LATEST NEWS
ಶಬರಿಮಲೆ ಅಯ್ಯಪ್ಪನ ದರ್ಶನಕ್ಕೂ ಆಧಾರ್ ಕಡ್ಡಾಯ
ತಿರುವನಂತಪುರ: ಶಬರಿಮಲೆಗೆ ತೆರಳುವ ಅಯ್ಯಪ್ಪನ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿ ಮಹತ್ವದ ಸೂಚನೆ ನೀಡಿದೆ. ಕಾರ್ತಿಕ ಮಾಸವಾಗಿರುವುದರಿಂದ ಈ ಸಂದರ್ಭದಲ್ಲಿ ಹಲವು ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಇರುತ್ತದೆ. ಶಬರಿಮಲೆಗೆ ತೆರಳುವ ಅಯ್ಯಪ್ಪನ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿ ಮಹತ್ವದ ಸೂಚನೆ ನೀಡಿದೆ. ಕಾರ್ತಿಕ ಮಾಸವಾಗಿರುವುದರಿಂದ ಈ ಸಂದರ್ಭದಲ್ಲಿ ಹಲವು ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಇರುತ್ತದೆ.
ಇನ್ನು ಕಾರ್ತಿಕ ಮಾಸದಲ್ಲಿ ಮಾಲೆ ಧರಿಸುವ ಸ್ವಾಮಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ತಿರುವಾಂಕೂರು ದೇವಸ್ಥಾನ ಮಂಡಳಿ ತಿಳಿಸಿದೆ.ಅಯ್ಯಪ್ಪ ದರ್ಶನಕ್ಕೆ ದಿನಕ್ಕೆ 70 ಸಾವಿರ ಭಕ್ತರಿಗೆ ಅವಕಾಶ ನೀಡುವುದಾಗಿ ತಿಳಿಸಿರುವ ತಿರುವಾಂಕೂರು ದೇವಸ್ಥಾನದ ಅಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ.
ಮಕರವಿಳಕ್ಕು ಋತುವಿನ ಪ್ರಕಾರ ಆನ್ಲೈನ್ ಬುಕಿಂಗ್ ಆಧಾರದ ಮೇಲೆ ಪ್ರತಿದಿನ 70,000 ಭಕ್ತರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು, ತ್ವರಿತ ಬುಕಿಂಗ್ ಆಧಾರದ ಮೇಲೆ ಇನ್ನೂ 10,000 ಜನರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
BELTHANGADY
ಉಜಿರೆ: ಅಸೌಖ್ಯದಿಂದ ಕಾಲೇಜು ವಿದ್ಯಾರ್ಥಿ ಮೃ*ತ್ಯು
ಉಜಿರೆ : ಅಲ್ಪಕಾಲದ ಅಸೌಖ್ಯದಿಂದ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಗೌಡ ಪಿ.ಕೆ ಎಂಬ ವಿದ್ಯಾರ್ಥಿ ನಿನ್ನೆ (ನ.12) ನಿ*ಧನರಾಗಿದ್ದಾರೆ.
ಮಂಡ್ಯ ಮೂಲದ ಚಿನ್ಮಯ್ ಗೌಡ, ಹಾಸ್ಟೆಲ್‌ನಲ್ಲಿ ವಾಸವಿದ್ದು, ಅಲ್ಲಿಂದಲೇ ಕಾಲೇಜಿಗೆ ಹೋಗುತ್ತಿದ್ದರು.
ಉತ್ತಮ ಕಬಡ್ಡಿ ಕ್ರೀಡಾಪಟುವಾಗಿದ್ದ ಚಿನ್ಮಯ್ , ಕಾಲೇಜಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು.
ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಚಿನ್ಮಯ್ ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರೂ, ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿದ್ದಾರೆ.
LATEST NEWS
ವಾಮಚಾರಕ್ಕೆ ಇಟ್ಟ ತೆಂಗಿನಕಾಯಿ ಸೇವಿಸಿದ ಕಾಲೇಜು ಉಪನ್ಯಾಸಕ ; ಮುಂದೇನಾಯ್ತು ಗೊತ್ತಾ ??
ಮಂಗಳೂರು/ರಾಯಚೂರು: ವಾಮಾಚಾರಕ್ಕೆ ಬಳಸಿದ್ದ ತೆಂಗಿನಕಾಯಿಯನ್ನು ಉಪನ್ಯಾಸಕರೊಬ್ಬರು ತಿಂದ ಘಟನೆ ರಾಯಚೂರು ಪಟ್ಟಣದ ಮುದಗಲ್ಲ ರಸ್ತೆಯಲ್ಲಿನ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ನೋಡಿ ಭಯಪಡುವ ಈ ಕಾಲದಲ್ಲಿ ಉಪನ್ಯಾಸಕರೊಬ್ಬರು ಅದನ್ನು ತಿಂದು ಬಳಿಕ ಮೌಢ್ಯತೆ ಬಗೆಗೆ ಜಾಗೃತಿ ಮೂಡಿಸಿದರು.
ಅಶೋಕ ಸರಕಾರಿ ಕಾಲೇಜಿನ ಗೇಟಿಯಲ್ಲಿ ಯಾರೋ ತೆಂಗಿನಕಾಯಿ, ನಿಂಬೆ ಹಣ್ಣು, ಕುಂಕುಮವನ್ನಿಟ್ಟು ಹೋಗಿದ್ದರು. ಕಾಲೇಜಿನ ಸಮಯದಲ್ಲಿ ಅಲ್ಲಿಗೆ ಬಂದ ಉಪನ್ಯಾಸಕರು ಅದನ್ನು ನೋಡಿ ನಿಂಬೆಹಣ್ಣು ಕತ್ತರಿಸಿದ್ದು, ಅದರ ರಸ ಸವಿದರು. ತೆಂಗಿನಕಾಯಿ ಹೊಡೆದು ಎಲ್ಲಾ ಉಪನ್ಯಾಸಕ ಹಾಗೂ ಪ್ರಾಂಶುಪಾಲರು ತಿಂದು ಮೌಢ್ಯತೆಯ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ.
ಇದನ್ನೂ ಓದಿ : ಬಸ್ ಹತ್ತುವಾಗ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಸಾ*ವು!
ಇಂತಹ ಪ್ರಕರಣಗಳು ಮುದಗಪ್ಪ ರಸ್ತೆಗಳಲ್ಲಿ ಹೆಚ್ಚಾಗಿದೆ. ಮುಂಜಾನೆ ವಾಯುವಿಹಾರಕ್ಕೆಂದು ತೆರಳುವ ಜನರು ಯುವಕರು ಇಂತಹ ವಾಮಾಚಾರ ಪರಿಕರಗಳು ಎಲ್ಲೆಡೆ ಬಿದ್ದಿರುವುದನ್ನು ನೋಡಿ ಭಯಗೊಳ್ಳುತ್ತಾರೆ. ಇಂತಹ ಕೃತ್ಯ ದಿನೇ ದಿನೇ ಹೆಚ್ಚುತ್ತಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
LATEST NEWS
ಸಹೋದರನ ಜೊತೆಯಲ್ಲೇ ಸಂಬಂ*ಧ …! ಜೀ*ವಾಂತ್ಯಗೊಳಿಸಿದ ಪತಿ..!
ಮಂಗಳೂರು/ ಅಹಮದಾಬಾದ್ : ತನ್ನ ಪತ್ನಿ ಆಕೆಯ ಒಡಹುಟ್ಟಿದ ಸಹೋದರನ ಜೊತೆಯಲ್ಲಿ ಇರಬಾರದ ಪರಿಸ್ಥಿತಿಯಲ್ಲಿ ಇದ್ದುದ್ದನ್ನು ಕಂಡ ಪತಿಯೊಬ್ಬ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಅಹಮದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆ ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ಅಹಮದಾಬಾದ್‌ನ ಡೋಲ್ಕಾ ಎಂಬಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ವ್ಯಕ್ತಿ ಜೀವಾಂ*ತ್ಯ ಮಾಡಿಕೊಂಡಿದ್ದಾನೆ. ಈ ವೇಳೆ ಆತ ತನ್ನ ಕೊನೆಯ ಪತ್ರ ಬರೆದಿಟ್ಟಿದ್ದು, ಅದರಲ್ಲಿ ತನ್ನ ಪತ್ನಿಗೆ ಮತ್ತು ಆಕೆಯ ಸಹೋದರನಿಗೂ ನಡುವೆ ಇರುವ ಸಂಬಂಧ ಬಿಡಿಸಿಟ್ಟಿದ್ದಾನೆ.
ಪತಿ – ಪತ್ನಿ ಪ್ರತ್ಯೇಕವಾಗಿ ವಾಸವಾಗಿದ್ದರೂ ಆಗಾಗ ಸಹೋದರ ಬಂದು ಹೋಗುತ್ತಿದ್ದ. ಆದ್ರೆ ,ಒಡಹುಟ್ಟಿದ ಸಹೋದರನಾಗಿರುವ ಕಾರಣ ಯಾವುದೇ ಅನುಮಾನ ಬಂದಿರಲಿಲ್ಲ. ಆದ್ರೆ, ಮೂರು ತಿಂಗಳ ಹಿಂದೆ ಅಚಾನಕ್ ಆಗಿ ಮನೆಗೆ ಬಂದಾಗ ಪತ್ನಿ ತನ್ನದೇ ಸಹೋದರನ ತೆಕ್ಕೆಯಲ್ಲಿರುವುದನ್ನು ಪತಿ ಕಣ್ಣಾರೆ ಕಂಡಿದ್ದಾನೆ. ಈ ವೇಳೆ ಸಹೋದರನ ಜೊತೆ ಸೇರಿ ಪತ್ನಿ ತನಗೆ ಹ*ಲ್ಲೆ ನಡೆಸಿ ಜೀ*ವ ಬೆ*ದರಿಕೆ ಹಾಕಿದ್ದಾಗಿ ಬರೆದಿದ್ದಾನೆ.
ಇದನ್ನೂ ಓದಿ : ಪ್ರೇಯಸಿಯ ತಾಯಿಗಾಗಿ ಚಿನ್ನ ಕದ್ದಿದ್ದ ಡ್ಯಾನ್ಸ್ ಮಾಸ್ಟರ್ ಅರೆಸ್ಟ್
ಮೂರು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಈ ಘಟನೆಯ ಬಳಿಕವೂ ಅವರಿಬ್ಬರು ಯಾವುದೇ ಅಂಜಿಕೆ ಇಲ್ಲದೆ ತಮ್ಮ ಅ*ನೈತಿಕ ಸಂಬಂಧ ಮುಂದುವರೆಸಿದ್ದು, ಇದರಿಂದ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ. ಈ ಘಟನೆ ನಂಬಲಸಾಧ್ಯವಾಗಿದ್ದು ಒಡಹುಟ್ಟಿದವರ ಈ ಅ*ನೈತಿಕ ಸಂಬಂಧದಿಂದ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
- LATEST NEWS6 days ago
ವಧುವಿನಿಂದ ʼಮೊದಲ ರಾತ್ರಿʼ ನಿರಾಕರಣೆ; ಕಾರಣ ತಿಳಿದು ವರನಿಗೆ ಶಾ*ಕ್
- FILM7 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS5 days ago
ನವ ವಧು ಸಹಿತ ನದಿಗೆ ಹಾರಿದ ಕುಟುಂಬ ; ಸ್ಮ*ಶಾನವಾದ ಮದುವೆ ಮನೆ..!
- LATEST NEWS4 days ago
ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ; ‘ಬುರ್ಖಾ ಬ್ಯಾನ್’ ಸರಕಾರದ ಆದೇಶ