Connect with us

    DAKSHINA KANNADA

    ಮಂಗಳೂರಿನ ಪಡೀಲ್ ಬಳಿ ಆಂಬ್ಯುಲೆನ್ಸ್ ಪಲ್ಟಿ; ಹೃದ್ರೋಗಿ ದಾಸಪ್ಪ ರೈ ಮೃ*ತ್ಯು

    Published

    on

    ಪುತ್ತೂರು: ಪುತ್ತೂರಿನ ಆ್ಯಂಬುಲೆನ್ಸ್ ನಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಮಂಗಳೂರಿನಲ್ಲಿ ಪಲ್ಟಿಯಾಗಿ ಹೃದ್ರೋಗಿ ಕೃಷಿ ದಾಸಪ್ಪ ರೈ ಎಂಬವರು ಸಾವನ್ನಪ್ಪಿದ್ದಾರೆ. ಇಂದು(ಸೆ.25) ಬೆಳಿಗ್ಗೆ ನಸುಕಿನ ಜಾವ ಈ ಘಟನೆ ನಡೆದಿದೆ.

    ಗುಜರಾತ್: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿ, 7 ಮಂದಿ ಸಾ*ವು

    ರಾಮಕುಂಜ ಹಳೆನೇರೆಂಕಿ ನಿವಾಸಿ ಕೃಷಿಕ ದಾಸಪ್ಪ ರೈ  ಎಂಬವರು ಸಾವನ್ನಪ್ಪಿದವರು. ಎದೆ ನೋವು ಕಾಣಿಸಿಕೊಂಡ ದಾಸಪ್ಪ ರೈ ಅವರನ್ನು ತಡರಾತ್ರಿ ಪುತ್ತೂರು ಮಹಾವೀರ ಅಸ್ಪತ್ರೆಗೆ ಕರೆದು ಕೊಂಡು ಬಂದಾಗ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ವಠಾರದಲ್ಲಿದ್ದ ಇನ್ನೊಂದು ಆ್ಯಂಬುಲೆನ್ಸ್ ನಲ್ಲಿ – ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದು ಹೋಗುತ್ತಿರುವಾಗ ಮಂಗಳೂರು ಪಡೀಲು ಸಮೀಪ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ನಲ್ಲಿದ್ದ ಹೃದ್ರೋಗಿ ದಾಸಪ್ಪ ರೈ ಮೃತಪಟ್ಟಿದ್ದರು. ಜೊತೆಯಲ್ಲಿದ್ದ  ನಳಿನಿ ಎಂಬವರು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಸಪ್ಪ ಅವರ ಪುತ್ರ ಹರ್ಷಿತ್ ಮತ್ತು ಸಂಬಂಧಿ ಅಲ್ಪಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ.

    DAKSHINA KANNADA

    ಸಿನೆಮಾ ವಿಚಾರವಾಗಿ ಚರ್ಚೆಯಲ್ಲಿ ಜಾತಿ ನಿಂದನೆ ಆರೋಪ : ಪೊಲೀಸ್ ಆಯುಕ್ತರಿಗೆ ದೂರು

    Published

    on

    ಮಂಗಳೂರು:  ಕಲ್ಜಿಗ ಸಿನೆಮಾದ ಪ್ರಮೋಷನ್‌ ಮಾಡಿದ ಯೂಟ್ಯೂಬ್‌ ಚಾನೆಲ್‌ ಒಂದರಲ್ಲಿ ಜಾತಿ ನಿಂದನೆ ಮಾಡಲಾಗಿದೆ ಎಂದು ಪಂಬದ ಸಮೂದಾಯದ ಪ್ರತಿನಿಧಿಗಳು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ  ದೂರು ನೀಡಿ ಸೂಕ್ತ ಜರುಗಿಸುವಂತೆ ಮನವಿ ಮಾಡಿದ್ದಾರೆ.

    ಕಲ್ಜಿಗ ಸಿನೆಮಾ ಬಿಡುಗಡೆಗೂ ಮೊದಲೇ ವಿವಾದ ಹುಟ್ಟಿಕೊಂಡಿದ್ದು, ಸಿನೆಮಾದಲ್ಲಿ ದೈವ ನರ್ತನದ ವಿಚಾರವಾಗಿ ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಚಿತ್ರತಂಡ ವಿರೋಧಿಸಿದ ಹಲವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದು, ಸಿನೆಮಾದಲ್ಲಿ ದೈವಕ್ಕೆ ಯಾವುದೇ ರೀತಿಯ ಅವಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದಾದ ಬಳಿಕ ಚಿತ್ರ ಬಿಡುಗಡೆಗೊಂಡು ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಸಿನೆಮಾದ ವಿಶ್ಲೇಷಣೆಯ ಮೂಲಕ ಪ್ರಮೋಷನ್ ಮಾಡಿದ್ದ ಯೂಟ್ಯೂಬ್ ಚಾನೆಲ್‌ ಒಂದರಲ್ಲಿ ಪರ ವಿರೋಧದ ಚರ್ಚೆ ನಡೆದಿತ್ತು. ಚಾನೆಲ್‌ನ ಕಮೆಂಟ್ ಬಾಕ್ಸ್‌ನಲ್ಲಿ ಚರ್ಚೆಯ ವೇಳೆ ವ್ಯಕ್ತಿಯೊಬ್ಬ ದೈವ ಚಾಕರಿ ಮಾಡುವ ಪಂಬದ ಸಮೂದಾಯವನ್ನು ನಿಂದಿಸಿ ಕಮೆಂಟ್ ಹಾಕಿದ್ದ. ತೀರ ಕೀಳು ಮಟ್ಟದ ಪದ ಬಳಕೆಯ ಮೂಲಕ ಪಂಬದ ಸಮೂದಾಯಕ್ಕೆ ಅವಮಾನ ಮಾಡಿದ್ದ.

    ಕಲ್ಜಿಗದಲ್ಲಿ ದೈವಕ್ಕೆ ಯಾವುದೇ ಅಪಚಾರ ಆಗಿಲ್ಲ; ಸಿನೆಮಾ ನೋಡಿ ಆಮೇಲೆ ಮಾತನಾಡಿ ಎಂದ ಸಿನೆಮಾ ತಂಡ

    ಕಲ್ಜಿಗ ಸಿನೆಮಾ ವಿಚಾರವಾಗಿ ಆರಂಭವಾಗಿದ್ದ ಈ ವಾದ ವಿವಾದ ಕೊನೆಗೆ ವ್ಯಯಕ್ತಿಕ ಜಾತಿ ನಿಂದನೆ ತಲುಪಿದ ವಿಚಾರವಾಗಿ ಪಂಬದ ಸಮಾಜ ಅಸಮಾದಾನ ವ್ಯಕ್ತಪಡಿಸಿದೆ. ದೈವ ಚಾಕರಿಯವನ್ನು ಅಶ್ಲೀಲ ಪದಗಳಿಂದ ನಿಂದಿಸಿದ ವ್ಯಕ್ತಿಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

    Continue Reading

    DAKSHINA KANNADA

    ಮಂಗಳೂರನ್ನೇ ಬೆಚ್ಚಿಬೀಳಿಸಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

    Published

    on

    ಮಂಗಳೂರು:  ಈ ಪ್ರಕರಣದ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಧೀಶರು ಸಪ್ಟೆಂಬರ್‌ 13 ರಂದು ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಕಾದಿರಿಸಿದ್ದರು.  ಸ. 24 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

    ಮಂಗಳೂರಿನ ಸೂಟರ್‌ಪೇಟೆಯ ಜೋನಸ್‌ ಸ್ಯಾಮ್ಸನ್‌ ಯಾನೆ ಜೋನಸ್‌ ಜೌಲಿನ್‌ ಸ್ಯಾಮ್ಸನ್‌ (35) ಮತ್ತು ವಿಕ್ಟೋರಿಯಾ ಮಥಾಯಿಸ್‌ (47) ಜೀವಾವಧಿ ಶಿಕ್ಷೆಗೊಳಗಾಗದವರು. ಇನೋರ್ವ ಆರೋಪಿ ರಾಜು (34) ಎಂಬಾತನಿಗೆ ಆರೂವರೆ ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ಘಟನೆಯ ವಿವರ:
    ಶ್ರೀಮತಿ ಶೆಟ್ಟಿ ಕುರಿ ಫ‌ಂಡ್‌ ನಡೆಸುತ್ತಿದ್ದರು. ಅದರಲ್ಲಿ 2 ಸದಸ್ಯತ್ವ ಪಡೆದಿದ್ದ ಜೋನಸ್‌ ಮಾಸಿಕ ಕಂತು ಪಾವತಿಸಿರಲಿಲ್ಲ. ಅದನ್ನು ಕೇಳುವುದಕ್ಕಾಗಿ 2019ರ ಮೇ 11ರಂದು ಶ್ರೀಮತಿ ಶೆಟ್ಟಿ ಅವರು ಜೋನಸ್‌ನ ಮನೆಗೆ ಹೋಗಿದ್ದರು. ಆಗ ಜೋನಸ್‌ ಮರದ ತುಂಡಿನಿಂದ ಶ್ರೀಮತಿ ಶೆಟ್ಟಿಯವರ ತಲೆಗೆ ಹೊಡೆದಿದ್ದ. ಇದರಿಂದ ಪ್ರಜ್ಞಾಹೀನರಾಗಿ ಬಿದ್ದಿದ್ದ ಶ್ರೀಮತಿ ಶೆಟ್ಟಿ ಅವರನ್ನು ಜೋನಸ್‌ ಮತ್ತು ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ದೇಹವನ್ನು 29 ತುಂಡುಗಳನ್ನಾಗಿ ಮಾಡಿದ್ದರು. ಶ್ರೀಮತಿ ಶೆಟ್ಟಿಯವರ ದೇಹದ ಮೇಲಿದ್ದ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದರು. ಅದೇ ದಿನ ರಾತ್ರಿ ಜೋನಸ್‌ ದೇಹದ ತುಂಡುಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ನಗರದ ಹಲವೆಡೆ ಇಟ್ಟುಹೋಗಿದ್ದ. ಆರೋಪಿಗಳಿಗೆ ರಾಜು ಎಂಬಾತ ಒಂದು ದಿನ ಉಳಿದುಕೊಳ್ಳಲು ಆತನ ಮನೆಯಲ್ಲಿ ಆಶ್ರಯ ನೀಡಿದ್ದ. ಇದಕ್ಕೆ ಪ್ರತಿಯಾಗಿ ಆತನಿಗೂ ಆರೋಪಿಗಳು ಚಿನ್ನಾಭರಣ ನೀಡಿದ್ದರು.

    ಈ ಪ್ರಕರಣದ ಕುರಿತು ಮಂಗಳೂರಿನ ಕದ್ರಿ ಪೊಲೀಸ್‌ ಠಾಣೆಯ ನಿರೀಕ್ಷಕ ಮಹೇಶ್‌ ಎಂ. ತನಿಖೆ ಕೈಗೊಂಡಿದ್ದರು. ಫೋರೆನ್ಸಿಕ್‌ ವಿಭಾಗದ ವೈದ್ಯಾಧಿಕಾರಿ ಡಾ| ಜಗದೀಶ್‌ ರಾವ್‌ ಅವರು ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು. ಇನ್‌ಸ್ಪೆಕ್ಟರ್‌ ಶಾಂತಾರಾಂ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ಅವರು ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

    ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾ*ವು

    ಆರೋಪಿ ಜೋನಸ್‌ ಮತ್ತು ವಿಕ್ಟೋರಿಯಾಳಿಗೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 302ರ ಜತೆ 34ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರೂ. ದಂಡ, ದಂಡ ಪಾವತಿಸಲು ವಿಫ‌ಲವಾದರೆ 1 ವರ್ಷ ಜೈಲು, ಕಲಂ 201ರ ಜತೆ 34ರ ಅಡಿಯಲ್ಲಿ 7 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ, ಕಲಂ 392ರ ಜತೆ 34ರ ಅಡಿಯಲ್ಲಿ 5 ವರ್ಷಗಳ ಸಾದಾ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫ‌ಲರಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. 3ನೇ ಆರೋಪಿ ರಾಜುಗೆ ಕಲಂ 414ರ ಅಡಿಯಲ್ಲಿ ಆರೂವರೆ ತಿಂಗಳ ಸಾದಾ ಸಜೆ ಮತ್ತು 5,000 ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 75 ಸಾವಿರ ರೂ.ಗಳನ್ನು ಶ್ರೀಮತಿ ಶೆಟ್ಟಿ ಅವರ ತಾಯಿಗೆ ನೀಡುವಂತೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿಯೂ ಪರಿಹಾರ ನೀಡುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.

    Continue Reading

    DAKSHINA KANNADA

    ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಯುವಕನಿಂದ ಸೆ*ಕ್ಸ್ ಆಫರ್..!?

    Published

    on

    ಮಂಗಳೂರು: ಹಾಡು ಹಗಲಲ್ಲೇ ಹೆಣ್ಣುಮಕ್ಕಳು ರಸ್ತೆಯಲ್ಲಿ ನಡೆದಾಡುವುದು ಹೇಗೆ ಎಂಬ ಪ್ರಶ್ನೆ ಮೂಡುವಂತಹ ಹೇಯ ಘಟನೆಯೊಂದು ಮಂಗಳೂರಿನಲ್ಲಿ ನಡೆದು ಹೋಗಿದೆ.

    ಸೆ.24 ಬೆಳಗ್ಗೆ 10.30 ರ ಸುಮಾರಿಗೆ ಮಂಗಳೂರಿನ ನವಭಾರತ್ ಸರ್ಕಲ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಧರ್ಭ ಯುವತಿಯರ ಬಳಿ ಬಂದ ಕಾಮುಕ ಯುವತಿಯರಿಗೆ ಕಿರುಕುಳ ನೀಡಿದ್ದಲ್ಲದೆ ಹಣ ಕೊಡುತ್ತೇನೆ ಬರುತ್ತೀರಾ ಅಂತಾ ಸೆ*ಕ್ಸ್ ಆಫರ್ ಕೂಡ ನೀಡಿದ್ದಾನೆ. ತಕ್ಷಣ ಯುವತಿಯರು ಯುವಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ಆತನನ್ನು ತಳ್ಳಿ, ಶರ್ಟ್ ಬಿಚ್ಚಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿ ಶಬರಿ ಎಂಬಾತನ‌ ಮೇಲೆ ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ.

    Continue Reading

    LATEST NEWS

    Trending