Connect with us

    ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು: ಅಪಾರ್ಟ್ ಮೆಂಟ್ ಒಂದರಲ್ಲಿ ಅಮಾನವೀಯ ವರ್ತನೆ

    Published

    on

    ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು: ಅಪಾರ್ಟ್ ಮೆಂಟ್ ಒಂದರಲ್ಲಿ ಅಮಾನವೀಯ ವರ್ತನೆ

    ಮಂಗಳೂರು: ಮಂಗಳೂರಿನಲ್ಲಿ ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದ ಪ್ರಕರಣ ಮಂಗಳೂರಿನ ಶಿವಭಾಗ್ ನಲ್ಲಿ ನಡೆದಿದೆ.

    ಹೊರದೇಶದಿಂದ ಬಂದಿದ್ದ ಗರ್ಭಿಣಿ ಮಹಿಳೆಯ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ, ಆಕೆಯನ್ನು ಅಪಾರ್ಟ್ ಮೆಂಟ್ ಗೆ ಪ್ರವೇಶಿಸಲು ನಿರಾಕರಿಸಿದ ಪರಿಣಾಮವೇ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಲು ಕಾರಣವಾಗಿದೆ.

    ಈ ಹಿನ್ನಲೆಯಲ್ಲಿ ಇದೀಗ ಮಂಗಳೂರಿನ ಶಿವಭಾಗ್ ನ ಶಿವದೀಪ್ ಖಾಸಗಿ ಅಪಾರ್ಟ್ ಮೆಂಟ್ ಗೆ ಮಂಗಳೂರು ಮಹಾನಗರ ಪಾಲಿಕೆ ನೋಟೀಸ್ ಕಳುಹಿಸಿದೆ.

    ಅಲ್ಲದೇ ಮೂರು ದಿನಗಳ ಒಳಗೆ ಸೂಕ್ತ ಸಮಜಾಯಿಷಿ ನೀಡಲು ಸೂಚನೆ ಕೂಡ ನೀಡಿದೆ. ಅಲ್ಲದೇ ತಕ್ಷಣ ಮಹಿಳೆಗೆ ಅಪಾರ್ಟ್ ಮೆಂಟ್ ಪ್ರವೇಶಕ್ಕೆ ಅವಕಾಶ ನೀಡಲು ಸೂಚನೆ ಕೊಟ್ಟಿದೆ.

    ತಪ್ಪಿದಲ್ಲಿ ಅಪಾರ್ಟ್ ಮೆಂಟ್ ಅಸೋಸಿಯೇಷನ್ ವಿರುದ್ದ ಕಾನೂನು ಕ್ರಮದ ಎಚ್ಚರಿಕೆಯನ್ನು ಕೂಡ ನೀಡಿದೆ.

    ಮೇ.12ರಂದು ದುಬೈನಿಂದ ಏರ್ ಲಿಫ್ಟ್ ಆಗಿದ್ದ ಗರ್ಭಿಣಿ ಮಹಿಳೆ ಮೊದಲ ಕೋವಿಡ್ ಟೆಸ್ಟ್ ನೆಗೆಟಿವ್ ಬಳಿಕ ಅಪಾರ್ಟ್ ಮೆಂಟ್ ಗೆ ತೆರಳಲು ಬಯಸಿದ್ದರು.

    ಆದರೆ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಪ್ರವೇಶ ‌ನಿರಾಕರಿಸಿತ್ತು. ಹೀಗಾಗಿ ಸೂಕ್ತ ಚಿಕಿತ್ಸೆ ಸಿಗದೇ ಗರ್ಭಿಣಿಯ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ.

    Click to comment

    Leave a Reply

    Your email address will not be published. Required fields are marked *

    BANTWAL

    ವಗ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್; ಹಲವರಿಗೆ ಗಾಯ

    Published

    on

    ಬಂಟ್ವಾಳ ತಾಲೂಕಿನ ವಗ್ಗದ ಸಮೀಪ ಕೊಪ್ಪಳ ಎಂಬಲ್ಲಿ ಸರ್ಕಾರಿ ಬಸ್‌ ಉರುಳಿ ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ.

    ಧರ್ಮಸ್ಥಳ ಮಂಗಳೂರು ನಡುವೆ ಸಂಚರಿಸುವ ಸರ್ಕಾರಿ ಬಸ್ ಇದಾಗಿದ್ದು, ಕೊಪ್ಪಳ ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆಯ ಪಕ್ಕದ ಗುಂಡಿಗೆ ಬಸ್ ಉರುಳಿ ಬಿದ್ದಿದ್ದು ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದೆ. ತಕ್ಷಣ ಸ್ಥಳೀಯ ಯುವಕರು ಸೇರಿ ಬಸ್‌ ಒಳಗಿದ್ದ ಪ್ರಯಾಣಿಕರನ್ನು ಬಸ್‌ ನಿಂದ ಹೊರ ತೆಗೆದಿದ್ದಾರೆ.

    ಗಾಯಾಳುಗಳನ್ನು ಖಾಸಗಿ ವಾಹನಗಳ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಬಸ್ ಬರುತ್ತಿರುವ ವೇಳೆ ಬೈಕ್‌ ಒಂದು ಅಡ್ಡ ಬಂದಿದ್ದು ಈ ವೇಳೆ ಬಸ್ ನಿಯಂತ್ರಿಸುವ ವೇಳೆ ರಸ್ತೆಯಿಂದ ಪಕ್ಕಕ್ಕೆ ಉರುಳಿದೆ ಎಂದು ಬಸ್ ಚಾಲಕ ಮಾಹಿತಿ ನೀಡಿದ್ದಾರೆ . ಆದರೆ ಸ್ಥಳಿಯರು ಇದನ್ನು ನಿರಾಕರಿಸಿದ್ದು ಬಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.

    ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡು ಘಟನೆಗೆ ಕಾರಣ ಏನು ಎಂಬ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ.

    Continue Reading

    LATEST NEWS

    ತಿರುಪತಿ ಲಡ್ಡು ಸೂಪರ್‌.. ಲಡ್ಡು ತಿಂದು ಖುಷಿ ಹಂಚಿಕೊಂಡ ಭಕ್ತರು..!

    Published

    on

    ಆಂಧ್ರಪ್ರದೇಶ/ಮಂಗಳೂರು: ತಿರುಪತಿಯಲ್ಲಿ ಶ್ರೀ ವೆಂಕಟರಮಣನ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಕಲಬೆರಕೆ ವಿಚಾರದ ಬಳಿಕ ಕರ್ನಾಟಕದ ಕೆಎಮ್‌ಎಫ್‌ನಿಂದ ನಂದಿನಿ ತುಪ್ಪವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದೀಗ ನಂದಿನಿ ತುಪ್ಪ ಬಳಸಿ ತಯಾರಾಗುತ್ತಿರುವ ಲಡ್ಡು ತಿಂದು ಭಕ್ತಾದಿಗಳು ಖುಷಿಪಟ್ಟಿದ್ದಾರೆ.

    ಪ್ರಸಾದಕ್ಕೆ ಕಲಬೆರಕೆ ಬೆನ್ನಲ್ಲೇ ದೇವಸ್ಥಾನವನ್ನು ಶುದ್ದೀಕರಿಸಲಾಗಿದೆ. ಜೊತೆಗೆ ನಂದಿನಿ ತುಪ್ಪವನ್ನು ಪ್ರಸಾದಕ್ಕೆ ಬಳಸುತ್ತಿರುವ ಬಳಿಕ ಭಕ್ತಾಧಿಗಳು  ತಿರುಪತಿಗೆ ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯಲ್ಲಿ ಲಡ್ಡು ಪ್ರಸಾದವನ್ನು ಸ್ವೀಕಾರ ಮಾಡುತ್ತಿದ್ದಾರೆ.

     

    ಈ ಬಗ್ಗೆ ಭಕ್ತರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು ನಾವು ಲಡ್ಡು ತೆಗೆದುಕೊಂಡು ತಿಂದೆವು. ಟೇಸ್ಟ್‌ ಸೂಪರ್‌ ಆಗಿದೆ. ನಮ್ಮ ಕೆಎಂಎಫ್‌.. ನಮ್ಮ ಬೆಂಗಳೂರು. ನಮಗೂ ಖುಷಿ ತಂದಿದೆ. ತುಂಬಾ ಚೆನ್ನಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ. ನಮ್ಮ ನಾಡಿನ ನಂದಿನಿ ತುಪ್ಪ ಬಳಸಿ ಲಡ್ಡು ಮಾಡುತ್ತಿರುವುದು ತುಂಬಾ ಖುಷಿ ವಿಚಾರ. ಮಧ್ಯದಲ್ಲಿ ಈ ರೀತಿಯ ವಿವಾದ ಎದ್ದಿದ್ದಕ್ಕೆ ಬೇಜಾರಾಯ್ತು. ನಮ್ಮ ಕರ್ನಾಟಕ ನಮ್ಮ ಹೆಮ್ಮೆ. ನಂದಿನಿ ನಮ್ಮ ಹೆಮ್ಮೆ. ನಂದಿನಿ ಬಳಸಿ ಸ್ವಾಧಿಷ್ಟಕರವಾದ ಲಡ್ಡು ಸವಿಯಿರಿ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    ಆಟದ ಮೈದಾನದ ಗೇಟ್ ಬಿದ್ದು ಬಾಲಕ ಸಾ*ವು; ಕುಟುಂಬಕ್ಕೆ ಪರಿಹಾರ ಘೋಷಣೆ

    Published

    on

    ಮಂಗಳೂರು/ಬೆಂಗಳೂರು : ಮಲ್ಲೇಶ್ವರಂನಲ್ಲಿ ಬಿಬಿಎಂಪಿ ವ್ಯಾಪ್ತಿಯ ಆಟದ ಮೈದಾನದ ಗೇಟ್​ ಬಿದ್ದು ಬಾಲಕ ಸಾ*ವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ವಿಜಯಕುಮಾರ್ ಮತ್ತು ಪ್ರಿಯಾ ದಂಪತಿ ಪುತ್ರ ನಿರಂಜನ್(10) ಮೃ*ತ ಬಾಲಕ. ಆಟ ಆಡಲು ಮೈದಾನದ ಗೇಟ್ ಓಪನ್ ಮಾಡುತ್ತಿದ್ದಂತೆ ಮಗುವಿನ ಮೇಲೆಯೇ ಗೇಟ್ ಬಿದ್ದಿದೆ.  ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.  ಆದರೆ, ​ ಚಿಕಿತ್ಸೆ ಫಲಿಸದೇ ಬಾಲಕ ಕೊನೆ*ಯುಸಿರೆಳೆದಿದ್ದಾನೆ.

    ಮೃ*ತ ನಿರಂಜನ್​ ಮಲ್ಲೆಶ್ವರಂನ ಬಿಬಿಎಂಪಿ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ. ಜೊತೆಗೆ ತಂದೆ ವಿಜಯಕುಮಾರ್ ಆಟೋ ಚಾಲಕರಾಗಿದ್ದು, ಮಲ್ಲೇಶ್ವರನ ಪೈಪ್‌ಲೈನ್​ನಲ್ಲಿ ಈ ಕುಟುಂಬ ವಾಸವಾಗಿತ್ತು. ಇನ್ನು ಘಟನಾಸ್ಥಳಕ್ಕೆ ‌ ಮಲ್ಲೇಶ್ವರಂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಇದನ್ನೂ ಓದಿ : WATCH : ಎಸಿ ಕೋಚ್ನಲ್ಲಿ ಟಿಕೇಟ್ ಇಲ್ಲದೆ ಪ್ರಯಾಣಿಸಿದ ಹಾವು; ವೀಡಿಯೋ ವೈರಲ್

    ಪರಿಹಾರ ಘೋಷಣೆ :

    ನಿರಂಜನ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೃತ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ, ಬಿಬಿಎಂಪಿಯಿಂದ 5 ಲಕ್ಷ ರೂಪಾಯಿ ಮತ್ತು ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ 5 ಲಕ್ಷ ರೂಪಾಯಿ ಸೇರಿ ಒಟ್ಟು 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.

     

    Continue Reading

    LATEST NEWS

    Trending