Connect with us

LATEST NEWS

ಬದುಕನ್ನೇ ಬರಡು ಮಾಡುತ್ತಿದೆ ‘ಬಂಜೆತನ’..! ಕಾರಣವೇನು? ಏನು ಪರಿಹಾರ?

Published

on

ದುವೆ ಆದರೆ ಸಾಕು ಕೆಲವೇ ದಿನಗಳಲ್ಲಿ ಕೇಳಿ ಬರುವುದು ‘ಏನೂ ವಿಶೇಷ ಇಲ್ವಾ?’.. ಅನ್ನೋ ಪ್ರಶ್ನೆಗಳ ಸುರಿಮಳೆ ಹರಿಸ್ತಾರೆ. ಮಗು ಮಾಡಿಕೊಳ್ಳುವುದೋ ಬೇಡವೋ ಅನ್ನುವುದು ದಂಪತಿಗೆ ಬಿಟ್ಟ ವಿಚಾರ. ಯಾವುದೇ ಶುಭ ಕಾರ್ಯಕ್ಕೆ ಹೋದರೆ ಇದೇ ಮಾತು ಕೇಳೋಕೆ ಸಿಗುತ್ತೆ.

ಅದೇನೆ ಇರಲಿ ಮದುವೆ ನಂತರ ಮಕ್ಕಳ ಯೋಜನೆಯನ್ನು ಹಾಕ್ತಾರೆ. ಕುಟುಂಬಕ್ಕೆ ಸಂಪೂರ್ಣತೆ ಹೊಂದುವುದೆ ಇಬ್ಬರಿಂದ ಮೂವರಾದಾಗ. ಮಗುವಿನ ಜನನದಿಂದ ಜೀವನವೇ ಬದಲಾಗುತ್ತೆ. ಹಿಂದಿನ ಕಾಲದಲ್ಲಿ ಹತ್ತು ಹನ್ನೆರಡು ಮಕ್ಕಳನ್ನು ಹೆರುತ್ತಿದ್ರು. ಆದ್ರೆ ಈಗಿನ ಕಾಲದಲ್ಲಿ ಒಂದು ಮಗು ಹೆರಲು ಸಾಧ್ಯ ವಾಗುತ್ತಿಲ್ಲ. ಹಿಂದಿನ ಕಾಲದ ಆಹಾರ ಪದ್ಧತಿಯೂ ಒಂದು ಕಾರಣ ಅಂತಾರೆ ಕೆಲವರು.

ಇತ್ತೀಚೆಗೆ ಭಾರತದಲ್ಲಿ ಬಂಜೆತನ ಅನ್ನೋದು ಸಾಮಾನ್ಯ ಆಗಿಬಿಟ್ಟಿದೆ. ಬಂಜೆತನವನ್ನು ಸಾಮಾನ್ಯವಾಗಿ ಶಾಶ್ವತ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಇದರಿಂದ ದಂಪತಿ ಹತಾಶರಾಗುತ್ತಾರೆ, ನೋವು ಪಡುತ್ತಾರೆ. ಆದರೆ ಬಂಜೆತನವು ಕೆಲವೊಮ್ಮೆ ತಾತ್ಕಾಲಿಕವಾಗಿರಬಹುದು ಎಂದು ವೈದ್ಯಕೀಯದಲ್ಲಿ ಹೇಳುತ್ತಾರೆ.

ಹಾಗಾದರೆ ಬಂಜೆತನ ಹೇಗೆ ಉಂಟಾಗುತ್ತೆ?:

ದಂಪತಿಗೆ ಮಗು ಆಗಬೇಕಿದ್ರೆ ಗಂಡ ಹೆಂಡತಿ ಇಬ್ಬರೂ ಆರೋಗ್ಯವಂತರಾಗಿರಬೇಕು. ಒಳ್ಳೆಯ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಗಂಡನಿಂದ ಸಂತಾನೋತ್ಪತ್ತಿ ಆಗದೇ ಇದ್ದರೆ ಅದನ್ನು ನಪುಂಸಕತೆ ಎಂದು ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಮಕ್ಕಳು ಆಗದಿದ್ರೆ ಅದನ್ನು ಬಂಜೆತನ ಅಥವಾ ಇನ್‌ಫರ್ಟಿಲಿಟಿ ಎಂದು ಕರೀತಾರೆ.

ಬಂಜೆತನಕ್ಕೆ ಕಾರಣವೇನು?

ಅತಿಯಾದ ಒತ್ತಡ: ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್ ಇದರ ಪ್ರಕಾರ ಅತಿಯಾದ ಒತ್ತಡವೂ ಮಹಿಳೆಯರಿಗೆ ಬಂಜೆತನಕ್ಕೆ ಕಾರಣವಾಗುತ್ತದೆ. ಗೃಹಿಣಿಯರಿಗೆ ಹಾಗೂ ಹೊರಗಡೆ ದುಡಿಯುತ್ತಿರುವ ಮಹಿಳೆಯರಲ್ಲಿ ಹೆಚ್ಚಾಗಿ ಬಂಜೆತನ ಕಾಡುತ್ತದೆ. ಕೆಲವು ಅಫೀಸುಗಳಲ್ಲಿ ಕೆಲಸದ ಒತ್ತಡ ಇರುವುದರಿಂದ, ರಾತ್ರಿ ಪಾಳಿಯ ಕೆಲಸದಿಂದ ಒತ್ತಡ ಹೆಚ್ಚಾಗುತ್ತದೆ. ರಾತ್ರಿಪಾಳಿಯ ಕೆಲಸ ನಮ್ಮ ದೇಹದಲ್ಲಿ ನಡೆಯುವ ಕ್ರಿಯೆಯನ್ನು ಏರುಪೇರು ಮಾಡುತ್ತದೆ. ಹಗಲಿನ ಸಮಯ ದುಡಿಯಬೇಕು, ರಾತ್ರಿ ವೇಳೆ ದೇಹಕ್ಕೆ, ಮನಸ್ಸಿಗೆ ವಿಶ್ರಾಂತಿಯನ್ನು ಕೊಡಬೇಕಾದ ಸಮಯ.  ಒಟ್ಟಾರೆಯಾಗಿ ಹೇಳಬೇಕಾದ್ರೆ ಕೆಲಸದ ಸಮಯದಲ್ಲಿ ನಿದ್ದೆ, ನಿದ್ದೆಯ ಸಮಯದಲ್ಲಿ ಕಲಸ ಮಾಡಿದ್ರೆ ಇದು ಪ್ರಕೃತಿಯ ನಿಯಮದ ವಿರುದ್ಧವಾಗುತ್ತದೆ. ಇದು ಅನಾರೋಗ್ಯಕ್ಕೆ ಎಡವು ಮಾಡಿಕೊಡುತ್ತದೆ. ಜೊತೆಗೆ ಇದು ಹೆಣ್ಣುಮಕ್ಕಳಲ್ಲಿ ಮುಟ್ಟಿನ ಸಮಸ್ಯೆಯನ್ನು ಉಂಟು ಮಾಡುತ್ತದೆ.

Depression

ನಿಗದಿತ ಸಮಯಕ್ಕಿಂತ ಮೊದಲೇ ಮೆನೋಪಾಸ್ ಉಂಟಾಗುವುದು ಮತ್ತು ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್ ನಂತಹ ಮುಟ್ಟು ಸಂಬಂಧಿತ ಕಾಯಿಲೆಗಳು ಹೆಣ್ಣುಮಕ್ಕಳಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ಕೂದಲು ಉದುರುವಿಕೆ,  ಕೋಪ, ಮೊಡವೆ, ಅನಗತ್ಯ ಕೂದಲು ಬೆಳವಣಿಗೆ, ಕೋಪ ದುಖಃ ಜೀವನ ಶೈಲಿಯ ಭಾಗವಾಗುತ್ತದೆ. ಇದಕ್ಕೆಲ್ಲಾ ಕಾರಣ ಹೆಣ್ಮಕ್ಕಳಿಗೆ ಇರುವ ಅತಿಯಾದ ಒತ್ತಡ. ಇದರಿಂದಾಗಿ ಪಿಸೊಓಡಿ ಅಂತಹ ಪಿಸಿಒಎಸ್ ಬಲಿಯಾದ್ರೆ ಮಾತ್ರೆಗಳಿಗೆ ಡಿಪೆಂಡ್ ಆಗಬೇಕಾಗುತ್ತದೆ.

ಮೆನೋಪಾಸ್: ಹೆಣ್ಣಿಗೆ ದೀರ್ಘಕಾಲದವರೆಗೆ ಅಂದ್ರೆ ಸತತವಾಗಿ 12 ತಿಂಗಳ ಕಾಲ ಮುಟ್ಟು ಆಗದೇ ಇದ್ದರೆ ಮುಟ್ಟು ನಿಂತುಹೋಗಿದೆ ಎಂದು ಅರ್ಥ. ಇದನ್ನ ಮೆನೋಪಾಸ್ ಅಥವಾ ರಜೋನಿವೃತ್ತಿ ಎಂದು ಕರೀತಾರೆ. ಮೆನೋಪಾಸ್ ಉಂಟಾದರೆ ಓವಿಲೇಶನ್ ಅಥವಾ ಅಂಡೋತ್ಪತ್ತಿ ಆಗುವುದಿಲ್ಲ. ಅಂದರೆ ಸಂತಾನೋತ್ಪತ್ತಿ ಆಗಲು ಸಾಧ್ಯವಿಲ್ಲ ಎಂದರ್ಥ. 45ರಿಂದ 55 ವರ್ಷದವರೆಗೆ ಮಹಿಳೆಯರಲ್ಲಿ ಮೆನೋಪಾಸ್ ಉಂಟಾಗುತ್ತದೆ. ಭಾರತದಲ್ಲಿ ಶೇ.4ರಷ್ಟು ಹೆಣ್ಣು ಮಕ್ಕಳಲ್ಲಿ ತಮ್ಮ 29 ರಿಂದ 34ವರ್ಷದವರಿಗೆ ಹಾಗೂ ಶೇ.8ರಷ್ಟು ಹೆಣ್ಣುಮಕ್ಕಳು 35 ರಿಂದ 39 ವರ್ಷದವರೆಗೆ ಮೆನೋಪಾಸ್ ಹೊಂದಿರುತ್ತಾರೆ.

ಮೆನೋಪಾಸ್‌ಗೆ ಕಾರಣ ಧೂಮಪಾನ, ಕೆಲವೊಂದು ಸ್ಯಾನಿಟರಿ ಪ್ಯಾಡ್ಸ್, ಅನಾರೋಗ್ಯಕರ ಆಹಾರ ಪದ್ಧತಿ ಅಂದ್ರೆ ಜಂಕ್ಸ್ ಫುಡ್, ಫ್ರೈಗಳು, ಕೂಲ್ ಡ್ರಿಂಕ್ಸ್ ಸೆವನೆಯಿಂದ, ದಿನನಿತ್ಯ ಬಳಸುವ ಕಾಸ್ಮೆಟಿಕ್ಸ್ ನಲ್ಲಿರುವ ಕೆಮಿಕಲ್ಸ್‌ನಿಂದಾಗಿ,  ಕೆಮಿಕಲ್ ವಸ್ತುಗಳು ಬಂಜೆತನಕ್ಕೆ ಕಾರಣವಾಗಬಹುದು.

ಬಂಜೆತನದ ಲಕ್ಷಣಗಳು:

ಗರ್ಭಿಣಿ ಆಗದೆ ಇರುವುದು, ಗರ್ಭಪಾತ ಅನಿಯಮಿತ ಋತುಚಕ್ರ

ಪರಿಹಾರ ಇದೆಯೇ?

ಸ್ಟ್ರೆಸ್ ಫ್ರೀ ಲೈಫ್: ಸಣ್ಣ ವಯಸ್ಸಿನಲ್ಲಿ ಬಂಜೆತನ ಕಂಡುಬಂದಲ್ಲಿ ಇದಕ್ಕೆ ಆಯುರ್ವೇದಲ್ಲಿ ಚಿಕಿತ್ಸೆ ಇದೆ. ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಕಣ್ಣಿಗೆ ಮನಸ್ಸಿಗೆ ಹಾಯ್‌ ಅನ್ನುವಷ್ಟು ಉತ್ತಮ ನಿದ್ದೆ, ಸೆಲ್ಫ್ ಕ್ಯಾರ್ ಅಂದ್ರೆ ಕುಟುಂಬದ ಮಾನಸಿಕ ಸ್ವಾಸ್ಥ್ಯ ಹಾಗೂ ದೈಹಿಕ ಸ್ವಾಸ್ಥ್ಯ ಉತ್ತಮವಾಗಿರಬೇಕಾದರೆ ಯೋಗಾಸನ, ಪುಸ್ತಕ ಓದುವುದು, ಬರವಣಿಗೆ, ಕಸೂತಿ, ಹೀಗೆ ನಾನಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಬೇಕು. ಸೂರ್ಯ ನಮಸ್ಕಾರ, ಪ್ರಾಣಾಯಾಮದಿಂದ ಟ್ರೆಸ್ ಫ್ರೀ ಲೈಫ್‌ಅನ್ನು ತಮ್ಮದಾಗಿಸಿಕೊಳ್ಳಬೇಕು.

Yogasana

ಉತ್ತಮ ಆರೋಗ್ಯ ಪದ್ಧತಿ: ಫಾಸ್ಟ್‌ಫುಡ್‌ ನಿಂದ ಆದಷ್ಟೂ ದೂರ ಇರಿ. ಆರೋಗ್ಯಕರ ಆಹಾರ ಸೇವನೆಯಿಂದ ಅಂದ್ರೆ ಮೊಳಕೆ ಬಂದ ಕಾಳುಗಳು, ಸೊಪ್ಪು ತರಕಾರಿ, ಹಣ್ಣು ಹಂಪಲುಗಳನ್ನು ಸೇವಿಸುವುರಿಂದ ನಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇಡಬಹುದು. ಬೆಳಿಗ್ಗೆನ ಉಪಹಾರವನ್ನು ಸ್ಕಿಪ್ ಮಾಡಬಾರದು. ಬೆಳಗ್ಗಿನ ಜಾವ ಮೊಟ್ಟೆ, ಹಾಲು, ಪೌಷ್ಟಿಕಾಂಶವುಳ್ಳ ಪುಡ್‌ಗಳನ್ನು ಸೇವಿಸಬೇಕು.  ಇತ್ತೀಚಿನ ದಿನಗಳಲ್ಲಿ ಝೀರೋ ಸೈಜ್, ಡಯಟ್ ಗೆ ಮಾರು ಹೋಗ್ತಾ ಇರುವ ಮಹಿಳೆಯರು ತಮ್ಮ ಉತ್ತಮ ಆಹಾರದ ಕಡೆಗೂ ಗಮನಕೊಡಬೇಕು.

Healthy food

ಈ ಕೊಂಚ ಪ್ರಾಯ ಹೆಚ್ಚಾದವರು ಬಂಜೆತನದಿಂದ ಬೇಸತ್ತಿದ್ದರೆ ಅವರಿಗೆ ಈಗಿನ ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಅನೇಕ ಮಾರ್ಗಗಳಿದೆ.  ಐವಿಎಫ್, ಐಸಿಎಸ್ ಐ ಅನ್ನುವ ಚಿಕಿತ್ಸೆಗಳ ಮೊರೆ ಹೋಗಬಹುದು. ಸೂಕ್ತ ವೈದ್ಯರನ್ನು ಭೇಟಿ ಮಾಹಿತಿಯನ್ನು ಪಡೆದುಕೊಳ್ಳಿ.

 

FILM

ಕ್ಲಿಕ್ ಆಯ್ತು ‘ಪುಷ್ಪ ಪುಷ್ಪ’…ಅಲ್ಲು ಅರ್ಜುನ್ ಮಾಸ್ ಲುಕ್; ಸಕತ್  ಸ್ಟೆಪ್ಸ್ ಗೆ ಫ್ಯಾನ್ಸ್ ಫಿದಾ

Published

on

ಟಾಲಿವುಡ್ : ಸದ್ಯ ಟಾಲಿವುಡ್ ಅಂಗಳದಲ್ಲಿ ‘ಪುಷ್ಪ 2 : ದಿ ರೂಲ್‌’ ಸೌಂಡ್ ಜೋರಾಗಿದೆ. ಅಲ್ಲು ಅರ್ಜುನ್ ಸಿನಿಮಾ ಅಂದ್ರೆ ಹೇಳ್ಬೇಕಾ..ಮೊದಲೇ ಕ್ರೇಜ್ ಹೆಚ್ಚಿಸಿರುತ್ತೆ. ಪುಷ್ಪ ಈಗಾಗಲೇ ಫಸ್ಟ್ ಲುಕ್, ಟೀಸರ್ ಎಲ್ಲದರ ಮೂಲಕಾನೂ ನಿರೀಕ್ಷೆ ಹೆಚ್ಚಿಸುತ್ತಿದೆ. ಇದೀಗ ಹಾಡಿನ ಸರದಿ.


ಅಲ್ಲು ಅರ್ಜುನ್ ಮಾಸ್ ಲುಕ್; ಸಕತ್  ಸ್ಟೆಪ್ಸ್ :

‘ಪುಷ್ಪ 2 : ದಿ ರೂಲ್‌’ ಸಿನಿಮಾದ ಕುರಿತು ಯಾವ ಅಪ್ಡೇಟ್ ಕೊಡುತ್ತದೆ ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಮೇ 1 ರಂದು ಸಿನೆಮಾದ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. ಪುಷ್ಪ ಪುಷ್ಪ ಅನ್ನೋ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಅಲ್ಲು ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮಾಸ್ ಲುಕ್ ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿರೋದಂತೂ ಸುಳ್ಳಲ್ಲ. ಎಂದಿನಂತೆ ಅಲ್ಲು ಡ್ಯಾನ್ಸ್ ಸಕತ್ತಾಗಿಯೇ ಇದೆ. ಟೀ ಗ್ಲಾಸ್ ಹಿಡಿದು ಅಲ್ಲು ಅರ್ಜುನ್ ವ್ಹಾವ್ ಎಂದೆನಿಸುವಂತೆ ಸ್ಟೆಪ್ ಹಾಕಿದ್ದಾರೆ.

ಬಿಡುಗಡೆಯಾದ ಕೆಲವೇ ಘಂಟೆಯಲ್ಲಿ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ಸದ್ಯ 9.7 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಮೂಲಕ ಭಾರತದಲ್ಲಿನ ಸಂಗೀತ ಪಟ್ಟಿಯಲ್ಲಿ ಈ ಹಾಡು ಅಗ್ರಸ್ಥಾನ ಪಡೆದುಕೊಂಡಿದೆ.

ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅಲ್ಲು ಅರ್ಜುನ್ ಪಾತ್ರದ ಮೇಲೆ ಚಿತ್ರಿಸಲಾಗಿದೆ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು ,ನಕಾಶ್ ಅಜೀಜ್, ದೀಪಕ್ ಬ್ಲೂ ದನಿಯಾಗಿದ್ದಾರೆ.  ‘ಪುಷ್ಪ ಪುಷ್ಪ’ ಹಾಡು ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ಬೆಂಗಾಲಿ ಎಂಬ ಆರು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ : 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ತೆರೆಗೆ ಯಾವಾಗ?

ಅಲ್ಲು ಅರ್ಜುನ್ ಜೊತೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್ , ಡಾಲಿ ಧನಂಜಯ್, ಜಗದೀಶ್ ಪ್ರತಾಪ್ ಭಂಡಾರಿ, ರಾವ್ ರಮೇಶ್, ಜಗಪತಿ ಬಾಬು, ಅಜಯ್, ಸುನಿಲ್, ಮೈಮ್ ಗೋಪಿ, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮೊದಲಾದವರು ಪಾತ್ರವಾಗಿದ್ದಾರೆ.

‘ಪುಷ್ಪ 2: ದಿ ರೂಲ್’ ಆಗಸ್ಟ್ 15, 2024 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾದಲ್ಲಿದ್ದ ಆಕ್ಷನ್‌ ಗಿಂತ ಹೆಚ್ಚಿನ ಆಕ್ಷನ್ ಪುಷ್ಪಾ 2 ನಲ್ಲಿ ಇರಲಿದೆಯಂತೆ. ಪುಷ್ಪಾದಲ್ಲಿ ಮರಗಳ್ಳತನದ ಕಥೆ ಇದ್ರೆ, ಪುಷ್ಪಾ2 ನಲ್ಲಿ ಕೆಂಪು ಮರಳು ಕಳ್ಳಸಾಗಾಟದ ಬಗ್ಗೆ ಹೇಳಲಾಗಿದೆ.

Continue Reading

LATEST NEWS

ಹೊಸ ಅಪ್​ಡೇಟ್ ನೊಂದಿಗೆ ಬರುತ್ತಿದೆ ವಾಟ್ಸ್ಆ್ಯಪ್; ಏನದು ಗೊತ್ತಾ!?

Published

on

ಮಂಗಳೂರು : ಆ್ಯಪ್ ಗಳು ಅಂದ್ರೆ ಹೊಸ ಹೊಸ ಫೀಚರ್ ಗಳ ಅನಾವರಣ ಮಾಡುತ್ತಿರುತ್ತವೆ. ಬಳಕೆದಾರರಿಗೆ ಅನುಕೂಲತೆಯನ್ನು ಸೃಷ್ಟಿಸಲು ನವೀನ ಫೀಚರ್ ಗಳನ್ನು ಅಳವಡಿಸಲಾಗುತ್ತದೆ. ವಾಟ್ಸ್ ಆ್ಯಪ್ ಕೂಡ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುತ್ತದೆ. ಇದೀಗ ಮತ್ತೊಂದು ಹೊಸ ಫೀಚರ್ ಪರಿಚಯಿಸುತ್ತಿದೆ.


ಏನಿದು ಫೀಚರ್ ?

ವಾಟ್ಸ್ ಆ್ಯಪ್ ಗೆ ಅತ್ಯಂತ ಹೆಚ್ಚಿನ ಬಳಕೆದಾರರಿದ್ದಾರೆ. ಈಗಾಗಲೇ ನೂತನ ಫೀಚರ್ ಗಳನ್ನು ವಾಟ್ಸ್ ಆ್ಯಪ್ ಪರಿಚಯಿಸುತ್ತಿರುತ್ತದೆ. ಇದೀಗ ಹೊಸ ಫೀಚರ್​ವೊಂದನ್ನು ಪರಿಶೀಲಿಸುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್​ನಲ್ಲಿ ಫೋಟೋ, ವೀಡಿಯೋ ಇತ್ಯಾದಿ ಫೈಲ್ ಶೇರಿಂಗ್ ಮಾಡಲು ಅವಕಾಶ ಕೊಡುವ ಫೀಚರ್ ಇದಾಗಿದೆ. ಬೀಟಾ ಆವೃತ್ತಿಯಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ : 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ನಿಯರ್ ​ಬೈ ಡಿವೈಸ್, ಕ್ವಿಕ್ ಶೇರಿಂಗ್ ಇತ್ಯಾದಿ ಫೀಚರ್ ರೀತಿಯಲ್ಲಿ ಇದು ಇರಬಹುದು ಎನ್ನಲಾಗಿದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ವಾಟ್ಸ್ ಆ್ಯಪ್ ಜನಪ್ರಿಯ. ಜನರಿಗೆ ಹೆಚ್ಚಿನ ಖಾಸಗಿತನ ಮತ್ತು ಭದ್ರತೆಯನ್ನು ಒದಗಿಸಲು ಕೂಡ ವಾಟ್ಸ್​​ಆ್ಯಪ್ ಸಹಾಯ ಮಾಡುತ್ತದೆ.

Continue Reading

LATEST NEWS

123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

Published

on

ದೆಹಲಿ: ಭಾರತೀಯ ಹವಾಮಾನ ಇಲಾಖೆ ಮೇ ತಿಂಗಳ ಹವಾಮಾನ ಮುನ್ಸೂಚನೆ ಬಿಡುಗಡೆ ಮಾಡಿದ್ದು ಇದೀಗ ಅಚ್ಚರಿ ಮೂಡಿಸಿದೆ. 1901ರ ನಂತರ ಏಪ್ರಿಲ್‌ನಲ್ಲಿ ಇಷ್ಟೊಂದು ತಾಪಮಾನವನ್ನು ದಾಖಲಿಸಿರುವುದು ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

havamana

ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎಪ್ರಿಲ್‌ ತಿಂಗಳಿನಲ್ಲಿ ಹೆಚ್ಚು ತಾಪಮಾನ ದಾಖಲಾಗಿದೆ. ದೇಶದಲ್ಲಿ 1901ರ ನಂತರ ಇದೇ ಮೊದಲ ಬಾರಿಗೆ ಹೆಚ್ಚು ತಾಪಮಾನ ಏರಿಕೆಯಾಗಿರುವುದು. ಎಪ್ರಿಲ್ ತಿಂಗಳಿನಲ್ಲಿ ಕೆಲವು ಕಡೆ ಆಲಿಕಲ್ಲು ಸಹಿತೆ ಮಳೆ ಬಂದಿದ್ದು, ಮೇ ತಿಂಗಳಿನಲ್ಲಿ ಹೆಚ್ಚಿನ ಉರಿಬಿಸಿಲು, ಶಾಖ ಮತ್ತು ಆಲಿಕಲ್ಲು ಮುಂದವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಇನ್ನು ಮೇ ತಿಂಗಳಿನಲ್ಲಿ ಬಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಇನ್ನು 11 ದಿನಗಳ ಕಾಲ ಬಿಸಿಗಾಳಿ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮುಂದೆ ಓದಿ..; ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಏಪ್ರಿಲ್ 5 ರಿಂದ 7 ರವರೆಗೆ, ನಂತರ 15 ರಿಂದ 30 ರವರೆಗೆ ಹೆಚ್ಚಿನ ತಾಪಮಾನ ಮತ್ತು ಆಲಿಕಲ್ಲು ಮಳೆಯಾಗಿದೆ. ಸರಾಸರಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸರಾಸರಿ ಕನಿಷ್ಠ ತಾಪಮಾನ 28.12 ಡಿಗ್ರಿ ಸೆಲ್ಸಿಯಸ್ ಎಂದು ಮೊಹಾಪಾತ್ರ ಹೇಳಿದ್ದಾರೆ. ದಕ್ಷಿಣ ಪರ್ಯಾಯ ದ್ವೀಪದ ಭಾರತದಲ್ಲಿ 1980 ರ ದಶಕದಿಂದಲೂ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವು ಸಾಮಾನ್ಯವಾಗಿದೆ ಎಂದು ಅವರು ವರದಿ ಮಾಡಿದ್ದಾರೆ.

ಮುಂದಿನ 11 ದಿನದ ಶಾಖದ ಅಲೆ, ಆಲಿಕಲ್ಲು ಮಳೆ:

ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಗುಜರಾತ್‌ನಲ್ಲಿ ಮೇ ತಿಂಗಳಲ್ಲಿ 8-11 ದಿನಗಳವರೆಗೆ ಶಾಖದ ಅಲೆಗಳು ಇರಬಹುದೆಂದು ಮಹಾಪಾತ್ರ ಹೇಳಿದ್ದಾರೆ. ರಾಜಸ್ಥಾನ, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಛತ್ತೀಸ್‌ಗಢ, ಆಂತರಿಕ ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಒಳಭಾಗ ಕರ್ನಾಟಕ, ತೆಲಂಗಾಣದಲ್ಲಿ 5-5 ವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಉತ್ತರ ಭಾರತ, ಮಧ್ಯ ಭಾರತ ಮತ್ತು ಪೆನಿನ್ಸುಲಾರ್ ಭಾರತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಮೂರು ದಿನಗಳ ಕಾಲ ಆಲಿಕಲ್ಲು ಮಳೆಯಾಗುತ್ತದೆ ಎಂದು ಹೇಳಿದ್ದಾರೆ.

Continue Reading

LATEST NEWS

Trending