Connect with us

    LATEST NEWS

    ಬಾದಾಮಿ-ಹರ್ಬಲ್ ಟೀಯಂತಹ ಸಿಂಪಲ್‌ ಆಹಾರದಿಂದಲೇ 32 ಕೆಜಿ ಸ್ಲಿಮ್​ ಆದ ವ್ಯಕ್ತಿ; 90 ದಿನಗಳಲ್ಲೇ ರಿಸಲ್ಟ್​!

    Published

    on

    ದೇಹದ ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾನೇ ವಿಭಿನ್ನವಾಗಿರುತ್ತದೆ. ಕೆಲವರು ಕೇವಲ ಕಟ್ಟುನಿಟ್ಟಿನ ಆಹಾರಕ್ರಮ ಮತ್ತು ಪದ್ದತಿಯನ್ನು ಅನುಸರಿಸಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡರೆ, ಇನ್ನೂ ಕೆಲವರು ಕಟ್ಟುನಿಟ್ಟಿನ ಡಯಟ್ ಜೊತೆಗೆ ಜಿಮ್‌ಗೆ ಹೋಗಿ ಕಠಿಣವಾದ ವ್ಯಾಯಾಮಗಳನ್ನು ಮಾಡಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ತೂಕ ಇಳಿಸಿಕೊಂಡ ಪ್ರಕ್ರಿಯೆ ಸ್ವಲ್ಪ ವಿಭಿನ್ನವಾಗಿದೆ ನೋಡಿ.

    ಹೌದು ಅಂಕುರ್ ಛಾಬ್ರಾ ಅವರು ಕೇವಲ 90 ದಿನಗಳಲ್ಲಿ ಎಂದರೆ ಮೂರು ತಿಂಗಳುಗಳಲ್ಲಿ ಸುಮಾರು 32 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಮೊದಲೆಲ್ಲಾ ತಮ್ಮ ಹೆಚ್ಚಿನ ತೂಕದಿಂದ ತುಂಬಾನೇ ಸಮಸ್ಯೆಗಳನ್ನು ಎದುರಿಸುತ್ತಿದ್ದ ಇವರು ಈಗ ತೂಕ ಕಡಿಮೆ ಮಾಡಿಕೊಂಡು ಮೊದಲಿಗಿಂತ ಫಿಟ್ ಆಂಡ್ ಫೈನ್ ಆಗಿದ್ದಾರೆ.

    ಅಂಕುರ್ ಛಾಬ್ರಾ

    ತೂಕ ಜಾಸ್ತಿ ಇದ್ದಾಗ ಅಂಕುರ್ ಅವರಿಗೆ ತುಂಬಾನೇ ಸಮಸ್ಯೆಗಳು ಕಾಡುತ್ತಿದ್ದವಂತೆ.. ಅಧಿಕ ತೂಕವನ್ನು ಹೊಂದಿದ್ದ ಕಾರಣ ನನ್ನ ಕುಟುಂಬದ ಸದಸ್ಯರೊಡನೆ ಹೆಚ್ಚು ಕಾಲ ಓಡಾಡಲು ಮತ್ತು ಅವರೊಂದಿಗೆ ಉತ್ಸಾಹದಿಂದ ಸಮಯ ಕಳೆಯಲು ತುಂಬಾನೇ ಕಷ್ಟವಾಗುತ್ತಿತ್ತು, ಇದೇ ನನಗೆ ತೂಕ ಇಳಿಸಿಕೊಳ್ಳಲು ಮುಖ್ಯವಾದ ಪ್ರೇರಣೆ ಆಯಿತು ಅಂತ ಹೇಳುತ್ತಾರೆ ಅಂಕುರ್.

    90 ದಿನಗಳಲ್ಲಿ 32 ಕೆಜಿ ತೂಕವನ್ನು ಹೇಗೆ ಕಡಿಮೆ ಮಾಡಿಕೊಂಡಿದ್ದಾರೆ?

    ಅಂಕುರ್ ಛಾಬ್ರಾ ಅವರು ಅತ್ಯಂತ ಸರಳವಾದ ಸಮರ್ಪಿತ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸುವ ಮೂಲಕ ಸುಮಾರು 90 ದಿನಗಳಲ್ಲಿ 32 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಅಂಕುರ್ ಅವರು ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೆಚ್ಚಾಗಿ ತಮ್ಮ ಡಯಟ್‌ನಲ್ಲಿ ಸೇರಿಸಿಕೊಂಡರು. ಕೇವಲ ಪ್ರೋಟೀನ್ ಭರಿತ ಆಹಾರ ಮತ್ತು ಅವರು ದಿನಕ್ಕೆ ಕನಿಷ್ಠ 3-4 ಗಂಟೆಗಳ ಕಾಲ ವರ್ಕೌಟ್‌ ಮಾಡ್ತಿದ್ದಾಗೆ ಹೇಳಿದ್ದಾರೆ. ಅಂಕುರ್ ಛಾಬ್ರಾ ಅವರ ವಿವರವಾದ ದಿನಚರಿ ಹೀಗಿತ್ತು..

    ಬೆಳಿಗ್ಗೆಯ ಆಹಾರ

    ಅಂಕುರ್ ಅವರು ಬೆಳಗ್ಗೆ ಸುಮಾರು 5 ಗಂಟೆಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳನ್ನು ನೆನೆಸಿಟ್ಟ ನೀರು, ಜೀರಿಗೆ ನೀರು ಅಥವಾ ಅಜ್ವೈನ್ ನೀರು ಹೀಗೆ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅದರ ಜೊತೆಗೆ 5 ನೆನೆಸಿಟ್ಟ ಬಾದಾಮಿಗಳನ್ನು ಸೇವಿಸಿದರಂತೆ. ಬೆಳಗಿನ ಉಪಾಹಾರಕ್ಕಾಗಿ, 7 ರಿಂದ 7.30 ರ ನಡುವೆ ಸ್ವಲ್ಪ ಪ್ರಮಾಣದ ಪೋಹಾವನ್ನು, ಮೂರು ಮೊಟ್ಟೆಯ ಬಿಳಿ ಭಾಗಗಳೊಂದಿಗೆ ಮತ್ತು ಸಕ್ಕರೆ ಇಲ್ಲದ ಬ್ಲ್ಯಾಕ್ ಕಾಫಿಯನ್ನು ಸೇವಿಸಿದರಂತೆ.

    ಬೆಳಗಿನ ಸ್ನ್ಯಾಕ್ಸ್

    ‌11ಗಂಟೆಗೆ ಹಣ್ಣುಗಳೊಂದಿಗೆ ಒಂದು ಕಪ್ ಗ್ರೀನ್ ಟೀ

    ಮಧ್ಯಾಹ್ನ ಊಟ

    ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹಣ್ಣುಗಳು ಮತ್ತು ಮೊಳಕೆಕಾಳುಗಳನ್ನು ಸೇವಿಸಿದರಂತೆ. ಸಾಂದರ್ಭಿಕವಾಗಿ, ಅವರು ಸಾಂಬಾರ್ ಮತ್ತು ಒಂದು ಲೋಟ ಮಜ್ಜಿಗೆಯೊಂದಿಗೆ ಒಂದು ರಾಗಿ ದೋಸೆ ಅಥವಾ ತರಕಾರಿ, ಮಜ್ಜಿಗೆ ಮತ್ತು ಸಲಾಡ್‌ನೊಂದಿಗೆ ಒಂದು ಚಪಾತಿಯನ್ನು ಸೇವಿಸುತ್ತಿದ್ದರಂತೆ.

    ಮಧ್ಯಾಹ್ನ ಸ್ನ್ಯಾಕ್ಸ್‌

    ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೆಂಗಿನ ನೀರು ಅಥವಾ ಹರ್ಬಲ್ ಟೀ ಸೇವಿಸಿದರಂತೆ, ಕೆಲವೊಮ್ಮೆ ಅದಕ್ಕೆ ಪೂರಕವಾಗಿ ಹುರಿದ ಚನಾ, ಮಖನಾ ಅಥವಾ ಮಿಶ್ರ ಬೀಜಗಳನ್ನು ತೆಗೆದುಕೊಳ್ಳುತ್ತಿದ್ದರು.

    ಸಂಜೆಯೇ ರಾತ್ರಿ ಊಟ ಫಿನಿಶ್

    ಸಂಜೆ 5 ಗಂಟೆಯ ಸುಮಾರಿಗೆ ಐದು ಬೇಯಿಸಿದ ಮೊಟ್ಟೆಯ ಬಿಳಿಭಾಗ ಅಥವಾ 100 ಗ್ರಾಂ ಮಿಶ್ರ ತರಕಾರಿಗಳ ಜೊತೆಗೆ ಒಂದು ಚಪಾತಿ ಅಥವಾ ಒಂದು ಮೂಂಗ್, ಓಟ್ಸ್ ಅಥವಾ ಸೂಜಿ ಚಿಲ್ಲಾ ತೆಗೆದುಕೊಳ್ಳುತ್ತಿದ್ದರು. ಊಟದ ನಂತರ ಸರಿ ಸುಮಾರು ಒಂದೂವರೆ ಗಂಟೆಗಳ ನಂತರ, ಒಂದು ಕಪ್ ಗ್ರೀನ್ ಟೀ ಅಥವಾ ತುಳಸಿ ಬೀಜಗಳ ರೂಪದಲ್ಲಿ ರಾತ್ರಿ ಪಾನೀಯವನ್ನು ಸೇವಿಸಿದರಂತೆ. ಸದಾ ಕಾಲ ಹೈಡ್ರೆಟ್ ಆಗಿರಲಿಕ್ಕೆ ನಾನು ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಕುಡಿಯುತ್ತೇನೆ ಮತ್ತು ದಿನಕ್ಕೆ ಎರಡು ಬಾರಿ ಸಿಹಿಗೊಳಿಸದ ಬ್ಲ್ಯಾಕ್ ಕಾಫಿಯನ್ನು ಕುಡಿಯುತ್ತೇನೆ ಅಂತ ಅಂಕುರ್ ಹೇಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂ*ಬ್ ಬೆದರಿಕೆ; ತುರ್ತು ಭೂಸ್ಪರ್ಶ

    Published

    on

    ಮಂಗಳೂರು/ರಾಯ್ ಪುರ : ಇತ್ತೀಚೆಗೆ ವಿಮಾನಗಳಿಗೆ ಬಾಂ*ಬ್ ಬೆ*ದರಿಕೆ ಕರೆಗಳು, ಸಂದೇಶಗಳು ಬರುತ್ತಿರುವ ಪ್ರ*ಕರಣಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಂದು ಪ್ರ*ಕರಣ ನಡೆದಿದ್ದು,  ಕೊಲ್ಕತ್ತಾಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಇಂದು(ನ.14) ಬೆಳಿಗ್ಗೆ ಬಾಂ*ಬ್ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ವಿಮಾನ ರಾಯ್ ಪುರ್ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದು ಬಂದಿದೆ.

    187 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯಿದ್ದ ಇಂಡಿಗೋ ವಿಮಾನ ನಾಗ್ಪುರದಿಂದ ಕೊಲ್ಕತ್ತಾಗೆ ಹೊರಟಿತ್ತು. ಬೆ*ದರಿಕೆ ಸಂದೇಶ ಬಂದ ಹಿನ್ನಲೆ ವಿಮಾನದ ಮಾರ್ಗ ಬದಲಿಸಲಾಯಿತು ಎಂದು ರಾಯ್ ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಇದನ್ನು ಓದಿ : ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಖಡ್ಗ 3.4 ಕೋಟಿಗೆ ಹರಾಜು

    ಬೆಳಿಗ್ಗೆ 9 ಗಂಟೆಗೆ ವಿಮಾನ ಲ್ಯಾಂಡ್ ಆಗಿದ್ದು, ತಕ್ಷಣವೇ ತಪಾಸಣೆಗಾಗಿ ಪ್ರತ್ಯೇಕ ರನ್ ವೇಗೆ ಸ್ಥಳಾಂತರಿಸಲಾಗಿದೆ. ತಾಂತ್ರಿಕ ಹಾಗೂ ಬಾಂ*ಬ್ ನಿಷ್ಟ್ಕಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    ಮಂಗಳೂರು ಮೂಲದ ಉದ್ಯಮಿಯಿಂದ ನೇಪಾಳದಲ್ಲಿ ಮಸೀದಿ ನಿರ್ಮಾಣ

    Published

    on

    ನೇಪಾಳ: ಮಂಗಳೂರಿನ ಸುರತ್ಕಲ್ ಮೂಲದ ಉದ್ಯಮಿಯೊಬ್ಬರು ನೇಪಾಳದಲ್ಲಿ ಮಸೀದಿ ನಿರ್ಮಾಣ ಮಾಡಿದ್ದಾರೆ.

    ಸುರತ್ಕಲ್, ಕೃಷ್ಣಾಪುರ ನಿವಾಸಿಯಾಗಿರುವ ಮುಹಮ್ಮದ್ ಹನೀಫ್ ತಂದೆ ತಾಯಿ ಹೆಸರಿನಲ್ಲಿ ಮಸೀದಿ ನಿರ್ಮಾಣ ಮಾಡಿಸಿದ್ದಾರೆ.

    ತಂದೆ ಮೊಹಿಯುದ್ದೀನ್ ಹಾಗೂ ತಾಯಿ ಬಿಫಾತಿಮ ಹೆಸರಲ್ಲಿ ನೇಪಾಳದ ಸನ್ಸರಿ ಜಿಲ್ಲೆ ಜಲ್ ಪಾ ಪುರ್ ಗ್ರಾಮದಲ್ಲಿ ಮಸೀದಿ ನಿರ್ಮಿಸಿ ಕಳೆದ ಶುಕ್ರವಾರ ಬೆಳಗ್ಗಿನ ನಮಾಝಿಗೆ ಲೋಕಾರ್ಪಣೆ ಮಾಡಿದ್ದಾರೆ. ಮಸ್ಜಿದ್ ಮುಹಿಯುದ್ದೀನ್ ಬಿಫಾತಿಮ ಎಂದು ಮಸೀದಿಗೆ ಹೆಸರಿಡಲಾಗಿದೆ.

    Continue Reading

    LATEST NEWS

    ಮಣಿಪಾಲ: ಅಸುರಕ್ಷಿತ ಡಾಮರು, ಜಲ್ಲಿ ಸಾಗಾಟ; ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು

    Published

    on

    ಮಣಿಪಾಲ: ಅಸುರಕ್ಷಿತವಾಗಿ ಡಾಮರು, ಜಲ್ಲಿ ಸಾಗಿಸುತ್ತಿದ್ದ ಕೇರಳ ನೋಂದಣಿಯ ಲಾರಿಯೊಂದನ್ನು ಮಣಿಪಾಲ ಠಾಣಾ ಪೊಲೀಸರು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಜಲ್ಲಿ ತುಂಬಿಸಿಕೊಂಡು ಪೆರಂಪಳ್ಳಿ ರಸ್ತೆ ಮೂಲಕ ಲಾರಿ ಸಾಗುತ್ತಿತ್ತು. ಈ ವೇಳೆ ಜಲ್ಲಿಗಳು ರಸ್ತೆಗೆ ಬಿದ್ದು, ಇತರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು.

    ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಬಾಗಿಲು ಕಡೆಗೆ ಹೋಗುತಿದ್ದ ಈ ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಚಾಲಕ ಸೂಚನೆ ಧಿಕ್ಕರಿಸಿ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ಲಾರಿಯನ್ನು ಬೆನ್ನಟ್ಟಿದ ಪೊಲೀಸರು ಕಕ್ಕುಂಜೆ ರೈಲ್ವೇ ಸೇತುವೆಯ ಬಳಿ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಲಾರಿ ಚಾಲಕ ಸಂಗನಗೌಡ ಪಾಟೀಲ್‌ ವಿರುದ್ಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    Trending