Friday, August 12, 2022

ಮಂಗಳೂರು: ಬಸ್‌ಪಾಸ್‌ ಕಾಲಾವಧಿ ವಿಸ್ತರಿಸುವಂತೆ ABVP ಆಗ್ರಹ

ಮಂಗಳೂರು: ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಯಾವುದೇ ಅಧಿಕ ಶುಲ್ಕ ವಿಧಿಸದೆ ಬಸ್‌ ಪಾಸ್‌ನ ಕಾಲಾವಧಿ ವಿಸ್ತರಿಸುವಂತೆ ಆಗ್ರಹಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.


ಈ ಬಗ್ಗೆ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ‘ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಬಸ್‌ ಪಾಸ್ ಕೊಡಬೇಕೆಂದು ಈ ಮೊದಲು ಕೂಡಾ ವಿದ್ಯಾರ್ಥಿ ಪರಿಷತ್ ಕೆಎಸ್‌ಆರ್‌ಟಿಸಿ ನಿಗಮದಿಂದ ಮನವಿಯನ್ನು ಮಾಡಿಕೊಂಡೇ ಬಂದಿದೆ.

ಕೊರೋನಾದ ಕಾರಣದಿಂದ ಮೇ ತಿಂಗಳಿನಲ್ಲಿ ಮುಗಿಯಬೇಕಿದ್ದ ಶೈಕ್ಷಣಿಕ ವರ್ಷ ಸಪ್ಟೆಂಬರ್‌ನ ಕೊನೆಯಲ್ಲಿ ಅಂತ್ಯವಾಗುತ್ತಿದೆ. ಹಾಗೆಯೇ ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಅಕ್ಟೋಬರ್‌ನಲ್ಲಿ ಮುಗಿಯುತ್ತದೆ. ಹೀಗಿರುವಾಗ 3 ತಿಂಗಳು ವಿದ್ಯಾರ್ಥಿಗಳು ಬಸ್‌ಪಾಸ್‌ ಇಲ್ಲದೆ ಬಸ್ಸಿನಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.


ಆದರೆ ನಿನ್ನೆ ಒಂದು ನೋಟೀಸ್ ಬರುತ್ತೆ ಏನಂದ್ರೆ ಕೇವಲ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅಧಿಕ ಶುಲ್ಕ ಕಟ್ಟಿಸಿಕೊಂಡು 3 ತಿಂಗಳ ಕಾಲ ವಿಸ್ತರಣೆ ಮಾಡಬೇಕು ಅಂತ.

ಆದರೆ ವಿದ್ಯಾರ್ಥಿ ಪರಿಷತ್ ಈ ಸಂದರ್ಭ ಸಾರಿಗೆ ಸಚಿವರಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ ಯಾವುದೇ ಅಧಿಕ ಶುಲ್ಕ ಕಟ್ಟಿಸಿಕೊಳ್ಳದೆ ಈಗ ಇರುವ ಬಸ್‌ ಪಾಸ್‌ನ್ನು ಅವಧಿ ಮುಗಿಯುವವರೆಗೂ ನೀಡಬೇಕು.

ಇಲ್ಲವಾದಲ್ಲಿ ಮುಂದಿನ ದಿನ ವಿದ್ಯಾರ್ಥಿಗಳು ಉಗ್ರವಾದ ಹೋರಾಟಕ್ಕಿಳಿಯಬಹುದು’ ಎಂದು ಕಿಡಿಕಾರಿದರು.

LEAVE A REPLY

Please enter your comment!
Please enter your name here

Hot Topics

ಪಿ.ಯು.ಸಿ ಪೂರಕ ಪರೀಕ್ಷೆ: ಆ.12ರಿಂದ ಆ.25ರವರೆಗೆ ನಿಷೇಧಾಜ್ಞೆ

ಮಂಗಳೂರು: ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ಹಿನ್ನೆಲೆ ಜಿಲ್ಲಾ ಪೊಲೀಸ್‌ ಘಟಕ ವ್ಯಾಪ್ತಿಯ 4 ಪರೀಕ್ಷಾ ಕೇಂದ್ರಗಳಲ್ಲಿ ಆ.12ರಿಂದ ಆ.25ರ ವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ.ಪರೀಕ್ಷೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ...

ACBಯನ್ನು ಕಿತ್ತೆಸೆದ ಹೈಕೋರ್ಟ್‌

ಬೆಂಗಳೂರು: ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಸರ್ಕಾರ ಹುಟ್ಟುಹಾಕಿದ್ದ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿ ಆದೇಶ ಹೊರಡಿಸಿದೆ.ಅಲ್ಲದೇ ಎಸಿಬಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್...

ಮಂಗಳೂರು: ಚಪ್ಪಲಿಯಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಲಕ್ಷ ರೂ ಮೌಲ್ಯದ ಚಿನ್ನ ವಶ

ಮಂಗಳೂರು: ದುಬೈನಿಂದ ಮಂಗಳೂರಿಗೆ ಬಂದಿಳಿದ ಕೇರಳ ಮೂಲದ ಪ್ರಯಾಣಿಕನೊಬ್ಬ ಚಪ್ಪಲಿಯಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಆ.10 ರಂದು ದುಬೈನಿಂದ ಮಂಗಳೂರಿಗೆ ಬಂದಿಳಿದ ಸ್ಪೈಸ್‌ ಜೆಟ್‌...