Connect with us

  DAKSHINA KANNADA

  ಬಜ್ಪೆ ಪೊಲೀಸರ ಅಮಾನತಿಗೆ ಬಿಜೆಪಿ ಒತ್ತಡವೇ ಕಾರಣ: PFI ಆರೋಪ

  Published

  on

  ಮಂಗಳೂರು: ಎಳನೀರು ವ್ಯಾಪಾರಿಯ ವ್ಯವಹಾರಕ್ಕೆ ಅಡ್ಡಪಡಿಸಿದ ಆರೋಪದಲ್ಲಿ ಸಂಘಪರಿವಾರದ ಗೂಂಡಾಗಳನ್ನು ಕರೆದು ಬುದ್ದಿ ಮಾತು ಹೇಳಿದ ಬಜ್ಪೆ ಠಾಣಾ ಇನ್ಸ್ಪೆಕ್ಟರ್ ಸಂದೇಶ್ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ಸಂಘಪರಿವಾರದ ಆರೋಪಿಗಳು ತಮ್ಮ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ ತಕ್ಷಣವೇ ಪೊಲೀಸರ ಅಮಾನತಿಗೆ ಆದೇಶ ಹೊರಡಿಸಲಾಗಿದೆ. ಬಿಜೆಪಿಯ ಒತ್ತಡದಿಂದಲೇ ಬಜ್ಪೆ ಪೊಲೀಸರನ್ನು ಏಕಾಏಕಿ ಅಮಾನತುಗೊಳಿಸಲಾಗಿದೆ.

  ಆರೋಪ ಬಂದ ಕ್ಷಣ ಮಾತ್ರದಲ್ಲಿ ಪೊಲೀಸರನ್ನು ಅಮಾನತುಗೊಳಿಸುವುದಾದರೆ, ಪ್ರತಿಭಟನಾ ನಿರತ ಮುಸ್ಲಿಮರ ವಿರುದ್ಧ ಅಮಾನುಷವಾಗಿ ಲಾಠಿಚಾರ್ಚ್ ನಡೆಸಿದ, ಗೋಲಿಬಾರ್ ಮೂಲಕ ಹತ್ಯೆ ನಡೆಸಿದ ಆರೋಪ ಹೊತ್ತ ಸಂಘಪರಿವಾರದ ಹಿನ್ನೆಲೆಯ ಪೊಲೀಸರನ್ನೂ ಅಮಾನತುಗೊಳಿಸಬೇಕಾಗಿತ್ತು.

  ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆ ಬಿಜೆಪಿಯ ನಾಯಕರ ಆದೇಶದಂತೆ ಕರ್ತವ್ಯ ನಿರ್ವಹಿಸುತ್ತಾ ಏಕಪಕ್ಷೀಯವಾದ ಕ್ರಮ ಕೈಗೊಳ್ಳುತ್ತಿರುವುದು ಹಲವಾರು ಪ್ರಕರಣಗಳಲ್ಲಿ ಸಾಬೀತಾಗಿದೆ.

  ಸಂಘಪರಿವಾರದ ಗೂಂಡಾಗಳು ದುಷ್ಕೃತ್ಯ ನಡೆಸಿ ಬಂಧನಕ್ಕೊಳಗಾದರೆ ಬಿಜೆಪಿ ಶಾಸಕರು ತಮ್ಮ ಪ್ರಭಾವ ಬಳಸಿ ಅವರನ್ನು ಬಿಡುಗಡೆಗೊಳಿಸುವ ಪ್ರವೃತ್ತಿ ಕಂಡು ಬರುತ್ತಿತ್ತು. ಆದರೆ ಈಗ ಸಂಘಪರಿವಾರದ ಗೂಂಡಾಗಳನ್ನು ಬಂಧಿಸಿದ ಪೊಲೀಸರ ವಿರುದ್ಧವೇ ಕ್ರಮ ಕೈಗೊಂಡಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

  ಸಂಘಪರಿವಾರದ ದುಷ್ಕರ್ಮಿಗಳ ಮೇಲೆ ಕ್ಷುಲ್ಲಕ ಪ್ರಕರಣ ದಾಖಲಿಸಿ ಬಿಡುಗಡೆಗೊಳಿಸುವುದು, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡ ಪೊಲೀಸರನ್ನು ಅಮಾನತು ಶಿಕ್ಷೆಗೆ ಗುರಿಪಡಿಸುವುದು ಜಿಲ್ಲೆಯನ್ನು ಅರಾಜಕತೆಯೆಡೆಗೆ ಕೊಂಡೊಯ್ಯುವ ಸೂಚನೆಯಾಗಿದೆ.

  ಆದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ಸಂಘಪರಿವಾರದ ಯಾವುದೇ ಒತ್ತಡಕ್ಕೆ ಮಣಿಯದೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ತನ್ನ ವೃತ್ತಿಧರ್ಮವನ್ನು ಪಾಲಿಸಬೇಕು. ಅದೇ ರೀತಿ ಪೊಲೀಸ್ ಇಲಾಖೆಗೆ ಮೂಗುದಾರ ತೊಡಿಸುವ ಇಂತಹ ಕ್ರಮಗಳನ್ನು ಜಿಲ್ಲೆಯ ನಾಗರಿಕರು ಪ್ರಬಲವಾಗಿ ವಿರೋಧಿಸಬೇಕು.

  ಜಿಲ್ಲೆಯ ಶಾಂತಿಪ್ರಿಯ ಜನತೆ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪರವಾಗಿ ಧ್ವನಿ ಎತ್ತಿ ಅವರಲ್ಲಿ ನೈತಿಕ ಸ್ಥೈರ್ಯ ತುಂಬಲು ಮುಂದಾಗಬೇಕೆಂದೂ ಇಜಾಝ್ ಅಹ್ಮದ್ ಕರೆ ನೀಡಿದ್ದಾರೆ.

  BELTHANGADY

  ಶಾಸಕನ ಬಂಧನಕ್ಕೆ ಮುಂದಾದ ಪೊಲೀಸರು…! ಎಚ್ಚರಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ…!

  Published

  on

  ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿರುದ್ಧ ಕೇಸು ದಾಖಲಿಸಿಕೊಂಡ ಪೊಲೀಸರು ಇಂದು ಹರೀಶ್ ಪೂಂಜಾ ಬಂಧನಕ್ಕೆ ಮುಂದಾಗಿದ್ದಾರೆ.

  ಬೆಳ್ತಂಗಡಿಯಲ್ಲಿ ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸ್ಫೋಟಕ ಕಾಯ್ದೆಯಡಿ ಬಂಧನವಾಗಿರುವ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಪರವಾಗಿ ಹರೀಶ್ ಪೂಂಜ ಪ್ರತಿಭಟನೆ ನಡೆಸಿದ್ದರು. ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿಸಿದ್ದು ಮಾತ್ರವಲ್ಲದೆ ಸಭೆಯಲ್ಲಿ ಅವರು ಮಾಡಿದ ಭಾಷಣದ ವಿಚಾರವಾಗಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

  ಪೊಲೀಸ್ ಅಧಿಕಾರಿಗಳ ವಿರುದ್ಧ ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದು, ಮತ್ತು ಡಿಜೆ ಹಳ್ಳಿ ಕೆ.ಜಿ ಹಳ್ಳಿ ಮಾದರಿಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಶಾಸಕರು ಹೇಳಿದ್ದರು. ಇದೀಗ ಪೊಲೀಸರು ಶಾಸಕ ಹರೀಶ್ ಪೂಂಜಾ ಮನೆಗೆ ಆಗಮಿಸಿ ಅವರ ಬಂಧನಕ್ಕೆ ಮುಂದಾಗಿದ್ದಾರೆ. ಆದ್ರೆ ಈ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ತೀವೃವಾಗಿ ಖಂಡಿಸಿದ್ದಾರೆ.

  ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ ಇದು ಕಾಂಗ್ರೆಸ್ ಸರ್ಕಾರದ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮೋರ್ಚಾದ ಅಧ್ಯಕ್ಷನ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದನ್ನು ಕೇಳಲು ಶಾಸಕರು ಹೋಗಿದ್ದಾರೆ. ಅವರ ಬಿಡುಗಡೆಗೆ ಪ್ರತಿಭಟನೆ ಮಾಡಿದ್ದಾರೆ. ಇದನ್ನು ನೀತಿ ಸಂಹಿತೆಯ ಕಾರಣ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ದೊಡ್ಡ ವಿಚಾರ ಮಾಡಿದ್ದಾರೆ. ನಮ್ಮ ಶಾಸಕನನ್ನು ಬಂಧಿಸಿದರೆ ಉಗ್ರ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

  ಇನ್ನು ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರು ಮುಂದಾದ ವಿಚಾರದ ಸುದ್ದಿ ತಿಳಿದು ಪೂಂಜಾ ಪರ ವಕೀಲರು ಹಾಗೂ ಬೆಂಬಲಿಗರು ಆಗಮಿಸಿದ್ದಾರೆ. ಶಾಸಕರ ಬಂಧನಕ್ಕೆ ಅವಕಾಶ ನೀಡದಂತೆ ಕಾರ್ಯಕರ್ತರು ತಮ್ಮ ವಾಹನಗಳನ್ನು ದಾರಿಗೆ ಅಡ್ಡವಾಗಿಟ್ಟಿದ್ದಾರೆ. ಈ ವಿಚಾರವಾಗಿ ಮಾತನಾಡಿದ ವಕೀಲರು ಪೊಲೀಸರು ನಿಯಮ ಬಾಹಿರವಾಗಿ ಶಾಸಕರನ್ನು ಬಂಧಿಸಲು ಮುಂದಾಗಿದ್ದಾರೆ. ವಿಚಾರಣೆಗೆ ಹಾಜರಾಗಿ ಅಂತ ನೊಟೀಸು ಕೂಡ ನೀಡದೆ ನೇರವಾಗಿ ಮನೆಗೆ ಬಂದಿದ್ದಾರೆ. ಇದು ತಪ್ಪು ಎಂದು ಹೇಳಿದ್ದಾರೆ. ಡಿಎಸ್‌ಪಿಯವರು ನಿಮ್ಮನ್ನು ಬಂಧಿಸಲು ಬಂದಿದ್ದಲ್ಲ ವಿಚಾರಣೆಗೆ ಬನ್ನಿ ಎಂದು ಕರೆಯಲು ಬಂದಿದ್ದು ಎಂದಿದ್ದಾರೆ. ಆದರೆ ಈ ರೀತಿಯಾಗಿ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

  Continue Reading

  DAKSHINA KANNADA

  ವೈರಲ್‌ ಆಯ್ತು ತಂದೂರಿ ಐಸ್‌ಕ್ರೀಮ್‌!

  Published

  on

  ಐಸ್‌ಕ್ರೀಮ್‌ ಅನ್ನು ಇಷ್ಟಪಡದವರು ಯಾರೂ ಇಲ್ಲ. ಇದನ್ನು ಕೋನ್, ಸ್ಕೂಪ್, ಬಾರ್ ರೀತಿಯಲ್ಲಿ ಸವಿಯಬಹುದು. ಇನ್ನು ವೆನಿಲಾ ಐಸ್‌ಕ್ರೀಮ್, ಸ್ಟ್ರಾಬೆರಿ, ಚಾಕೋಲೆಟ್, ಪಿಸ್ತಾ ಹೇಳುತ್ತಾ ಹೋದರೆ ವೆರೈಟಿ ವೈರೆಟಿ ಐಸ್‌ಕ್ರೀಮ್‌ಗಳ ದೊಡ್ಡ ಪಟ್ಟಿಯೇ ಇದೆ. ಬಗೆಬಗೆಯ ಐಸ್‌ಕ್ರೀಮ್‌ಗಳು ಒಂದು ಕಡೆಯಾದರೆ, ಇಲ್ಲೊಂದು ವಿಶೇಷ ಬಗೆಯ ಐಸ್‌ಕ್ರೀಮ್‌ ಇದೆ.

  ವೈರಲ್ ಆಯ್ತು ತಂದೂರಿ ಐಸ್‌ಕ್ರೀಮ್:

  ಹೌದು… ಈ ಐಸ್‌ಕ್ರೀಮ್‌ನ ಹೆಸರು ತಂದೂರಿ ಐಸ್‌ಕ್ರೀಮ್. ಇತ್ತೀಚಿನ ದಿನಗಳಲ್ಲಿ ಫುಡ್ ಮೇಲಿನ ಪ್ರಯೋಗಗಳು ಹೆಚ್ಚಾಗುತ್ತಿವೆ. ಐಸ್‌ಕ್ರೀಮ್ ಮತ್ತು ಚಾಕಲೇಟ್ ದೋಸೆ, ಜಾಮೂನ್‌ ದೋಸೆ, ದಹಿ ಮ್ಯಾಗಿ, ಓರಿಯೊ ಪಕೋಡಾ, ಚಾಕೊಲೇಟ್ ರೈಸ್ ಬೌಲ್, ಡ್ರೈ ಫ್ರೂಟ್ ಆಮ್ಲೆಟ್, ವೋಡ್ಕಾ ಆಲೂ ಪರಾಠ, ಡಿಸೇಲ್ ಪರೋಟ ಹೀಗೆ ವಿಚಿತ್ರ ಕಾಂಬಿನೇಷನ್‌ನ ಆಹಾರಗಳು, ಖಾದ್ಯ ತಿಂಡಿಗಳಲ್ಲಾಗುವ ಹೊಸ ಪ್ರಯೋಗಗಳ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. ಇಂಟರ್‌ನೆಟ್‌ನಲ್ಲಿ ಇಂತಹ ಹೊಸ ಪ್ರಯೋಗಗಳು ಕಾಣ ಸಿಗುತ್ತಲೇ ಇರುತ್ತವೆ. ಈಗ ಸದ್ಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವುದು ಹಾಟ್‌ ಹಾಟ್‌ ತಂದೂರಿ ಐಸ್‌ಕ್ರೀಮ್‌.

  ಗ್ರಿಲ್‌ ಮೇಲೆ ಬೇಯುತ್ತಿದೆ ಐಸ್‌ಕ್ರೀಮ್‌:

  ಬಿಸಿಲಿನ ಬೇಗೆ ತಣಿಸಿಕೊಳ್ಳಲು, ತಂಪಾಗಿರಲು ಐಸ್‌ಕ್ರೀಮ್‌ ತಿನ್ನೋದು ಸರಿ. ಆದರೆ ಈ ಐಸ್‌ಕ್ರೀಮ್‌ ನೋಡಿದರೆ ಬೇಸಿಗೆಯಲ್ಲಿ ತಿನ್ನೋದೆ ಕಷ್ಟ ಎನಿಸಿದೆ. ಗ್ರಿಲ್‌ ಮೇಲೆ ಬೇಯುತ್ತಿರುವ ಐಸ್‌ಕ್ರೀಮ್‌ ಈಗ ವೈರಲ್‌ ಆಗಿದೆ.

  ಈ ತಂದೂರಿ ಐಸ್‌ಕ್ರೀಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೆಯಾಗಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ನಾಲ್ಕು ಐಸ್ ಕ್ರೀಮ್ ಬಾರ್‌ಗಳನ್ನು ತೆಗೆದುಕೊಂಡಿದ್ದಾನೆ. ಅದರಲ್ಲಿ ಎರಡು ಚಾಕೊಲೇಟ್ ಫ್ಲೇವರ್‌ಗಳು ಮತ್ತು ಇತರ ಎರಡು ವೆನಿಲ್ಲಾ ಫ್ಲೇವರ್‌ಗಳು.

  ಈ ನಾಲ್ಕು ಐಸ್‌ಕ್ರೀಮ್‌ ಬಾರ್‌ಗಳನ್ನು ಆ ವ್ಯಕ್ತಿ ಸೀದಾ ಬಿಸಿ ಬಿಸಿ ಕೆಂಡದಲ್ಲಿ ಉಗಿ ಹಾಯುತ್ತಿರುವ ಗ್ರಿಲ್‌ ಮೇಲೆ ಇರಿಸುತ್ತಾನೆ. ಆಮೇಲೆ ಸ್ವಲ್ಪ ಹೊತ್ತಿನ ಬಳಿಕ ಆ ಐಸ್‌ಕ್ರೀಮ್‌ ಮೇಲೆ ಕಲರ್‌ಫುಲ್‌ ಆಗಿರುವ ಒಂದಿಷ್ಟು ಸಿಂಪರಣೆಗಳನ್ನು ಹಾಕಿ ಆ ಐಸ್‌ಕ್ರೀಮ್‌ ಬಾರ್‌ಗಳನ್ನು ಅಲಂಕರಿಸುತ್ತಾನೆ.

  ಫುಡ್‌ಬಿ..ಯುಎನ್‌ಕೆ ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋಗೆ “ತಂದೂರಿ ಚಾಕೊ-ಬಾರ್” ಎಂದು ಕ್ಯಾಪ್ಷನ್‌ ನೀಡಲಾಗಿದೆ.

  Continue Reading

  DAKSHINA KANNADA

  ಮನೆಯಲ್ಲಿ ಸೊಳ್ಳೆ ಕಾಟವೇ? ಈ ಗಿಡಗಳನ್ನು ನೆಟ್ಟರೆ ಸೊಳ್ಳೆ ನಿಮ್ಮ ಹತ್ತಿರ ಸುಳಿಯುವುದಿಲ್ಲ

  Published

  on

  ಮಂಗಳೂರು: ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ. ರಾತ್ರಿಯಾದರೆ ಸಾಕು, ಕಿವಿ ಬಳಿ ಗುಯಿಂಗುಟ್ಟುತ್ತ ನಿದ್ದೆ ಮಾಡಲು ಕೂಡ ಬಿಡುವುದಿಲ್ಲ. ಸೊಳ್ಳೆಗಳ ಸಂತತಿಯು ವಿಪರೀತವಾದರೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತವೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ ಮಲೇರಿಯಾ, ಚಿಕನ್‌ ಗುನ್ಯಾದಂಥಹ ಕಾಯಿಲೆಗಳು ಬರುತ್ತವೆ.

  ಸೊಳ್ಳೆ ಏನಾದರೂ ಕಚ್ಚಿ ಬಿಟ್ಟರೆ ಆ ಜಾಗವು ಊದಿಕೊಂಡು ತುರಿಕೆ ಆರಂಭವಾಗಿ ಚರ್ಮದ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಹೆಚ್ಚಿನವರು ಸೊಳ್ಳೆ ಪರದೆ, ಕಾಯಿಲ್, ಕ್ರೀಮ್ ಹೀಗೆ ನಾನಾ ರೀತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಮನೆಯ ಸುತ್ತ ಮುತ್ತ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ನಿಮ್ಮ ಹತ್ತಿರವೇ ಸುಳಿಯುವುದಿಲ್ಲ.

  ಸೊಳ್ಳೆಗಳಿಂದ ರಕ್ಷಿಸಲು ಹೀಗೆ ಮಾಡಿ:

  • ಸೊಳ್ಳೆಗಳನ್ನು ಓಡಿಸಲು ಸುಲಭ ಉಪಾಯವೆಂದರೆ ಮನೆಯ ಸುತ್ತ ಮುತ್ತ ತುಳಸಿ ಮತ್ತು ಪುದೀನ ಸಸ್ಯವನ್ನು ನೆಡುವುದು. ಈ ಸಸ್ಯದ ಎಲೆಯಲ್ಲಿರುವ ಪರಿಮಳದಿಂದ ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಬರುವುದಿಲ್ಲ.
  • ರೋಸರಿ ಸಸ್ಯವನ್ನು ಮನೆಯ ಹಾಸುಮಾಸಿನಲ್ಲಿ ನೆಡುವುದರಿಂದ ಸೊಳ್ಳೆಗಳು ಬರುವುದಿಲ್ಲ. ಇದರ ಪರಿಮಳಯುಕ್ತವಾದ ಸುವಾಸನೆಗೆ ಈ ಸೊಳ್ಳೆಗಳು ಹಾಗೂ ಕೀಟಗಳು ದೂರ ಓಡುತ್ತವೆ.
  • ಲ್ಯಾವೆಂಡರ್ ಸಸ್ಯವು ಕೂಡ ಸೊಳ್ಳೆಗಳ ಕಾಟಕ್ಕೆ ಪ್ರಯೋಜನಕಾರಿಯಾಗಿದೆ. ಈ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಪರಿಮಳದಿಂದ ಸೊಳ್ಳೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದಾಗಿದೆ.
  • ಮನೆಯ ಮುಂದೆ ಚೆಂಡು ಹೂವಿನ ಸಸ್ಯವನ್ನು ನೆಡುವುದರಿಂದ ನೋಡುವುದಕ್ಕೆ ಸುಂದರವಾಗಿ ಕಾಣುವುದಲ್ಲದೇ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು. ಈ ಹೂವಿನ ಸುವಾಸನೆಯು ಸೊಳ್ಳೆಗಳಿಗೆ ತೊಂದರೆ ಉಂಟುಮಾಡಿ ಅವುಗಳನ್ನು ಓಡಿಸುತ್ತವೆ.
  Continue Reading

  LATEST NEWS

  Trending