Connect with us

    ವಿಷಾನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆ: ಮೃತಪಟ್ಟವರ ಕುಟುಂಬಕ್ಕೆ ತಲಾ1 ಕೋಟಿ ಪರಿಹಾರ

    Published

    on

    ವಿಷಾನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆ: ಮೃತಪಟ್ಟವರ ಕುಟುಂಬಕ್ಕೆ ತಲಾ1 ಕೋಟಿ ಪರಿಹಾರ

    ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಕಾರ್ಖಾನೆಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

    ಇನ್ನು ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರಕಾರ ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರವನ್ನು ಆಂಧ್ರ ಸರಕಾರ ಘೋಷಣೆ ಮಾಡಿದೆ.

    ವಿಷಾನಿಲ ಸೋರಿಕೆಯಾಗಿರುವ ಪ್ಲಾಂಟ್ ಸುತ್ತಲೂ ಬಿಗು ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.

    ಇಂದು ನಸುಕಿನ ಜಾವ 3 ಗಂಟೆ ಹೊತ್ತಿನಲ್ಲಿ ವಿಶಾಖಪಟ್ಟಣಂನ ಗೋಪಾಲಪಟ್ಟಣದ ಆರ್.ಆರ್ ವೆಂಕಟಪುರಂನಲ್ಲಿರುವ ಎಲ್.ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ವಿಷಾನಿಲ ಸೋರಿಕೆಯಾಗಿತ್ತು.

    ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ ಗೃಹ ಸಚಿವಾಲಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

    ಸದ್ಯ ಪರಿಸ್ಥಿತಿಯನ್ನು ನಿಗಾ ವಹಿಸಲಾಗುತ್ತಿದೆ. ಗೃಹಸಚಿವ ಅಮಿತ್ ಶಾ ಕೂಡ ಘಟನೆ ತೀರಾ ದುರದೃಷ್ಟಕರ ಎಂದಿದ್ದಾರೆ.

    ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ ಅಲ್ಲಿನ ಪರಿಸ್ಥಿತಿ ಬಗ್ಗೆ ವಿಚಾರಿಸಿದರು.

    ಎಲ್ಲಾ ರೀತಿಯ ನೆರವು ಮತ್ತು ಸಹಕಾರ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

    ವಿಶಾಖಪಟ್ಟಣಂನ ಫ್ಯಾಕ್ಟರಿಯ ಸುತ್ತಮುತ್ತ ನಿವಾಸಿಗಳ ಸುರಕ್ಷತೆಗೆ ನಾನು ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಮೋದಿ ಹೇಳಿದ್ದಾರೆ.

    ಇದೇ ವೇಳೆ ಈ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾನವ ಹಕ್ಕು ಆಯೋಗ, 11 ಮಂದಿ ಅಮಾಯಕ ಜನರು ಅಸುನೀಗಿರುವುದು ಹಾಗೂ ಸಾವಿರಾರರು ಜನರು ಅಸ್ವಸ್ಥಗೊಂಡಿರುವುದು ಗಂಭೀರ ಸ್ವರೂಪದ ಮಾನವ ಹಕ್ಕು ಉಲ್ಲಂಘನೆಯಾಗಿದೆ.

    ಪೀಡಿತ ಜನರ ಬದುಕಿನ ಹಕ್ಕನ್ನು ಕಿತ್ತುಕೊಂಡಂತಾಗಿದೆ. ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವುದರಿಂದಾಗಿ ದೇಶಾದ್ಯಂತ ಜನರ ಜೀವ ಅಪಾಯದಲ್ಲಿದ್ದು,

    ಪ್ರತಿಯೊಬ್ಬರೂ ಮನೆಯಲ್ಲೇ ಬಂಧಿಯಾಗಬೇಕಾದ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿರುವುದು ಜನರಿಗೆ ಆಘಾತ ತಂದಿದೆ ಎಂದು ಹೇಳಿದೆ.

    ಅಸ್ವಸ್ಥರಿಗೆ ವೈದ್ಯಕೀಯ ಚಿಕಿತ್ಸೆ, ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಇತ್ಯಾದಿ ಕ್ರಮಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ನೋಟೀಸ್ ಹೊರಡಿಸಿದೆ.

    ಹಾಗೆಯೇ, ಎಫ್ಐಆರ್ ದಾಖಲಾಗಿರುವುದು ಮತ್ತು ತನಿಖೆ ಯಾವ ಹಂತದಲ್ಲಿದೆ ಎಂದು ಮಾಹಿತಿ ನೀಡುವಂತೆ ಆಂಧ್ರದ ಡಿಜಿಪಿಗೂ ನೋಟೀಸ್ ಕೊಡಲಾಗಿದೆ.

    ದುರ್ಘಟನೆ ಸಂಭವಿಸಿದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಕಾನೂನು ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಲಾಗಿತ್ತಾ ಎಂಬುದನ್ನು ಪತ್ತೆ ಹಚ್ಚಿ ತನಗೆ ವರದಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೂ ಸೂಚಿಸಿದೆ.

    ಹಾಗೂ ನಾಲ್ಕು ವಾರದೊಳಗೆ ಎಲ್ಲರೂ ವರದಿ ಕೊಡಬೇಕು ಎಂದು ನಿರ್ದೇಶಿಸಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಅಣ್ಣನ ಪ್ರೀತಿಗೆ ತಮ್ಮ ಬ*ಲಿ; ತಾಯಿಯ ಮುಂದೆಯೇ ಮಗನ ಕೊ*ಲೆ

    Published

    on

    ಮಂಗಳೂರು/ಕಲಬುರಗಿ: ಯುವ ಸಮಾಜದ ಪ್ರೀತಿಗೆ ಮನೆಯಲ್ಲಿ ವಿರೋಧ ಬರುವುದು ಸಹಜ. ಅದರಲ್ಲೂ ಹುಡುಗಿಯ ವಿಚಾರದಲ್ಲಿ ಇದು ಹೆಚ್ಚಾಗಿಯೇ ಕಾಣಬಹುದು. ವಿಪರ್ಯಾಸವೆಂದರೆ ಅಣ್ಣನ ಪ್ರೇಮದ ವಿಚಾರದಲ್ಲಿ ತಮ್ಮ ಬಲಿ*ಯಾದ ಘಟನೆ ನಡೆದಿದೆ.


    ಕಲಬುರಗಿ ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಗ್ರಾಮದಲ್ಲಿ ಸುಮಿತ್‌ ಮಲ್ಲಾಬಾದ್ ಎಂಬ 19 ವರ್ಷದ ಯುವಕನನ್ನು ಭೀಕ*ರವಾಗಿ ಕೊ*ಲೆ ಮಾಡಲಾಗಿದೆ. ತಂದೆ-ತಾಯಿಯೊಂದಿಗೆ ಮುಂಬೈನಲ್ಲಿ ವಾಸವಾಗಿದ್ದ ಸುಮಿತ್‌, ಮುಂಬೈನಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕಳೆದ ವಾರವಷ್ಟೇ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿದ್ದ. ಊರಲ್ಲಿ ಸುಮಿತ್ ಸಹೋದರ ಸಚಿನ್ ಮನೆಯಲ್ಲಿ ವಾಸವಾಗಿದ್ದ. ಸಚಿನ್ ನಾಗನಹಳ್ಳಿ ಗ್ರಾಮದ ತನ್ನದೆ ಏರಿಯಾದ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಈ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ ಸಾಕಷ್ಟು ಭಾರಿ ನ್ಯಾಯ ಪಂಚಾಯಿತಿ ಮಾಡಿದ್ದರಂತೆ‌. ಆದರೆ ಅದು ಬಗೆಹರೆದಿರಲಿಲ್ಲ. ನಿನ್ನೆ ಸಂಜೆ (ಸೆ.21) ಸಚಿನ್ ಮನೆಗೆ ಯುವತಿಯ ಸಹೋದರ ಮತ್ತು ಆತನ ಕೆಲ ಸ್ನೇಹಿತರು ಬಂದಿದ್ದಾಗ ಸಚಿನ್ ಮನೆಯಲ್ಲಿರದ ಕಾರಣ ಆತನ ತಾಯಿ ಮತ್ತು ಸಹೋದರನ ಜೊತೆ ಗಲಾಟೆ ತೆಗೆದಿದ್ದಾರೆ. ಬಳಿಕ ಗಲಾಟೆ ವಿಕೋಪಕ್ಕೆ ತೆರಳಿ ಸುಮಿತ್​​ನನ್ನ ಚಾ*ಕುವಿನಿಂದ ಚು*ಚ್ಚಿ ಎಸ್ಕೇಪ್ ಆಗಿದ್ದಾರೆ.
    ಇತ್ತ ಸುಮಿತ್‌ಗೆ ಚಾ*ಕು ಚುಚ್ಚಿ*ದ್ದನ್ನು ಕಂಡ ತಾಯಿ, ಮಗನನ್ನ ಉಳಿಸಿಕೊಳ್ಳಲು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹನ್ನೆರೆಡು ಗಂಟೆಗಳ ಕಾಲ ನಡೆದ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ (ಸೆ.22) ಸಾವನ್ನ*ಪ್ಪಿದ್ದಾನೆ.
    ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೇನೆ ಆಗಲಿ ಯುವತಿಯ ವಿಚಾರದಲ್ಲಿ ಏನು ಮಾಡದ ಅಮಾಯಕ ಯುವಕ ಬಲಿಯಾಗಿರೋದು ನಿಜಕ್ಕೂ ದುರಂತವೆ ಸರಿ.

    Continue Reading

    LATEST NEWS

    ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ತುಪ್ಪ ಸಾಗಿಸುವ ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಕೆ

    Published

    on

    ಆಂಧ್ರಪ್ರದೇಶ/ಮಂಗಳೂರು: ತಿರುಪತಿ ತಿರುಮಲದಲ್ಲಿ ಲಡ್ಡು ವಿವಾದ ಉಂಟಾದ ಬಳಿಕ ಸರಕಾರ ನಂದಿನಿ ತುಪ್ಪಕ್ಕೆ ಬೇಡಿಕೆ ಇಟ್ಟಿದೆ.  ಒಂದು ತಿಂಗಳ ಹಿಂದೆ ಟಿಟಿಡಿ ಕೆಎಂಎಫ್‌ಗೆ ಟೆಂಡರ್ ನೀಡಿದ ನಂತರ ನಂದಿನಿ ತುಪ್ಪ ಪೂರೈಕೆಯನ್ನು ಪುನಃ ಆರಂಭಿಸಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್ ಹೇಳಿದ್ದಾರೆ.

    ತಿರುಪತಿ ಲಡ್ಡು ವಿವಾದದ ಬಳಿಕ ಕೆಎಮ್‌ಎಫ್‌ ಹೈ ಅಲರ್ಟ್‌:
    “ನಾವು ಒಂದು ತಿಂಗಳ ಹಿಂದೆ ತುಪ್ಪವನ್ನು(ಟಿಟಿಡಿಗೆ) ಸರಬರಾಜು ಮಾಡುತ್ತಿದ್ದೇವೆ. ನಾವು ವಾಹನಗಳಿಗೆ ಜಿಪಿಎಸ್ ಸಿಸ್ಟಮ್ ಮತ್ತು ಜಿಯೋ ಲೊಕೇಶನ್ ಸಾಧನಗಳನ್ನು ಅಳವಡಿಸಿದ್ದೇವೆ. ಇದರಿಂದ ವಾಹನ ಎಲ್ಲಿ ನಿಲ್ಲುತ್ತವೆ ಎಂಬುದನ್ನು ನಾವು ಕಂಡುಹಿಡಿಯಬಹುದು. ಇದು ಎಲ್ಲಿಯೂ ಕಲಬೆರಕೆ ಮಾಡದಂತೆ ನೋಡಿಕೊಳ್ಳಲು ಸಹಾಯಕವಾಗುತ್ತದೆ” ಎಂದು ಜಗದೀಶ್ ತಿಳಿಸಿದ್ದಾರೆ.

    ಕೆಎಂಎಫ್, ಟಿಟಿಡಿಗೆ 350 ಟನ್ ತುಪ್ಪ ಪೂರೈಸುವ ಗುತ್ತಿಗೆ ಪಡೆದುಕೊಂಡಿದೆ. ಅಗತ್ಯ ಬಿದ್ದಾಗ ತುಪ್ಪ ಪೂರೈಕೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಸ್ವತಃ ಆಂಧ್ರ ಪ್ರದೇಶ ಮುಖ್ಯಮಂತ್ರಿ ಆರೋಪ ಮಾಡಿದ್ದರು. ಅಲ್ಲದೆ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.

    Continue Reading

    LATEST NEWS

    ಪಂಚೆ ಉಟ್ಟು ದೇಸೀ ಸ್ಟೈಲ್ ಅಡುಗೆ ಮಾಡಿದ ಬ್ರಿಟಿಷ್ ಬಾಣಸಿಗ..! ಫಿದಾ ಆದ ನೆಟ್ಟಿಗರು

    Published

    on

    ಹೆಲ್ಸ್ ಕಿಚನ್ ಹಾಗೂ ಮಾಸ್ಟರ್ ಚೆಫ್ ನಂತಹ ಜನಪ್ರಿಯ ಕಾರ್ಯಕ್ರಮಗಳ ನಿರೂಪಕ ಗಾರ್ಡನ್ ರಾಮ್ಸೆ ಇದೀಗ ತನ್ನ ವೇಷಭೂಷಣದ ಮೂಲಕ ಗಮನ ಸೆಳೆದಿದ್ದಾರೆ. ಬ್ರಿಟಿಷ್ ಸೆಲೆಬ್ರಿಟಿ ಬಾಣಸಿಗ ಗಾರ್ಡನ್ ಜೇಮ್ಸ್ ರಾಮ್ಸೆ ಅವರು ತಮ್ಮ ಡಿಫರೆಂಟ್ ಶೈಲಿಯ ಕುಕಿಂಗ್ ಗಳಿಗೆ ಹೆಸರುವಾಸಿಯಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಅವತಾರದಲ್ಲಿ ಅಡುಗೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸ್ಟೈಲ್‌ಆಗಿ ಪಂಚೆ ತೊಟ್ಟು ದಕ್ಷಿಣ ಕನ್ನಡ ಭಾರತೀಯ ಶೈಲಿಯ ಅಡುಗೆಗಳನ್ನು ಮಾಡಿದ್ದು ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ರೈಲನ್ನು ಸ್ಫೋಟಿಸಲು ಯತ್ನ

    ಈ ಕುರಿತ ವಿಡಿಯೋವನ್ನು historyinmemes(ಹಿಸ್ಟೋರಿ ಇನ್‌ ಮೀಮ್ಸ್) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸ್ಥಳೀಯ ಭಾರತೀಯ ಉಡುಗೆ ತೊಟ್ಟು ಅಡುಗೆ ಮಾಡಿದ ಗಾರ್ಡನ್ ರಾಮ್ಸೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೆ.20ರದು ಹಂಚಿಕೊಂಡಿದ್ದ ವೀಡಿಯೋ 12 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

    Continue Reading

    LATEST NEWS

    Trending