿಶೇಷ ತಂಡ ರಚಿಸುವುದಾಗಿ ಪವನ್‌ ಕಲ್ಯಾಣ್ ಹೇಳಿದ್ದಾರೆ. ಅಲ್ಲದೇ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದಿರುವ ಅಪವಿತ್ರದ ಪರಿಹಾರಕ್ಕಾಗಿ ಪವನ್ ಕಲ್ಯಾಣ್‌ರವರು ವ್ರತಕೈಗೊಂಡಿದ್ದಾರೆ.

    11 ದಿನಗಳ ಕಾಲ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲು ನಿರ್ಧರಿಸಿದ್ದಾರೆ. ಏಡುಕುಂಡಲವಾಡ ಕ್ಷಮಿಸು ಅಂತ ಪವನ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲಿದ್ದಾರೆ. ಇಂದು ಗುಂಟೂರಿನ ವೆಂಕ ದೇವಾಲಯದಲ್ಲಿ ಆಂಧ್ರ ಉಪಮುಖ್ಯಮಂತ್ರಿ ದೀಕ್ಷೆಯನ್ನು ಆರಂಭಿಸಲಿದ್ದಾರೆ. 11 ದಿನದ ಬಳಿಕ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಪವನ್ ಭೇಟಿ ನೀಡಿ ವ್ರತವನ್ನು ಕೈಬಿಡಲಿದ್ದಾರೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೇ ವಿಚಾರಕ್ಕೆ ಟ್ವೀಟ್ ಮಾಡಿರೋ ಡಿಸಿಎಂ ಪವನ್ ಕಲ್ಯಾಣ್, ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆ ಮಾಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು..! ವೈಎಸ್‌ಆರ್ ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

    ಇನ್ಮುಂದೆ ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪ್ರತ್ಯೇಕ ಸಮಿತಿ ರಚಿಸಬೇಕು. ಸನಾತನ ಧರ್ಮ ರಕ್ಷಣಾ ಮಂಡಳಿಯನ್ನ ತಕ್ಷಣವೇ ಆರಂಭಿಸಬೇಕು. ಸನಾತನ ಧರ್ಮವನ್ನು ಅವಮಾನಿಸುವ ವಿಷಯಗಳನ್ನು ಕೊನೆಗಾಣಿಸಲು ಒಗ್ಗಟ್ಟಾಗಿ ಹೋರಾಡಬೇಕು ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ.

    ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ

    ಪವನ್ ಕಲ್ಯಾಣ್ ಟ್ವೀಟ್‌ಗೆ ನಟ ಪ್ರಕಾಶ್ ರಾಜ್ ಗೇಲಿ ಮಾಡಿದ್ದಾರೆ. ಸನಾತನ ಮಂಡಳಿ ಮಾಡೋದು ಬಿಟ್ಟು ಈ ಕೃತ್ಯ ಎಸಗಿದವರಿಗೆ ಮೊದಲು ಶಿಕ್ಷೆ ಕೊಡಿಸಿ ಅಂತ ಟೀಕೆ ಮಾಡಿದ್ದಾರೆ. “ಮಾನ್ಯ ಉಪ ಮುಖ್ಯಮಂತ್ರಿಗಳೇ.. ಈ ಘಟನೆ ನಿಮ್ಮ ಆಡಳಿತಾವಧಿಯಲ್ಲಿಯೇ ನಡೆದಿದೆ. ಈಗಾಗಲೇ ದೇಶದಲ್ಲಿ ಹಲವು ಸಮಸ್ಯೆಗಳಿವೆ. ಮತ್ತೆ ನೀವು ಹೊಸ ಸಮಸ್ಯೆಗಳನ್ನು ಇಲ್ಲಿಗೆ ತರುವುದು ಬೇಡ. ಮೊದಲು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸುವ ಕಡೆ ನಿಮ್ಮ ಗಮನವಿರಲಿ” ಎಂದು ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

    Continue Reading

    LATEST NEWS

    Trending