Connect with us

STATE

ಆ್ಯಸಿಡ್‌ ಎರಚಿದ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

Published

on

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ ಪ್ರಕರಣದ ನಾಲ್ವರು ಆರೋಪಿಗಳಿಗೆ, 20 ಲಕ್ಷ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.


2015ರ ಎ. 18 ರಂದು ಸಂತ್ರಸ್ತೆ ಎಂದಿನಂತೆ ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿ ಮನೆಗೆ ತೆರಳಿ ಮನೆಯ ಗೇಟ್ ತೆಗೆಯುತ್ತಿ ದ್ದಾಗ ಆರೋಪಿಗಳಾದ ಗಣೇಶ್, ಕಬೀರ್, ವಿನೋದ್, ಅಬ್ದುಲ್ ಮಜೀದ್  ಎಂಬವರು ಮಹಿಳೆಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದರು.

ಶೃಂಗೇರಿ ಪೊಲೀಸ್ ಠಾಣೆಯ ಅಂದಿನ ಠಾಣಾಧಿಕಾರಿ ಸುಧೀರ್ ಹೆಗ್ಡೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸಂತ್ರಸ್ತೆಯ ಪರ ಸರ್ಕಾರಿ ಅಭಿಯೋಜಕರಾದ ಮಮತ ಬಿ.ಎಸ್. ಅವರು ವಾದ ಮಂಡಿಸಿದ್ದರು.

LATEST NEWS

ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣ; ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನಿರ್ಬಂಧ..!

Published

on

ಬೆಂಗಳೂರು: ಹಾಸನದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಸರು ಬಳಸದಂತೆ ಬೆಂಗಳೂರಿನ ನ್ಯಾಯಾಲಯ ನಿರ್ಬಂಧ ಹೇರಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳು ತಮ್ಮ ಹೆಸರು ಬಳಸುವುದನ್ನು ನಿರ್ಬಂಧಿಸುವಂತೆ ಕೋರಿ‌ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಎಚ್. ಡಿ ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿ ಹೆಸರು ಬಳಸಂತೆ ಮಾಧ್ಯಮಗಳು, ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ‘ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಮಾಧ್ಯಮಗಳಲ್ಲಿ ನಮ್ಮ ಹೆಸರು ಬಳಸುವುದರಿಂದ ತಮ್ಮ ಘನತೆ, ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.‌ ಮನವಿ ಆಲಿಸಿದ ನ್ಯಾಯಾಧೀಶರು ಮಾಧ್ಯಮಗಳು ಸತ್ಯಕ್ಕೆ ದೂರವಾದ, ಆಧಾರ ರಹಿತ ಸುದ್ದಿಗಳನ್ನು ಅರ್ಜಿದಾರರ ವಿರುದ್ಧ ಪ್ರಸಾರ ಮಾಡದಂತೆ ನಿರ್ಬಂಧ‌ ವಿಧಿಸಿ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ್ದಾರೆ.

 

Continue Reading

bangalore

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕಪಲ್ ‘ರೊಮ್ಯಾನ್ಸ್..’! ಪ್ರಿಯತಮಗೆ ಚುಂಬಿಸಿದ ಯುವತಿ.!!ವೀಡಿಯೋ ವೈರಲ್

Published

on

ಬೆಂಗಳೂರು:  ಅಗಾಗ ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳ ಆಲಿಂಗನದ ವೀಡಿಯೋ ವೈರಲ್ ಆಗುತ್ತಲೇ ಇದೆ.  ಇದೀಗ ಬೆಂಗಳೂರಿನಲ್ಲಿಯೂ ಇಂಥದ್ದೇ ಒಂದು ಘಟನೆ ಮರುಕಳಿಸಿದೆ. ಕಪಲ್ಸ್ ಇಬ್ಬರು ಒಬ್ಬರನೊಬ್ಬರು ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

bangalore metro

ಬೆಂಗಳೂರು ನಮ್ಮ ಮೆಟ್ರೋದ ಬಾಗಿಲಿನ ಬಳಿ ಯುವತಿ-ಯವಕರಿಬ್ಬರೂ ನಿಂತುಕೊಂಡಿದ್ದು ಒಬ್ಬರನೊಬ್ಬರು ತಬ್ಬಿಕೊಂಡಿದ್ದಾರೆ. ಯುವತಿ ಯುವಕನ ಕೆನ್ನೆಗೆ ಮುತ್ತು ನೀಡಿದ್ದಾಳೆ. ಈ ದೃಶ್ಯವನ್ನು ಮೆಟ್ರೋದಲ್ಲಿದ್ದ ಪ್ರಯಾಣಿಕರೋರ್ವರ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋವನ್ನು KPSB 52 ಎಂಬ ಎಕ್ಸ್​ ಖಾತೆಯಲ್ಲಿ ಪೋಸ್ಟ್​​​ ಮಾಡಿದ್ದು ‘ನಮ್ಮ ಮೆಟ್ರೋದಲ್ಲಿ ಇದೇನು ಅಸಭ್ಯವರ್ತನೆ’ ಎಂದು ಪ್ರಶ್ನಿಸಿದ್ದಾರೆ. ಇನ್ನು ಮೆಟ್ರೋದಲ್ಲಿದ್ದ ಇತರ ಪ್ರಯಾಣಿಕರು ಈ ಜೋಡಿಯ ರೋಮ್ಯಾನ್ಸ್‌ನಿಂದಾಗಿ ಮುಜುಗರಕ್ಕೊಳಗಾಗಿದ್ದಾರೆ.

Read More..; 15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!

ದೆಹಲಿಯಲ್ಲೂ ನಡೆದಿತ್ತು ಈ ಘಟನೆ:

ಈ ಹಿಂದೆ ದೆಹಲಿಯ ಮೆಟ್ರೋ ಸ್ಟೇಷನ್‌ ನಲ್ಲಿ ದಂಪಂತಿ ರೊಮ್ಯಾನ್ಸ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ದಂಪತಿ ಮೈಮರೆತು ರೋಮ್ಯಾನ್ಸ್ ಮಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಅಲ್ಲದೇ ಇಬ್ಬರೂ ಲಿಪ್‌ಲಾಕ್‌ ಕೂಡಾ ಮಾಡಿದ್ದಾರೆ. ದಂಪತಿಯ ಸರಸಸಲ್ಲಾಪವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬ ವೀಡಿಯೋ ಮಾಡಿದ್ದಾನೆ. ಇನ್ನು ದೆಹಲಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಜನರನ್ನು ಮುಜುಗರಕ್ಕೆ ಒಳಪಡಿಸುತ್ತಿದೆ. ಈ ಬಗ್ಗೆ ಮೆಟ್ರೋ ಆಡಳಿತ ಮಂಡಳಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದರೂ ಜನರು ಮಾತ್ರ ಕ್ಯಾರೇ ಅನ್ನುತ್ತಿಲ್ಲ.

 

 

Continue Reading

DAKSHINA KANNADA

15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!

Published

on

ಮಂಗಳೂರು ( ಜಾರ್ಖಂಡ್‌ ): ಆತ ತಿಂಗಳಿಗೆ 15 ಸಾವಿರ ಸಂಬಳ ಪಡೆಯುವ ಒಬ್ಬ ಸಾಮಾನ್ಯ ನೌಕರ. ಆದ್ರೆ ಆತನ ಮನೆಗೆ ಇಡಿ ದಾಳಿ ಮಾಡಿ ಬರೋಬ್ಬರಿ 30 ಕೋಟಿ ಹಣವನ್ನು ಜಪ್ತಿ ಮಾಡಿದೆ. ಇದು ಜಾರ್ಖಂಡ್‌ನಲ್ಲಿ ನಡೆದ ಘಟನೆಯಾಗಿದ್ದು, ಹತ್ತು ಸಾವಿರ ಲಂಚ ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಇಡಿ  ಸಾಮಾನ್ಯ ನೌಕರನ ಮನಗೆ ದಾಳಿ ಮಾಡಿತ್ತು. ಅಲ್ಲಿ ಅಡಗಿಸಿಟ್ಟಿದ್ದ ಹಣ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹಣ ಎಣಿಸಲು ಮೆಷಿನ್ ಹಾಗೂ ಹೆಚ್ಚುವರಿ ನೌಕರರನ್ನು ಮನೆಗೆ ಕರೆಸಿಕೊಂಡಿದ್ದಾರೆ.

ನೌಕರನ ಮನೆಗೆ ಲಂಚದ ಹಣ…!

ಜಾರ್ಖಂಡ್‌ ನ ಸಚಿವ ಅಲಂಗೀರ್ ಆಲಂ ಅವರ ಖಾಸಗಿ ಕಾರ್ಯದರ್ಶಿ ಮನೆ ಮೇಲೆ ರಾಂಚಿಯ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಅಲಂಗೀರ್ ಆಲಂ ಅವರ ಸಚಿವಾಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಲ್ಲಿನ ಲಂಚದ ಹಣ ನೌಕರನ ಮನೆಗೆ ಹೋಗುತ್ತದೆ ಅನ್ನೋ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸಚಿವರ ಆಪ್ತ ಕಾರ್ಯದರ್ಶಿಯ ಅಡಿಯಲ್ಲಿ ಮಾಸಿಕ 15 ಸಾವಿರಕ್ಕೆ ಕೆಲಸ ಮಾಡುತ್ತಿದ್ದ ನೌಕರನ ಮನೆಗೆ ದಾಳಿ ಮಾಡಿದಾಗ ಇಷ್ಟೊಂದು ಪ್ರಮಾಣದ ಹಣ ಪತ್ತೆಯಾಗಿದೆ.

ವಿಡಿಯೋ ನೋಡಿ :

ಹತ್ತು ಸಾವಿರ ಲಂಚದ ಹಿಂದೆ ಬಿದ್ದಿದ್ದ ಇಡಿ..!

ಕಳೆದ ವರ್ಷ ಹತ್ತು ಸಾವಿರ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಇಂಜೀನಿಯರ್ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಇಂಜೀನಿಯರ್ ಅವರ ಹೇಳಿಕೆಯನ್ನು ದಾಖಲಿಸಿದಾಗ ಲಂಚದ ಹಣ ಸಚಿವರಿಗೆ ತಲುಪಿಸಲಾಗುತ್ತದೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದರು. ಬಳಿಕ ಜಾರ್ಖಂಡ್‌ನ ಗ್ರಾಮೀಣ ಅಭಿವೃದ್ದಿ ಸಚಿವ ಅಲಂಗೀರ್ ಆಲಂ ಹಾಗೂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಹೆಸರು ಮುನ್ನಲೆಗೆ ಬಂದಿತ್ತು . ಹೀಗಾಗಿ ಸಂಜೀವ್‌ ಲಾಲ್ ಅವರ ಬಳಿ ನೌಕರನಾಗಿದ್ದ ವ್ಯಕ್ತಿಯ ಮನೆಗೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!

ಜಾರ್ಖಂಡ್ ಕಾಂಗ್ರೆಸ್ ಸರ್ಕಾರದ ಸಚಿವ…!

ಅಲಂಗೀರ್ ಆಲಂ ಜಾರ್ಖಂಡ್‌ನ ಪಾಕುರ್ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದಾರೆ. ಈ ಹಿಂದೆ 2006 ರಿಂದ 2009 ರ ವರೆಗೆ ಅವರು ಸ್ಪೀಕರ್ ಕೂಡಾ ಆಗಿದ್ದರು. 2023ರ ಡಿಸೆಂಬರ್‌ ತಿಂಗಳಲ್ಲಿ ಜಾರ್ಖಂಡ್‌ನ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಉದ್ಯಮಿ ಧೀರಜ್ ಸಾಹು ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮನೆಯಲ್ಲಿ 350 ಕೋಟಿಯಷ್ಟು ಹಣ ಪತ್ತೆಯಾಗಿತ್ತು. ಈ ವೇಳೆ ಧೀರಜ್ ಸಾಹು ಅದು ಮದ್ಯದ ವ್ಯವಹಾರದ ಹಣವಾಗಿದ್ದು, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು.

Continue Reading

LATEST NEWS

Trending