Connect with us

    FILM

    ಆಹಾ! ನನ್ನ ಮದುವೆಯಂತೆ….ನನಗೆ ಮದುವೆ ಫಿಕ್ಸ್ ಆಯ್ತು ಎಂದ ಸೋನು ಗೌಡ

    Published

    on

    ಮಂಗಳೂರು/ಬೆಂಗಳೂರು: ರೀಲ್ಸ್‌ ರಾಣಿ ಸೋನು ಶ್ರೀನಿವಾಸ್‌ ಗೌಡ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಆಗಿರುತ್ತಾರೆ. ಇದೀಗ ಮತ್ತೊಂದು ವಿಡಿಯೋ ಮೂಲಕ ಅವರು ಸುದ್ದಿಯಾಗಿದ್ದಾರೆ.

    ಬಿಗ್‌ ಬಾಸ್‌ ಓಟಿಟಿ ಖ್ಯಾತಿಯ ಸೋನು ಗೌಡ ವ್ಲಾಗ್‌ ವಿಡಿಯೋಸ್‌ ಮೂಲಕ ಯೂಟ್ಯೂಬ್‌ನಲ್ಲಿ ದಿನ ನಿತ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸೋನು ಏನೇ ಪೋಸ್ಟ್‌ ಮಾಡಿದರೂ ಅದು ವೈರಲ್‌ ಆಗುತ್ತದೆ. ಇತ್ತೀಚೆಗೆ ಶಾಪಿಂಗ್‌ಗೆ ಹೋಗುವ ವ್ಲಾಗ್‌ ವಿಡಿಯೋವನ್ನು ಅಪ್ಲೋಡ್‌ ಮಾಡಿರುವ ಅವರು, ಇದರಲ್ಲಿ ತಮ್ಮ ಮದುವೆಯ ವಿಚಾರವನ್ನು ಹೇಳಿಕೊಂಡಿದ್ದಾರೆ.

    ‘ಗಯ್ಸ್‌ ನನಗೆ ಮದುವೆ. ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಅನೌನ್ಸ್‌ ಮಾಡ್ತೇನೆ. ಎಲ್ಲರ ಮದುವೆ ನೋಡಿ ನೋಡಿ ನನಗೆ ಮದುವೆ ಆಗಬೇಕು ಅಂಥ ಅನ್ನಿಸುತ್ತಿದೆ’ ಎಂದು ಹೇಳಿದ್ದಾರೆ. ಹುಡುಗ ಯಾರು ಏನು ಎನ್ನುವ ಡಿಟೈಲ್ಸ್‌ ಬೇಕಾದರೆ ಕಾಮೆಂಟ್‌ ಮಾಡಿ ಎಂದಿದ್ದಾರೆ.

    ಸೋನು ಅವರ ಮದುವೆ ವಿಚಾರ ಫ್ಯಾನ್ಸ್‌ ಖುಷ್‌ ಆಗಿದ್ದಾರೆ. ಅನೇಕರು ಒಳ್ಳೆಯದಾಗಲಿ ಎಂದು ಕಮೆಂಟ್‌ ಮಾಡಿದ್ದಾರೆ. ಆದರೆ ಕೆಲವರು ಇದ್ದಕ್ಕಿದ್ದಂತೆ ಸೋನು ಮದುವೆ ಸುದ್ದಿ ಕೇಳಿ ಶಾಕ್‌ ಆಗಿದ್ದಾರೆ.

    ತಾವು ಇಷ್ಟೆಲ್ಲಾ ಶಾಪಿಂಗ್‌ ಮಾಡಿರುವುದು ತಮ್ಮ ಹೊಸ ಮನೆಯ ಗೃಹ ಪ್ರವೇಶಕ್ಕೆಂದು ಸೋನು ಮದುವೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.

    ಇತ್ತೀಚೆಗೆ ಮಗು ದತ್ತು ಪಡೆದ ವಿಚಾರದಲ್ಲಿ ಸುದ್ದಿಯಾಗಿದ್ದರು. ಕಾನೂನು ಬಾಹಿರವನ್ನು ಮಗುವನ್ನು ದತ್ತು ಪಡೆದುಕೊಂಡಿದ್ದರು ಎನ್ನುವ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಸಂಬಂಧ ಅವರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಜಾಮೀನು ಪಡೆದು ಹೊರಬಂದಿದ್ದರು.

    FILM

    ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ರಹಸ್ಯ ಬಯಲು !

    Published

    on

    ಮಂಗಳೂರು/ಬೆಂಗಳೂರು: ಸರಿಯಾಗಿ ಒಂದು ತಿಂಗಳ ಬಳಿಕ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ಹಿಂದಿನ ರಹಸ್ಯ ಬಹಿರಂಗಗೊಂಡಿದೆ.


    ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆಯಿಂದ ಹಲವು ಸಂಗತಿಗಳು ಬಯಲಿಗೆ ಬಂದಿವೆ. ಅವರು ಹಣ ಇಲ್ಲದೇ ಸಾಲ ಮಾಡಿಕೊಂಡಿದ್ದರು. ಸ್ನೇಹಿತರು, ಸಂಬಂಧಿಕರು ಸೇರಿ ಹಲವರ ಬಳಿ ಕೋಟ್ಯಂತರ ರೂ. ಸಾಲ ಮಾಡಿದ್ದಾರೆ.

    ಇದನ್ನೂ ಓದಿ: ತಾಯಿಯ ಆಸೆ ಈಡೇರಿಸಲು ಹೋಗಿ ಕಂಬಿ ಎಣಿಸುತ್ತಿರುವ ಮಗ !

    ಸಾಲದಿಂದ ರೋಸಿ ಹೋಗಿದ್ದ ಗುರುಪ್ರಸಾದ್, ಆನ್ ಲೈನ್ ಜೂಜಿನ ಚಟಕ್ಕೆ ಸಿಲುಕಿರುವ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಸಾಲ ಹೆಚ್ಚಾದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಾಲ ಕೇಳುವಾಗ ‘ಫಿಲ್ಮ್ ಮಾಡ್ತಿದ್ದೀನಿ, ಸಿನಿಮಾದಿಂದ ಖಂಡಿತ ಹಣ ಬರುತ್ತೆ, ಆಗ ಹಣ ವಾಪಸ್ ಕೊಡುತ್ತೀನಿ ಎಂದು ಹೇಳುತ್ತಿದ್ದರಂತೆ. ಹೀಗಾಗಿ ಆನ್ ಲೈನ್ ಗೇಮ್ ಗಳಲ್ಲಿ ಬೆಟ್ಟಿಂಗ್ ಆಡುತ್ತಿದ್ದರು ಎಂದು ತಿಳಿದುಬಂದಿದೆ. ಅದರಲ್ಲೂ ಗುರುಪ್ರಸಾದ್ ರಮ್ಮಿ ಸರ್ಕಲ್ ಸುಳಿಗೆ ಸಿಲುಕ್ಕಿದ್ದರು. ಸಾಲ ಹೆಚ್ಚಾದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    Continue Reading

    FILM

    ಮಾಜಿ ಪ್ರಿಯಕರನ ಹ*ತ್ಯೆ ಆರೋಪ; ಬಾಲಿವುಡ್‌ನ ಖ್ಯಾತ ನಟಿಯ ತಂಗಿ ಅರೆಸ್ಟ್

    Published

    on

    ಮಂಗಳೂರು/ನವದೆಹಲಿ : ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಅಲಿಯಾ ಫಕ್ರಿಯನ್ನು ಬಂಧಿಸಲಾಗಿದೆ.  ಮಾಜಿ ಪ್ರಿಯಕರ ಎಡ್ವರ್ಡ್ ಜೇಕಬ್ಸ್(35) ಮತ್ತು ಅನಸ್ತಾಸಿಯಾ ಎಟಿಯೆನ್ನೆಯನ್ನು ಹ*ತ್ಯೆಗೈದಿರುವ ಗಂಭೀರ ಆರೋಪ ಅಲಿಯಾ ವಿರುದ್ಧ ಕೇಳಿ ಬಂದಿದೆ.  ಎಡ್ವರ್ಡ್ ಜೇಕಬ್ಸ್ ಮತ್ತು ಆತನ ಸ್ನೇಹಿತೆ ಅನಸ್ತಾಸಿಯಾ ನೆಲೆಸಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ಅಲಿಯಾ ಫಕ್ರಿ ಬೆಂ*ಕಿ ಹಚ್ಚಿದ್ದರು. ನೀವೆಲ್ಲರೂ ಸಾಯಿರಿ ಎಂಬುದಾಗಿ ಆಕೆ ಕೂಗಾಡಿದ್ದರು ಎಂಬ ಬಗ್ಗೆ ವರದಿಯಾಗಿದೆ.

    ಬೆಂ*ಕಿ ಸಂಪೂರ್ಣವಾಗಿ ಕಟ್ಟಡವನ್ನು ಆವರಿಸಿದ್ದರಿಂದ ಎಡ್ವರ್ಡ್ ಜೇಕಬ್ಸ್  ಮತ್ತು ಅನಸ್ತಾಸಿಯಾಗೆ ತಪ್ಪಿಕೊಳ್ಳಲಾಗಿರಲಿಲ್ಲ. ಹೀಗಾಗಿ, ದಟ್ಟ ಹೊಗೆ ಆವರಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಪ್ರಾ*ಣಬಿಟ್ಟಿದ್ದರು.

    ಇದನ್ನೂ ಓದಿ : ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ ಅನೌನ್ಸ್; ಶಿವಾಜಿ ಮಹಾರಾಜ್ ಆಗಿ ಡಿವೈನ್ ಸ್ಟಾರ್

    ಜೇಕಬ್ಸ್ ಒಂದು ವರ್ಷದ ಹಿಂದೆ ಅಲಿಯಾ ಫಕ್ರಿಯೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದ. ಆದರೂ ಅಲಿಯಾ ನನ್ನ ಮಗನನ್ನು ಹಿಂಬಾಸುತ್ತಿದ್ದಳು ಎಂಬುದಾಗಿ ಜೇಕಬ್ಸ್ ತಾಯಿ ಆರೋಪಿಸಿದ್ದಾರೆ.  ಸದ್ಯ ಅಲಿಯಾರನ್ನು ನ್ಯೂಯಾರ್ಕ್‌ನ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಜಿಲ್ಲಾ ಅಟಾರ್ನಿ ಮೆಲಿಂಡಾ ಜಾಮೀನು ನೀಡಲು ನಿರಾಕರಿಸಿದೆ ಎಂದು ತಿಳಿದುಬಂದಿದೆ.

    Continue Reading

    FILM

    ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ ಅನೌನ್ಸ್; ಶಿವಾಜಿ ಮಹಾರಾಜ್ ಆಗಿ ಡಿವೈನ್ ಸ್ಟಾರ್

    Published

    on

    ಮಂಗಳೂರು/ ಬೆಂಗಳೂರು : ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಬಳಿಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರ ಮುಂದಿನ ಚಿತ್ರಗಳ ಬಗ್ಗೆ ಸಹಜವಾಗೇ ಕುತೂಹಲ ಹುಟ್ಟಿಕೊಂಡಿದೆ.  ಅಲ್ಲದೇ, ಕಾಂತಾರ ಫ್ರೀಕ್ವೆಲ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಟಾಲಿವುಡ್ ಅಂಗಳಕ್ಕೂ ಕಾಲಿಡುತ್ತಿರೋದು ಗೊತ್ತಿರೋ ವಿಚಾರ. ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಇದೀಗ ರಿಷಬ್ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಅವರು ಬಾಲಿವುಡ್ ಅಂಗಳಕ್ಕೆ ಹಾರಿದ್ದಾರೆ.

    ಶಿವಾಜಿ ಕಥೆಯಲ್ಲಿ ರಿಷಬ್ :

    ಡಿವೈನ್ ಸ್ಟಾರ್ ಪ್ಯಾನ್ ಇಂಡಿಯಾ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್‌ನಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಈ  ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಿಷಬ್ ಶೆಟ್ಟಿ, ಭಾರತದ ಮಹಾನ್ ಯೋಧ, ರಾಜ ಶಿವಾಜಿಯ ಜೀವನ ಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆ ಮೇಲೆ ಅದ್ಭುತ ಆ್ಯಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ಬರೆದುಕೊಂಡಿದ್ದಾರೆ.

    ಇನ್ನು ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಶುಭಹಾರೈಸಿದರೆ, ಇನ್ನು ಕೆಲವರು ಬೇಸರ ವ್ಯಕ್ತ ಪಡಿಸಿದ್ದಾರೆ.  ಶಿವಾಜಿ ಬಗ್ಗೆ ಸಿನಿಮಾ ಮಾಡಿದರೆ ನಾವು ಕನ್ನಡಿಗರು ನೋಡಲ್ಲ ಎಂದು ಒಬ್ಬರು ಕಮೆಂಟ್ಸ್ ಮಾಡಿದ್ದು,  ಮತ್ತೆ ಕೆಲವರು ನಿಮ್ಮ ಮೇಲೆ ನಿರೀಕ್ಷೆ ಇಡುವುದು ತಪ್ಪು ಎಂದಿದ್ದಾರೆ.

    ಇದನ್ನೂ ಓದಿ : Hair care: ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!

    ಸಿನಿಮಾ ರಿಲೀಸ್ ಯಾವಾಗ?

    ಅಂದಹಾಗೆ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಸಂದೀಪ್ ಸಿಂಗ್ ‘ಶಿವಾಜಿ ಮಹಾರಾಜ್’ ಸಿನಿಮಾ ಮಾಡುತ್ತಿದ್ದು, 2027ರ ಜನವರಿ 21 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ. ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿದಂತೆ ಒಟ್ಟು 6 ಭಾಷೆಯಲ್ಲಿ ಸಿನಿಮಾ ತಯಾರಾಗುತ್ತಿದೆ. ಇನ್ನು ಈ ಚಿತ್ರದಲ್ಲಿ ಶಿವಾಜಿ ಮಹಾರಾಜ್ ಪತ್ನಿಯ ಪಾತ್ರದಲ್ಲಿ ಆಶಾ ಭೋಂಸ್ಲೆ ಮೊಮ್ಮಗಳು ಝಾನೈ ಭೋಂಸ್ಲೆ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

     

    Continue Reading

    LATEST NEWS

    Trending