DAKSHINA KANNADA
ಎಟಿಎಂ ಮೆಶಿನ್ ಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ದೋಚುವ ಯತ್ನ; ಇಬ್ಬರು ಪೊಲೀಸರ ಬಲೆಗೆ..!
Published
4 years agoon
By
Adminಎಟಿಎಂ ಮೆಶಿನ್ ಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ದೋಚುವ ಯತ್ನ; ಇಬ್ಬರು ಪೊಲೀಸರ ಬಲೆಗೆ..!
ಮಂಗಳೂರು: ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರದ ಉಪಕರಣ ಅಳವಡಿಸಿ ಹಣ ವಂಚಿಸುವ ಬೃಹತ್ ಜಾಲವೊಂದು ಮಂಗಳೂರಲ್ಲಿ ಪತ್ತೆಯಾಗಿದೆ.
ತಿಂಗಳವೊಂದರಲ್ಲೇ ಹಲವು ಪ್ರಕರಣಗಳು ದಾಖಲಾಗಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.ನಗರದ ಮಂಗಳಾದೇವಿ ಹಾಗೂ ಚಿಲಿಂಬಿಯಲ್ಲಿ ಎಟಿಎಂಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ವಂಚಿಸುತ್ತಿದ್ದ ಆರೋಪದಲ್ಲಿ ಹಲವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಹಣ ವಂಚನೆಯ ಬೃಹತ್ ಜಾಲ ಪತ್ತೆಯ ತನಿಖಾ ದೃಷ್ಟಿಯಿಂದ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.ಮೊದಲನೇ ಪ್ರಕರಣ ನಗರದ ಮಂಗಳಾದೇವಿಯ ಪೆಟ್ರೋಲ್ ಬಂಕ್ ಎದುರಿನಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ ದುಷ್ಕರ್ಮಿಗಳು ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ರವಿವಾರ ಯತ್ನಿಸುತ್ತಿದ್ದರು.
ಇದನ್ನು ಗಮನಿಸಿದ ಸ್ಥಳಿಯರು ಅವರನ್ನು ಸೆರೆ ಹಿಡಿಯಲು ಹೋದಾಗ ದುಷ್ಕರ್ಮಿಗಳು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಆದಾಗ್ಯೂ, ಸಾರ್ವಜನಿಕರು ಇಬ್ಬರನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿವೆ.2ನೇ ಪ್ರಕರಣ ನಗರದ ಚಿಲಿಂಬಿಯ ಗಾಂಧೀನಗರದ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿಯೂ ಭಾನುವಾರ ದಿನ ಬೆಳಗ್ಗೆ 9:47ಕ್ಕೆ ದುಷ್ಕರ್ಮಿಗಳು ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ವಂಚನೆಗೆ ವಿಫಲ ಯತ್ನ ನಡೆಸಿದ್ದಾರೆ.ಎಟಿಎಂ ಯಂತ್ರಗಳಲ್ಲಿ ದುಷ್ಕರ್ಮಿಗಳು ಸೂಕ್ಷ್ಮ ಉಪಕರಣ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕಳವು ಮಾಡಲಾಗುತ್ತದೆ. ಎಟಿಎಂನಲ್ಲಿ ಶಂಕಾಸ್ಪದವಾಗಿ ಯಾವುದಾದರೂ ಉಪಕರಣ ಜೋಡಣೆಯಾಗಿದೆಯೇ ಎನ್ನುವುದನ್ನು ಗ್ರಾಹಕರು ಮೊದಲು ಪರಿಶೀಲನೆ ಮಾಡಬೇಕು.
ಈ ಸಂದರ್ಭದಲ್ಲಿ ಏನಾದರೂ ಅನುಮಾನ ಬಂದಲ್ಲಿ, ಆ ಜಾಗದಲ್ಲಿ ಕಾರ್ಡ್ ಬಳಕೆ ಮಾಡಕೂಡದು. ಕೂಡಲೇ ಸಮೀಪದ ಬ್ಯಾಂಕ್ ಅಥವಾ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ.
updates
ಎಟಿಎಂಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ವಂಚನೆ ಪ್ರಕರಣ; ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ
ಮಂಗಳೂರು: ಎಟಿಎಂಗಳಿಗೆ ಸ್ಕಿಮ್ಮಿಂಗ್ ಯಂತ್ರದ ಉಪಕರಣ ಅಳವಡಿಸಿ ಹಣ ವಂಚಿಸುವ ಬೃಹತ್ ಜಾಲವನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ.ನಾಲ್ಕು ಮಂದಿ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದರು.
ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಕಳೆದ ವರ್ಷದ ನವೆಂಬರ್‍ನಿಂದ ಈವರೆಗೆ ನಗರದ ವಿವಿಧ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣವನ್ನು ದೋಚಿದ ಕೇರಳದ ತ್ರಿಶ್ಯೂರ್ ಜಿಲ್ಲೆಯ ಚಲಕಾಡಿಯ ಗ್ಲಾಡ್ವಿನ್ ಜಿಂಟೋ ಜೋಯ್ , ದಿಲ್ಲಿಯ ಪ್ರೇಮ್‍ನಗರದ ದಿನೇಶ್ ಸಿಂಗ್ ರಾವತ್ , ಕಾಸರಗೋಡು ಜಿಲ್ಲೆಯ ಅಬ್ದುಲ್ ಮಜೀದ್ , ಆಲಪ್ಪುಝ ಜಿಲ್ಲೆಯ ರಾಹುಲ್ ಟಿ.ಎಸ್. ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಸ್ಕಿಮ್ಮಿಂಗ್ ಡಿವೈಸ್, ಕೃತ್ಯಕ್ಕೆ ಬಳಸಿದ ಕಾರು, 2 ನಕಲಿ ಎಟಿಎಂ ಕಾರ್ಡ್‍ಗಳು, 5 ಮೊಬೈಲ್, 25 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ.
ಆರೋಪಿಗಳು ಕುಳಾಯಿಯ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ, ಚಿಲಿಂಬಿ ಮತ್ತು ನಾಗುರಿ ಹಾಗೂ ಕಪಿತಾನಿಯೋದಲ್ಲಿರುವ ಕೆನರಾ ಬ್ಯಾಂಕ್‍ನ ಎಟಿಎಂ, ಮಂಗಳಾದೇವಿಯ ಎಸ್‍ಬಿಐ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಡಿವೈಎಸ್ ಅಳವಡಿಸಿ ಗ್ರಾಹಕರ ಡಾಟಾ ಪಡೆದುಕೊಂಡು ನಕಲಿ ಎಟಿಎಂ ಕಾರ್ಡ್‍ಗಳನ್ನು ತಯಾರಿಸಿ ದೆಹಲಿ, ಬೆಂಗಳೂರು, ಮೈಸೂರು, ಮಡಿಕೇರಿ, ಗೋವಾ ಮತ್ತಿತರ ಕಡೆ ಗ್ರಾಹಕರ ಗಮನಕ್ಕೆ ಬಾರದಂತೆ ಹಣವನ್ನು ವಿದ್ಡ್ರಾ ಮಾಡಿದ್ದಾರೆ.
ಮಂಗಳೂರಿನಲ್ಲೇ ಸುಮಾರು 22 ಪ್ರಕರಣದಲ್ಲಿ ಹಣವನ್ನು ದೋಚಿರುವ ಈ ಆರೋಪಿಗಳು ದೇಶದಾದ್ಯಂತ ಸುಮಾರು 60ಕ್ಕೂ ಅಧಿಕ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದರು.
ಈ ಮಧ್ಯೆ ಕೃತ್ಯವೆಸಗಿ ಪರಾರಿಯಾಗುವ ಯತ್ನದಲ್ಲಿ ಬಿದ್ದು ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಶಶಿಕುಮಾರ್ ಹೇಳಿದರು.
DAKSHINA KANNADA
ಗೆಜ್ಜೆ ಹಸ್ತಾಂತರ, ಚೌಕಿ ಪೂಜೆಯೊಂದಿಗೆ ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಆರಂಭ
Published
9 hours agoon
26/11/2024ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ, ಯಕ್ಷಗಾನ ಮಂಡಳಿಯ ಆರೂ ಮೇಳಗಳ ಸೇವೆಯಾಟ ದೇವಳದ ರಥಬೀದಿಯಲ್ಲಿ ನಡೆಯಿತು. ನಿನ್ನೆ (ನ.25) ಸಂಜೆ ದೇವಳದ ಗೋಪುರದಲ್ಲಿ ಆರೂ ಮೇಳಗಳ ಪ್ರಧಾನ ಭಾಗವತರಿಂದ ತಾಳಮದ್ದಳೆ ಮತ್ತು ಗೆಜ್ಜೆ ಹಸ್ತಾಂತರ ನಂತರ ಚೌಕಿ ಪೂಜೆ, ಸೇವೆಯಾಟ ‘ಪಾಂಡಾಶ್ವಮೇಧ’ ನಡೆಯಿತು.
ಈ ಸಂದರ್ಭ ವೇದವ್ಯಾಸ ತಂತ್ರಿ, ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಅತ್ತೂರು ಬೈಲು ವೆಂಕಟರಾಜ ಉಡುಪ, ಹರಿ ಉಡುಪ ಮೂಡುಮನೆ, ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಸಚಿವ ರಮಾನಾಥ ರೈ, ದೇವಸ್ಯ ಹಾಗೂ ಕೊಡೆತ್ತೂರುಗುತ್ತು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷರಾದ ನಿತಿನ್ ಶೆಟ್ಟಿ ಕೊಡೆತ್ತೂರುಗುತ್ತು, ಗಣೇಶ್ ವಿ. ಶೆಟ್ಟಿ ಐಕಳ, ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ ಎಕ್ಕಾರು, ಪ್ರದೀಪ್ ಕುಮಾರ್ ಶೆಟ್ಟಿ ಎಕ್ಕಾರು, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಮತ್ತಿತರ ಹಿರಿಯ ಗಣ್ಯರು ಉಪಸ್ಥಿತರಿದ್ದರು. ಈ ಬಾರಿಯೂ ಕಟೀಲು ಮೇಳದ ಯಕ್ಷಗಾನ ಬಯಲಾಟಗಳು ಕಾಲಮಿತಿಯಲ್ಲಿ ನಡೆಯಲಿವೆ.
DAKSHINA KANNADA
ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ; 166 ಜೊತೆ ಕೋಣಗಳು ಭಾಗಿ
Published
1 day agoon
25/11/2024By
NEWS DESK4ಮಂಗಳೂರು : ಈ ವರ್ಷದ ಕಂಬಳ ಸೀಸನ್ ನ ಮೊದಲ ಕಂಬಳ ನವೆಂಬರ್ 22 ಮತ್ತು 23 ರಂದು ಸಿದ್ದಕಟ್ಟೆಯಲ್ಲಿ ನಡೆಯಿತು. ಇದು ಎರಡನೇ ವರ್ಷದ ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ ಆಗಿದ್ದು, ಬರೋಬ್ಬರಿ 166 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ 6 ಜೊತೆ, ಅಡ್ಡಹಲಗೆ 6 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 34 ಜೊತೆ, ಹಗ್ಗ ಕಿರಿಯ 27 ಜೊತೆ, ನೇಗಿಲು ಕಿರಿಯ 78 ಜೊತೆ ಕೋಣಗಳು ಪಾಲ್ಗೊಂಡಿದ್ದವು.
ಪ್ರಶಸ್ತಿ ವಿವರ :
ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಪ್ರಥಮ, ವಾಮಂಜೂರು ತಿರುವೈಲು ಗುತ್ತು ಅಭಿಷೇಕ್ ನವೀನ್ ಚಂದ್ರ ಆಳ್ವ ದ್ವಿತೀಯ ಸ್ಥಾನ ಪಡೆದರು. ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಪ್ರಥಮ ಹಾಗೂ ಆಲದ ಪದವು ಮೇಗಿನ ಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ ‘ಬಿ’ ಅವರು ದ್ವಿತೀಯ ಸ್ಥಾನಿಯಾದರು.
ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ‘ಎ’ ಕೋಣಗಳು ಪ್ರಥಮ ಹಾಗೂ ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ ದ್ವಿತೀಯ ಸ್ಥಾನ ಪಡೆದರು. ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಪ್ರಥಮ, ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ಇದನ್ನೂ ಓದಿ: WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ
ನೇಗಿಲು ಹಿರಿಯ ವಿಭಾಗದಲ್ಲಿ ಹೊಸ್ಮಾರು ಸೂರ್ಯ ಶ್ರೀ ರತ್ನ ಸದಾಶಿವ ಶೆಟ್ಟಿ ಪ್ರಥಮ ಹಾಗೂ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ದ್ವಿತೀಯ ಸ್ಥಾನ ಗೆದ್ದಿದ್ದಾರೆ. ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಥಮ ಹಾಗೂ ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
DAKSHINA KANNADA
ಮಸ್ಕತ್ ನಲ್ಲಿ ಬಿರುವ ಜವನೆರ್ ಸಂಯೋಜನೆಯ ಕ್ರೀಡಾಕೂಟ
Published
1 day agoon
25/11/2024By
NEWS DESK4ಮಂಗಳೂರು/ಮಸ್ಕತ್ : ಬಿರುವ ಜವನೆರ್ ಮಸ್ಕತ್ ಆಯೋಜಿಸಿದ ಕರ್ನಾಟಕ ಪ್ರೀಮಿಯಾರ್ ಲೀಗ್ ನ 2024 ನೇ ಸಾಲಿನ ಕ್ರೀಡಾಕೂಟ ಮಸ್ಕತ್ ನ ಅಲ್ ಹೈಲ್ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಓಮನ್ ಕ್ರಿಕೆಟ್ ನ ಟಿ20 ತಂಡದ ನಾಯಕ ವಿನಾಯಕ್ ಶುಕ್ಲ ನೆರವೇರಿಸಿದರು.
ಈ ಸಂದರ್ಭ ಉತ್ತಮ್ ಕೋಟ್ಯಾನ್, ಮುಸ್ತಫಾ, ರಮಾನಂದ್ ಬಂಗೇರ, ಚಂದ್ರಕಾಂತ್ ಕೋಟ್ಯಾನ್, ದಾಮೋದರ್ ಶೆಟ್ಟಿ, ಪದ್ಮಾಕರ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಪುದರ್ ದೀತಿಜಿ ನಾಟಕದ ಪೋಸ್ಟರ್ ಬಿಡುಗಡೆ :
ಇದೇ ಸಂದರ್ಭದಲ್ಲಿ ಜನವರಿ 10 ರಂದು ಮಸ್ಕತ್ ನ ಆಲ್ ಫಾಜಾಜ್ ಹೋಟೆಲ್ ನಲ್ಲಿ ನಡೆಯಲಿರುವ ಕಾಪಿಕಾಡ್ ಅವರ ಚಾ ಪರ್ಕ ತಂಡದ ” ಪುದರ್ ದೀತಿಜಿ ” ನಾಟಕದ ಪೋಸ್ಟರ್ ಬಿಡುಗಡೆ ಹಾಗೂ ಪ್ರಚಾರ ಅಭಿಯಾನಕ್ಕೆ ಡಾ. ದೇವದಾಸ್ ಕಾಪಿಕಾಡ್ ಹಾಗೂ ಅರ್ಜುನ್ ಕಾಪಿಕಾಡ್ ಚಾಲನೆ ನೀಡಿದರು.
LATEST NEWS
ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಪ್ರಕರಣ – 8 ಜನರ ಬಂಧನ
ಉಡುಪಿ: ಕಾಲಿವುಡ್ ಸ್ಟಾರ್ ನಟ ಸೂರ್ಯ ದಂಪತಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ
ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ
ಏಲಿಯನ್ಗಳು ನಿಜಕ್ಕೂ ಇದೆಯಾ? ಡಾ.ಸೋಮನಾಥ್ರಿಂದ ಅಚ್ಚರಿಯ ಮಾಹಿತಿ !!
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ: ಮುಂದಿನ ಸಿಎಂ ಇವರೇ ?
Trending
- LATEST NEWS6 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru4 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION5 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS3 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!