ನಟಿ ರಮ್ಯಾ ಅವರ ಪ್ರೀತಿಯ ನಾಯಿ ನಾಪತ್ತೆಯಾಗಿದೆ. ನಾಯಿ ಅಂದ್ರೆ ತುಂಬಾ ಇಷ್ಟಪಡುವ ಸ್ಯಾಂಡಲ್ವುಡ್ ಕ್ವೀನ್ ತಮ್ಮ ನಾಯಿ ನಾಪತ್ತೆಯಾಗಿರುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದಾರೆ.
ಬೆಂಗಳೂರು: ನಟಿ ರಮ್ಯಾ ಅವರ ಪ್ರೀತಿಯ ನಾಯಿ ನಾಪತ್ತೆಯಾಗಿದೆ. ನಾಯಿ ಅಂದ್ರೆ ತುಂಬಾ ಇಷ್ಟಪಡುವ ಸ್ಯಾಂಡಲ್ವುಡ್ ಕ್ವೀನ್ ತಮ್ಮ ನಾಯಿ ನಾಪತ್ತೆಯಾಗಿರುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದಾರೆ.
ನನ್ನ ನಾಯಿ ಕಾಣೆಯಾಗಿದೆ. ಅವನನ್ನು ಹುಡುಕಲು ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಟಿ ಕ್ಯಾಪ್ಶನ್ ಬರೆದಿದ್ದಾರೆ.
ನಾಪತ್ತೆ! ನಮ್ಮ ಪ್ರೀತಿಯ ನಾಯಿಯನ್ನು ಹುಡುಕಲು ಸಹಾಯ ಮಾಡಿ ಎಂದು ಬರೆದಿದ್ದಾರೆ.
ಚಾಂಪ್ ಹೆಸರಿನ ನಾಯಿ ಇದಾಗಿದ್ದು ಕಪ್ಪು ಬಣ್ಣದಲ್ಲಿದೆ. ಇದಕ್ಕೆ ಭಾಗಶಃ ಕಣ್ಣು ಕಾಣಿಸುವುದಿಲ್ಲ.
ಸುರಕ್ಷಿತವಾಗಿ ನಾಯಿಯನ್ನು ಮರಳಿಸುವವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಬರೆಯಲಾಗಿದೆ.
ಮೇ 6ರಂದು ಕೊನೆಯಬಾರಿಗೆ ನೋಡಲಾಗಿದೆ. ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರೋಡ್ ಬೆಂಗಳೂರಿನಿಂದ ನಾಪತ್ತೆಯಾಗಿದೆ.
ನಿಮಗೆ ಮಾಹಿತಿ ಸಿಕ್ಕಿದರೆ 7012708137 ಇಲ್ಲಿ ಸಂಪರ್ಕಿಸಿ ಎಂದು ಬರೆಯಲಾಗಿದೆ.