International news
ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಫೇಸ್ ಬುಕ್ ಮೂಲಕ ಮಗು ಮಾರಾಟ ಮಾಡಿದ ಮಹಿಳೆ!
Published
4 weeks agoon
By
NEWS DESK4ಮಂಗಳೂರು/ಟೆಕ್ಸಾಸ್ : ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬಳು ತನ್ನ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಮಹಿಳೆ ತನ್ನ ಮಗುವಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಮಾರಾಟಕ್ಕೆ ಮುಂದಾಗಿದ್ದಳು. ಈ ವಿಚಾರ ತಿಳಿದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಹಣಕ್ಕಾಗಿ ಕೃ*ತ್ಯ :
ಜುನಿಪರ್ ಬ್ರೈಸನ್(21) ಕೃತ್ಯ ಎಸಗಿದ ಮಹಿಳೆ. ಆಕೆ ಮಗುವಿನ ಫೋಟೋವನ್ನು ಫೇಸ್‌ಬುಕ್ ನ ಮಗು ದತ್ತು ಪಡೆಯಲು ಬಯಸುವ ದಂಪತಿ ಗುಂಪಿನಲ್ಲಿ ಹಂಚಿಕೊಂಡಿದ್ದಾಳೆ. ಪ್ರಾರಂಭದಲ್ಲಿ ಯಾವುದೇ ಹಣಕ್ಕೆ ಬೇಡಿಕೆ ಇಡದ ಈ ಮಹಿಳೆ ಬಳಿಕ ಸಾಕಷ್ಟು ದಂಪತಿ ದತ್ತು ಪಡೆಯಲು ಮುಂದೆ ಬಂದಾಗ ಹಣದ ಬೇಡಿಕೆ ಇಟ್ಟಿದ್ದಾಳೆ. ಹಣಕಾಸಿನ ತೊಂದರೆಗಳಿಂದ ನಾನು ನನ್ನ ಮಗುವನ್ನು ಮಾರಾಟ ಮಾಡಲು ಮುಂದಾಗಿರುವುದಾಗಿ ಜುನಿಪರ್ ಹೇಳಿಕೊಂಡಿದ್ದಾಳೆ. 150 ಡಾಲರ್ ಅಂದರೆ ಸುಮಾರು 12 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದಳು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಮಗುವನ್ನು ಕಾರಲ್ಲೇ ಮರೆತ ಯೋಧ ; 3 ವರ್ಷದ ಕಂದಮ್ಮ ಉ*ಸಿರುಗಟ್ಟಿ ಸಾ*ವು
ಘಟನೆಯ ಬಗ್ಗೆ ತಿಳಿದ ಪೊಲೀಸರು ಮಗುವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದು, ತನಿಖೆಯ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
International news
ಸ್ಟಾರ್ಕ್ ದಾಳಿಗೆ ಸರ್ವಪತನ ಕಂಡ ಟೀಂ ಇಂಡಿಯಾ !
Published
8 hours agoon
06/12/2024By
NEWS DESK3ಮಂಗಳೂರು/ಅಡಿಲೆಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಕಂಟಕವಾದರು.
ಮೊದಲು ಬ್ಯಾಟಿಂಗ್ ಆರಂಭಿಸಿದ್ದ ರೋಹಿತ್ ಪಡೆ ಕೇವಲ 180 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಮುಗಿಸಿದೆ. ಟೀಂ ಇಂಡಿಯಾ ಪಾಲಿಗೆ ವೇಗಿ ಸ್ಟಾರ್ಕ್ ಶಾಕ್ ನೀಡಿದರು. 14.1 ಓವರ್ ಬೌಲಿಂಗ್ ಮಾಡಿದ ಸ್ಟಾರ್ಕ್, ಬರೋಬ್ಬರಿ 6 ವಿಕೆಟ್ ಕಿತ್ತು ಟೀಂ ಇಂಡಿಯಾಗೆ ಅಘಾತ ನೀಡಿದರು. ಪರಿಣಾಮ ರೋಹಿತ್ ಪಡೆ, ಊಟದ ವಿರಾಮದ ವೇಳೆಗೆ ಎಲ್ಲಾ ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದೆ.
ಇದನ್ನೂ ಓದಿ: ಪಿಂಕ್ ಬಾಲ್ ನ ಬೆಲೆ ಕೇಳಿದರೆ ನೀವೂ ಶಾಕ್ ಆಗ್ತಿರಾ !
ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟ್ ದರೆ, ಕೆ ಎಲ್ ರಾಹುಲ್ 37 ರನ್ ಮತ್ತು ಶುಭ್ ಮನ್ ಗಿಲ್ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ವಿರಾಟ್ ಕೊಹ್ಲಿ ಬಂದ ಕೂಡಲೇ ಕೆಟ್ಟ ಶಾಟ್ ಆಡುವ ಮೂಲಕ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಬ್ಯಾಟಿಂಗ್ ಗೆ ಇಳಿದ ರಿಷಭ್ ಪಂತ್ ಸ್ವಲ್ಪ ಹೊತ್ತು ಕ್ರೀಸ್ ಕಾಯ್ದುಕೊಂಡರು ಕೂಡ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾಗೆ, ಎರಡನೇ ಟೆಸ್ಟ್ ನಲ್ಲಿ ಅದೃಷ್ಟ ಕೈಕೊಟ್ಟಿತ್ತು. 3 ರನ್ ಗಳಿಸಿ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.
ನಿತೀಶ್ ಅದ್ಭುತ ಬ್ಯಾಟಿಂಗ್
ಒಂದೆಡೆ ಭಾರತದ ಅನುಭವಿ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪೆರೇಡ್ ನಡೆಸುತ್ತಿದ್ದರೆ, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಿತೀಶ್ ಸ್ಪೋಟಕ ಬ್ಯಾಟಿಂಗ್ ಮಾಡಿದರು. 54 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 42 ರನ್ ಗಳಿಸಿ, ವೇಗಿ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಆರ್. ಅಶ್ವಿನ್ ಕೂಡ 22 ರನ್ ಗಳಿಸಿ ಔಟಾದರು.
International news
ಹೊಸ ಕರೆನ್ಸಿ ನೋಟುಗಳ ಮುದ್ರಣಕ್ಕೆ ಮುಂದಾದ ಬಾಂಗ್ಲಾ: ಮುಜೀಬುರ್ ರೆಹಮಾನ್ ಭಾವಚಿತ್ರಕ್ಕೆ ವಿದಾಯ ಹೇಳಿದ ನೂತನ ಸರ್ಕಾರ !
Published
13 hours agoon
06/12/2024By
NEWS DESK3ಮಂಗಳೂರು/ ಬಾಂಗ್ಲಾದೇಶ: ಹೊಸ ಕರೆನ್ಸಿ ನೋಟುಗಳಲ್ಲಿ ಬಾಂಗ್ಲಾದೇಶದ ‘ಬಂಗಬಂಧು’ ಖ್ಯಾತಿಯ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರಗಳು ಇರುವುದಿಲ್ಲ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಇನ್ನೂ ಹೊಸ ಕರೆನ್ಸಿ ನೋಟುಗಳಲ್ಲಿ ಧಾರ್ಮಿಕ ರಚನೆಗಳು, ಬಂಗಾಳಿ ಸಂಪ್ರದಾಯಗಳು ಮತ್ತು ಜುಲೈ ದಂಗೆಯ ಸಮಯದಲ್ಲಿ ಚಿತ್ರಿಸಿದ ‘ಗೀಚುಬರಹ’ಗಳನ್ನು ಕರೆನ್ಸಿ ನೋಟುಗಳಲ್ಲಿ ಸೇರಿಸಲ್ಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಹುಸ್ನೇರಾ ಶಿಖಾ ‘ಮುಂದಿನ ಆರು ತಿಂಗಳೊಳಗೆ ಹೊಸ ನೋಟು ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
ಗಮನಾರ್ಹವಾಗಿ, ಮುಜಿಬುರ್ ರೆಹಮಾನ್ ಅವರ ಪರಂಪರೆಯನ್ನು ‘ರಾಷ್ಟ್ರಪಿತ’ ಎಂದು ಕರೆಯಲಾಗುತ್ತಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಆಕ್ರಮನಕ್ಕೆ ಒಳಗಾಯಿತು. ವಿವಾದಾತ್ಮಕ ಉದ್ಯೋಗ ಕೋಟಾದ ವಿರುದ್ದ ಪ್ರತಿಭಟನೆ ಪ್ರಾರಂಭವಾಯಿತು. ಸರ್ಕಾರದ ವಿರುದ್ದ ಚಳುವಳಿಗಳು ಉಗ್ರ ಸ್ವರೂಪ ಪಡೆಯಿತು.
ಇದನ್ನೂ ಓದಿ: IND vs AUS ಎರಡನೇ ಟೆಸ್ಟ್ ನಲ್ಲಿ ಮೂರು ಪ್ರಮುಖ ಬದಲಾವಣೆ !
ಆಗಸ್ಟ್ ನಲ್ಲಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದರು. ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಗಳು ಪ್ರತಿಭಟನಕಾರರ ದಾಳಿಗೆ ಒಳಗಾಯಿತು.
ಇತ್ತಿಚೇಗೆ ಶೇಖ್ ಹಸೀನಾ ಅವರ ಹೇಳಿಕೆಗಳಲ್ಲಿ ಡಾ ಯೂನಸ್ ಅವರನ್ನು ನೇರವಾಗಿ ಗುರಿಯಾಗಿಸಿದ್ದಾರೆ. ಅವರು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಹಸೀನಾ ಹೇಳಿಕೆಗಳನ್ನು ದ್ವೇಷದ ಭಾಷಣ ಎಂದು ಹೇಳಿದೆ ಮತ್ತು ದೇಶದ ನಾಯಕರು ಯೂನಸ್ ಸರ್ಕಾರದ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೇಗಿರುತ್ತೆ ಹೊಸ ನೋಟುಗಳು
ಬಾಂಗ್ಲಾದೇಶ ಬ್ಯಾಂಕ್ ಜುಲೈ ದಂಗೆಯ ಫೀಚರ್ ಗಳನ್ನು ಒಳಗೊಂಡಂತೆ ಹೊಸ ನೋಟುಗಳನ್ನು ಮುದ್ರಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಕೇಂದ್ರಿಯಾ ಬ್ಯಾಂಕ್ ಪ್ರಕಾರ, ಮಧ್ಯಂತರ ಸರ್ಕಾರದ ಸೂಚನೆಗಳ ಮೇರೆಗೆ ಟಕಾ 20, 100, 500 ಮತ್ತು 1000 ನೋಟುಗಳನ್ನು ಮುದ್ರಿಸಲಾಗುತ್ತಿದೆ.
International news
IND vs AUS ಎರಡನೇ ಟೆಸ್ಟ್ ನಲ್ಲಿ ಮೂರು ಪ್ರಮುಖ ಬದಲಾವಣೆ !
Published
14 hours agoon
06/12/2024By
NEWS DESK3ಮಂಗಳೂರು/ಅಡಿಲೇಡ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರದಿಂದ ಆರಂಭವಾಗಿದೆ. ಇದು ಹಗಲು ರಾತ್ರಿ ಟೆಸ್ಟ್ ಆಗಿರುವುದರಿಂದ ಪಿಂಕ್ ಬಾಲ್ನೊಂದಿಗೆ ಆಡಿಲೇಡ್ ಓವಲ್‌ನಲ್ಲಿ ಈ ಟೆಸ್ಟ್ ಆಡಲಾಗುತ್ತಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಎರಡು ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದ್ದು, ಭಾರತದ ತಂಡದಲ್ಲಿ ಪ್ರಮುಖ ಮೂರು ಬದಲಾವಣೆ ಮಾಡಲಾಗಿದೆ. ಎಲ್ಲರೂ ನಿರೀಕ್ಷಿಸಿದಂತೆ ಪಿಂಕ್ ಬಾಲ್ ಟೆಸ್ಟ್ ಗೆ ಭಾರತ ತಂಡದಲ್ಲಿ ಬದಲಾವಣೆಗಳಾಗಿವೆ.
ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಮೊದಲ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡದ ದೇವದತ್ ಪಡಿಕ್ಕಲ್ ಹಾಗೂ ಧೃವ್ ಜುರೇಲ್ ತಂಡದಿಂದ ಹೊರಬಿದ್ದಿದ್ದಾರೆ. ರೋಹಿತ್ ತನ್ನ ಎರಡನೇ ಮಗುವಿನ ಜನನದ ಕಾರಣ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರೆ, ಗಿಲ್ ಬೆರಳಿನ ಗಾಯದಿಂದಾಗಿ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇದೀಗ ಈ ಇಬ್ಬರು ತಂಡವನ್ನು ಕೂಡಿಕೊಂಡಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !
ಭಾರತ ತಂಡದ ಸ್ಪಿನ್ ವಿಭಾಗದಲ್ಲಿ ಮೂರನೇ ಬದಲಾವಣೆಯಾಗಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ಅಶ್ವಿನ್ ಸ್ಥಾನ ಪಡೆದಿದ್ದಾರೆ. ಕಳೆದ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಅಶ್ವಿನ್ 5 ವಿಕೆಟ್ ಪಡೆದಿದ್ದರು. ಅಡಿಲೇಡ್ ನಲ್ಲಿ ಅಶ್ವಿನ್ 3 ಟೆಸ್ಟ್ ಗಳನ್ನು ಆಡಿದ್ದು, ಅದರಲ್ಲಿ 16 ವಿಕೆಟ್ ಗಳನ್ನು ಪಡೆದಿದ್ದಾರೆ.
ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.
Pingback: ನಟ ಸಲ್ಮಾನ್ ಖಾನ್ ಬಳಿಕ ಈಗ ಶಾರುಖ್ ಖಾನ್ಗೆ ಕೊ*ಲೆ ಬೆ*ದರಿಕೆ - NAMMAKUDLA NEWS - ನಮ್ಮಕುಡ್ಲ ನ್ಯೂಸ್