Connect with us

    LATEST NEWS

    ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ವಾಹನ ಚಾಲನೆ ಮಾಡಿದ ಚಾಲಕ; ಕಾರ್ಮಿಕ ಸಾ*ವು

    Published

    on

    ಮಂಗಳೂರು/ಬೆಂಗಳೂರು : ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ಚಾಲಕ ಲಾರಿ ಚಾಲನೆ ಮಾಡಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ  ಮೃ*ತಪಟ್ಟಿರುವ ಘಟನೆ ತುಮಕೂರು ರಸ್ತೆಯ ಪಾರ್ಲೆ ಜಿ ಫ್ಯಾಕ್ಟರಿ ಸಮೀಪದ ಟೋಲ್ ಬಳಿ ಶುಕ್ರವಾರ(ನ.15) ನಡೆದಿದೆ.

    ಲಗ್ಗೆರೆ ನಿವಾಸಿ ಬಸವರಾಜ(37) ಮೃ*ತ ದುರ್ದೈವಿ. ರಾಯಚೂರು ಜಿಲ್ಲೆ ಸಿಂಧನೂರು ಮೂಲದ ಬಸವರಾಜ ಕೂಲಿ ಕಾರ್ಮಿಕನಾಗಿದ್ದು, ಲಗ್ಗೆರೆಯಲ್ಲಿ ನೆಲೆಸಿದ್ದರು. ಮುಂಜಾನೆ ಮಳೆ ಬರುತ್ತಿದ್ದ ಕಾರಣ ಟೋಲ್ ಬಳಿ ನಿಂತಿದ್ದ ಸರಕು ಸಾಗಣೆ ಲಾರಿಯೊಂದರ ಕೆಳಗೆ ಹೋಗಿ ಮಲಗಿದ್ದರು. ಟೀ ಕುಡಿಯಲು ಹೋಗಿದ್ದ ಲಾರಿ ಚಾಲಕ ಹಿಂದಿರುಗಿ ಬಂದು ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೇ ಲಾರಿಯನ್ನು ಏಕಾಏಕಿ ಚಾಲನೆ ಮಾಡಿಕೊಂಡು ತೆರಳಿದ್ದಾನೆ. ಈ ವೇಳೆ ಚಕ್ರಗಳು ಹರಿದು ಬಸವರಾಜ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ.

    ಇದನ್ನೂ ಓದಿ : ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ : ರಂಗ ಕಲಾವಿದರಿಬ್ಬರ ದಾ*ರುಣ ಸಾವು..!

    ಸ್ಥಳಕ್ಕಾಗಮಿಸಿದ ಪೀಣ್ಯ ಸಂಚಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಚಾಲಕನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

    LATEST NEWS

    ಸಂಜು ಸ್ಯಾಮ್ಸನ್-ತಿಲಕ್ ವರ್ಮಾ ಜೊತೆಯಾಟ: ಭಾರತಕ್ಕೆ ಜಯ

    Published

    on

    ಮಂಗಳೂರು/ಜೋಹಾನ್ಸ್ ಬರ್ಗ್: ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ-ದಕ್ಷಿಣ ಆಫ್ರೀಕಾ ನಡುವಿನ ಟಿ-20 ಸರಣಿಯ 4ನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು 135 ರನ್ ಗಳ ಭರ್ಜರಿ ಜಯ ದಾಖಲಿಸಿದೆ.ಈ ಮೂಲಕ 3-1ರ ಅಂತರದಿಂದ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ.


    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ 109 ರನ್ ಸಿಡಿಸಿದರು. ಇದರಲ್ಲಿ 9 ಸಿಕ್ಸರ್,6 ಬೌಂಡರಿ ಸೇರಿದೆ. ತಿಲಕ್ ವರ್ಮಾ 47 ಎಸೆತಗಳಲ್ಲಿ 120 ರನ್ ಗಳ ಶತಕ ಆಟ ಆಡಿದರು.ಇದರಲ್ಲಿ 10 ಸಿಕ್ಸರ್,9 ಬೌಂಡರಿ ಇದ್ದವು. ಇವರಿಬ್ಬರ ಶತಕದಾಟದ ನೆರವಿನಿಂದ 20 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಗಳ ಬೃಹತ್ ಮೊತ್ತ ಪ್ರೇರಿಸಿತು. ಈ ಮೂಲಕ ದಕ್ಷಿಣ ಆಫ್ರೀಕಾದ ಬೌಲರ್ ಗಳು ದುಬಾರಿಯಾದರು.

    ನಂತರ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರೀಕಾ ತಂಡದ ಬ್ಯಾಟರ್ ಗಳನ್ನು,ಭಾರತದ ಬೌಲರ್ ಗಳು ಇನ್ನಿಲ್ಲದಂತೆ ಕಾಡಿದರು. ಭಾರತ ತಂಡ ದಕ್ಷಿಣ ಆಫ್ರೀಕಾವನ್ನು 148 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 135 ರನ್ ಗಳ ಭರ್ಜರಿ ಜಯ ತಂದುಕೊಟ್ಟರು. ಭಾರತದ ಪರ 3 ಓವರ್ ಬೌಲಿಂಗ್ ಮಾಡಿದ ವೇಗಿ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದು 20 ರನ್ ಬಿಟ್ಟುಕೊಟ್ಟರು,4 ಓವರ್ ಬೌಲಿಂಗ್ ಮಾಡಿದ ಸ್ಪೀನ್ನರ್ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದು 42 ರನ್ ಕೊಟ್ಟರು ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ 2 ಓವರ್ ಬೌಲಿಂಗ್ ಮಾಡಿ,ಕೇವಲ 6 ರನ್ ಕೊಟ್ಟು 2 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
    ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳು

    ಅಂತರಾಷ್ಟ್ರೀಯ ಟಿ-20 ಮಾದರಿಯ ಈ ಪಂದ್ಯದಲ್ಲಿ ಭಾರತ 283 ರನ್ ಕಲೆ ಹಾಕುವ ಮೂಲಕ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಮೊತ್ತ ಪ್ರೇರಿಸುವ ಮುಲಕ ದಾಖಲೆ ಬರೆದಿದೆ.ಸಂಜು ಸ್ಯಾಮ್ಸನ್ ಒಂದು ವರ್ಷದಲ್ಲಿ ಮೂರು ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು.ಒಂದೇ ಸರಣಿಯಲ್ಲಿ 2 ಶತಕ ಸಿಡಿಸಿದ ದಾಖಲೆಗೂ ಸಂಜು ಭಾಜನರಾದರು.ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭರ್ಜರಿ ಶತಕ ಬಾರಿಸುವ ಮೂಲಕ ಭರ್ಜರಿ ಜೊತೆಯಾಟವಾಡಿ ಒಂದೇ ಇನ್ನಿಂಗ್ಸ್ ನಲ್ಲಿ ಇಬ್ಬರು ಬ್ಯಾಟ್ಸ್ ಮ್ಯಾನ್ ಗಳು ಶತಕ ಸಿಡಿಸಿದ್ದು ಇದೇ ಮೊದಲು.ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಶತಕ ಸಿಡಿಸಿದಲ್ಲದೆ, 210 ರನ್ ಗಳ ದಾಖಲೆಯ ಜೊತೆಯಾಟವನ್ನು ಆಡಿದರು.ಈಗಾಗೀ ಅತೀ ದೊಡ್ಡ ಜೊತೆಯಾಟವಾಡಿದ ದಾಖಲೆ ಈ ಇಬ್ಬರು ಆಟಗಾರರ ಪಾಲಾಯಿತು.

    Continue Reading

    FILM

    ಕ್ರಿಕೆಟರ್ ಆಗಬೇಕಿದ್ದ ಆದಿತ್ಯ ರಾಯ್ ಹೀರೋ ಆಗಿದ್ದರ ಹಿಂದೆ ಇರುವ ಕಥೆ ಗೊತ್ತಾ ?

    Published

    on

    ಅನೇಕ ಕಲಾವಿದರು ಹೀರೋ/ಹೀರೋಯಿನ್ ಆಗಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಆದರೆ, ಕೆಲವರು ಬೇರೆಯದೇ ಆಲೋಚನೆ ಇಟ್ಟುಕೊಂಡು ನಂತರ ಚಿತ್ರರಂಗಕ್ಕೆ ಬಂದು ಗೆಲುವು ಕಾಣುತ್ತಾರೆ. ಈ ಸಾಲಿಗೆ ಆದಿತ್ಯ ರಾಯ್ ಕಪೂರ್ ಸಹ ಸೇರುತ್ತಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ಆದಿತ್ಯ ನಂತರ  ಬಾಲಿವುಡ್​ನ ಸ್ಟಾರ್ ಆಗಿರೋ ಕಥೆಯೇ ರೋಚಕ.

    ಆದಿತ್ಯ ರಾಯ್ ಕಪೂರ್ ಅವರು ಬಾಲಿವುಡ್​ಗೆ ಕಾಲಿಟ್ಟಿದ್ದು 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಮೂಲಕ. ಆ ಬಳಿಕ  ‘ಆಶಿಕಿ 2’, ‘ಯೇ ಜವಾನಿ ಹೇ ದಿವಾನಿ’ ‘ಕಳಂಕ್’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದರು. ಅವರು ನಟಿಸಿದ ‘ದಿ ನೈಟ್ ಮ್ಯಾನೇಜರ್’ ಸೀರಿಸ್ ಭರ್ಜರಿ ಮೆಚ್ಚುಗೆ ಪಡೆಯಿತು. ಈ ಸರಣಿಯಲ್ಲಿ ಅವರ ನಟನೆ ಸಾಕಷ್ಟು ಗಮನ ಸೆಳೆಯಿತು. ಈ ಸರಣಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದಕ್ಕೆ ಸೀಕ್ವೆಲ್ ಕೂಡ ಬರಬೇಕಿದೆ. ಇಷ್ಟೆಲ್ಲ ಹೆಸರು ಮಾಡಿದ ಆದಿತ್ಯ ಅವರ ಮೂಲ ಕನಸು ಮಾತ್ರ ಬೇರೆಯದೇ ಇತ್ತು.

    ‘ನಾನು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದೆ. ಆದರೆ, ಅದು ಹೊಂದಾಣಿಕೆ ಆಗಿಲ್ಲ. ನಂತರ ನಟನೆಗೆ ಬಂದೆ. ನಾನು ವಿಡಿಯೋ ಜಾಕಿ ಕೂಡ ಆಗಿದ್ದೆ’ ಎಂದಿದ್ದರು ಆದಿತ್ಯ ರಾಯ್ ಕಪೂರ್. ಹಾಗಂತ ಆದಿತ್ಯ ರಾಯ್ ಕಪೂರ್ ಅವರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದುಕೊಳ್ಳಬೇಡಿ. ಅವರು ದೊಡ್ಡ ಕುಟುಂಬದ ಹಿನ್ನೆಲೆಯಿಂದಲೇ ಬಂದವರು.

     

    Continue Reading

    LATEST NEWS

    ಭೀ*ಕರ ರಸ್ತೆ ಅ*ಪಘಾತ: ನವವಿವಾಹಿತರು ಸೇರಿ ಏಳು ಮಂದಿ ಸಾ*ವು

    Published

    on

    ಮಂಗಳೂರು/ಬಿಜ್ನೋರ್  : ಭೀಕರ ಅಪಘಾ*ತ ಸಂಭವಿಸಿ ನವವಿವಾಹಿತರು  ಸೇರಿದಂತೆ ಏಳು ಮಂದಿ ಮೃ*ತಪಟ್ಟಿರುವ ದು*ರಂತ  ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ. ಡೆಹ್ರಾಡೂನ್-ನೈನಿತಾಲ್ ಹೆದ್ದಾರಿಯಲ್ಲಿ ಧಮ್‌ಪುರದ ಅ*ಗ್ನಿಶಾಮಕ ಠಾಣೆ ಬಳಿ ಇಂದು(ನ.16) ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

    ನವವಿವಾಹಿತ ಜೋಡಿ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಟೆಂಪೋಗೆ ಹಿಂದಿನಿಂದ ಕಾರೊಂದು ಡಿ*ಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿ*ಕ್ಕಿ ಹೊಡೆದಿದೆ. ಡಿ*ಕ್ಕಿಯ ರಭಸಕ್ಕೆ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಏಳು ಜನರು ತೀ*ವ್ರವಾಗಿ ಗಾ*ಯಗೊಂಡು ಸ್ಥಳದಲ್ಲೇ ಸಾ*ವನ್ನಪ್ಪಿದರೆ, ಅದರ ಚಾಲಕ ಅಜಬ್ ಸಿಂಗ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾ*ವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ : ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ವಾಹನ ಚಾಲನೆ ಮಾಡಿದ ಚಾಲಕ; ಕಾರ್ಮಿಕ ಸಾ*ವು

    ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾ*ಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟ ಮಂಜಿನಿಂದಾಗಿ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ಈ ಅಪಘಾ*ತ ಸಂಭವಿಸಿದೆ ಎಂದು ಹೇಳಲಾಗಿದೆ

    Continue Reading

    LATEST NEWS

    Trending