Connect with us

    LATEST NEWS

    10 ವರ್ಷ ಕಿರಿಯನ ಜೊತೆಗಿನ 8 ವರ್ಷದ ಸಂಬಂಧಕ್ಕೆ ಬಿಗ್ ಬ್ರೇಕ್; ‘ರಂಗೀಲಾ’ ಬೆಡಗಿಯಿಂದ ಅಭಿಮಾನಿಗಳಿಗೆ ಶಾಕ್

    Published

    on

    ಮೋಗಳೂರು/ಮುಂಬೈ; ಊರ್ಮಿಳಾ ಮಾತೋಂಡ್ಕರ್ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡು ನಂತರ ಟಾಪ್‌ ನಟಿಯಾಗಿ ಮಿಂಚಿದ್ದರು. ರಂಗೀಲಾ, ಸತ್ಯ, ಭೂತ, ಕೌನ್ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಆಳಿದವರು ಊರ್ಮಿಳಾ. 2016 ರಲ್ಲಿ 10 ವರ್ಷದ ಕಿರಿಯನೊಡನೆ ಮದುವೆಯಾಗಿದ್ದು, ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.


    ಕಪಲ್ ಮ್ಯಾರೇಜ್ ಸ್ಟೋರಿ:
    ಊರ್ಮಿಳಾ ಮಾತೋಂಡ್ಕರ್ ಹಾಗೂ ಪತಿ ಮೋಸಿನ್ ಅಖ್ತರ್ ಮಿರ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಬಾಲಿವುಡ್‌ನ ಡಿಸೈನರ್ ಮನೀಶ್ ಮಲ್ಹೋತ್ರಾ ಸೊಸೆಯ ಮದುವೆ ಸಂದರ್ಭ 2014ರಲ್ಲಿ. ಅದೇ ಅವರ ಮೊದಲ ಭೇಟಿಯಾಗಿದ್ದು, ಅದು ಪ್ರೀತಿಗೆ ತಿರುಗಿ ಎರಡು ವರ್ಷಗಳ ನಂತರ, 3 ಮಾರ್ಚ್ 2016 ರಂದು, ತಮ್ಮ ಕುಟುಂಬಗಳು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮುಂಬೈನಲ್ಲಿ ವಿವಾಹವಾಗಿದ್ದರು.


    ಮೊಹ್ಸಿನ್ ಅಖ್ತರ್ ಮಿರ್ ಪರಿಚಯ:
    ಮೊಹ್ಸಿನ್ ಅಖ್ತರ್ ಮಿರ್, ಕಾಶ್ಮೀರಿ ಮಾಡೆಲ್. 21 ನೇ ವಯಸ್ಸಿನಲ್ಲಿ ನಟನಾಗಲು ಮುಂಬೈಗೆ ಬಂದರು. 2007 ರಲ್ಲಿ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಟ್ರೋಫಿ ಗೆದ್ದಿದ್ದರು. ಇಟ್ಸ್ ಎ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. 2009 ರಲ್ಲಿ, ಅವರು ಮ್ಯಾನ್ಸ್‌ವರ್ಲ್ಡ್ ಮತ್ತು ನಂತರ ಲಕ್ ಬೈ ಚಾನ್ಸ್, ಮುಂಬೈ ಮಸ್ತ್ ಕ್ಯಾಲೆಂಡರ್ ಮತ್ತು ಬಿ.ಎ. ಪ್ರಾಜೆಕ್ಟ್ ಗಳಲ್ಲೂ ಕೆಲಸ ಮಾಡಿದ್ದಾರೆ.


    ವಿಚ್ಚೇದನಕ್ಕೆ ಕಾರಣ:
    ಊರ್ಮಿಳಾ ಮಾತೋಂಡ್ಕರ್ ವಿಚ್ಚೇದನದ ಬಗ್ಗೆ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ದಾಂಪತ್ಯ ಉಳಿಸಿಕೊಳ್ಳಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಕಳೆದ 8 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದಕ್ಕೆ ಊರ್ಮಿಳಾ ಮಾತೋಂಡ್ಕರ್ ಹಾಗೂ ಮೋಸಿನ್ ನಿರ್ಧರಿಸಿದ ಘಟನೆ ವರದಿಯಾಗಿದೆ. ಆದರೆ, ಈ ನಟಿ ಇನ್ನೂ ಈ ವಿಷಯದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.

    LATEST NEWS

    ಖ್ಯಾತ ಯೂಟ್ಯೂಬರ್‌ ಹರ್ಷಸಾಯಿ ವಿರುದ್ಧ ಪ್ರಕರಣ ದಾಖಲು; ಮದುವೆ ಹೆಸರಿನಲ್ಲಿ ನಟಿಗೆ ವಂ*ಚನೆ

    Published

    on

    ಸೋಷಿಯಲ್ ಮೀಡಿಯಾ ಇನ್​​ಫ್ಲೂಯೆನ್ಸರ್, ರೀಲ್ ವೀಡಿಯೋಗಳಿಂದ ಟ್ರೆಂಡಿಂಗ್ ಆಗಿದ್ದ ಪ್ರಭಾವಿ ಹರ್ಷ ಸಾಯಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬಡವರಿಗೆ ಸಹಾಯ ಮಾಡಿ ಹಣ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿದ್ದ ಯುವಕನ ಮೇಲೆ ವಂ*ಚನೆ ಹಾಗೂ ಅ*ತ್ಯಾಚಾರ ಆರೋಪ ವರದಿಯಾಗಿದೆ.

    ಏನಿದು ಪ್ರಕರಣ:
    ತೆಲುಗಿನ ಜನಪ್ರಿಯ ಯೂಟ್ಯೂಬರ್ ವಿರುದ್ಧ ಹೈದರಾಬಾದ್‌ನ ನರಸಿಂಗಿ ಪೊಲೀಸ್‌ ಠಾಣೆಯಲ್ಲಿ ಅತ್ಯಾ*ಚಾರ ಪ್ರಕರಣ ದಾಖಲಾಗಿದ್ದು, ಪ್ರೀತಿ ಮತ್ತು ಮದುವೆ ಹೆಸರಲ್ಲಿ ಹರ್ಷ ಸಾಯಿ ಮೋಸ ಮಾಡಿದ್ದಾನೆ ಎಂದು ನಟಿಯೊಬ್ಬಳು ದೂರಿನಲ್ಲಿ ತಿಳಿಸಿದ್ದಾಳೆ.
    ಅತ್ಯಾ*ಚಾರ ಮಾತ್ರವಲ್ಲದೆ 2 ಕೋಟಿ ರೂಪಾಯಿ ಹಣ ಪಡೆದು ವಂಚಿ*ಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದು, ಹರ್ಷ ಸಾಯಿ ತನ್ನ ಮೇಲೆ ಹಲವಾರು ಬಾರಿ ಲೈಂ*ಗಿಕ ದೌ*ರ್ಜನ್ಯ ಎಸಗಿದ್ದಾನೆ ಎಂದಿದ್ದಾರೆ. ಇದಲ್ಲದೆ, ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಲೈಂ*ಗಿಕ ಕಿರು*ಕುಳ ನೀಡುವಾಗ ನ*ಗ್ನ ಚಿತ್ರಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂಬುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
    ಸಂತ್ರಸ್ತೆ ತಮ್ಮ ಪರ ವಕೀಲರ ಜತೆ ಆಗಮಿಸಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಕೇಸ್‌ ಆಧರಿಸಿ ಆತನ ವಿರುದ್ಧ 328, 376, 354 ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಪೊಲೀಸರು.

    ತಂದೆಯ ಕೈವಾಡವಿದೆಯೆಂದು ಅನುಮಾನ:
    ಇದೇ ಕೇಸ್‌ನಲ್ಲಿ ಹರ್ಷಸಾಯಿ ಅವರ ತಂದೆ ರಾಧಾಕೃಷ್ಣ ಅವರ ಕೈವಾಡವೂ ಇದೆ ಎಂಬುವುದು ಯುವತಿಯ ಆರೋ*ಪ. ಹರ್ಷ ಸಾಯಿ ಯೂಟ್ಯೂಬ್‌ನಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದ. ಬಡವರಿಗೆ ಸಹಾಯ ಮಾಡುವ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತ ಫೇಮಸ್‌ ಆಗಿದ್ದರೂ, ಹಣ ಹಂಚುವ ವಿಚಾರಕ್ಕೂ ಕೇಸ್‌ ದಾಖಲಾಗಿತ್ತು. ಇದೀಗ ಅತ್ಯಾ*ಚಾರ ಎಂಬ ಗಂಭೀರ ಆ*ರೋಪವಿರುವುದು ತಿಳಿದು ಬಂದಿದೆ.

    Continue Reading

    LATEST NEWS

    ರುಚಿಕರ ಜೇನು ಸಂಗ್ರಹಿಸುವ ಜೇನುಗೂಡಿನೊಳಗಿನ ವ್ಯವಸ್ಥೆ ಹೇಗಿರುತ್ತೆ ಗೊತ್ತಾ ?

    Published

    on

    ಪುತ್ತೂರು: ಜೇನು ತಿನ್ನಲು ಎಷ್ಟು ರುಚಿಕರವೋ, ಅದರ ಸಂಗ್ರಹಕಾರರಾದ ಜೇನುನೊಣಗಳ ಜೀವನ ಪದ್ಧತಿಯೂ ಅಷ್ಟೇ ಸ್ವಾರಸ್ಯಕರ. ಜೇನುನೊಣಗಳ ಕುಟುಂಬದಲ್ಲಿ ಮೊದಲ ಪ್ರಾಶಸ್ತ್ಯ ರಾಣಿ ಜೇನಿಗಾದರೆ, ಬಳಿಕ ಗಂಡು ಜೇನು ಆ ಬಳಿಕ ದಿನಪೂರ್ತಿ ದುಡಿಯುತ್ತದೆ.

    ಜೇನು ಕುಟುಂಬದಲ್ಲಿ ಕೆಲಸಗಾರರು ಸಾವಿರಾರು (Worker Bee). ಆದರೆ ವಂಶಾಭಿವೃದ್ಧಿಗಾಗಿ ಗಂಡಸರ ಸಂಖ್ಯೆ ನೂರರ ‌ಆಸುಪಾಸು (Drone Bee). ಮಹಾರಾಣಿ ಒಬ್ಬಳೇ (Queen Bee). ರಾಣಿ ಜೇನು ನೊಣದ ಆಯಸ್ಸು ಸುಮಾರು 3 ರಿಂದ ಮೂರುವರೆ ವರ್ಷ. ರಾಣಿ ಜೇನಿನ ದೇಹದ ಗಾತ್ರ ಕೆಲಸಗಾರ ನೊಣಕ್ಕಿಂತ ಸ್ವಲ್ಪ ದೊಡ್ಡದು. ಈಕೆಗೆ ಕೆಲಸಗಾರ ನೊಣದಂತೆ ಮಧುಕೋಶ, ರಾಜಶಾಹಿರಸಗ್ರಂಥಿ, ಪರಾಗಬುಟ್ಟಿ ಇಲ್ಲ. ಹೊಟ್ಟೆ ಭಾಗ ಸ್ವಲ್ಪ ಉದ್ದ.

    ಲಕ್ಷ್ಮೀ ಹೆಬ್ಬಾಳ್ಕರ್‌ಗೆ 1 ಕೆಜಿ ಬಂಗಾರದ ಆಫರ್‌ ನೀಡಿದ ಮಾಜಿ ಸಚಿವ

    ರಾಣಿಯ ಹಾರಾಟ ಗಂಡುನೊಣದೊಂದಿಗೆ ಮಿಲನಕ್ಕಾಗಿ ಮಾತ್ರ ಸೀಮಿತವಾಗಿರುತ್ತದೆ. ಒಮ್ಮೆ ಮಿಲನವಾದ ಬಳಿಕ ರಾಣಿ ಜೇನು ಗೂಡಿನಿಂದ ಹೊರಹೋಗುವುದಿಲ್ಲ. ದೊಡ್ಡ ಹೊಟ್ಟೆಯನ್ನು ಎತ್ತಿಕೊಂಡು ಹೋಗುವುದು ಈಕೆಗೆ ಕಷ್ಟಸಾಧ್ಯವೂ ಆಗುವುದರಿಂದ ಗೂಡಿನ ಒಳಗೆಯೇ ಅದು‌ ಉಳಿದುಕೊಳ್ಳುತ್ತದೆ. ಮನೆಯಲ್ಲಿ ಜನ ಜಾಸ್ತಿಯಾದರೆ, ಸ್ಥಳೀಯವಾಗಿ ಮಕರಂದದೂಟ ಸಿಗದಿದ್ದರೆ, ಗೂಡಿಗೆ ಇನ್ಯಾರದ್ದೋ ಹಾವಳಿ ಜಾಸ್ತಿಯಾದಾಗ ಕೆಲಸಗಾರರ ಒತ್ತಡಕ್ಕೆ ಮಣಿದು ಹೊಸ ಮನೆ ಹುಡುಕಿ ರಾಣಿ ಜೇನು ಹಾರಾಡುವುದುಂಟು.

    ಕೆಲಸಗಾರರು ತಂದು ಇಟ್ಟದ್ದನ್ನು, ಬಾಯಿಗೆ ಕೊಟ್ಟದನ್ನು ತಿನ್ನುವುದು, ಮೊಟ್ಟೆ ಇಡುವುದು ರಾಣಿ ಜೇನಿನ ಕೆಲಸ. ಈಕೆಯ ಮೈ ಉಜ್ಜಲು, ಮೊಟ್ಟೆ ಇಡುವುದಕ್ಕಾಗಿ ವ್ಯವಸ್ಥೆ ಮಾಡಿಕೊಡಲು, ಮಕ್ಕಳನ್ನು ನೋಡಿಕೊಳ್ಳಲು ಸುಮಾರು ಜನ ಕೆಲಸಗಾರ ಜೇನುಗಳು ಜೇನುಗೂಡಿನೊಳಗೆ ಸಿದ್ಧವಿರುತ್ತವೆ.

    ರಾಣಿ ಗಂಡುನೊಣದೊಂದಿಗೆ ಮಿಲನವಾಗುವುದು ಜೀವನದಲ್ಲಿ ಒಮ್ಮೆ ಮಾತ್ರ. ಈ ವೇಳೆ ಗರ್ಭಾಶಯದಲ್ಲಿ 15-20 ಲಕ್ಷ ವೀರ್ಯಾಣುಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಮಿಲನ ಕಾರ್ಯ ಆಕಾಶದಲ್ಲಿ ನಡೆಯುತ್ತದೆ. ರಾಣಿ ಜೇನು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಗಂಡು‌ ನೊಣದೊಂದಿಗೆ ಸೇರುತ್ತದೆ. ಬಳಿಕ ದಿನಕ್ಕೆ ಸಾವಿರ ಮೊಟ್ಟೆ ಇಡುವ ಸಾಮರ್ಥ್ಯವನ್ನು ರಾಣಿ ಜೇನು ಪಡೆಯುತ್ತದೆ.

    ರಾಣಿ ದೇಹದಲ್ಲಿ ಸುಮಾರು 40 ಬಗೆಯ ರಾಸಾಯನಿಕ ಪೆರಮೋನ್/ ವಸ್ತುಸಾರ ಉತ್ಪಾದನೆ ಆಗುವುದು. ಎಲ್ಲರನ್ನು ಒಗ್ಗಟ್ಟಿನಲ್ಲಿ ಇಟ್ಟುಕೊಳ್ಳಲು, ಜೇನು ತರುವ ಕಾರ್ಯಕ್ಕೆಂದು ಹೊರ ಹೋದ ಕೆಲಸಗಾರರು ಮತ್ತೆ ಅದೇ ಮನೆಗೆ ಸೇರಲು‌ ಪೆರಮೋನ್ ಕಾರಣ. ಒಂದು ವೇಳೆ ರಾಣಿ ವಯಸ್ಸಿನ ಕಾರಣದಿಂದಲೋ, ಅನಾರೋಗ್ಯದಿಂದಲೋ ವಸ್ತುಸಾರ ಹಂಚಲು ಅಸಮರ್ಥಳಾದರೆ, ಕೆಲಸಗಾರರು ರೊಚ್ಚಿಗೇಳುತ್ತವೆ. ಮತ್ತು ರಾಣಿ ಜೇನಿನ ಸ್ಥಾನಕ್ಕೆ ಹೊಸ ರಾಣಿ ಜೇನನ್ನು ಹುಡುಕುವ ಕಾರ್ಯವನ್ನೂ ಈ ಕೆಲಸಗಾರ ಜೇನುಗಳು ಮಾಡುತ್ತವೆ.

    Continue Reading

    LATEST NEWS

    ಶಿರೂರು ಗುಡ್ಡ ಕುಸಿತ: 2 ತಿಂಗಳ ನಂತರ ಲಾರಿ ಚಾಲಕ ಅರ್ಜುನ್ ಮೃ*ತದೇಹ ಪತ್ತೆ..!

    Published

    on

    ಕಾರವಾರ: ಶಿರೂರು ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ‌ಆರನೇ ದಿನ ಮುಂದುವರಿದಿದ್ದು , ನದಿಯಲ್ಲಿ ಮುಳುಗಿದ್ದ ಕೇರಳದ ಲಾರಿ ಪತ್ತೆ ಯಾಗಿದೆ ಎಂದು ಕಾರ್ಯಾಚರಣೆ ಮಾಡುತ್ತಿರುವ ತಂಡ ತಿಳಿಸಿದೆ. ಅದರಲ್ಲಿ ಅರ್ಜುನ್ ಮೃ*ತದೇಹ ಕೂಡ ಪತ್ತೆಯಾಗಿರುವ ಕುರಿತು ಉ.ಕ ಎಸ್ಪಿ ಮಾಹಿತಿ ನೀಡಿದ್ದಾರೆ.

    ಡ್ರಜ್ಜಿಂಗ್ ಯಂತ್ರ ಹಾಗೂ ಕ್ರೇನ್ ಮೂಲಕ ಲಾರಿ ಮೇಲೆತ್ತುವ ಪ್ರಕ್ರಿಯೆ ಕೆಲವೇ ಕ್ಷಣದಲ್ಲಿ ಆರಂಭವಾಗಲಿದೆ. ಶಿರೂರು ಮಣ್ಣು ಕುಸಿತದ ಘಟನೆಯಲ್ಲಿ ಇಬ್ಬರ ಶ*ವ ಇನ್ನು ಪತ್ತೆಯಾಗಬೇಕಿದೆ. ಕೇರಳರ ಲಾರಿ ಪತ್ತೆಯಾಗಿದ್ದು, ಅದರ ಚಾಲಕ ಅರ್ಜುನ್ ಸಹ ಸಿಕ್ಕಿದಂತಾಗಿದೆ.

    Continue Reading

    LATEST NEWS

    Trending