ಮೆಚ್ಚುಗೆಗೆ ಪಾತ್ರವಾಯಿತು ವಲಸೆ ಕಾರ್ಮಿಕರ ಜೊತೆ ಪೊಲೀಸ್ ಸಿಬ್ಬಂದಿಯ ಭಜನಾ ಜುಗಲ್ ಬಂದಿ
ಮೆಚ್ಚುಗೆಗೆ ಪಾತ್ರವಾಯಿತು ವಲಸೆ ಕಾರ್ಮಿಕರ ಜೊತೆ ಪೊಲೀಸ್ ಸಿಬ್ಬಂದಿಯ ಭಜನಾ ಜುಗಲ್ ಬಂದಿ
ಉಡುಪಿ: ಕೂಲಿ ಕೆಲಸಕ್ಕೆ ಬಂದು ಬೇರೆ-ಬೇರೆ ಜಿಲ್ಲೆಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಕಾರ್ಮಿಕ ವರ್ಗವನ್ನು ಅವರವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ಕಳೆದ ಒಂದು ತಿಂಗಳಿನಿಂದ ಉಡುಪಿ ಜಿಲ್ಲೆಯ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ ನೂರಾರು ಕಾರ್ಮಿಕರು ಆಶ್ರಯ ಪಡೆದಿದ್ದರು.
ದಿನದ ಮೂರು ಹೊತ್ತು ಊಟ, ತೊಡಲು ಬಟ್ಟೆ, ಕುಡಿಯಲು ಪ್ರತಿದಿನ ಹಾಲು ಈ ರೀತಿ ಜಿಲ್ಲಾಡಳಿತ ಅನೇಕ ವ್ಯವಸ್ಥೆಗಳನ್ನು ಮಾಡಿತ್ತು.
ಕಟಪಾಡಿಯ s.v.s. ಶಾಲೆಯಲ್ಲಿ ಸುಮಾರು 21 ಮಂದಿ ಕೂಲಿ ಕಾರ್ಮಿಕರು ಆಶ್ರಯ ಪಡೆದಿದ್ದರು. ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಗೆ ಸೇರಿದ ಕಾರ್ಮಿಕರು ಈ ಕೇಂದ್ರಗಳಲ್ಲಿ ನೆಮ್ಮದಿಯಾಗಿದ್ದರು.
ಒಂದು ತಿಂಗಳ ಕಾಲ ಇವರ ಜೊತೆಗೆ ಇದ್ದು ಕರ್ತವ್ಯ ನಿರ್ವಹಿಸಿದ್ದ ಸ್ಥಳೀಯ ಪೊಲೀಸ್ ಸಿಬ್ಬಂದಿ ಶಿವಾನಂದ ಎಂಬವರು, ಕಾರ್ಮಿಕರ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದರು.
ಇದೀಗ ಕಾರ್ಮಿಕರನ್ನು ಅವರ ಜಿಲ್ಲೆಗಳಿಗೆ ಕಳುಹಿಸಿಕೊಡುವ ಸಮಯ ಬಂದಿದೆ. ಹಾಗಾಗಿ ಇವರನ್ನು ಬೀಳ್ಕೊಡುವ ಮುನ್ನ ಶಿವಾನಂದ್ ಕಾರ್ಮಿಕರ ಜೊತೆ ಸೇರಿ ಭಜನಾ ಕೂಟ ನಡೆಸಿದ್ದಾರೆ.
ನಿರಾಶ್ರಿತ ಕಾರ್ಮಿಕರು ಮತ್ತು ಪೊಲೀಸ್ ಜೊತೆಯಾಗಿ ಕುಳಿತು ಭಜನೆ ಹಾಡುತ್ತಾ ಸಮಯ ಕಳೆದಿದ್ದಾರೆ.
ತವರಿಗೆ ತೆರಳುವ ಮುನ್ನಾದಿನ ಪೊಲೀಸ್ ಶಿವಾನಂದ್ ಅವರು ತಬಲಾ ನುಡಿಸುವ ಮೂಲಕ, ಕಾರ್ಮಿಕರ ಹಾಡಿಗೆ ಸಾಥ್ ನೀಡಿದ್ದಾರೆ.
ಕಷ್ಟಕಾಲದ ಸ್ನೇಹಿತರ ಈ ಅಪೂರ್ವ ಭಜನಾ ಸಮ್ಮೇಳನ ಸದ್ಯ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.
LATEST NEWS
ಹುಡುಗಿಗಾಗಿ ನಡೀತು ಜಗಳ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ ಯುವಕ
ಮಂಗಳೂರು/ಬೆಂಗಳೂರು : ಇತ್ತೀಚೆಗೆ ಕೊ*ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅದೂ ಹುಡುಗಿಯ ವಿಚಾರಕ್ಕೆ.
ಉಡುಪಿ ಮೂಲದ ವರುಣ್ ಕೋಟ್ಯಾನ್ ಕೊ*ಲೆಯಾದವನು. ದಿವೇಶ್ ಕೊ*ಲೆಗೈದ ಆರೋಪಿ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದುದೇ ಈ ಹ*ತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಅವರಿಬ್ಬರು ರೂಮ್ ಮೇಟ್ಸ್ ಆಗಿದ್ದು, ಇಬ್ಬರ ನಡುವೆ ಪ್ರೀತಿ ವಿಚಾರಕ್ಕೆ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ದಿವೇಶ್, ವರುಣ್ಗೆ ಚಾ*ಕುವಿನಿಂದ ಇರಿದು ಕೊ*ಲೆ ಮಾಡಿದ್ದಾನೆ.
ಇದನ್ನೂ ಓದಿ : ಮೂಡುಬಿದಿರೆ : ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರ ಬಂಧನ
ಹುಡುಗಾಗಿ ನಡೆಯಿತು ಜಗಳ:
ವರುಣ್ ಹಾಗೂ ದಿವೇಶ್ ಇಬ್ಬರು ಸ್ನೇಹಿತರು. ಸಂಜಯ್ ನಗರದ ಗೆದ್ದಲಹಳ್ಳಿ ಬಾಡಿಗೆ ಮನೆಯಲ್ಲಿ ಕಳೆದ ಒಂದು ವರ್ಷದಿಂದ ವಾಸವಿದ್ದರು. ಯುವತಿ ಮೊದಲು ದಿವೇಶ್ನನ್ನ ಪ್ರೀತಿ ಮಾಡುತ್ತಿದ್ದಳು. ಬಳಿಕ ಅದೇ ಯುವತಿ ವರುಣ್ನ ಪ್ರೀತಿಸಲು ಶುರು ಮಾಡಿದ್ದಳಂತೆ. ಈ ವಿಚಾರಕ್ಕೆ ನಿನ್ನೆ ಶುಕ್ರವಾರ(ಸೆ.20) ರಾತ್ರಿ ಯುವಕರ ನಡುವೆ ಜಗಳವಾಗಿದೆ. ಶನಿವಾರ ಬೆಳಗ್ಗೆಯೂ ಜಗಳವಾಡಿಕೊಂಡು ಇಬ್ಬರು ಹೊರ ಬಂದಿದ್ದಾರೆ. ಈ ವೇಳೆ ಆರೋಪಿ ದಿವೇಶ್, ವರುಣ್ ನನ್ನು ಕಲ್ಲು ಎತ್ತಿ ಹಾಕಿ ಕೊ*ಲೆ ಮಾಡಿದ್ದಾನೆ. ದಿವೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ.
LATEST NEWS
ತಿಮ್ಮಪ್ಪನ ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಕಲಬೆರಕೆ; ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್..!!
ಆಂಧ್ರಪ್ರದೇಶ/ಮಂಗಳೂರು: ತಿರುಪತಿ ಲಡ್ಡು ವಿಚಾರದಲ್ಲಿ ಇಡೀ ದೇಶದಲ್ಲೇ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ತಿರುಪತಿ ತಿರುಮಲಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡುವ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವನ್ನು ಕಲಬೆರಕೆ ಮಾಡಲಾಗುತ್ತಿತ್ತು ಅನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ತಿರುಪತಿ ಲಡ್ಡು ಅಪವಿತ್ರ ಆಗಿದೆ ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಂಡಿದ್ದಾರೆ.
ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ತುಪ್ಪದ ಜೊತೆಗೆ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಬಳಕೆ ಮಾಡಿರೋದು ಲ್ಯಾಬ್ ಟೆಸ್ಟ್ನಲ್ಲಿ ಕನ್ಫರ್ಮ್ ಆಗಿದೆ. ಇನ್ನು ಈ ಬಗ್ಗೆ ತನಿಖೆಗಾಗಿ ವಿಶೇಷ ತಂಡ ರಚಿಸುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ. ಅಲ್ಲದೇ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದಿರುವ ಅಪವಿತ್ರದ ಪರಿಹಾರಕ್ಕಾಗಿ ಪವನ್ ಕಲ್ಯಾಣ್ರವರು ವ್ರತಕೈಗೊಂಡಿದ್ದಾರೆ.
11 ದಿನಗಳ ಕಾಲ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲು ನಿರ್ಧರಿಸಿದ್ದಾರೆ. ಏಡುಕುಂಡಲವಾಡ ಕ್ಷಮಿಸು ಅಂತ ಪವನ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲಿದ್ದಾರೆ. ಇಂದು ಗುಂಟೂರಿನ ವೆಂಕ ದೇವಾಲಯದಲ್ಲಿ ಆಂಧ್ರ ಉಪಮುಖ್ಯಮಂತ್ರಿ ದೀಕ್ಷೆಯನ್ನು ಆರಂಭಿಸಲಿದ್ದಾರೆ. 11 ದಿನದ ಬಳಿಕ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಪವನ್ ಭೇಟಿ ನೀಡಿ ವ್ರತವನ್ನು ಕೈಬಿಡಲಿದ್ದಾರೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೇ ವಿಚಾರಕ್ಕೆ ಟ್ವೀಟ್ ಮಾಡಿರೋ ಡಿಸಿಎಂ ಪವನ್ ಕಲ್ಯಾಣ್, ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆ ಮಾಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು..! ವೈಎಸ್ಆರ್ ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
ಇನ್ಮುಂದೆ ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪ್ರತ್ಯೇಕ ಸಮಿತಿ ರಚಿಸಬೇಕು. ಸನಾತನ ಧರ್ಮ ರಕ್ಷಣಾ ಮಂಡಳಿಯನ್ನ ತಕ್ಷಣವೇ ಆರಂಭಿಸಬೇಕು. ಸನಾತನ ಧರ್ಮವನ್ನು ಅವಮಾನಿಸುವ ವಿಷಯಗಳನ್ನು ಕೊನೆಗಾಣಿಸಲು ಒಗ್ಗಟ್ಟಾಗಿ ಹೋರಾಡಬೇಕು ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ.
ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ
ಪವನ್ ಕಲ್ಯಾಣ್ ಟ್ವೀಟ್ಗೆ ನಟ ಪ್ರಕಾಶ್ ರಾಜ್ ಗೇಲಿ ಮಾಡಿದ್ದಾರೆ. ಸನಾತನ ಮಂಡಳಿ ಮಾಡೋದು ಬಿಟ್ಟು ಈ ಕೃತ್ಯ ಎಸಗಿದವರಿಗೆ ಮೊದಲು ಶಿಕ್ಷೆ ಕೊಡಿಸಿ ಅಂತ ಟೀಕೆ ಮಾಡಿದ್ದಾರೆ. “ಮಾನ್ಯ ಉಪ ಮುಖ್ಯಮಂತ್ರಿಗಳೇ.. ಈ ಘಟನೆ ನಿಮ್ಮ ಆಡಳಿತಾವಧಿಯಲ್ಲಿಯೇ ನಡೆದಿದೆ. ಈಗಾಗಲೇ ದೇಶದಲ್ಲಿ ಹಲವು ಸಮಸ್ಯೆಗಳಿವೆ. ಮತ್ತೆ ನೀವು ಹೊಸ ಸಮಸ್ಯೆಗಳನ್ನು ಇಲ್ಲಿಗೆ ತರುವುದು ಬೇಡ. ಮೊದಲು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸುವ ಕಡೆ ನಿಮ್ಮ ಗಮನವಿರಲಿ” ಎಂದು ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
DAKSHINA KANNADA
ಮೂಡುಬಿದಿರೆ : ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರ ಬಂಧನ
ಮೂಡುಬಿದಿರೆ : ಆತ ಒಬ್ಬ ಖತರ್ನಾಕ್ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಹಲವು ಪೊಲೀಸ್ ಠಾಣೆಯಲ್ಲಿ 42 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು. ಹಲವು ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ವಾರೆಂಟ್ ಇದ್ರೂ ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗ್ತಾನೆ ಇದ್ದ. ಇತ್ತೀಚೆಗೆ ಆಗಸ್ಟ್ ತಿಂಗಳಲ್ಲಿ ಮೂಡುಬಿದ್ರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆತ ವೃದ್ಧ ಮಹಿಳೆಯರನ್ನು ಗುರಿಯಾಗಿಸಿ ಅವರ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದ.
ಮೂಡಬಿದ್ರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ನಿರ್ಮಲಾ ಪಂಡಿತ್ ಎಂಬ 70 ವರ್ಷದ ವೃದ್ದೆಯ 24 ಗ್ರಾಂ ಚಿನ್ನದ ಸರ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಾರ್ನಾಡು ಗ್ರಾಮದ ಬಸದಿ ಬಳಿ 82 ವರ್ಷ ಪ್ರಾಯದ ಪ್ರೇಮಾ ಎಂಬ ವೃದ್ಧೆಯ 24 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಈ ಎರಡೂ ಪ್ರಕರಣದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಈ ಕೃತ್ಯ ನಡೆಸಿದ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು.
ಇದನ್ನೂ ಓದಿ :ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾ*ತ; ಸವಾರ ಸಾ*ವು
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿದಾಗ ಇದು ಖತರ್ನಾಕ್ ಖದೀಮ ಚೆಂಬುಗುಡ್ಡೆಯ ಹಬೀಬ್ ಹಸನ್ ಕೃತ್ಯ ಎಂಬುದು ಗೊತ್ತಾಗಿದೆ. ಈತನ ಮೇಲೆ ವಿವಿಧ ಠಾಣೆಯಲ್ಲಿ 15 ಕ್ಕೂ ಹೆಚ್ಚು ಬಂಧನದ ವಾರೆಂಟ್ ಇದ್ರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಇದೀಗ ಮೂಡುಬಿದ್ರೆಯಲ್ಲಿ ಕೊ*ಲೆ ಆರೋಪಿ ಬಂಟ್ವಾಳದ ಉಮ್ಮರ್ ಸಿಯಾಫ್ ಎಂಬಾತನ ಜೊತೆ ಸೇರಿ ಸರ ಕಳ್ಳತನಕ್ಕೆ ಇಳಿದಿದ್ದ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃ*ತ್ಯಕ್ಕೆ ಬಳಿಸಿದ್ದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.