Connect with us

LATEST NEWS

ಮಂಗಳೂರು-ಶಿರಾಡಿ-ಬೆಂಗಳೂರು ರಸ್ತೆ ಕಾಮಗಾರಿ ಅವ್ಯವಸ್ಥೆಯನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ನಟ ಜಗ್ಗೇಶ್

Published

on

ಬೆಂಗಳೂರು: ಮಂಗಳೂರು-ಶಿರಾಡಿ-ಬೆಂಗಳೂರು ರಸ್ತೆಯ ಚತುಷ್ಪಥ ರಸ್ತೆ ಕಾಮಗಾರಿಯ ದುರಾವಸ್ಥೆಯನ್ನು ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿರುವ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಅವರು ಇದರ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.


ಮಂಗಳೂರು -ಸಕಲೇಶಪುರದಿಂದ ಮಾರನಹಳ್ಳಿ ರಸ್ತೆ ಹಾಗು 16 ಕಿಲೋ ಮೀಟರ್ ದೂರದ ದೋಣಿಗಲ್ನಿಂದ ಮಾರನಹಳ್ಳಿ ರಸ್ತೆಯ ಕಾಮಗಾರಿ ಶ್ರೀಘ್ರ ಮುಕ್ತಾಯಗೊಳಿಸಲು ರಾಜ್ಯಸಭೆಯಲ್ಲಿ ಅವರು ಒತ್ತಾಯಿಸಿದ್ದಾರೆ.

ರಸ್ತೆ ಸಂಪೂರ್ಣ ಕೆಟ್ಟು ಹೋಗಿರುವುದರಿಂದ ಸಂಚಾರಕಕ್ಕೆ ಭಾರೀ ಕಷ್ಟಕರವಾಗಿದೆ. ಅಲ್ಲದೆ ಇದು ಆರ್ಥಿಕತೆಯ ಮೇಲೂ ಭಾರೀ ಹೊಡೆತ ನೀಡುತ್ತಿದೆ.

ರಾತ್ರಿ ವೇಳೆಯಲ್ಲಿ ಸಂಚಾರ ಅಂತೂ ಅಪಾಯಕಾರಿಯಾಗಿದೆ. ಪ್ರಯಾಣಿಕರ ಮತ್ತು ಚಾಲಕರ ಸುರಕ್ಷತೆಯ ನಿಟ್ಟಿನಲ್ಲೂ ಈ ರಸ್ತೆಯ ಬಗ್ಗೆ ಗಮನಹರಿಸಬೇಕಾಗಿದೆ.

ವಾಣಿಜ್ಯ, ಕೈಗಾರಿಕೆಗಳ ಮೇಲೆ ಭಾರೀ ಹೊಡೆತ ನೀಡುತ್ತಿದೆ. ಆರ್ಥಿಕತೆಗೆ ಹೊಡೆತ ಬೀಳವುದರಿಂದ ಇದು ಸಹಜವಾಗಿಯೇ ಸರಕಾರದ ಬೊಕ್ಕಸಕ್ಕೂ ನಷ್ಟವನ್ನು ಉಂಟು ಮಾಡುತ್ತಿದೆ.

ಇನ್ನು ಮಳೆಗಾಲದ ಸಂದರ್ಭದಲ್ಲಂತೂ ಈ ಮಾರ್ಗದ ಸಂಚಾರ ಭಾರೀ ಅಪಾಯಕಾರಿಯಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿಕೊಂಡು ರಸ್ತೆಯ ದುಸ್ಥಿತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

bangalore

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕಪಲ್ ‘ರೊಮ್ಯಾನ್ಸ್..’! ಪ್ರಿಯತಮಗೆ ಚುಂಬಿಸಿದ ಯುವತಿ.!!ವೀಡಿಯೋ ವೈರಲ್

Published

on

ಬೆಂಗಳೂರು:  ಅಗಾಗ ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳ ಆಲಿಂಗನದ ವೀಡಿಯೋ ವೈರಲ್ ಆಗುತ್ತಲೇ ಇದೆ.  ಇದೀಗ ಬೆಂಗಳೂರಿನಲ್ಲಿಯೂ ಇಂಥದ್ದೇ ಒಂದು ಘಟನೆ ಮರುಕಳಿಸಿದೆ. ಕಪಲ್ಸ್ ಇಬ್ಬರು ಒಬ್ಬರನೊಬ್ಬರು ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

bangalore metro

ಬೆಂಗಳೂರು ನಮ್ಮ ಮೆಟ್ರೋದ ಬಾಗಿಲಿನ ಬಳಿ ಯುವತಿ-ಯವಕರಿಬ್ಬರೂ ನಿಂತುಕೊಂಡಿದ್ದು ಒಬ್ಬರನೊಬ್ಬರು ತಬ್ಬಿಕೊಂಡಿದ್ದಾರೆ. ಯುವತಿ ಯುವಕನ ಕೆನ್ನೆಗೆ ಮುತ್ತು ನೀಡಿದ್ದಾಳೆ. ಈ ದೃಶ್ಯವನ್ನು ಮೆಟ್ರೋದಲ್ಲಿದ್ದ ಪ್ರಯಾಣಿಕರೋರ್ವರ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋವನ್ನು KPSB 52 ಎಂಬ ಎಕ್ಸ್​ ಖಾತೆಯಲ್ಲಿ ಪೋಸ್ಟ್​​​ ಮಾಡಿದ್ದು ‘ನಮ್ಮ ಮೆಟ್ರೋದಲ್ಲಿ ಇದೇನು ಅಸಭ್ಯವರ್ತನೆ’ ಎಂದು ಪ್ರಶ್ನಿಸಿದ್ದಾರೆ. ಇನ್ನು ಮೆಟ್ರೋದಲ್ಲಿದ್ದ ಇತರ ಪ್ರಯಾಣಿಕರು ಈ ಜೋಡಿಯ ರೋಮ್ಯಾನ್ಸ್‌ನಿಂದಾಗಿ ಮುಜುಗರಕ್ಕೊಳಗಾಗಿದ್ದಾರೆ.

Read More..; 15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!

ದೆಹಲಿಯಲ್ಲೂ ನಡೆದಿತ್ತು ಈ ಘಟನೆ:

ಈ ಹಿಂದೆ ದೆಹಲಿಯ ಮೆಟ್ರೋ ಸ್ಟೇಷನ್‌ ನಲ್ಲಿ ದಂಪಂತಿ ರೊಮ್ಯಾನ್ಸ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ದಂಪತಿ ಮೈಮರೆತು ರೋಮ್ಯಾನ್ಸ್ ಮಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಅಲ್ಲದೇ ಇಬ್ಬರೂ ಲಿಪ್‌ಲಾಕ್‌ ಕೂಡಾ ಮಾಡಿದ್ದಾರೆ. ದಂಪತಿಯ ಸರಸಸಲ್ಲಾಪವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬ ವೀಡಿಯೋ ಮಾಡಿದ್ದಾನೆ. ಇನ್ನು ದೆಹಲಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಜನರನ್ನು ಮುಜುಗರಕ್ಕೆ ಒಳಪಡಿಸುತ್ತಿದೆ. ಈ ಬಗ್ಗೆ ಮೆಟ್ರೋ ಆಡಳಿತ ಮಂಡಳಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದರೂ ಜನರು ಮಾತ್ರ ಕ್ಯಾರೇ ಅನ್ನುತ್ತಿಲ್ಲ.

 

 

Continue Reading

LATEST NEWS

SSLC ಫಲಿತಾಂಶ ಪ್ರಕಟಿಸಲು ದಿನಾಂಕ ನಿಗದಿ; ಯಾವಾಗ?

Published

on

ಬೆಂಗಳೂರು: 2023-24ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ದಿನಗಣನೆ ಶುರುವಾಗಿದೆ. ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವಾರವೇ ರಾಜ್ಯದಲ್ಲಿ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.

2023-24ನೇ ಸಾಲಿನ SSLC ಪರೀಕ್ಷೆ-1 ಕಳೆದ ಮಾರ್ಚ್‌ 25 ರಿಂದ ಏಪ್ರಿಲ್ 6, 2024ರವರೆಗೆ ನಡೆದಿತ್ತು. ಪರೀಕ್ಷೆ-1 ಬರೆದಿರುವ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಕೊನೆಗೂ ಕಾಯುವಿಕೆಯ ಸಮಯ ಕೊನೆಯಾಗುತ್ತಿದೆ.

ಈ ಬಾರಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗುವುದು ತಡವಾಗಿದೆ. SSLC ಮೌಲ್ಯಮಾಪನ ಈಗಾಗಲೇ ಸಂಪೂರ್ಣವಾಗಿದ್ದು, ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ.

ನಾಳೆ ಅಂದ್ರೆ ಮೇ 7ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮತದಾನ ಮುಗಿದ ಎರಡು ದಿನದಲ್ಲಿ SSLC ಫಲಿತಾಂಶ ಪ್ರಕಟಿಸಲು ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿದೆ. ಇದೇ ಮೇ 8 ಬುಧವಾರ ಇಲ್ಲವೇ ಮೇ 9ರ ಗುರುವಾರ SSLC ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮೇ 10 ಬಸವ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದೆ. ಹೀಗಾಗಿ ಮೇ 9ರೊಳಗೆ SSLC ಫಲಿತಾಂಶ ಪ್ರಕಟ ಮಾಡಲು ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಸಿಕ್ಕಿದೆ.

Continue Reading

LATEST NEWS

Elvish Yadav Faces Money Laundering Probe: What’s the Case About?

Published

on

Lucknow: Popular YouTuber Siddharth Yadav, known as Elvish Yadav, is under investigation for alleged money laundering linked to using snake venom as a recreational drug at his parties. The Enforcement Directorate has filed a case under the Prevention of Money Laundering Act (PMLA), following an FIR and charge sheet from the Noida police regarding the snake venom case.

 

The probe aims to trace funds from the snake venom business and their potential use in organizing parties. Elvish Yadav and others involved will be questioned by the Enforcement Directorate, according to reports.

Elvish Yadav was arrested by Noida Police on March 17 in connection with the snake venom case but was later released on bail. He faces charges under various laws, including the Narcotic Drugs and Psychotropic Substances (NDPS) Act, Wildlife Protection Act, and the Indian Penal Code (IPC).

The case originated from a complaint by the NGO People for Animals (PFA) last November. Five people were arrested and released on bail after snake charmers were found with venomous snakes and vials of snake venom in a Noida banquet hall. Elvish Yadav was reportedly not present during the raid.youtuber

Continue Reading

LATEST NEWS

Trending