Connect with us

    LATEST NEWS

    ಪ್ರಾಣಿ – ಮಾನವ ಜಟಾಪಟಿ; ಜೀವನ ಅಸ್ತವ್ಯಸ್ಥ

    Published

    on

    ಮಂಗಳೂರು/ಹಾಸನ: ಅಕ್ಟೋಬರ್ 7 ರಂದು ಅರಸೀಕೆರೆ ತಾಲೂಕಿನಲ್ಲಿ ವಿದ್ಯುತ್ ಶಾಕ್​ನಿಂದ ಮೂರು ಕರಡಿಗಳು ಮೃತಪಟ್ಟಿದ್ದವು.


    ಗುರುವಾರ (ಅ.17) ರಂದು ಸಕಲೇಶಫುರ ತಾಲೂಕಿನ ಬಾಳ್ಳುಪೇಟೆ ಬಳಿ ಕರೆಂಟ್ ಶಾಕ್​ಗೆ ಒಂಟಿ ಸಲಗ ಬಲಿಯಾಗಿದೆ. ಕಾಡು ಪ್ರಾಣಿಗಳ ಚಲನವಲನದ ಬಗ್ಗೆ ಮಾಹಿತಿ ಇದ್ದರೂ ಸೆಸ್ಕಾಂನ ನಿರ್ಲಕ್ಷ್ಯದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ.

    15 ದಿನಗಳ ಹಿಂದೆ ಚಿಕ್ಕಮಗಳೂರು ಭಾಗದಿಂದ ಬಂದ ಕಾಡಾನೆಯೊಂದು ಆಹಾರ ಅರಸಿ ಹಾಸನ ಜಿಲ್ಲೆ ಪ್ರವೇಶಿಸಿದೆ. ಬನವಾಸೆ ಗ್ರಾಮದ ಬಳಿ ವಿದ್ಯುತ್​ ತಂತಿಗೆ ಸೊಂಡಿಲು ತಾಗಿಸಿ ಧಾರುಣವಾಗಿ ಮೃತಪಟ್ಟಿದೆ. 25 ವರ್ಷ ಪ್ರಾಯದ ಬೃಹತ್ ಒಂಟಿ ಸಲಗದ ಸಾವಿನ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಜನ ಸ್ಥಳದಲ್ಲಿ ಸೇರಿದರು. ಕಾಡಾನೆ ಕಳೇಬರಕ್ಕೆ ನಮಿಸಿ ಕಂಬನಿ ಮಿಡಿದರು.

    30 ಅಡಿ ಎತ್ತರದಲ್ಲಿ ವಿದ್ಯುತ್ ಲೈನ್ ಕೊಂಡೊಯ್ಯಬೇಕು ಎಂಬ ನಿಯಮ ಇದ್ದರೂ ಅದನ್ನು ಪಾಲಿಸಿದ ಕಾರಣ ಕಾಡಾನೆ ಬಲಿಯಾಗಿದೆ. ಕೂಡಲೆ ಸೆಸ್ಕಾಂ ಅದಿಕಾರಿಗಳ ವಿರುದ್ಧ ಕೇಸ್ ದಾಖಲು ಮಾಡಬೇಕು, ಅವರನ್ನು ಬಂದಿಸಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.

    ಕಾಡಾನೆ ದಾಳಿ, ಸಾವು:

    ಹಾಸನ ಜಿಲ್ಲೆಯ ಮಲೆನಾಡು ಭಾಗಗಳಾದ ಸಕಲೇಶಫುರ, ಆಲೂರು, ಬೇಲೂರು ತಾಲೂಕಿನಲ್ಲಿ ದಶಕಗಳಿಂದ ಕಾಡಾನೆಗಳ ಉಪಟಳ ನಿರಂತರವಾಗಿ ಹೆಚ್ಚಾಗುತ್ತಿದೆ. 80ಕ್ಕೂ ಹೆಚ್ಚು ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
    ವಿದ್ಯುತ್​ ಶಾಕ್, ಅನಾರೋಗ್ಯ ಸೇರಿ ಹಲವು ಕಾರಣಗಳಿಂದ 100ಕ್ಕೂ ಅದಿಕ ಕಾಡಾನೆಗಳು ಪ್ರಾಣಬಿಟ್ಟಿವೆ. ಕೇವಲ ಎಂಟು ದಿನಗಳ ಹಿಂದಷ್ಟೇ ಅರಸೀಕೆರೆ ತಾಲೂಕಿನಲ್ಲಿ ವಿದ್ಯುತ್​ ಶಾಕ್​ನಿಂದ ಮೂರು ಕರಡಿಗಳು ಮೃತಪಟ್ಟಿದ್ದವು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ವಿದ್ಯುತ್ ದುರಂತಕ್ಕೆ ಕಾಡಾನೆ ಬಲಿಯಾಗಿದೆ. ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ 12 ಕಾಡಾನೆಗಳು ಬಲಿಯಾಗಿವೆ. ಕಳೆದ 15 ದಿನಗಳ ಅಂತರದಲ್ಲಿ ಎರಡು ಆನೆಗಳು ಸಾವಿಗೀಡಾಗಿವೆ.

    ಒಟ್ಟಿನಲ್ಲಿ ಕಾಡಾನೆ ಹಾವಳಿಯಿಂದ ಕಂಗೆಟ್ಟಿರೊ ಜನರು ಜೀವ ಭಯದಲ್ಲಿಯೇ ದಿನ ದೂಡುತ್ತಿದ್ದಾರೆ. ಇದರ ನಡುವೆ ಆಗಾಗ ಬಲಿಯಾಗುತ್ತಿರುವ ಕಾಡಾನೆಗಳ ಕಳೆಬರಹ ಕಂಡು ಕಣ್ಣೀರು ಹಾಕಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಕಪಿಮುಟಷ್ಠಿಯಲ್ಲಿ ನಟಿ ತಮನ್ನಾ..! ಏನಿದು ಪ್ರಕರಣ ??

    Published

    on

    ಮಂಗಳೂರು: ‘HPZ ಟೋಕನ್’ ಮೊಬೈಲ್ ಅಪ್ಲಿಕೇಶನ್‌ಗೆ ಲಿಂಕ್ ಮಾಡಲಾದ ಮನಿ ಲಾಂಡರಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಟಿ ತಮನ್ನಾ ಭಾಟಿಯಾ ಅವರನ್ನು ಗುರುವಾರ ಇಡಿ ಗುವಾಹಟಿ ವಿಚಾರಣೆಗೆ ಒಳಪಡಿಸಲಾಗಿತ್ತು.


    ಹಲವಾರು ಹೂಡಿಕೆದಾರರು ಬಿಟ್‌ಕಾಯಿನ್ ಮತ್ತು ಇತರ ಕೆಲವು ಕ್ರಿಪ್ಟೋಕರೆನ್ಸಿಗಳಿಂದ ವಂಚಿಸಿದ್ದಾರೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ತಿಳಿಸಿದೆ. ಮೂಲಗಳನ್ನು ಉಲ್ಲೇಖಿಸಿ ಗಣಿಗಾರಿಕೆಯ ನೆಪದಲ್ಲಿ ವಂಚಿಸಲಾಗಿದೆ.


    ಆ್ಯಪ್ ಕಂಪನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ “ಸೆಲೆಬ್ರಿಟಿಯಾಗಿ ಕಾಣಿಸಿಕೊಂಡಿದ್ದಕ್ಕಾಗಿ ಭಾಟಿಯಾ ಸ್ವಲ್ಪ ಹಣವನ್ನು ಪಡೆದಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ “ಕ್ರಿಮಿನಲ್” ಆರೋಪಗಳಿಲ್ಲ ಎಂದು ಪಿಟಿಐ ವರದಿ ಮಾಡಿದೆ.

    ನಟಿ ತಮನ್ನಾ ಭಾಟಿಯಾ ಅವರ ಹೇಳಿಕೆಯನ್ನು ಪಿಎಂಎಲ್‌ಎ ಅಡಿಯಲ್ಲಿ ಇಡಿ ಪ್ರಾದೇಶಿಕ ಕಚೇರಿಯಲ್ಲಿ ದಾಖಲಿಸಲಾಗಿದೆ, ಇದು ಅಕ್ರಮ ಹಣ ವರ್ಗಾವಣೆಯನ್ನು ತಡೆಯುವ ಕಾನೂನನ್ನು ಮಾಡಿದೆ. ಆಪ್ ಕಂಪನಿಯ ಕಾರ್ಯಕ್ರಮದಲ್ಲಿ ತಮನ್ನಾ ಸೆಲೆಬ್ರಿಟಿಯಾಗಿ ಒಂದಷ್ಟು ಹಣ ಪಡೆದಿದ್ದರು.

    ಈ ಹಿಂದೆಯೂ ಅವರಿಗೆ ಸಮನ್ಸ್ ನೀಡಲಾಗಿತ್ತು, ಆದರೆ ಅವರು ಕೆಲಸದ ಕಾರಣ ಸಮನ್ಸ್ ಅನ್ನು ಮುಂದೂಡಿದ್ದರು, ಮಾರ್ಚ್‌ನಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಒಟ್ಟು 299 ಘಟಕಗಳನ್ನು ಆರೋಪಿಸಲಾಗಿದ್ದು, ಇದರಲ್ಲಿ 76 ಚೀನೀ ನಿಯಂತ್ರಿತ ಘಟಕಗಳು ಸೇರಿವೆ, ಅದರಲ್ಲಿ 10 ನಿರ್ದೇಶಕರು ಚೀನಾ ಮೂಲದವರಾಗಿದ್ದರೆ, ಎರಡು ಘಟಕಗಳು ಇತರ ವಿದೇಶಿ ಪ್ರಜೆಗಳಿಂದ ನಿಯಂತ್ರಿಸಲ್ಪಡುತ್ತವೆ ಎಂದು ವರದಿಯಾಗಿದೆ.

    Continue Reading

    LATEST NEWS

    ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ -1.50ಕೆಜಿ ಗಾಂಜಾ ಸಹಿತ ಆರೋಪಿ ಅರೆಸ್ಟ್

    Published

    on

    ಮಂಗಳೂರು: ನಗರದ ಹೊಸಬೆಟ್ಟು ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಹಾರ ಮೂಲದ ಅಸಾಮಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

    ಬಿಹಾರ್ ರಾಜ್ಯದ ನಿವಾಸಿ ಸೋನಿ ಕುಮಾರ್(27) ಬಂಧಿತ ಆರೋಪಿ. ಸುರತ್ಕಲ್ ಠಾಣಾ ಪೊಲೀಸರು ಹೊಸಬೆಟ್ಟು ಬಳಿ ಬೀಚ್ ರಸ್ತೆಯಲ್ಲಿ ಗಸ್ತು ತಿರುಗಾಡುತ್ತಿದ್ದರು‌. ಈ ವೇಳೆ ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನು ಪೊಲಿಸ್ ಜೀಪ್ ಅನ್ನು ಕಂಡ ತಕ್ಷಣ ಓಡಲು ಯತ್ನಿಸಿದ್ದಾನೆ‌‌. ಆತನನ್ನು ಪೊಲೀಸರು ಹಿಡಿದು ವಿಚಾರಿಸಿದರೆ, ಆತನು ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ.

    ಓಡಿ ಹೋಗಲು ಕಾರಣವೇನು ಕೇಳಿದಾಗ ಮಾಹಿತಿ ನೀಡಲು ತಡವರಿಸಿದ್ದಾನೆ. ತಕ್ಷಣ ಕೂಲಂಕುಶವಾಗಿ ವಿಚಾರಿಸಿದಾಗ ತನ್ನ ಬ್ಯಾಗ್‌ನಲ್ಲಿ ಗಾಂಜಾ ಇರುವುದಾಗಿ ತಿಳಿಸಿದ್ದಾನೆ. ತಾನು ಬಿಹಾರ ರಾಜ್ಯದಿಂದ ಗಾಂಜಾವನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಆತನನ್ನು ವಶಕ್ಕೆ ತೆಗೆದುಕೊಂಡ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ 30,000 ರೂ. ಮೌಲ್ಯದ ಸುಮಾರು 1.5 ಕೆಜಿ ಗಾಂಜಾ, 15,000 ರೂ. ಮೌಲ್ಯದ ಮೊಬೈಲ್ ಫೋನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

    Continue Reading

    LATEST NEWS

    ಯುವತಿಯರ ವೇಷದಲ್ಲಿ ಯುವಕನ ಶ*ವ ಪತ್ತೆ; ಇದು ಒಂದು ವಿಚಿತ್ರ ಆ*ತ್ಮಹತ್ಯೆ…!

    Published

    on

    ಮಂಗಳೂರು/ಉತ್ತರಾಖಂಡ: 22 ವರ್ಷದ ಯುವಕನೊಬ್ಬ ಮಹಿಳೆಯರಂತೆ ವೇಷ ಧರಿಸಿ ಸಾ*ವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಮೇಲ್ನೋಟಕ್ಕೆ ಆ*ತ್ಮಹತ್ಯೆ ಎಂದು ಕಂಡರೂ ಪೊಲೀಸರ ತನಿಖೆ ಬಳಿಕ ಸತ್ಯಾಂಶ ಹೊರ ಬೀಳಲಿದೆ.


    ಪೊಲೀಸರ ಪ್ರಕಾರ, ಯುವಕ ಮಸ್ಸೂರಿ ಲಾಲ್​ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಮಲ್ಟಿ ಟಾಸ್ಕ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಬುಧವಾರ ಸಂಜೆ ಡ್ಯೂಟಿ ಮುಗಿಸಿ ಕೋಣೆಗೆ ಹೋದಾತ ಬೆಳಗ್ಗೆಯಾದರೂ ಕೆಲಸಕ್ಕೆ ಬಂದಿರಲಿಲ್ಲ. ಅವನ ಸಹೋದ್ಯೋಗಿಗಳು ಕರೆದಾಗ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

     

     

    ಇದನ್ನೂ ಓದಿ : ಅನೈತಿಕ ಫೋಟೋ ವೈರಲ್; ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

     

    ನಂತರ ಮಸ್ಸೂರಿ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಮಸ್ಸೂರಿ ಕೊತ್ವಾಲ್​ ಅರವಿಂದ ಚೌಧರಿ ನೇತೃತ್ವದ ಪೊಲೀಸ್​ ತಂಡ ಅಕಾಡೆಮಿಗೆ ತಲುಪಿ ಯುವಕನಿದ್ದ ಕೊಠಡಿಯ ಬಾಗಿಲನ್ನು ಒಡೆದು ನೋಡಿದಾಗ ಯುವತಿಯರ ವೇಷಭೂಷಣದಲ್ಲಿ ಯುವಕನ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಸ್ಸೂರಿ ಪೊಲೀಸರು ಮೃತನ ಮೊಬೈಲ್​ ವಶ ಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    Continue Reading

    LATEST NEWS

    Trending