Connect with us

DAKSHINA KANNADA

ಬಂಟ – ಬಿಲ್ಲವರ ನಡುವೆ ಫೈಟ್‌…! ಜಾತಿ ಲೆಕ್ಕಾಚಾರ ಯಾರಿಗೆಷ್ಟು ಲಾಭ..?

Published

on

ಮಂಗಳೂರು : ಕಳೆದ ಮುವತ್ತ ಮೂರು ವರ್ಷಗಳಲ್ಲಿ ( 1991 ರಿಂದ 2024 ) ರವರಗೆ ದಕ್ಷಿಣ ಕನ್ನಡ ( ಮಂಗಳೂರು ) ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತನ್ನ ಹಿಡಿತದಲ್ಲೇ ಇಟ್ಟುಕೊಂಡಿದೆ. ದನಂಜಯ ಕುಮಾರ್ ಅವರಿಂದ ಆರಂಭಗೊಂಡಿದ್ದ ಬಿಜೆಪಿಯ ಜೈತ್ರಯಾತ್ರೆ ಸಂಸದ ನಳಿನ್ ಕುಮಾರ್ ಕಟೀಲ್‌ ವರೆಗೂ ತಲುಪಿದೆ. ಆದ್ರೆ ಬಿಜೆಪಿಯ ಈ ಜೈತ್ರಯಾತ್ರೆ ಈ ಚುನಾವಣೆಯಲ್ಲಿ ಕೊನೆಯಾಗಲಿದೆಯಾ ಅನ್ನೋ ಬಲವಾದ ಅನುಮಾನ ಮೂಡಿಸಿದೆ. ಇದಕ್ಕೆ ಕಾರಣ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಆರಂಭವಾಗಿರೋ ಬಿಲ್ಲವ – ಬಂಟ ಸಮೂದಾಯದ ಫೈಟ್‌.

ಒಂದು ಲೈಟ್‌ ಕಂಬ ನಿಲ್ಲಿಸಿದ್ರೂ ಬಿಜೆಪಿಗೆ ಜನ ಮತ ಹಾಕ್ತಾರೆ ಅಂತ ಹೇಳುತ್ತಿದ್ದ ಬಿಜೆಪಿ ಪಕ್ಷಕ್ಕೆ ಈ ಬಾರಿ ಗೆಲುವು ಅಷ್ಟೊಂದು ಸಲೀಸಲ್ಲ ಅನ್ನೋದು ಪಕ್ಕಾ ಆಗಿದೆ. ಸದಾ ಸೋಲನ್ನೇ ಸೆರಗಲ್ಲಿ ಕಟ್ಟಿಕೊಂಡು ಕಳೆದ 8 ಲೋಕಸಭಾ ಚುನಾವಣೆಯನ್ನು ಸೋತಿರುವ ಕಾಂಗ್ರೆಸ್‌ಗೆ ಈಗಿನ ಅಭ್ಯರ್ಥಿ ಪದ್ಮರಾಜ್ ಪೂಜಾರಿ ವರದಾನವಾಗಿದ್ದಾರೆ. ಒಂದು ಕಡೆ ಕಾಂಗ್ರೆಸ್‌ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿದ್ರೆ, ಮತ್ತೊಂದು ಕಡೆ ಯಾವುದೇ ಕಪ್ಪು ಚುಕ್ಕಿ ಇಲ್ಲದ ಪ್ರಭಲ ಬಿಲ್ಲವ ನಾಯಕ ಪದ್ಮರಾಜ್ ಪೂಜಾರಿ. ಪದ್ಮರಾಜ್ ಪೂಜಾರಿ ಅವರಿಗೆ ಟಿಕೆಟ್ ಕೊಟ್ಟಿರೋದು ಬಹುತೇಕ ಬಿಲ್ಲವ ಸಮಾಜದ ಯುವಕರಲ್ಲೇ ಸಂಚಲನ ಮೂಡಿಸಿದ್ದು , ಈ ಬಾರಿ ಎಲ್ಲವನ್ನೂ ಮರೆತು ತಮ್ಮ ಸಮಾಜದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ.

ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಜಾತಿ ಆದಾರದಲ್ಲೇ ಚುನಾವಣೆ ನಡೆಸುತ್ತದೆಯಾದ್ರೂ ದಕ್ಷಿಣ ಕನ್ನಡ ಜಿಲ್ಲೆ ಅದಕ್ಕೆ ಹೊರತಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಹ ಜಾತಿ ರಾಜಕೀಯಕ್ಕೆ ಜನರು ಇದುವರೆಗೂ ಮಣೆ ಹಾಕಿರಲಿಲ್ಲ. ಹಿಂದುತ್ವದ ಜೊತೆಗೆ ಕೆಲವೊಂದು ಬಾರಿ ಅಭಿವೃದ್ದಿಯ ಬಗ್ಗೆಯೂ ಮತ ಹಾಕಿದ ಕಾರಣ ಜಿಲ್ಲೆಯನ್ನು ಬುದ್ದಿವಂತರ ಜಿಲ್ಲೆ ಅಂತಾನೆ ರಾಜ್ಯದ ಎಲ್ಲಾ ಜನರು ಗುರುತಿಸಿದ್ದರು. ಆದ್ರೆ ಈ ಬಾರಿ ಮಾತ್ರ ಜಾತಿ ಲೆಕ್ಕಾಚಾರ ಜೋರಾಗಿ ನಡೆಯಲು ಆರಂಭಿಸಿದ್ದು, ಇದುವೆರೆಗೂ ಹಿಂದುತ್ವ… ಬಿಜೆಪಿ ಅಂತಿದ್ದ ಬಿಲ್ಲವ ಸಮೂದಾಯದ ಯುವಕರು ಪದ್ಮರಾಜ್‌ ಪರ ಒಲವು ತೋರಿಸ್ತಾ ಇದ್ದಾರೆ. ಹಾಗಂತ ಕ್ಷೇತ್ರದಲ್ಲಿ ಎಲ್ಲಾ ಬಿಲ್ಲವರು ಬದಲಾಗಿದ್ದಾರೆ ಅಂತ ಅಲ್ಲ… ಒಂದಷ್ಟು ಬದಲಾವಣೆ ಆಗಿದೆ ಅನ್ನೋದು ಖಚಿತ. ಆದ್ರೆ ಆ ಬದಲಾವಣೆ ಬಿಜೆಪಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ ಅನ್ನೋ ವಿಚಾರ ಭಾರಿ ಚರ್ಚೆಯಲ್ಲಿದೆ.

ಹಿಂದುತ್ವದ ಭದ್ರಕೋಟೆಯಲ್ಲಿ ಬಿಜೆಪಿಯ ಏಳುಬೀಳು…

ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆ ಅನ್ನೋದು ಎಷ್ಟು ನಿಜವೋ ಆ ಭದ್ರ ಕೋಟೆಯಲ್ಲಿ ಒಂದೊಮ್ಮೆ ಕಾಂಗ್ರೆಸ್ ಏಳು ವಿಧಾನ ಸಭಾ ಕ್ಷೇತ್ರವನ್ನು ಗೆದ್ದುಕೊಂಡಿತ್ತು ಅನ್ನೋದು ಕೂಡಾ ಅಷ್ಟೇ ನಿಜ. 2004 ರಲ್ಲಿ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಏಳು ಕ್ಷೇತ್ರ ಬಿಜೆಪಿಯ ತೆಕ್ಕೆಯಲ್ಲಿತ್ತು. 2008 ಕ್ಕೆ ಈ ಸಂಖ್ಯೆ 4ಕ್ಕೆ ಇಳಿದಿದ್ದು 2013 ರಲ್ಲಿ ಬಿಜೆಪಿ ಸಂಪೂರ್ಣ ನೆಲಕಚ್ಚಿ ಕೇವಲ ಸುಳ್ಯ ಒಂದು ಕ್ಷೇತ್ರ ಮಾತ್ರ ಉಳಿಸಿಕೊಂಡಿತ್ತು. ಇದಾದ ಬಳಿಕ 2018 ರ ಚುನಾವಣೆಯಲ್ಲಿ ಮತ್ತೆ ಮೈ ಕೊಡವಿ ಮೇಲೆದ್ದ ಬಿಜೆಪಿ ಮತ್ತೆ 7 ಕ್ಷೇತ್ರ ಗೆದ್ದುಕೊಂಡಿತ್ತು. ಇನ್ನು ಇತ್ತೀಚೆಗೆ ನಡೆದ 2023 ರ ಚುನಾವಣೆಯಲ್ಲಿ ಭಿನ್ನಮತದ ಕಾರಣ ಪುತ್ತೂರು ಕ್ಷೇತ್ರವನ್ನು ಕೈ ಚೆಲ್ಲಿ 6 ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಂಡಿದೆ. ಆದ್ರೆ 2023 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಮತಗಳಿಕೆಯ ಅಂತರ ಕೇವಲ ಶೇಖಡ 10.35% .

ಪ್ರತಿ ಚುನಾವಣೆಯಲ್ಲೂ ಮತ ಹಂಚಿಕೆಯಲ್ಲಿ ಬಿಜೆಪಿ ಪ್ರಾಭಲ್ಯ

ಇನ್ನು 2009 ರ ಲೋಕಸಭಾ ಚುನಾವಣೆಯಿಂದ 2019 ರ ಚುನಾವಣೆಯ ತನಕ ಎಲ್ಲಾ ಹಂತದಲ್ಲೂ ಬಿಜೆಪಿ ಮತಗಳಿಕೆಯಲ್ಲಿ ಗಣನೀಯವಾಗಿ ಏರಿಕೆ ಆಗಿದೆ.
* 2009 ರಲ್ಲಿ 13,46,662 ಮತದಾರರ ಪೈಕಿ 10,15,992 ಮತ ಚಲಾವಣೆ ಆಗಿತ್ತು. ಕೇವಲ 40,420 (3.98%) ಮತಗಳ ಅಂತರದಿಂದ ನಳಿನ್ ಕುಮಾರ್ ಮೊದಲ ಗೆಲುವು ಕಂಡಿದ್ದರು.
*2014 ಚುನಾವಣೆಯಲ್ಲಿ ಮೋದಿ ಹವಾ ಒಂದೆಡೆಯಾದ್ರೆ ಜಿಲ್ಲೆಯಲ್ಲಿ ಮತದಾರ ಸಂಖ್ಯೆ 15,65,240 ( 2,18,578 ಹೊಸ ಮತದಾರರು) ಏರಿಕೆಯಾಗಿದ್ದು, 12,07,583 ( 1,91,661 ಹೆಚ್ಚುವರಿ ) ಮತ ಚಲಾವಣೆ ಆಗಿತ್ತು. ಈ ಬಾರಿ ನಳಿನ್ ಕುಮಾರ್ ಕಟೀಲ್ ಗೆಲವಿನ ಅಂತರ 1,43,709 (11.90%)ಹೆಚ್ಚಾಗಿತ್ತು.
*2019 ರ ಚುನಾವಣೆಯಲ್ಲಿ ಮತದಾರರ ಸಂಖ್ಯೆ 17,24,458 (1,59,218 ಹೊಸ ಮತದಾರರು ) ಏರಿಕೆಯಾಗಿದ್ದು, 13,75,699 (1,37,456 ಹೆಚ್ಚುವರಿ ) ಮತ ಚಲಾವಣೆ ಆಗಿದೆ. ಈ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಗೆಲುವಿನ ಅಂತರ 2,75 255 ( 20%) ಆಗಿತ್ತು.

ಹೊಸ ಮತದಾರನ ಒಲವು ಬಿಜೆಪಿ ಕಡೆಗೆ…ಸಾಂಪ್ರದಾಯಿಕ ಮತ ಉಳಿಸಿಕೊಂಡ ಕಾಂಗ್ರೆಸ್‌

ಹೊಸ ಮತದಾರರು ಬಿಜೆಪಿ ಮತ ಹಾಕಿದ್ದಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದರೆ 2009 ರಿಂದ 2019 ರ ಚುನಾವಣೆ ತನಕವೂ ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳು ಬಿಟ್ಟು ಹೋಗಿಲ್ಲ.
* 2009 ರಲ್ಲಿ ಕಾಂಗ್ರೆಸ್ ಗಳಿಸಿದ ಮತ 4,58,965
* 2014 ರಲ್ಲಿ ಕಾಂಗ್ರೆಸ್ ಗಳಿಸಿದ ಮತ 4,99,030
*2019 ರಲ್ಲಿ ಕಾಂಗ್ರೆಸ್ ಗಳಿಸಿದ ಮತ 4,99,664

ಈ ಎಲ್ಲಾ ಅಂಕಿ ಅಂಶಗಳನ್ನು ನೋಡಿದ್ರೆ ಬಿಜೆಪಿ ಇಲ್ಲಿ ಗೆಲ್ಲುವ ಫೇವರೆಟ್ ಪಕ್ಷ ಅನ್ನೋದ್ರಲ್ಲಿ ಎರಡು ಮಾತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಮರ್ಥ ಅಭ್ಯರ್ಥಿ ಆಗಿದ್ರೂ, ಹಿಂದುತ್ವ , ದೇಶ ಪ್ರೇಮದ ಭಾಷಣ ಮಾಡಿದ್ರೂ ಬಿಜೆಪಿ ಬೆಂಬಲಿಸುತ್ತಿದ್ದ ಬಿಲ್ಲವ ಸಮೂದಾಯದ ಒಂದಷ್ಟು ಯುವಕರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು ಗೆಲುವಿಗೆ ಅಡ್ಡಿ ಆಗುವ ಸಾಧ್ಯತೆ ಇದೆ.

1991 ರಿಂದ ಹಿಂದುತ್ವದ ಆದಾರದಲ್ಲೇ ಗೆಲುವು

1991 -1996- 1998- 1999 ರಾಷ್ಟ್ರ ರಾಜಕಾರಣದಲ್ಲಿ ನಡೆದ ರಾಜಕೀಯ ದ್ರುವೀಕರಣದಿಂದಾಗಿ ದನಂಜಯ ಕುಮಾರ್ 9 ವರ್ಷದಲ್ಲಿ ನಾಲ್ಕು ಚುನಾವಣೆಯನ್ನು ಎದುರಿಸಿ ಗೆದ್ದಿದ್ದರು. ಜಿಲ್ಲೆಯಲ್ಲಿ ಸಣ್ಣ ಸಂಖ್ಯೆಯಲ್ಲಿರುವ ಜೈನ ಧರ್ಮದವರಾಗಿದ್ದ ದನಂಜಯ ಕುಮಾರ್ ಅವರಿಗೆ ಧರ್ಮ ಜಾತಿ ನೋಡದೆ ಹಿಂದುತ್ವದ ಮತಗಳೇ ಗೆಲುವು ತಂದು ಕೊಟ್ಟಿತ್ತು.

80 ರ ದಶಕದಲ್ಲಿ ಸುಳ್ಯದಲ್ಲಿ ನಡೆದಿದ್ದ ಕೋಮುಗಲಭೆಯಲ್ಲಿ ಹಿಂದೂ ಯುವಕರ ಪರ ಉಚಿತವಾಗಿ ವಾದ ಮಾಡಿದ್ದ ಡಿ.ವಿ.ಸದಾನಂದ ಗೌಡರು ಕೂಡಾ ಪುತ್ತೂರಿನಲ್ಲಿ ಎರಡು ಅವಧಿಗೆ ಶಾಸಕರಾಗಿ , 2004 ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ರು. ಕೊಡಗು ಜಿಲ್ಲೆಯನ್ನು ಒಳಗೊಂಡಿದ್ದ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸದನಾಂದ ಗೌಡರಿಗೂ ಕೈ ಹಿಡಿದಿದ್ದು, ಇದೇ ಹಿಂದುತ್ವವಾಗಿತ್ತು.

ಇನ್ನು 2009 ರಲ್ಲಿ ಸಾಮಾನ್ಯ ಸಂಘದ ಕಾರ್ಯಕರ್ತನಾಗಿ ದುಡಿಯುತ್ತಿದ್ದ ನಳಿನ್ ಕುಮಾರ್ ಕಟೀಲ್‌ ಹೆಸರನ್ನು ಸಂಸತ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಹಿಂದುತ್ವದ ಹೆಡ್‌ಕ್ವಾರ್ಟರ್ಸ್‌ ಆಗಿದ್ದ ಕಲ್ಲಡ್ಕದಲ್ಲಿ. ಅಲ್ಲಿವರೆಗೂ ಹಿಂದುತ್ವದ ಕೆಲಸದಲ್ಲೇ ತೊಡಗಿಸಿಕೊಂಡಿದ್ದ ನಳಿನ್ ಕುಮಾರ್ ಕಟೀಲ್ ಧಿಡೀರ್ ಸಂಸದರಾಗಿದ್ರು.  2009 ರಿಂದ 2019 ರ ಮೂರು ಬಾರಿ ನಳಿನ್ ಸಂಸದರಾಗಲು ಕಾರಣವಾಗಿದ್ದು ಕೂಡಾ ಹಿಂದುತ್ವದ ಜೊತೆಗೆ ಮೋದಿ ಅನ್ನೋ ನಾಯಕನ ಹೆಸರು ಕಾರಣ ಅನ್ನೋದು ಅಲ್ಲಗಳೆಯುವಂತಿಲ್ಲ. ಇದಕ್ಕೆ ಬೆಂಬಲವಾಗಿ ನಿಂತಿದ್ದು ಬಿಲ್ಲವ ಸಮೂದಾಯ ಅನ್ನೋದು ಕೂಡಾ ಹಿಂದುತ್ವದ ಹೋರಾಟಗಾರರ ಅಂಕಿ ಅಂಶಗಳನ್ನು ಲೆಕ್ಕ ಹಾಕಿದ್ರೆ ಗೊತ್ತಾಗುತ್ತದೆ.

ಈ ಬಾರಿ ದ.ಕ ಜಿಲ್ಲೆಯಲ್ಲಿರುವ ಮತದಾರರ ವಿವರ ಇಂತಿದೆ ( MARCH 2024 ರ ವರೆಗೆ)

ಒಟ್ಟು ಮತದಾರರ ಸಂಖ್ಯೆ – 17,96,826
ಪುರುಷರು – 8,77,438
ಮಹಿಳೆಯರು – 9,19,321
ತೃತೀಯ ಲಿಂಗಿ : 67

ಧರ್ಮದ ಆಧಾರದಲ್ಲಿ ಮತದಾರರ ಸಂಖ್ಯೆ ( ಸರಿಸುಮಾರು )

ಹಿಂದೂ – 11,12,803
ಮುಸ್ಲಿಂ – 4,90,368
ಕ್ರೈಸ್ತ : 1,74,327
ಇತರ : 19328

ಮತದಾರರ ಸರಿಯಾದ ಜಾತಿ ಲೆಕ್ಕಾಚಾರ ಯಾರಲ್ಲೂ ಇಲ್ಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ಆಧಾರಿತ ಚುನಾವಣೆ ನಡೆಯದೇ ಇದ್ದ ಹಿನ್ನಲೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳೂ ಜಾತಿ ಲೆಕ್ಕಾಚಾರ ಇಟ್ಟುಕೊಂಡಿಲ್ಲ. ಆದ್ರೆ ಜಾತಿ ಸಂಘಟನೆಗಳು ಘೋಷಣೆ ಮಾಡಿಕೊಂಡಂತೆ ಆ ಪಕ್ಷಗಳ ಮತದಾರರ ಪೈಕಿ ಬಿಲ್ಲವ ಸಮೂದಾಯದ ಸಂಖ್ಯೆ ಸರಿ ಸುಮಾರು 4.5 ಲಕ್ಷಕ್ಕೂ ಹೆಚ್ಚಿದೆ ಅಂತ ಹೇಳಲಾಗುತ್ತಿದೆ. ಇನ್ನು ಬಂಟ ಸಮೂದಾಯದ ಮತದಾರರು 3.5 ಲಕ್ಷಕ್ಕೂ ಅಧಿಕ ಇದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಬ್ರಾಹ್ಮಣ, ಒಕ್ಕಲಿಗ, ದಲಿತ, ಮತಗಳು ಸುಮಾರು 3.5 ಲಕ್ಷದ ಆಸುಪಾಸಿನಲ್ಲಿ ಇದೆ.ಇದಲ್ಲದೇ ಮೊಗವೀರರು,ಸೇರಿದಂತೆ ಹಲವು ಜಾತಿಗಳ ಜನರು ಲಕ್ಷಕ್ಕೂ ಹೆಚ್ಚಿದ್ದಾರೆ. ಆದ್ರೆ ಇದ್ಯಾವುದೂ ಸರಿಯಾದ ಲೆಕ್ಕಾಚಾರ ಅಲ್ಲದೇ ಇದ್ರೂ ಜಿಲ್ಲೆಯಲ್ಲಿ ಬಿಲ್ಲವರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದಂತು ನಿಜ. ಹೀಗಾಗಿ ಜಾತಿ ಲೆಕ್ಕಾಚಾರದಲ್ಲಿ ಬಿಲ್ಲವರು ಒಟ್ಟಾದ್ರೆ ಯಾವುದೇ ಅಭ್ಯರ್ಥಿಯ ಸೋಲು ಗೆಲುವಿನಿಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದೀಗ ಬಿಜೆಪಿಯ ಕಟ್ಟಾಳುಗಳಾಗಿದ್ದ ಬಿಲ್ಲವ ಯುವಕರೇ ಪದ್ಮರಾಜ್‌ ಪರವಾಗಿ ಮತ ಯಾಚಿಸ್ತಾ ಇದ್ದಾರೆ ಅನ್ನೋದೇ ಈ ಬಾರಿಯ ಚುನಾವಣೆಯ ವಿಶೇಷ. ಹೀಗಾಗಿ ಯಾರು ಎಷ್ಟು ಮತಗಳಿಂದ ಗೆಲ್ಲಬಹುದು ಅನ್ನೋದು ಮತದಾರನ ತೀರ್ಪಿನ ಬಳಿಕವಷ್ಟೇ ಗೊತ್ತಾಗಬಹುದು.

DAKSHINA KANNADA

ಈ ತಿಂಗಳಿನಲ್ಲಿ ಬರುತ್ತೆ ಪಿಎಂ ಕಿಸಾನ್ ಯೋಜನೆಯ 17ನೇಕಂತು..!

Published

on

ದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯಿಂದ ಪ್ರತೀ ವರ್ಷ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದ್ದು, ಮೂರು ಕಂತುಗಳಲ್ಲಿ 2000 ರೂ. ನೇರವಾಗಿ ಕೃಷಿಗರ ಖಾತೆಗೆ ಜಮೆ ಮಾಡಲಾಗುತ್ತಿದೆ.

ಇದೀಗ ರೈತರು 17ನೇ ಕಂತಿನ ನಿರೀಕ್ಷೆಯಲ್ಲಿದ್ದು, ಮೇ.2024ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಂತನ್ನು ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.  ಆದರೆ ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ.

16ನೇ ಕಂತನ್ನು ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್‌ ನಿಧಿ ಯೋಜನೆಯ ಕಂತನ್ನು ರೈತರಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು 17ನೇ ಕಂತಿಗಾಗಿ ಕಾದು ನೋಡಬೇಕಿದೆ. ಈ ಯೋಜನೆಯ ಕಂತುಗಳನ್ನು ವರ್ಷದಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಮೊದಲನೆಯ ಕಂತು ಏಪ್ರಿಲ್-ಜುಲೈನಲ್ಲಿ, ಎರಡನೆಯದು ಆಗಸ್ಟ್-ನವೆಂಬರ್ ನಲ್ಲಿ ಮತ್ತು ಮೂರನೆಯದು ಡಿಸೆಂಬರ್-ಮಾರ್ಚ್‌ನಲ್ಲಿ ನೀಡಲಾಗುತ್ತದೆ.

ಮುಂದೆ ಓದಿ..; “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ಈಗಾಗಲೇ 16ನೇ ಕಂತನ್ನು ಫೆಬ್ರವರಿಯಲ್ಲಿ ನೀಡಿದ್ದು, 17 ನೇ ಕಂತು ಮೇ ತಿಂಗಳಿನಲ್ಲಿ ವರ್ಗಾವಣೆಯಾಗಬಹುದು ಎನ್ನಲಾಗಿದ್ದು, ನಿರ್ದಿಷ್ಟ ದಿನಾಂಕ ಮಾತ್ರ ನಿಗದಿಯಾಗಿಲ್ಲ.

 

 

Continue Reading

BANTWAL

ULLALA : ನೇಣಿಗೆ ಶರಣಾದ ಇಬ್ಬರು ಪುಟ್ಟ ಮಕ್ಕಳ ತಂದೆ

Published

on

ಉಳ್ಳಾಲ :   ಎರಡು ಪುಟ್ಟ ಮಕ್ಕಳ ತಂದೆಯೋರ್ವರು ನೇಣಿಗೆ ಶರಣಾದ ಘಟನೆ ಉಳ್ಳಾಲದ ಕುಂಪಲದ ಹನುಮಾನ್ ನಗರದಲ್ಲಿ ಸೋಮವಾರ(ಏ. 29) ಮುಂಜಾನೆ ನಡೆದಿದೆ. 44 ವರ್ಷ ಯೋಗೀಶ್ ಆತ್ಮಹ*ತ್ಯೆಗೈದ ವ್ಯಕ್ತಿ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಯೋಗೀಶ್ ಸೋಮವಾರ ಬೆಳಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದ ನಲ್ವತ್ತು ಸಾವಿರ ರೂಪಾಯಿಗಳನ್ನ ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ಪೀಡನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ಅವಮಾನದಲ್ಲಿ ಯೋಗೀಶ್ ಆತ್ಮಹ*ತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ಉಳ್ಳಾಲ ಠಾಣಾ ಪೊಲೀಸರು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.

ಯೋಗೀಶ್ ಪತ್ನಿಯೂ ಆತ್ಮಹತ್ಯೆಗೆ ಯತ್ನ:

ಯೋಗೀಶ್ ಸಾ*ವನ್ನಪ್ಪಿದನ್ನು ಕಂಡ ಪತ್ನಿಯೂ ನೇಣು ಬಿಗಿದು ಆತ್ಮ ಹ*ತ್ಯೆಗೈಯಲು ಮುಂದಾಗಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನ ತಡೆದು ಸಂತೈಸಿದ್ದಾರೆ. ಮೃ*ತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು, ಪತ್ನಿ, ತಾಯಿಯನ್ನು ಅಗಲಿದ್ದಾರೆ.

Continue Reading

BANTWAL

ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

Published

on

ಬಂಟ್ವಾಳ : ಕಲ್ಲಡ್ಕ ಬಾಳ್ತಿಲ ಗ್ರಾಮದಲ್ಲಿದೆ ಕಾರಣಿಕದ ಕರ್ಲುರ್ಟಿ ಕ್ಷೇತ್ರ. ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ.  ಈ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ.

ಪವಾಡ ತೋರಿದ್ದ ಕಲ್ಲುರ್ಟಿ :

ಈಗಾಗಲೇ ತಿಳಿಸಿದಂತೆ ಈ ದೈವಸ್ಥಾನ ಹಿಂದು -ಮುಸಲ್ಮಾನ ಭಾಂದವರ ಭಾವೈಕ್ಯತೆಯ ಸಾನಿಧ್ಯ. ಕುದ್ರೆಬೆಟ್ಟುವಿನ ಒಂದು ಮುಸನ್ಮಾನ ಕುಟುಂಬ ಕಲ್ಲುರ್ಟಿ ದೈವವನ್ನು ನಂಬುತ್ತಿದ್ದರು. ಐಸಮ್ಮ ಎಂಬ ಮಹಿಳೆಯ ಕುಟುಂಬ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಕುಟುಂಬಕ್ಕೆ ಆ ಜಾಗದಲ್ಲಿ ಅಗೋಚರ ಶಕ್ತಿಯೊಂದು ಇರುವುದು ತಿಳಿಯುತ್ತದೆ. ನಂತರ ಅವರು ‘ಕಲ್ಲುರ್ಟಿ’ಯನ್ನು ಕಲ್ಲಿನ ರೂಪದಲ್ಲಿ ನಂಬಲು ಆರಂಭಿಸುತ್ತಾರೆ. ಕಷ್ಟ ಎಂದು ತನ್ನಲ್ಲಿಗೆ ಬಂದವರಿಗೆ ಐಸಮ್ಮ ಕಲ್ಲುರ್ಟಿಯ ಸ್ಮರಿಸಿ ಕಪ್ಪು ದಾರ ನೀಡುತ್ತಿದ್ದರು. ಇದರಿಂದ ಅವರ ತೊಂದರೆಗಳೆಲ್ಲ ನಿವಾರಣೆಯಾಗುತ್ತಿತ್ತು ಎಂಬ ನಂಬಿಕೆಯಿದೆ.

 

ಮನೆಯಲ್ಲಿ ವಿಶೇಷ ಅಡುಗೆ ಮಾಡಿದರೆ, ಆಕೆ ದೈವಕ್ಕೆ ಬಡಿಸದೇ ಸೇವಿಸುತ್ತಿರಲಿಲ್ಲ. ಒಂದುವೇಳೆ ತಪ್ಪಿದ್ದಲ್ಲಿ ಅಡುಗೆ ಮಾಡಿಟ್ಟಿದ್ದ ಪಾತ್ರೆಯೇ ದೈವದ ಕಲ್ಲಿನತ್ತ ಚಲಿಸುತ್ತಿತ್ತಂತೆ. ಆದರೆ, ಕಾಲಕ್ರಮೇಣ ಆ ಕುಟುಂಬ ಮನೆಯನ್ನು ಮಾರಿ ಬೇರೆ ಕಡೆ ಹೊರಟು ಹೋಗಿದ್ದರು.

ಮತ್ತೆ ಬೆಳಕಿಗೆ ಬಂದ ಕ್ಷೇತ್ರ :

ಆ ಮುಸಲ್ಮಾನ ಕುಟುಂಬವೇನೋ ಹೊರಟು ಹೋಯಿತು. ಶಕ್ತಿ ಅಲ್ಲೇ ಉಳಿಯಿತು. ಈ ಘಟನೆ ನಡೆದು ಹಲವು ದಶಕಗಳೇ ಕಳೆದಿವೆ. 15 ವರ್ಷಗಳಿಂದ ಇಲ್ಲಿ ಹಲವು ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಮಣಿಕಂಠ ಯುವಶಕ್ತಿ ಕೇಂದ್ರ ಭಜನಾ ಮಂದಿರವೊಂದನ್ನು ಸ್ಥಾಪಿಸುವ ಕೆಲಸ ಆರಂಭಿಸಿತ್ತು. ಆದರೆ, ಇದಕ್ಕೆ ತಡೆ ಬರಲಾರಂಭಿಸಿದಾಗ, ಮಂದಿರದಲ್ಲಿ ಪ್ರಶ್ನೆ ಇಟ್ಟಾಗ ‘ಯುವಶಕ್ತಿ’ ಯ ಯುವಕರು ತಾಯಿ ಕಲ್ಲುರ್ಟಿಯನ್ನು ನಂಬಬೇಕು ಎಂಬ ಅಪ್ಪಣೆಯಾಯಿತು.

ನಾವು ಬಿಟ್ಟೆವೆಂದು ದೈವ ಬಿಡುವುದೇ..? ಪೂ – ನೀರ್(ಹೂ-ನೀರು) ಸಲ್ಲದೇ ಹೋದಲ್ಲಿ ಹೇಗೆ? ಅಂತೆಯೇ, ಹಳೆಯ ದೈವಸ್ಥಾನ ಜೀರ್ಣೋದ್ಧಾರಗೊಂಡು ಹೊಸ ರೂಪ ಪಡೆದು ನಿಂತಿದೆ.

20 ದಿನಗಳಲ್ಲಿ ನಡೆಯಿತು ಜೀರ್ಣೋದ್ಧಾರ :

ದೈವದ ಅಭಯ ಯುವಕರ ಮೇಲಿತ್ತು. ಇಡೀ ಊರೇ ಅಚ್ಚರಿ ಪಡುವಂತೆ ತಾಯಿಯ ದೈವಸ್ಥಾನದ ಕಾರ್ಯ ನಡೆಯಿತು.  ಕೇವಲ 20 ದಿನಗಳಲ್ಲಿ ಅಪ್ಪೆ ಕಲ್ಲುರ್ಟಿಯ ಕ್ಷೇತ್ರ ತಲೆ ಎತ್ತಿ ನಿಂತಿತು ಅಂದರೆ ನೀವು ನಂಬಲೇ ಬೇಕು. ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಹಗಲಿರುಳು ಯುವಕರು ಶ್ರಮಿಸಿದ್ದಾರೆ. ಹುಬ್ಬೇರಿಸುವಂತಹ ಕೆಲಸ ಮಾಡಿದ ಶ್ರೀ ಮಣಿಕಂಠ ಯುವಶಕ್ತಿ ತಂಡದ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಕಾರ್ಯಕ್ರಮಗಳ ವಿವರ :

ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮೇ.3 ರಂದು ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ. ಮೇ.02 ರಂದು ಬೆಳಿಗ್ಗೆ ಶ್ರೀ ಮಣಿಕಂಠ ಸನ್ನಿಧಾನದಲ್ಲಿ ಗಣಹೋಮ, ಸಂಜೆ ಶಾಸ್ತ್ರ, ಕಲ್ಪೋಕ್ತ ಪೂಜೆ, ವಾಸ್ತು ಹೋಮಾದಿ ಅಧಿವಾಸ ನಡೆಯಲಿದೆ. ಸಂಜೆ 6.30 ರಿಂದ ‘ನಮ್ಮ ಕುಡ್ಲ’ ವಾಹಿನಿ ಖ್ಯಾತಿಯ ‘ಯಕ್ಷ ತೆಲಿಕೆ’ ಕಾರ್ಯಕ್ರಮ ನಡೆಯಲಿದೆ.

ಮೇ.03 ರಂದು ಬೆಳಿಗ್ಗೆ ಗಣಹೋಮ ಬಳಿಕ 10.00 ರಿಂದ 10.25ರ ಒಳಗೆ ಒದಗುವ ಮಿಥುನ ಲಗ್ನದ ಸುಮೂಹೂರ್ತದಲ್ಲಿ ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ ಇವರ ವೈದಿಕತ್ವದಲ್ಲಿ ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆ, ಸಾನಿಧ್ಯ ನವಕ ಕಲಶಾಭಿಷೇಕ, ಪರ್ವ ಸೇವೆ ನಡೆಯಲಿದೆ.

ಇದನ್ನೂ ಓದಿ : ಪುತ್ತೂರು: ಮಳೆಗಾಗಿ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ; ಶಾಸಕರು ಭಾಗಿ

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆದು, ರಾತ್ರಿ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.

Continue Reading

LATEST NEWS

Trending