LATEST NEWS
ಕುಸ್ತಿಪಟುಗಳ ಪ್ರತಿಭಟನೆ; ತನಿಖೆ ಮುಗಿದ ನಂತರ ಕ್ರಮ ಎಂದ ಕೇಂದ್ರ ಸಚಿವ
ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು,
ತನಿಖೆ ಮುಗಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಫೆಡರೇಶನ್ನಿಂದ ವಜಾಗೊಳಿಸುವಂತೆ ಮತ್ತು ಅವರನ್ನು ಬಂಧಿಸುವಂತೆ ಒತ್ತಾಯಿಸಿ ದೇಶದ ಕೆಲವು ಪ್ರಮುಖ ಕುಸ್ತಿಪಟುಗಳು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ನಂತರ ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
LATEST NEWS
ಇವಿಎಂನಲ್ಲಿ ಪ್ರಧಾನಿ ಮೋದಿ ಚಿತ್ರ ಕಾಣದೆ ಕಂಗಾಲಾದ ಮಹಿಳೆ; ಅಧಿಕಾರಿಗಳೊಂದಿಗೆ ಜಗಳ!
ಮಂಗಳೂರು/ನವದೆಹಲಿ : ದೇಶದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ಶುಕ್ರವಾರ ಬಿರುಸಾಗಿ ನಡೆಯುತ್ತಿದೆ. ಈ ನಡುವೆ ಮೊದಲ ಹಂತದ ಚುನಾವಣೆ ಸಂದರ್ಭ ನಡೆದಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ರಾಜಸ್ಥಾನದಲ್ಲಿ ನಡೆದಿತ್ತು.
ಈ ವೇಳೆ ಮತದಾರರೊಬ್ಬರು ಅಧಿಕಾರಿಗಳೊಂದಿಗೆ ಜಗಳವಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇವಿಎಂನಲ್ಲಿ ಪ್ರಧಾನಿ ಮೋದಿ ಚಿತ್ರ ಪ್ರದರ್ಶಿಸಿಲ್ಲ ಏಕೆ ಎಂದು ಮಹಿಳೆ ಮತಗಟ್ಟೆ ಅಧಿಕಾರಿಗಳೊಂದಿಗೆ ಜಗಳ ಮಾಡಿಕೊಂಡಿದ್ದಾರೆ. ಈ ಸುದ್ದಿ ಸದ್ಯ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ ಅವರೂ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಘಟನೆ?
ಏಪ್ರಿಲ್ 19 ರಂದು ರಾಜಸ್ಥಾನದಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. ಪಿಪ್ರಾಲಿಯ ಬೂತ್ಗೆ ಮಹಿಳೆಯರ ಗುಂಪೊಂದು ಮತ ಚಲಾಯಿಸಲು ಬಂದಿದೆ. ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು. ಅಷ್ಟರಲ್ಲಿ ಒಬ್ಬ ಮಹಿಳೆ ಮತ ಚಲಾಯಿಸುವಾಗ, ಇವಿಎಂ ಮಶೀನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಾಣಿಸಿಲ್ಲ ಎಂದು ಆಕೆ ಕಂಗಾಲಾಗಿದ್ದಾಳೆ.
ಮಹಿಳೆ ಪೋಲಿಂಗ್ ಅಧಿಕಾರಿಗಳನ್ನು ಕರೆದು ನನ್ನ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಎಲ್ಲಿದೆ ಎಂದು ಕಿಡಿಕಾರಿದ್ದಾರೆ ಎಂದು ತಿಳಿದು ಬಂದಿದೆ. ಆಗ ಅಲ್ಲಿದ್ದ ಅಧಿಕಾರಿಗಳು ವಸ್ತು ಸ್ಥಿತಿಯನ್ನು ವಿವರಿಸಿದರು.
ಫೋಟೋ ಹಾಗೂ ಚುನಾವಣೆ ಚಿಹ್ನೆ ಪ್ರಧಾನಿ ಮೋದಿ ಅವರದ್ದಲ್ಲ. ಅವರ ಪಕ್ಷವನ್ನು ಪ್ರತಿನಿಧಿಸುವ ಅಭ್ಯರ್ಥಿಯದ್ದಾಗಿದೆ ಎಂದು ತಿಳಿಸಿದರು. ಅಲ್ಲದೆ, ಇದು ಮೋದಿ ಅವರ ಚುನಾವಣೆಯಲ್ಲ. ಅವರ ಪಕ್ಷದ ಚುನಾವಣೆ. ಅವರ ಪಕ್ಷದ ಪರವಾಗಿ ಈ ಕ್ಷೇತ್ರದಲ್ಲೂ ಒಬ್ಬ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು. ಇದಾದ ಬಳಿಕ ಅವರು ಮತ ಚಲಾಯಿಸಿದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಭಾವುಕರಾದ ಪ್ರಧಾನಿ ಮೋದಿ :
ಈ ಸುದ್ದಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ತಲುಪಿದೆ. ಈ ಬಗ್ಗೆ ಪ್ರಧಾನಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತಾಯಂದಿರು ಮತ್ತು ಸಹೋದರಿಯರ ಈ ವಾತ್ಸಲ್ಯವನ್ನು ನೋಡಿದ ನಂತರ ನನ್ನ ಕಣ್ಣಲ್ಲಿ ನೀರು ಬಂದಿದೆ. ಈ ಋಣವನ್ನು ತೀರಿಸುವ ಸಂಕಲ್ಪ ನನಗೂ ಇದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಲಕ್ಷ್ಮಿಕಾಂತ್ ಅವರೇ, ಇದು ನಮ್ಮ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ನಾವೆಲ್ಲಾ ಈ ಸಣ್ಣ ಸಣ್ಣ ಕೆಲಸಗಳತ್ತವೂ ಗಮನ ಹರಿಸಬೇಕಿದೆ. ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.
ಈ ಘಟನೆಯ ಪತ್ರಿಕೆಯ ಕಟಿಂಗ್ ಅನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪಕ್ಷದ ಕಾರ್ಯಕರ್ತ ಲಕ್ಷ್ಮೀಕಾಂತ್ ಭಾರದ್ವಾಜ್ ಅವರು ಫೋಟೋದೊಂದಿಗೆ ಈ ವಿಚಾರ ಹಂಚಿಕೊಂಡಿದ್ದರು. ಅದನ್ನು ರಿಟ್ವೀಟ್ ಮಾಡಿದ್ದಾರೆ ಪ್ರಧಾನಿ ಮೋದಿ.
ಭಾರತದಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ಶುಕ್ರವಾರ (ಏ.26)ರಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಫಲಿತಾಂಶಗಳು ಜೂನ್ 4 ರಂದು ಹೋರ ಬೀಳಲಿದೆ.
FILM
ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಉಡುಪಿ: ಇಂದು ಬೆಳಂಬೆಳಗ್ಗೆ ರಾಜಕೀಯ ನಾಯಕರು, ಜನಸಾಮಾನ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ ಉಡುಪಿಯ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ.
ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 197 ಕ್ಕೆ ಆಗಮಿಸಿ ಮತ ಚಲಾಯಿಸಿದರು. ರಕ್ಷಿತ್ ಶೆಟ್ಟಿ ಮನೆಯ ಮುಂಭಾಗದಲ್ಲೇ ಇರುವ ಮತಗಟ್ಟೆಗೆ ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದರು. ರಕ್ಷಿತ್ ಶೆಟ್ಟಿ ಈ ಸಂದರ್ಭದಲ್ಲಿ ಸೆಲೆಬ್ರೆಟಿಯನ್ನು ಕಂಡ ಇತರ ಮತದಾರರು ಹರ್ಷಚಿತ್ತರಾಗಿ ಸೆಲ್ಫೆ ಕ್ಲಿಕಿಸಲು ಮುಂದಾದ ಘಟನೆ ನಡೆಯಿತು.
DAKSHINA KANNADA
ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು
ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
Muniraja
01/06/2023 at 2:33 PM
Will the police department allows if common people done the same mistake?