Connect with us

    DAKSHINA KANNADA

    ಡೆ*ತ್ ನೋಟ್ ಬರೆದು ನೇ*ಣಿಗೆ ಶರಣಾದ ವಿದ್ಯಾರ್ಥಿನಿ !!

    Published

    on

    ಮುಲ್ಕಿ: ಸಣ್ಣ ಸಣ್ಣ ಕಾರಣಗಳಿಗೆ ವಿದ್ಯಾರ್ಥಿಗಳು ಸಾ*ವಿನ ಹಾದಿಯನ್ನಿಡಿಯುವ ಅದೆಷ್ಟೋ ಘಟನೆಗಳು ನಡೆಯುತ್ತಿವೆ. ಇದೀಗ ಅಂತಹದ್ದೇ ಒಂದು ಪ್ರಕರಣ ದಾಖಲಾಗಿದ್ದು, ಡೆ*ತ್ ನೋ*ಟ್ ಬರೆದಿಟ್ಟು ವಿದ್ಯಾರ್ಥಿನಿ ನೇ*ಣಿಗೆ ಶರಣಾಗಿರುವ ಘಟನೆ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ರೈಲ್ವೆ ಗೇಟ್ ಬಳಿಯ ಕ್ವಾಟರ್ಸ್‌ನಲ್ಲಿ ನಡೆದಿದೆ.


    ಕೊಂಕಣ ರೈಲ್ವೆ ಗೇಟ್ ಸಿಬ್ಬಂದಿ ಮಹೇಶ್ ನಾಯಕ್ ಎಂಬವರ ಪುತ್ರಿ ಉಜ್ವಲ (17) ಶನಿವಾರ (ಸೆ.28) ಸಂಜೆ ರೈಲ್ವೇ ಕ್ವಾಟರ್ಸ್‌ನ ಮನೆಯ ಎದುರು ಬದಿಯ ಕೋಣೆಯಲ್ಲಿ ಡೆ*ತ್ ನೋಟ್ ಬರೆದಿಟ್ಟು ಪ್ಯಾನ್‌ಗೆ ನೇ*ಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.
    ಉಜ್ವಲ ಮುಲ್ಕಿ ವಿಜಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ನಡೆದ ಮೀಟಿಂಗ್ ಮುಗಿದ ಬಳಿಕ ಮನೆ ಕಡೆ ಬಂದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಏಕಾ ಏಕಿ ಈ ಕೃ*ತ್ಯ ಎಸಗಿದ್ದಾಳೆ.
    ಆತ್ಮ*ಹತ್ಯೆ ಸಂದರ್ಭ ತಂದೆ ಮಹೇಶ್ ನಾಯಕ್ ಮೈಲೊಟ್ಟು ರೈಲ್ವೇ ಗೇಟ್ ಬಳಿ ಕರ್ತವ್ಯಕ್ಕೆ ಹೋಗಿದ್ದರು. ತಾಯಿ ತನ್ನ ಊರಾದ ಭಟ್ಕಳಕ್ಕೆ ತೆರಳಿದ್ದರು. ಮೃತಳ ಅಣ್ಣ ಮುಕ್ಕ ಕಾಲೇಜಿನಲ್ಲಿ ಕಲಿಯುತ್ತಿದ್ದು ಕಾಲೇಜು ಮುಗಿಸಿ ಸಂಜೆ 6:30 ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಡೆತ್‌ ನೋಟ್‌ನಲ್ಲಿ ಏನಿದೆ?
    ಮೃತಳ ರೂಮ್‌ನಲ್ಲಿದ್ದ ಡೆ*ತ್ ನೋಟಲ್ಲಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಕೆಯ ಬಗ್ಗೆ ಬರೆದಿದ್ದಾಳೆ. ತೋಟದ ಮನೆಯಲ್ಲಿ ಅಂತಿಮ ಕ್ರಿಯೆ ನಡೆಯಬೇಕು ಎಂಬುವುದಾಗಿಯೂ ಉಲ್ಲೇಖಿಸಿದ್ದಾಳೆ.
    ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಹಾವು ಕಡಿತಕ್ಕೆ ಒಳಗಾದ ಯುವಕ..! ಸ್ಕೂಟರ್ ಸೀಟ್ ಅಡಿಯಲ್ಲಿತ್ತು ವಿಷಕಾರಿ ಹಾವು..!

    Published

    on

    ಮಂಗಳೂರು : ಸ್ಕೂಟರ್ ಸೀಟಿನ ಕೆಳಗೆ ಇದ್ದ ಹಾವೊಂದು ಸ್ಕೂಟರ್ ಸವಾರಿನಿಗೆ ಕಚ್ಚಿದ ಘಟನೆ ಮಂಗಳೂರು ಹೊರವಲಯದ ಗುರುಪುರದ ಬಳಿಯ ಕೈಕಂಬದಲ್ಲಿ ನಡೆದಿದೆ. ಕುಪ್ಪೆಪದವು ಎಂಬಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದ ಇಮ್ತಿಯಾಜ್‌ ಎಂಬವರ ಇವಿ ಸ್ಕೂಟರ್‌ ಸೀಟ್ ಒಳಗೆ ಹಾವೊಂದು ಸೇರಿಕೊಂಡಿತ್ತು.

    ಸೀಟ್ ಅಡಿಯಲ್ಲಿತ್ತು ಕೊಳಕಮಂಡಲ (ಕಂದಡಿ) ಹಾವು :

    ಇಮ್ತಿಯಾಜ್‌ ಅವರು ಸ್ಕೂಟರ್ ನಿಲ್ಲಿಸಿ ಹೋಗಿದ್ದ ವೇಳೆ ಅಪಾಯಕಾರಿ ಕೊಳಕಮಂಡಲ ಹಾವು ಇವರ ಸೀಟ್ ಅಡಿಗೆ ಸೇರಿಕೊಂಡಿದೆ. ತುಳುವಿನಲ್ಲಿ ಕಂದಡಿ ಅಥವಾ ಕಂದೊಡಿ, ಎಂದು ಕರೆಯುವ ಈ ಹಾವು ವಿಷಕಾರಿಯಾಗಿದ್ದು, ಇದು ಕಚ್ಚಿದ ಭಾಗ ಕೊಳೆಯಲು ಆರಂಭಿಸುತ್ತದೆ. ಸೆಪ್ಟಂಬರ್ 27 ರಂದು ಇಮ್ತಿಯಾಜ್‌ ಅವರು ಕೆಲಸ ಮುಗಿಸಿ ರಾತ್ರಿ ವೇಳೆ ಮನೆಗೆ ತೆರಳಲು ಸಿದ್ಧತೆ ನಡೆಸಿದ್ದ ವೇಳೆ ಈ ವಿಷಕಾರಿ ಹಾವಿನ ಕಡಿತಕ್ಕೆ ಒಳಗಾಗಿದ್ದಾರೆ. ಸೀಟ್ ಮೇಲೆತ್ತಿ ಕಾಗದ ಪತ್ರಗಳನ್ನು ಒಳಗೆ ಇರಿಸುವ ವೇಳೆ ಅಲ್ಲಿ ಹಾಯಾಗಿ ಮಲಗಿದ್ದ ಈ ಹಾವು ಇಮ್ತಿಯಾಜ್ ಅವರ ಕೈಗೆ ಕಚ್ಚಿದೆ.


    ತಕ್ಷಣವೇ ಇಮ್ತಿಯಾಜ್ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದ್ದು, ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೊಳಕ ಮಂಡಲ ಹಾವು ವಿಷಕಾರಿಯಾಗಿದ್ದರೂ ತಕ್ಷಣ ಸೂಕ್ತ ಚಿಕಿತ್ಸೆ ದೊರೆತರೆ ಜೀವಕ್ಕೆ ಯಾವುದೇ ಅಪಾಯ ಉಂಟಾಗುವುದಿಲ್ಲ.

    Continue Reading

    DAKSHINA KANNADA

    ಈಜಾಡಲು ಹೋಗಿ ನೀ*ರುಪಾಲಾದ ಇಬ್ಬರು ಗೆಳೆಯರು

    Published

    on

    ಬಜಪೆ: ನದಿ ನೀರು ಕಂಡಾಗ ಈಜುವ ಎಂದು ಅನಿಸುವುದು ಸಾಮಾನ್ಯ. ಕಲವೊಮ್ಮೆ ನೀರಿನ ಆಳ ಎಷ್ಟಿದೆ ಎಂಬ ಪರಿವೇ ಇರುವುದಿಲ್ಲ. ತಿಳಿದವರು ಎಚ್ಚರಿಕೆ ನೀಡಿದರೂ ಕಡೆಗಣಿಸಿ ಅಪಾಯವನ್ನು ತಂದೊಪ್ಪಿಕೊಂಡಿರುವ ಎಷ್ಟೋ ಉದಾಹರಣೆಗಳಿವೆ.


    ಇದೀಗ ಅಂತಹದ್ದೇ ಒಂದು ಘಟನೆ ಮಳವೂರು ರೈಲ್ವೇ ಸೇತುವೆ ಬಳಿ ಫಲ್ಗುಣಿ ನದಿಯ ನೀರಿನಲ್ಲಿ ನಿನ್ನೆ (ಸೆ.29) ಸಂಜೆ 4 ರ ವೇಳೆ ಈಜಾಡಲು ತೆರಳಿದ್ದ ನಾಲ್ಕು ಮಂದಿಯಲ್ಲಿ ಇಬ್ಬರು ನೀ*ರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
    ಏನಿದು ಪ್ರಕರಣ?
    ಮಂಗಳೂರು ನಗರದ ಕೋಟಿಕಲ್‌ ಅರುಣ್ (19), ದೀಕ್ಷಿತ್ (20), ಕೊಟ್ಟರ ಚೌಕಿಯ ಸುಮಿತ್ (20) ಹಾಗೂ ಉರ್ವಸ್ಟೋರಿನ ಅನೀಶ್ (19) ಎಂಬುವವರು ಮಳವೂರು ರೈಲ್ವೇ ಸೇತುವೆ ಬಳಿ ಫಲ್ಗುಣಿ ನದಿಯಲ್ಲಿ ಈಜಾಡಲು ಹೋಗಿದ್ದರು. ನಾಲ್ವರ ಪೈಕಿ ಸುಮಿತ್ ಮತ್ತು ಅನೀಶ್ ನೀರಿನ ಸು*ಳಿಗೆ ಸಿಕ್ಕಿಕೊಂಡು ನೀರುಪಾ*ಲಾಗಿದ್ದಾರೆ.
    ತಕ್ಷಣವೇ ಬಜಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿದ್ದು, ಹುಡುಕಾಟ ಆರಂಭಿಸಿದ್ದರು. ಅಗ್ನಿಶಾಮಕದ ಬೆಳಕಿನ ವ್ಯವಸ್ಥಯೊಂದಿಗೆ ಶೋಧ ಕಾರ್ಯ ಮುಂದುವರೆದಿತ್ತು. ಬಜಪೆ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಸಂದೀಪ್‌ ಜಿ.ಎಸ್ ಮತ್ತು ಸಿಬ್ಬಂದಿಯೊಬ್ಬರು ರಾತ್ರಿ ಫೂರ್ತಿ ಅಲ್ಲಿಯೇ ಇದ್ದರು.
    ರಜೆ ಸಿಕ್ಕಾಗ ನದಿಯಲ್ಲಿ ಈಜಾಟ:
    ಮಳವೂರು ಡ್ಯಾಂ ಪರಿಸರದಲ್ಲಿ ರಜಾ ದಿನಗಳಲ್ಲಿ ಮಂಗಳೂರು ಸಹಿತ ವಿವಿಧ ಪ್ರದೇಶದ ಯುವಕರು ಈಜಲು ಬರುತ್ತಾರೆ. ಇತ್ತೀಚಿನ ದಿನ ವಾತಾವರಣದಲ್ಲಿ ಏರುಪೇರುಗಳಿರುವುದರಿಂದ ನೀರಿಗೆ ಇಳಿಯಬಾರದೆಂದು ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಅದನ್ನು ಕಡೆಗಣಿಸಿ ನೀರಿಗಿಳಿದು ಪ್ರಾಣ ಕಳೆದುಕೊಂಡ ಣಪ್ರಕರಣ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    Continue Reading

    BANTWAL

    ದೊಡ್ಮನೆಗೆ ಎಂಟ್ರಿ ಕೊಟ್ಟ ಕರಾವಳಿಯ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್ಯ

    Published

    on

    ಬಂಟ್ವಾಳ : ಖ್ಯಾತ ಯುಟ್ಯೂಬರ್ ಧನರಾಜ್ ಆಚಾರ್ಯ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.
    ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ಯ ತಮ್ಮ ಕಾಮಿಡಿ ಮ್ಯಾನರಿಸಂನಿಂದಲೇ ಫೇಮಸ್. ಹಾಸ್ಯಮಯ ವೀಡಿಯೋಗಳನ್ನು ಮಾಡಿ ಜನಮನಕ್ಕೆ ಹತ್ತಿರವಾಗಿದ್ದಾರೆ. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ.

    ಟಿಕ್ ಟಾಕ್ ನಲ್ಲಿ ಕಾಮಿಡಿ ವೀಡಿಯೋ ಮಾಡಿ ಪ್ರಸಿದ್ದಿ ಪಡೆದಿದ್ದ ಧನರಾಜ್ ಬಳಿಕ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು.


    ವಿವಾಹದ ಬಳಿಕವೂ ಪತ್ನಿ‌ ಪ್ರಜ್ಞಾ ಆಚಾರ್ಯ ಜೊತೆಗೂಡಿ ವೀಡಿಯೋಗಳನ್ನು ಮಾಡುತ್ತಿರುವ ಧನರಾಜ್ ಆಚಾರ್ಯ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

    Continue Reading

    LATEST NEWS

    Trending