Connect with us

LATEST NEWS

ಗುಜರಾತ್ ಕರಾವಳಿ ಪ್ರದೇಶದಲ್ಲಿ ಪಾಕ್ ಪ್ರಜೆಗಳ ಬಂಧನ; ಬರೋಬ್ಬರಿ 600 ಕೋಟಿ ಮೌಲ್ಯದ ಡ್ರಗ್ಸ್ ವಶ!

Published

on

ಮಂಗಳೂರು / ಗುಜರಾತ್ : ಅರಬ್ಬಿ ಸಮುದ್ರದಲ್ಲಿ ಸಂಶಯಾಸ್ಪದವಾಗಿ ಸಂಚಾರ ಮಾಡುತ್ತಿದ್ದ ದೋಣಿಯೊಂದನ್ನು ವಶಕ್ಕೆ ಪಡೆದ ಭಾರತೀಯ ಕರಾವಳಿ ರಕ್ಷಣಾ ಪಡೆ ಅಧಿಕಾರಿಗಳಿಗೆ ಶಾಕ್ ಆಗಿದೆ. ಯಾಕೆಂದರೆ, ಅದರಲ್ಲಿ ಬರೋಬ್ಬರಿ 600 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತು.

ಒಟ್ಟು 86 ಕೆಜಿ ತೂಕದ ಈ ಮಾದಕ ವಸ್ತುಗಳ ಮೌಲ್ಯ 600 ಕೋಟಿ ರೂ. ಗೂ ಹೆಚ್ಚು ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣ ಸಂಬಂಧ ದೋಣಿಯಲ್ಲಿದ್ದ 14 ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.


ಅತಿ ದೊಡ್ಡ ಕಾರ್ಯಾಚರಣೆ :

ಬೇಹುಗಾರಿಕಾ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದ್ದು, ಕರಾವಳಿ ರಕ್ಷಣಾ ಪಡೆ ವಶಕ್ಕೆ ಪಡೆದಿರುವ ಈ ದೋಣಿ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಈ ದೋಣಿಯಲ್ಲಿ 14 ಮಂದಿ ಪಾಕಿಸ್ತಾನ ಪ್ರಜೆಗಳಿದ್ದರು. ಇದೀಗ ಎಲ್ಲರನ್ನೂ ಭಾರತೀಯ ಕರಾವಳಿ ರಕ್ಷಣಾ ಪಡೆ ತನ್ನ ವಶಕ್ಕೆ ಪಡೆದಿದೆ.


ಈ ಕಾರ್ಯಾಚರಣೆಗೆ ಭಯೋತ್ಪಾದನಾ ನಿಗ್ರಹ ದಳ ಹಾಗೂ ಮಾದಕ ವಸ್ತು ನಿಯಂತ್ರಣ ಪಡೆ ಕೂಡಾ ನೆರವಾಗಿದ್ದು, ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಅರಬ್ಬಿ ಸಮುದ್ರದ ಈ ಪ್ರಾಂತ್ಯದಲ್ಲಿ ಪ್ರಬಲವಾಗಿರುವ ಮಾದಕ ವಸ್ತು ಕಳ್ಳಸಾಗಣೆದಾರರ ವಿರುದ್ಧ ನಡೆಯುತ್ತಿರುವ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ. ಕರಾವಳಿ ರಕ್ಷಣಾ ಪಡೆಗೆ ಮಾದಕ ವಸ್ತು ಜಾಲದ ವಿರುದ್ಧ ದೊರೆತ ದೊಡ್ಡ ಗೆಲುವು ಎಂದೇ ಹೇಳಲಾಗಿದೆ.

ಇದನ್ನೂ ಓದಿ : ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕ*ರಣಕ್ಕೆ ಟ್ವಿಸ್ಟ್..! ಎಸ್‌ಐಟಿ ರಚನೆ!!

ಇನ್ನು ವಶಕ್ಕೆ ಪಡೆಯಲಾಗಿರುವ ಎಲ್ಲಾ 14 ಪಾಕ್ ಪ್ರಜೆಗಳನ್ನು ಗುಜರಾತ್ ರಾಜ್ಯದ ಪೋರ್‌ಬಂದರ್‌ಗೆ ಕರೆ ತರಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

DAKSHINA KANNADA

ಮೇ 20ರವರೆಗೆ ದ.ಕ. ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ

Published

on

ಮಂಗಳೂರು : ಕರಾವಳಿಗೆ ಮೇ 20ರ ವರೆಗೆ ಜಿಲ್ಲೆಯಲ್ಲಿ ಮಳೆಯ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ದ.ಕ.ದ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸೋಮವಾರ ಬೆಳಗ್ಗಿನ ಜಾವ ಗುಡುಗು ಸಹಿತ ಸಾಧಾರಣ ಮಳೆ ಯಾಗಿತ್ತು. ಸುಳ್ಯ, ಅರಂತೋಡು, ಹಾಲೆಟ್ಟಿ, ಬಡ್ಡಟ್ಕ, ಸಂಪಾಜೆ ಪರಿಸರದಲ್ಲಿ ಮಂಗಳವಾರ ಬೆಳಗ್ಗೆ ಮಳೆ ಸುರಿದಿದೆ.

ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ಅಲೆಗಳ ಅಬ್ಬರ ಕಂಡುಬಂದಿದೆ. ದ.ಕ ಜಿಲ್ಲೆಯಲ್ಲಿ ಮಂಗಳವಾರ ಸರಾಸರಿ 31.7 ಡಿಗ್ರಿ ಗರಿಷ್ಠ, 24.2 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಗುಡುಗು ಮಿಂಚಿನೊಂದಿಗೆ ಉತ್ತಮ ಮಳೆ ಸಾಧ್ಯತೆ

ದ.ಕ, ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 20ರ ವರೆಗೆ ಗಾಳಿ, ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 1ವಾರ ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಾಗಿ ಬೀಚ್ ವ್ಯಾಪ್ತಿಯಲ್ಲೂ ಕಡಲಬ್ಬರ ಹೆಚ್ಚಳಗೊಳ್ಳಲಿದೆ. ರಾತ್ರಿ ವೇಳೆ ಚಳಿಯ ತೀವ್ರತೆ ಸಾಧಾರಣಕ್ಕಿಂತ ತುಸು ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಜೊತೆಗೆ ಆಲಿಕಲ್ಲು ಮಳೆ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಧಿಕೃತ ಮೂಲಗಳು ತಿಳಿಸಿವೆ.

Continue Reading

LATEST NEWS

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ

Published

on

ಮಂಗಳೂರು/ಬೆಂಗಳೂರು : ಚಿನ್ನದ ಬೆಲೆ ಏರಿಕೆ ಕಂಡು ಬೇಸರಿಸಿಕೊಂಡಿದ್ದ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಇಂದು (ಮೇ 15) ಕೊಂಚ ಇಳಿಕೆ ಕಂಡಿದೆ. ಹಾಗಾಗಿ ಚಿನ್ನ ಕೊಳ್ಳುವಲ್ಲಿ ಸ್ವರ್ಣ ಪ್ರಿಯರು ತೊಡಗಿಕೊಳ್ಳಬಹುದಾಗಿದೆ.
ಇತ್ತ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ರೆ, ಅತ್ತ, ಬೆಳ್ಳಿಯ ಬೆಲೆ ಏರಿಕೆ ಕಂಡಿದೆ. 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,750 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,820 ರೂಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,720 ರೂಪಾಯಿ ಇದೆ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ :

* 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,750 ರೂ
* 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,820 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ : 872 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

* 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,750 ರೂ
* 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,820 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 860 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ :

* ಬೆಂಗಳೂರು: 66,750 ರೂ
* ಚೆನ್ನೈ: 66,900 ರೂ
* ಮುಂಬೈ: 66,750 ರೂ
* ದೆಹಲಿ: 66,900 ರೂ
* ಕೋಲ್ಕತಾ: 66,750 ರೂ
* ಕೇರಳ: 66,750 ರೂ
* ಅಹ್ಮದಾಬಾದ್: 66,800 ರೂ
* ಜೈಪುರ್: 66,900 ರೂ
* ಲಕ್ನೋ: 66,900 ರೂ
* ಭುವನೇಶ್ವರ್: 66,750 ರೂ

ಇದನ್ನೂ ಓದಿ : PHOTOS : ಆಸ್ಟ್ರೇಲಿಯಾದಲ್ಲಿ ರಶ್ಮಿಕಾ ಮಂದಣ್ಣ; ಹಾಟ್ ಫೋಟೋಗಳು ವೈರಲ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ

* ಮಲೇಷ್ಯಾ: 3,500 ರಿಂಗಿಟ್ (61,837 ರುಪಾಯಿ)
* ದುಬೈ: 2,630 ಡಿರಾಮ್ (59,800 ರುಪಾಯಿ)
* ಅಮೆರಿಕ: 715 ಡಾಲರ್ (59,713 ರುಪಾಯಿ)
* ಸಿಂಗಾಪುರ: 996 ಸಿಂಗಾಪುರ್ ಡಾಲರ್ (61,422 ರುಪಾಯಿ)
* ಕತಾರ್: 2,675 ಕತಾರಿ ರಿಯಾಲ್ (61,299 ರೂ)
* ಸೌದಿ ಅರೇಬಿಯಾ: 2,680 ಸೌದಿ ರಿಯಾಲ್ (59,664 ರುಪಾಯಿ)
* ಓಮನ್: 283.50 ಒಮಾನಿ ರಿಯಾಲ್ (61,543 ರುಪಾಯಿ)
* ಕುವೇತ್: 222.50 ಕುವೇತಿ ದಿನಾರ್ (60,839 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ

* ಬೆಂಗಳೂರು: 8,600 ರೂ
* ಚೆನ್ನೈ: 9,070 ರೂ
* ಮುಂಬೈ: 8,720 ರೂ
* ದೆಹಲಿ: 8,720 ರೂ
* ಕೋಲ್ಕತಾ: 8,720 ರೂ
* ಕೇರಳ: 9,070 ರೂ
* ಅಹ್ಮದಾಬಾದ್: 8,720 ರೂ
* ಜೈಪುರ್: 8,720 ರೂ
* ಲಕ್ನೋ: 8,720 ರೂ
* ಭುವನೇಶ್ವರ್: 9,070 ರೂ

Continue Reading

DAKSHINA KANNADA

ಮೇ 17 ರಂದು ‘ನಮ್ಮ ಕಂಬಳ ಪ್ರಶಸ್ತಿ 2024’ ಪ್ರದಾನ ಸಮಾರಂಭ

Published

on

ಮಂಗಳೂರು : ತುಳುನಾಡಿನ ಜಾನಪದ ಕ್ರೀಡೆಯಾಗಿರುವ ಕಂಬಳದಲ್ಲಿ ಅನೇಕ ಸಾಧಕರು ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಆದ್ರೆ, ವರ್ಷವಿಡಿ ನಡೆಯುವ ಕಂಬಳದಲ್ಲಿ ಈ ಸಾಧನೆಗಳು ಆಗೊಮ್ಮೆ ಈಗೊಮ್ಮೆ ಮಾತ್ರ ಚರ್ಚೆಯಾಗಿ ಮರೆತು ಹೋಗುತ್ತದೆ. ಹೀಗಾಗಿ ಅವಿಭಜಿತ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳಗಳಲ್ಲಿ ಒಟ್ಟು ಸಾಧನೆ ಮಾಡಿದ ಕೋಣಗಳು, ಓಟಗಾರರು, ಕೋಣಗಳ ಯಜಮಾನರು ಹೀಗೆ ಹಲವು ವಿಭಾಗದಲ್ಲಿ ಸಹಕರಿಸಿದ ಎಲ್ಲರನ್ನೂ ಗೌರವಿಸಿ ಪ್ರಶಸ್ತಿ ನೀಡುವ ವಿನೂತನ ಕಾರ್ಯಕ್ರಮ ಮೇ 17 ರಂದು ನಡೆಯಲಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಮ್ಮ ಕುಡ್ಲ ವಾಹಿನಿಯ ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರ ಅವರು,  ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕಂಬಳದ ನೇರ ಪ್ರಸಾರದ ಮೂಲಕ ನಮ್ಮ ಕುಡ್ಲ ವಾಹಿನಿ  ಜನಮೆಚ್ಚುಗೆ ಪಡೆದುಕೊಂಡಿದೆ. ಈ ಸುಸಂದರ್ಭದಲ್ಲಿ ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸಲು ನಾವೂ ಕೂಡಾ ವಿನೂತನವಾಗಿ ಏನಾದ್ರೂ ಮಾಡಬೇಕು ಎಂದು ಈ ಪ್ರಶಸ್ತಿ ಸಮಾರಂಭ ಆಯೋಜಿಸಿದ್ದೇವೆ. ನಮ್ಮ ಕಂಬಳ ಟೀಮ್ ದುಬೈ ಹಾಗೂ ಸಂತ ಅಲೋಶಿಯಸ್‌ ಕಾಲೇಜಿನ ಸಹಯೋಗದೊಂದಿಗೆ ಈ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ.

ಕಾರ್ಯಕ್ರಮ ಸಂತ ಅಲೋಶಿಯಸ್‌ ವಿವಿಯ ಎಲ್‌.ಎಫ್ ರಸ್ಕಿನ್ ಹಾಲ್‌ನಲ್ಲಿ ಈ ಪ್ರಶಸ್ತಿ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಹರೇಕಳದಲ್ಲಿ ಪದವಿಪೂರ್ವ ಶಿಕ್ಷಣ ಆರಂಭ: ಹಾಜಬ್ಬರ ಕನಸು ನನಸು

ಇದೇ ಸಂದರ್ಭದಲ್ಲಿ ನಮ್ಮ ಕಂಬುಲ ನನ ದುಂಬುಲ ಎನ್ನುವ ಮಾಹಿತಿ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರುಗಳಾದ ಹರೀಶ್ ಬಿ ಕರ್ಕೇರ, ಸುರೇಶ್ ಬಿ ಕರ್ಕೇರ , ನಮ್ಮಕುಡ್ಲ ವಾಹಿನಿ ಸಿಒಒ ಕದ್ರಿ ನವನೀತ ಶೆಟ್ಟಿ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸುದರ್ಶನ್ ಉಪಸ್ಥಿತರಿದ್ದರು.

 

Continue Reading

LATEST NEWS

Trending