ಉಡುಪಿ: ಹಣದ ಆಸೆಗೆ ಹೆತ್ತವರನ್ನೇ ಯಾಮಾರಿಸಿ ಅಪಹರಣದ ನಾಟಕವಾಡಿದ ಯುವಕನನ್ನು ಪೊಲೀಸರು ಗೋವಾದಲ್ಲಿ ಪತ್ತೆ ಹಚ್ಚಿದ ಘಟನೆ ಉಡುಪಿಯಲ್ಲಿ ನಡೆದಿದೆ.
ವರುಣ್ ನಾಯಕ್ ಎಂಬವನು ಹೆತ್ತವರಿಗೆ ವಂಚಿಸಿದ ಯುವಕ ಎಂದು ಗುರುತಿಸಲಾಗಿದೆ.
ತಾನು ಕಿಡ್ನಾಪ್ ಆಗಿದ್ದೇನೆ ಎಂದು ಸುಳ್ಳು ಹೇಳಿ ಪೋಷಕರಿಗೆ ಕರೆ ಮಾಡಿ ಐದು ಲಕ್ಷ ಕೊಡಿ ಎಂದು ಅಮ್ಮನಿಗೆ ಕರೆ ಮಾಡಿದ್ದ. ಇದರಿಂದ ಗಾಬರಿಗೊಂಡ ಹೆತ್ತವರು ಉಡುಪಿ ನಗರ ಠಾಣಾ ಪೊಲೀಸರಿಗೆ ದೂರು ನೀಡಿದರು.
ಅಪಹರಣವನ್ನು ಪತ್ತೆಹಚ್ಚಲು ಪೊಲೀಸರ ತಂಡ ರಚನೆ ಮಾಡಿ ಲೊಕೇಶನ್ ಪತ್ತೆ ಹಚ್ಚಿದಾಗ ಯುವಕ ಗೋವಾದಲ್ಲಿ ಇರುವುದು ಬೆಳಕಿಗೆ ಬಂದಿದೆ. ಪೊಲೀಸರ ತಂಡ ಗೋವಾಕ್ಕೆ ತೆರಳಿದಾಗ ವರುಣ್ ಸ್ನೇಹಿತರೊಂದಿಗೆ ಕ್ಯಾಸಿನೋದಲ್ಲಿ ಮೋಜು ಮಸ್ತಿಯಲ್ಲಿ ನಿರತನಾಗಿದ್ದ.
ಪೋಷಕರಲ್ಲಿದ್ದ ಹಣ ದೋಚಲು ಸಂಚು ಮಾಡಿದ್ದಾಗಿ ಯುವಕ ಒಪ್ಪಿಕೊಂಡಿದ್ದಾನೆ.
ಪೋಷಕರ ಹಣ ಎಗರಿಸುವ ಉದ್ದೇಶ ಹಾಗೂ ಪೊಲೀಸರ ಸಮಯ ವ್ಯರ್ಥ ಮಾಡಿದ್ದಕ್ಕೆ ಪೊಲೀಸರು ಆತನ ಮೇಲೆ ಕೇಸ್ ದಾಖಲಿಸಿ 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.