Connect with us

    LATEST NEWS

    ಮಗುವನ್ನು ಕಾರಲ್ಲೇ ಮರೆತ ಯೋಧ ; 3 ವರ್ಷದ ಕಂದಮ್ಮ ಉ*ಸಿರುಗಟ್ಟಿ ಸಾ*ವು

    Published

    on

    ಮಂಗಳೂರು/ಉತ್ತರ ಪ್ರದೇಶ: ಮೂರು ವರ್ಷದ ಕಂದಮ್ಮ ಕಾರಿನೊಳಗೆ ಉಸಿರುಗಟ್ಟಿ ದಾರುಣವಾಗಿ ಸಾ*ವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮೀರತ್‌ನ ಕಂಕೇರಖೇಡದಲ್ಲಿ ಅಕ್ಟೋಬರ್ 30 ರಂದು ನಡೆದಿದೆ.  ವರದಿಯಾದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.

    ಮೂರು ವರ್ಷದ ವರ್ತಿಕಾ ಮೃ*ತ ಬಾಲೆ. ಮಗುವಿನ ತಂದೆ ಮತ್ತು ಆರೋಪಿ ಇಬ್ಬರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪರಸ್ಪರ ಪರಿಚಿತರು.

    ಮಂಗಳವಾರದಂದು ಬಾಲಕಿಯ ತಂದೆಯು ಯೋಧ ಲ್ಯಾನ್ಸ್ ನಾಯಕ್ ನರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಆತನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಆದರೆ ಪೊಲೀಸರು ಉದ್ದೇಶಪೂರ್ವಕವಲ್ಲದ ಕೊ*ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಹರಿಯಾಣದ ಜಿಂದ್ ಜಿಲ್ಲೆಯ ನಿದಾನಿ ಗ್ರಾಮದ ನಿವಾಸಿಯಾಗಿರುವ ಸೋಂಬೀರ್ ಪೂನಿಯಾ ಕಳೆದ ನಾಲ್ಕು ವರ್ಷಗಳಿಂದ ಮೀರತ್‌ನ ಆರ್ಡನೆನ್ಸ್ ಘಟಕದಲ್ಲಿ ನೆಲೆಸಿದ್ದಾರೆ. ಸೋಂಬೀರ್ ಮತ್ತು ಅವರ ಕುಟುಂಬ ಫಜಲ್‌ಪುರದ ರಾಜೇಶ್ ಎನ್‌ಕ್ಲೇವ್ ಆರ್ಮಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು.

    ಸೋಂಬೀರ್ ಅವರ ದೂರಿನ ಪ್ರಕಾರ, ‘ಅಕ್ಟೋಬರ್ 30 ರಂದು, ವರ್ತಿಕಾ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಹಿಮಾಚಲ ಪ್ರದೇಶದ ನಿವಾಸಿ ಮತ್ತು ಮೇಲಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪರಿಚಯಸ್ಥ ಲ್ಯಾನ್ಸ್ ನಾಯಕ್ ನರೇಶ್ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಸೋಂಬೀರ್ ಅವರ ಪತ್ನಿ ರೀತು ಆರಂಭದಲ್ಲಿ ನಿರಾಕರಿಸಿದ್ದರೂ ಬಳಿಕ ಸಮ್ಮತಿಸಿದ್ದಳು.’

    ‘ನರೇಶ್ ವರ್ತಿಕಾಳನ್ನು ರೋಹಟಾ ರಸ್ತೆಗೆ ಕರೆದೊಯ್ದು ಕಾರಿನೊಳಗೆ ಒಂಟಿಯಾಗಿ ಬಿಟ್ಟು ಹೋಗಿದ್ದ.  ದುರಂತವೆಂದರೆ ವರ್ತಿಕಾ ಉಸಿರುಗಟ್ಟಿ ಸಾ*ವನ್ನಪ್ಪಿದ್ದಾಳೆ. ನರೇಶ್ ಬೆಳಿಗ್ಗೆ 10:15 ರ ಸುಮಾರಿಗೆ ಆರ್ಮಿ ಕಾಲೋನಿಯಿಂದ ಬಾಲಕಿಯೊಂದಿಗೆ ಹೊರಟಿದ್ದು, ಆದರೆ ಮಧ್ಯಾಹ್ನ 2:00 ಗಂಟೆಯಾದರೂ ಹಿಂತಿರುಗಿರಲಿಲ್ಲ’ ಎಂದಿದ್ದಾನೆ.

    ಮಧ್ಯಾಹ್ನವಾದರೂ ಮಗಳು ಬಾರದ್ದನ್ನು ಗಮನಿಸಿ ಕುಟುಂಬಸ್ಥರು ಹುಡುಕಲು ಆರಂಭಿಸಿದರು. ನರೇಶ್‌ಗೆ ಕರೆ ಮಾಡಿದಾಗ, ಕರ್ತವ್ಯದಲ್ಲಿರುವುದಾಗಿ ಹೇಳಿದ್ದರು. ಸೋಂಬೀರನ ದೂರನ್ನು ಸ್ವೀಕರಿಸಿದ ಕಂಕೇರಖೇಡ ಪೊಲೀಸರು ನರೇಶ್ ವಿರುದ್ಧ ಕೊ*ಲೆ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

    DAKSHINA KANNADA

    ನೆಲ್ಯಾಡಿ : ಜಾಗದ ವಿಷಯಕ್ಕೆ ಜಗಳ; ಕತ್ತಿಯಿಂದ ವ್ಯಕ್ತಿಯ ಕಡಿದು ಗಲಾಟೆ ಅಂತ್ಯ

    Published

    on

    ನೆಲ್ಯಾಡಿ : ಜಾಗದ ವಿಷಯಕ್ಕೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ಕೃಷಿಕರೋರ್ವನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ದ.ಕ.ಜಿಲ್ಲೆ ನೆಲ್ಯಾಡಿ ಸಮೀಪ ಗೋಳಿತೊಟ್ಟುವಿನ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.

    ಪ್ರಗತಿಪರ ಕೃಷಿಕ ರಮೇಶ ಗೌಡ (51) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

    ರಮೇಶ್ ನ ಹತ್ತಿರದದ ಸಂಬಂಧಿ ಹರೀಶ್ ಆರೋಪಿಯಾಗಿದ್ದು, ಇಂದು (ನ.8) ಮುಸ್ಸಂಜೆ ಸರಿಸುಮಾರು 7 ಗಂಟೆ ವೇಳೆ ಕೃತ್ಯ ಎಸಗಿದ್ದಾನೆ.

    ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಎತ್ತಿನಹೊಳೆ ಕಾಮಗಾರಿ ನಾಲೆಯ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾ*ವು

    Published

    on

    ಮಂಗಳೂರು/ತಿಪಟೂರು : ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂ*ಡಿಗೆ ಬಿ*ದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ಹುಚ್ಚನಹಟ್ಟಿ ಗ್ರಾಮದ ಯದುವೀರ್ (8) ಹಾಗೂ ಮನೋಹರ್ (10) ಮೃ*ತ ಬಾಲಕರು.

    ಸಾಂದರ್ಭಿಕ ಚಿತ್ರ

    ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳಕ್ಕೆ ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಿ*ದ್ದು ಸಾ*ವನ್ನಪ್ಪಿದ್ದಾರೆ ಎಂಬ ಹೇಳಲಾಗಿದೆ.

    ಇದನ್ನೂ ಓದಿ : BBK11: ಬಿಗ್​ಬಾಸ್‌ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್​ ಸುರೇಶ್ ಗೆ ಈ ವಾರದ ಕಳಪೆ

    ಗುರುವಾರ(ನ.7) ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಕ್ಕಳು, ನಂತರ ಹೊರ ಹೋಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ(ನ.8) ಬೆಳಿಗ್ಗೆ ಬಾಲಕರ ಶ*ವ ಪತ್ತೆಯಾಗಿದೆ.

    Continue Reading

    BIG BOSS

    BBK11: ಬಿಗ್​ಬಾಸ್‌ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್​ ಸುರೇಶ್ ಗೆ ಈ ವಾರದ ಕಳಪೆ

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರ ಈ ವಾರದ ಕಳಪೆ ಪಟ್ಟವನ್ನು ಮನೆಮಂದಿ ಈ ಸ್ಪರ್ಧಿಗೆ ಕೊಟ್ಟಿದ್ದಾರೆ. ಮನೆಯ ಮಂದಿಯ ನಿರ್ಧಾರಕ್ಕೆ ಕೆಂಡ ಕಾರಿದ್ದಾರೆ ಈ ಸ್ಪರ್ಧಿ. ಹೌದು, ಈ ವಾರದ ಕಳಪೆ ಪಟ್ಟವನ್ನು ಸ್ಪರ್ಧಿಗಳು ಗೋಲ್ಡ್​ ಸುರೇಶ್​ಗೆ ಕೊಟ್ಟಿದ್ದಾರೆ. ಅಲ್ಲದೇ ಅವರ ಆಟ ಹೇಗಿತ್ತು? ಏನ್​ ಮಾಡಬಾರದಾಗಿತ್ತು ಅಂತ ಹೇಳಿದ್ದಾರೆ.

    ಕನ್ನಡದ ಬಿಗ್​ಬಾಸ್​ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 13ರಲ್ಲಿ ಓರ್ವ ಸ್ಪರ್ಧಿಗೆ ಬಿಗ್​ಬಾಸ್​ ಮನೆಯ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಗೋಲ್ಡ್​ ಸುರೇಶ್​ಗೆ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳೇ ಗೋಲ್ಡ್​ ಸುರೇಶ್​ಗೆ ಏಕೆ ಕಳಪೆ ಪಟ್ಟ ಕೊಟ್ಟಿದ್ದೇವೆ ಅಂತ ವಿವರವಾಗಿ ಮಾಹಿತಿ ನೀಡಿದ್ದಾರೆ.

    ಇನ್ನೂ, ಮನೆಯ ಎಲ್ಲ ಸ್ಪರ್ಧಿಗಳು ಅವರ​ ಹೆಸರನ್ನು ಎತ್ತಿದ ಕೂಡಲೇ ಗೋಲ್ಡ್​ ಸುರೇಶ್ ಕೆಂಡಾಮಂಡಲ ಆಗಿದ್ದಾರೆ. ನನ್ನ ಕೈಗೆ ನೋವಾಗಿದ್ದರು, ನೀವು ಎಲ್ಲರೂ ನನ್ನನ್ನೂ ಎಳೆದಿದ್ದೀರಾ ಅಂತ ಸಿಟ್ಟಾಗಿದ್ದಾರೆ. ಆದರೂ ಕೂಡ ಈ ವಾರ ಬಿಗ್​ಬಾಸ್​ನ ಕಳಪೆ ಪಟ್ಟ ಗಿಟ್ಟಿಸಿಕೊಂಡು ಜೈಲಿಗೆ ಹೋಗಿದ್ದಾರೆ.

    Continue Reading

    LATEST NEWS

    Trending