Connect with us

    DAKSHINA KANNADA

    ಹೈ ಟೆನ್ಷನ್‌ ಲೈನ್‌ ನಡುವೆ 6 ಗಂಟೆ ಕಳೆದ ಯುವಕ… ಬದುಕಿ ಬಂದಿದ್ದೇ ವಿಚಿತ್ರ…!

    Published

    on

    ಮಂಗಳೂರು (ಕಾನ್ಪುರ) : ಇತ್ತೀಚೆಗೆ ಪೈಲೆಟ್‌( Pilot ) ಇಲ್ಲದೆ ರೈಲೊಂದು 80 ಕಿಲೋ ಮೀಟರ್ ಓಡಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಅಂತಹದೇ ಇನ್ನೊಂದು ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು, ಯುವಕನೊಬ್ಬ ಸಾವಿರಾರು ವೋಲ್ಟ್‌ ಕರೆಂಟ್ ಹರಿಯುವ ವಿದ್ಯುತ್ ಟ್ರೈನ್‌ನ ( Electric train ) ಟಾಪ್‌ನಲ್ಲಿ ದೆಹಲಿಯಿಂದ ಕಾನ್ಪುರ ( Delhi to Kanpur ) ವರೆಗೂ ಪ್ರಯಾಣ ಮಾಡಿದ್ದಾನೆ. ಹಮ್ಸಫರ್ ಎಕ್ಸ್‌ಪ್ರೆಸ್‌ ರೈಲು ಇದು ದೆಹಲಿಯಿಂದ ಕಾನ್ಪುರಕ್ಕೆ ಸಾಗುವ ಸುಪರ್ ಫಾಸ್ಟ್‌ ವಿದ್ಯುತ್ ಚಾಲಿತ ರೈಲು. ದೆಹಲಿಯಿಂದ ಕಾನ್ಪುರಕ್ಕೆ 475 ಕಿಲೋ ಮೀಟರ್ ದೂರವಿದ್ದು ರೈಲಿನಲ್ಲಿ ಸರಿ ಸುಮಾರು 6 ಗಂಟೆಗೂ ಅಧಿಕ ಪ್ರಯಾಣದ ಅವಧಿ ಇದೆ.

    hamsafer train

    ಇಷ್ಟು ದೊಡ್ಡ ದೂರವನ್ನು ಯುವಕನೊಬ್ಬ ವಿದ್ಯುತ್ ಚಾಲಿತ ರೈಲಿನ ಟಾಪ್‌ನಲ್ಲಿ ಮಲಗಿ ಪ್ರಯಾಣಿಸಿದ್ದಾನೆ. ಘಂಟೆಗೆ 100 ಕಿಲೋ ಮೀಟರ್ ಸರಾಸರಿ ವೇಗದಲ್ಲಿ ಚಲಿಸಿದ್ದ ಈ ರೈಲು ಕಾನ್ಪುರ ತಲುಪಿದಾಗ ಯುವಕನೊಬ್ಬನ ದೇಹ ರೈಲಿನ ಮೇಲ್ಚಾವಣಿಯಲ್ಲಿ ಕಾಣಿಸಿದೆ. ರೈಲು ನಿಲ್ದಾಣದಲ್ಲಿದ್ದ ಆರ್‌ಪಿಎಫ್‌ ( CRPF ) ಸಿಬ್ಬಂಧಿ ಯುವಕನ ದೇಹವೊಂದು ರೈಲಿನ ಮೇಲಿರೋದನ್ನು ಗಮನಿಸಿದ್ದಾರೆ. ಮೊದಲಿಗೆ ಆತ ಇಹಲೋಕ ತ್ಯಜಿಸಿರಬೇಕು ಅಂತ ಅಂದುಕೊಂಡಿದ್ದಾರೆ. ಹೀಗಾಗಿ ರೈಲಿನ ವಿದ್ಯುತ್ ಸಂಪರ್ಕ ಕಡಿತ ಮಾಡಿ ಆ ಯುವಕನ ದೇಹವನ್ನು ಕೆಳಗೆ ಇಳಿಸುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಯುವಕ ಎದ್ದು ಕೂತಿದ್ದು ನೋಡಿ ರೈಲ್ವೇ ಸಿಬ್ಬಂಧಿಗಳೇ ಆಶ್ಚರ್ಯಗೊಂಡಿದ್ದಾರೆ.

    man sleeping on train

    ಎಲೆಕ್ಟ್ರಿಕ್ ಟ್ರೈನ್‌ ಸಂಚರಿಸಲು ಅಳವಡಿಸಿರುವ ವಿದ್ಯುತ್ ಲೈನ್‌ನಲ್ಲಿ ಸಾವಿರಾರು ವೋಲ್ಟ್‌ (Thousand Volts ) ವಿದ್ಯುತ್ ಹರಿಯುತ್ತದೆ. ಹೀಗಿರುವಾಗ ರೈಲಿನ ಮೇಲೆ ಹತ್ತಿದ ವ್ಯಕ್ತಿ ಬದುಕಿ ಉಳಿಯೋದು ಬಹಳ ಕಷ್ಟ. ಅಂತಹದ್ರಲ್ಲಿ ಈತ 400 ಕಿಲೋ ಮೀಟರ್ ದೂರು ರೈಲಿನ ಮೇಲೆ ಪ್ರಯಾಣ ಮಾಡಿದ್ದಾನೆ. ರೈಲಿನ ಮೇಲ್ಚಾವಣಿಯಲ್ಲಿ ಮಲಗಿದ ಈತ ಕಾನ್ಪುರ ರೈಲು ನಿಲ್ದಾಣದ ಸಿಆರ್‌ಪಿಎಫ್‌ ಸಿಬ್ಬಂದಿ ಎಚ್ಚರಿಸಿದಾಗಲೇ ಎಚ್ಚರಗೊಂಡಿದ್ದಾನೆ.

    ಇದನ್ನೂ ಓದಿ ಸ್ನೇಕ್‌ ಪ್ಲಾಂಟ್‌.. ಇದು ನಿಮ್ಮ ಮನೆಯಲ್ಲಿದೆಯಾ..? ಇದ್ರೆ ಏನಾಗೊತ್ತೆ ಗೊತ್ತಾ…?

    ರೈಲಿನಲ್ಲಿ ಏತಕ್ಕಾಗಿ ಹತ್ತಿದನೆಂದು ಸ್ವತಃ ಯುವಕನಿಗೆ ತಿಳಿದಿಲ್ಲ.

    ಛಾವಣಿಯ ಮೇಲೆ ಹತ್ತಿರುವ ಬಗ್ಗೆ ಪ್ರಶ್ನೆ ಮಾಡಿದ ರೈಲ್ವೇ ಅಧಿಕಾರಿಗಳಿಗೆ ಯುವಕನಿಂದ ಯಾವುದೇ ಸಮರ್ಪಕ ಉತ್ತರ ಸಿಕ್ಕಿಲ್ಲ. ಯುವಕನನ್ನು ಫತೇಪುರದ ಬಿಂಡ್ಕಿ ತಹಸಿಲ್‌ನ ಫಿರೋಜ್‌ಪುರ ಗ್ರಾಮದ ದಿಲೀಪ್ ಎಂದು ಗುರುತಿಸಲಾಗಿದೆ. ಆದ್ರೆ ಈತನ ಈ ಹುಚ್ಚಾಟದಿಂದ ಯು.ಪಿಯ ರೈಲ್ವೇ ವಿಭಾಗದಲ್ಲಿ ಸುಮಾರು 20 ನಿಮಿಷ ಎಲ್ಲಾ ರೈಲುಗಳೂ ಸ್ಥಗಿತ ಮಾಡಲಾಗಿತ್ತು. ಈತ ರೈಲಿನ ಚಾವಣಿಗೆ ಹತ್ತಿದ ತಕ್ಷಣ ಮಲಗಿ ನಿದ್ರೆ ಮಾಡಿದ್ದಾನೆ. ಎಲ್ಲಿಯಾದರೂ ಎದ್ದು ನಿಲ್ಲುವ ಅಥವ ಕುಳಿತುಕೊಳ್ಳುವ ಪ್ರಯತ್ನ ನಡೆಸಿದ್ದರೆ ಆತನ ಪ್ರಾಣ ಹೋಗುವ ಜೊತೆಗೆ ರೈಲು ಅಪಘಾತದಂತಹ ಘಟನೆ ನಡೆಯುವ ಸಾಧ್ಯತೆ ಇತ್ತು ಎಂದು ಆರ್‌ಪಿಎಫ್‌ ಪೊಲೀಸ್ ಠಾಣೆಯ ಅಧಿಕಾರಿ ಬಿಪಿ ಸಿಂಗ್ ಹೇಳಿದ್ದಾರೆ. ಸದ್ಯ ರೈಲ್ವೇ ಕಾಯ್ದೆ ಸೆಕ್ಷನ್ 156 ರ ಪ್ರಕಾರ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

    DAKSHINA KANNADA

    ಮಂಗಳೂರು: ಟ್ರಾಯ್‌ನಿಂದ ಕರೆ; 1.71 ಕೋ.ರೂ ವಂಚನೆ

    Published

    on

    ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್‌ ಸಿಮ್‌ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

    ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್‌ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ನಂಬರ್‌ ರಿಜಿಸ್ಟರ್‌ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್‌ ನೆಪದಲ್ಲಿ ಈ ನಂಬರ್‌ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್‌ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.

    ಅನಂತರ ವಾಟ್ಸಪ್‌ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್‌ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.

    Continue Reading

    DAKSHINA KANNADA

    ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?

    Published

    on

    ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.


    ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.

    ಇದನ್ನು ಓದಿ:ಯೂಟ್ಯೂಬ್​ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ

    ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.

    Continue Reading

    bangalore

    ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?

    Published

    on

    ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.


    ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.

    ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.

    Continue Reading

    LATEST NEWS

    Trending