Connect with us

    LATEST NEWS

    ಥಿಯೇಟರ್ ಮಾಲೀಕರ ಮನೆಯಲ್ಲಿ ಕಳ್ಳತನ; ನೇಪಾಳಿ ಗ್ಯಾಂಗ್ ಅರೆಸ್ಟ್ !!

    Published

    on

    ಮಂಗಳೂರು/ಬೆಂಗಳೂರು: ಸಂಪಿಗೆ ಥಿಯೇಟರ್‌ ಮಾಲೀಕ ನಾಗೇಶ್‌ಗೆ ಮದ್ಯದಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸಿಕೊಟ್ಟು ಕುಡಿಸಿ, ನಂತರ ಅವರ ಮನೆಯಲ್ಲಿದ್ದ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.

    ನಾಗೇಶ್ ಮನೆ ದೊಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಳ್ಳತನ ಮಾಡಿದ್ದ ಆರೋಪಿಗಳಾದ ನೇಪಾಳಿ ಗ್ಯಾಂಗನ್ನು ಬಂಧಿಸಿದ್ದಾರೆ.

    ಆರೋಪಿಗಳು ಸುಮಾರು 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಇನ್ಸ್ಪೆಕ್ಟರ್ ದೀಪಕ್ ಅಂಡ್ ಗ್ಯಾಂಗ್ ಆರೋಪಿಗಳನ್ನು ಬಂಧಿಸಿದ್ದಾರೆ. ಚಿನ್ನಾಭರಣ ದೋಚಲು ಎರಡು ವರ್ಷದಿಂದ ಕಾದಿದ್ದ ಗ್ಯಾಂಗ್ ಕೊನೆಗೆ ಮನೆ ಮಾಲೀಕ ನಾಗೇಶ್ ಕುಟುಂಬ್ಥರು  ಹೊರಗಡೆ ಹೋಗಿದ್ದಾಗ ಕೃತ್ಯ ಎಸಗಿದ್ದಾರೆ.

     

    ಇದನ್ನೂ ಓದಿ : ಸುಬ್ರಹ್ಮಣ್ಯ: ಆಂಜನೇಯ ದೇಗುಲದಲ್ಲಿ ಕಳ್ಳತನ – ಕಾರ್ಣಿಕ ತೋರಿದ ದೇವರು.!!

     

    ಅಕ್ಟೊಬರ್ 2 ರಂದು ಮಾಲಿಕನ ಮನೆಯಲ್ಲಿ ಕಳ್ಳತನ ನಡೆದಿದ್ದು, ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ಎರಡು  ವರ್ಷದ ಹಿಂದೆ ನಾಗೇಶ್ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮಾಲೀಕ ನಾಗೇಶ್ ಬಳಿ ನೇಪಾಳಿ ದಂಪತಿ ನಂಬಿಕೆ ಬರುವಂತೆ ನಾಟಕ ಮಾಡಿಕೊಂಡು ಬಂದಿದ್ದರು. ಆದರೆ, ಗಾಂಧಿ ಜಯಂತಿ ದಿನದ ರಾತ್ರಿ ಈ ನೇಪಾಳಿ ದಂಪತಿ ತಮ್ಮ ಮಾಲೀಕ ನಾಗೇಶ್ ಮದ್ಯಪಾನ ಮಾಡುವ ವೇಳೆ ಮದ್ಯದಲ್ಲಿ ಬೆಂಜೊಡೈನ್ ಎಂಬ ಮತ್ತು ಬರುವ ಪೌಡರ್ ಮಿಕ್ಸ್ ಮಾಡಿ ಕೊಟ್ಟಿದ್ದಾರೆ.

    ಇದರ ನಂತರ ಮಾಲೀಕ ನಾಗೇಶನ ಮನೆಯ ಬಳಿ ಮೂವರನ್ನ ಬೈಕ್‌ನಲ್ಲಿ ಕರೆಸಿಕೊಂಡಿದ್ದಾರೆ. ಮನೆಗೆ ಬಂದ ಕಳ್ಳರಿಗೆ ಮನೆಯಲ್ಲಿದ್ದ ಒಂದುವರೆ ಕೋಟಿಗೂ ಅಧಿಕ 2 ಕೆ.ಜಿ. ಚಿನ್ನಾಭರಣ, 2 ಲಕ್ಷ ರೂಪಾಯಿ ನಗದು ಹೊತ್ತೊಯ್ದಿದ್ದರು. ಇದೀಗ ಬೆಂಗಳೂರು ಪೊಲೀಸರು ಸಿಸಿ ಟಿವಿ ಹಾಗೂ ಮೊಬೈಲ್ ನೆಟ್ವರ್ಕ್ ಆಧರಿಸಿ ಮುಂಬೈನಲ್ಲಿ ಆರೋಪಿಗಳ ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ದಂಪತಿ ಗಣೇಶ್ ಹಾಗೂ ಗೀತಾಳಿಗೆ ಹುಡುಕಾಟ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಬಾದಾಮಿ-ಹರ್ಬಲ್ ಟೀಯಂತಹ ಸಿಂಪಲ್‌ ಆಹಾರದಿಂದಲೇ 32 ಕೆಜಿ ಸ್ಲಿಮ್​ ಆದ ವ್ಯಕ್ತಿ; 90 ದಿನಗಳಲ್ಲೇ ರಿಸಲ್ಟ್​!

    Published

    on

    ದೇಹದ ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾನೇ ವಿಭಿನ್ನವಾಗಿರುತ್ತದೆ. ಕೆಲವರು ಕೇವಲ ಕಟ್ಟುನಿಟ್ಟಿನ ಆಹಾರಕ್ರಮ ಮತ್ತು ಪದ್ದತಿಯನ್ನು ಅನುಸರಿಸಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡರೆ, ಇನ್ನೂ ಕೆಲವರು ಕಟ್ಟುನಿಟ್ಟಿನ ಡಯಟ್ ಜೊತೆಗೆ ಜಿಮ್‌ಗೆ ಹೋಗಿ ಕಠಿಣವಾದ ವ್ಯಾಯಾಮಗಳನ್ನು ಮಾಡಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ತೂಕ ಇಳಿಸಿಕೊಂಡ ಪ್ರಕ್ರಿಯೆ ಸ್ವಲ್ಪ ವಿಭಿನ್ನವಾಗಿದೆ ನೋಡಿ.

    ಹೌದು ಅಂಕುರ್ ಛಾಬ್ರಾ ಅವರು ಕೇವಲ 90 ದಿನಗಳಲ್ಲಿ ಎಂದರೆ ಮೂರು ತಿಂಗಳುಗಳಲ್ಲಿ ಸುಮಾರು 32 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಮೊದಲೆಲ್ಲಾ ತಮ್ಮ ಹೆಚ್ಚಿನ ತೂಕದಿಂದ ತುಂಬಾನೇ ಸಮಸ್ಯೆಗಳನ್ನು ಎದುರಿಸುತ್ತಿದ್ದ ಇವರು ಈಗ ತೂಕ ಕಡಿಮೆ ಮಾಡಿಕೊಂಡು ಮೊದಲಿಗಿಂತ ಫಿಟ್ ಆಂಡ್ ಫೈನ್ ಆಗಿದ್ದಾರೆ.

    ಅಂಕುರ್ ಛಾಬ್ರಾ

    ತೂಕ ಜಾಸ್ತಿ ಇದ್ದಾಗ ಅಂಕುರ್ ಅವರಿಗೆ ತುಂಬಾನೇ ಸಮಸ್ಯೆಗಳು ಕಾಡುತ್ತಿದ್ದವಂತೆ.. ಅಧಿಕ ತೂಕವನ್ನು ಹೊಂದಿದ್ದ ಕಾರಣ ನನ್ನ ಕುಟುಂಬದ ಸದಸ್ಯರೊಡನೆ ಹೆಚ್ಚು ಕಾಲ ಓಡಾಡಲು ಮತ್ತು ಅವರೊಂದಿಗೆ ಉತ್ಸಾಹದಿಂದ ಸಮಯ ಕಳೆಯಲು ತುಂಬಾನೇ ಕಷ್ಟವಾಗುತ್ತಿತ್ತು, ಇದೇ ನನಗೆ ತೂಕ ಇಳಿಸಿಕೊಳ್ಳಲು ಮುಖ್ಯವಾದ ಪ್ರೇರಣೆ ಆಯಿತು ಅಂತ ಹೇಳುತ್ತಾರೆ ಅಂಕುರ್.

    90 ದಿನಗಳಲ್ಲಿ 32 ಕೆಜಿ ತೂಕವನ್ನು ಹೇಗೆ ಕಡಿಮೆ ಮಾಡಿಕೊಂಡಿದ್ದಾರೆ?

    ಅಂಕುರ್ ಛಾಬ್ರಾ ಅವರು ಅತ್ಯಂತ ಸರಳವಾದ ಸಮರ್ಪಿತ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸುವ ಮೂಲಕ ಸುಮಾರು 90 ದಿನಗಳಲ್ಲಿ 32 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಅಂಕುರ್ ಅವರು ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೆಚ್ಚಾಗಿ ತಮ್ಮ ಡಯಟ್‌ನಲ್ಲಿ ಸೇರಿಸಿಕೊಂಡರು. ಕೇವಲ ಪ್ರೋಟೀನ್ ಭರಿತ ಆಹಾರ ಮತ್ತು ಅವರು ದಿನಕ್ಕೆ ಕನಿಷ್ಠ 3-4 ಗಂಟೆಗಳ ಕಾಲ ವರ್ಕೌಟ್‌ ಮಾಡ್ತಿದ್ದಾಗೆ ಹೇಳಿದ್ದಾರೆ. ಅಂಕುರ್ ಛಾಬ್ರಾ ಅವರ ವಿವರವಾದ ದಿನಚರಿ ಹೀಗಿತ್ತು..

    ಬೆಳಿಗ್ಗೆಯ ಆಹಾರ

    ಅಂಕುರ್ ಅವರು ಬೆಳಗ್ಗೆ ಸುಮಾರು 5 ಗಂಟೆಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳನ್ನು ನೆನೆಸಿಟ್ಟ ನೀರು, ಜೀರಿಗೆ ನೀರು ಅಥವಾ ಅಜ್ವೈನ್ ನೀರು ಹೀಗೆ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅದರ ಜೊತೆಗೆ 5 ನೆನೆಸಿಟ್ಟ ಬಾದಾಮಿಗಳನ್ನು ಸೇವಿಸಿದರಂತೆ. ಬೆಳಗಿನ ಉಪಾಹಾರಕ್ಕಾಗಿ, 7 ರಿಂದ 7.30 ರ ನಡುವೆ ಸ್ವಲ್ಪ ಪ್ರಮಾಣದ ಪೋಹಾವನ್ನು, ಮೂರು ಮೊಟ್ಟೆಯ ಬಿಳಿ ಭಾಗಗಳೊಂದಿಗೆ ಮತ್ತು ಸಕ್ಕರೆ ಇಲ್ಲದ ಬ್ಲ್ಯಾಕ್ ಕಾಫಿಯನ್ನು ಸೇವಿಸಿದರಂತೆ.

    ಬೆಳಗಿನ ಸ್ನ್ಯಾಕ್ಸ್

    ‌11ಗಂಟೆಗೆ ಹಣ್ಣುಗಳೊಂದಿಗೆ ಒಂದು ಕಪ್ ಗ್ರೀನ್ ಟೀ

    ಮಧ್ಯಾಹ್ನ ಊಟ

    ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹಣ್ಣುಗಳು ಮತ್ತು ಮೊಳಕೆಕಾಳುಗಳನ್ನು ಸೇವಿಸಿದರಂತೆ. ಸಾಂದರ್ಭಿಕವಾಗಿ, ಅವರು ಸಾಂಬಾರ್ ಮತ್ತು ಒಂದು ಲೋಟ ಮಜ್ಜಿಗೆಯೊಂದಿಗೆ ಒಂದು ರಾಗಿ ದೋಸೆ ಅಥವಾ ತರಕಾರಿ, ಮಜ್ಜಿಗೆ ಮತ್ತು ಸಲಾಡ್‌ನೊಂದಿಗೆ ಒಂದು ಚಪಾತಿಯನ್ನು ಸೇವಿಸುತ್ತಿದ್ದರಂತೆ.

    ಮಧ್ಯಾಹ್ನ ಸ್ನ್ಯಾಕ್ಸ್‌

    ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೆಂಗಿನ ನೀರು ಅಥವಾ ಹರ್ಬಲ್ ಟೀ ಸೇವಿಸಿದರಂತೆ, ಕೆಲವೊಮ್ಮೆ ಅದಕ್ಕೆ ಪೂರಕವಾಗಿ ಹುರಿದ ಚನಾ, ಮಖನಾ ಅಥವಾ ಮಿಶ್ರ ಬೀಜಗಳನ್ನು ತೆಗೆದುಕೊಳ್ಳುತ್ತಿದ್ದರು.

    ಸಂಜೆಯೇ ರಾತ್ರಿ ಊಟ ಫಿನಿಶ್

    ಸಂಜೆ 5 ಗಂಟೆಯ ಸುಮಾರಿಗೆ ಐದು ಬೇಯಿಸಿದ ಮೊಟ್ಟೆಯ ಬಿಳಿಭಾಗ ಅಥವಾ 100 ಗ್ರಾಂ ಮಿಶ್ರ ತರಕಾರಿಗಳ ಜೊತೆಗೆ ಒಂದು ಚಪಾತಿ ಅಥವಾ ಒಂದು ಮೂಂಗ್, ಓಟ್ಸ್ ಅಥವಾ ಸೂಜಿ ಚಿಲ್ಲಾ ತೆಗೆದುಕೊಳ್ಳುತ್ತಿದ್ದರು. ಊಟದ ನಂತರ ಸರಿ ಸುಮಾರು ಒಂದೂವರೆ ಗಂಟೆಗಳ ನಂತರ, ಒಂದು ಕಪ್ ಗ್ರೀನ್ ಟೀ ಅಥವಾ ತುಳಸಿ ಬೀಜಗಳ ರೂಪದಲ್ಲಿ ರಾತ್ರಿ ಪಾನೀಯವನ್ನು ಸೇವಿಸಿದರಂತೆ. ಸದಾ ಕಾಲ ಹೈಡ್ರೆಟ್ ಆಗಿರಲಿಕ್ಕೆ ನಾನು ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಕುಡಿಯುತ್ತೇನೆ ಮತ್ತು ದಿನಕ್ಕೆ ಎರಡು ಬಾರಿ ಸಿಹಿಗೊಳಿಸದ ಬ್ಲ್ಯಾಕ್ ಕಾಫಿಯನ್ನು ಕುಡಿಯುತ್ತೇನೆ ಅಂತ ಅಂಕುರ್ ಹೇಳಿದ್ದಾರೆ.

    Continue Reading

    FILM

    ಅಭಿಷೇಕ್‌-ಅವಿವಾ ಪುತ್ರನಿಗೆ ಅಂಬರೀಷ್‌ ಹೆಸರು

    Published

    on

    ಕನ್ನಡ ಚಿತ್ರರಂಗ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ದಂಪತಿ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ನವೆಂಬರ್‌ 12) ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಸದ್ಯ ಅವಿವಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಆಗಸ್ಟ್‌ ತಿಂಗಳಿನಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸಿಹಿ ಸುದ್ದಿ ಹೊರಬಿದಿತ್ತು. ಅದರ ಬೆನ್ನಲ್ಲೇ ಸೆಪ್ಟೆಂಬರ್‌ 18, 2024ರಂದು ಅವಿವಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಸೀಮಂತದಲ್ಲಿ ಅನೇಕ ಸಿನಿಮಾ ತಾರೆಯರು ಭಾಗಿಯಾಗಿದ್ದು, ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.

    ಸೀಮಂತ ಕಾರ್ಯಕ್ರಮದ ಅವಿವಾ ಫೋಟೋ ನೋಡಿದ ಅಭಿಮಾನಿಗಳು ಗಂಡು ಮಗುವೇ ಜನಿಸುವುದು ಎಂದು ಗೆಸ್‌ ಮಾಡಿದ್ದರು. ಅವಿವಾ ಬಿದ್ದಪ್ಪ ಸಾಮಾಜಿಕ ಜಾಲತಾಣದಲ್ಲಿಗಳಲ್ಲಿ ಫೋಟೋಗಳನ್ನು ಪೋಸ್ಟ್‌ ಮಾಡಿದಾಗಲೂ ಕೂಡ ಅನೇಕರು ಗಂಡು ಮಗು, ಅಂಬರೀಷ್‌ ಮತ್ತೆ ಹುಟ್ಟಿ ಬರುತ್ತಿದ್ದಾರೆ ಎನ್ನುವ ಕಮೆಂಟ್‌ಗಳನ್ನು ಮಾಡುತ್ತಿದ್ದರು.

    ಇದೀಗ ಎಲ್ಲರ ನಿರೀಕ್ಷೆಗಳು ಸರಿಯಾಗಿದ್ದು ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ದಂಪತಿಗೆ ಗಂಡು ಮಗುವಾಗಿದೆ. ಹೀಗಾಗಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಾಗಿ ಅಂಬರೀಷ್‌ ಅವರೇ ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುವ ಮಾತುಗಳು ಎಲ್ಲರ ಬಾಯಲ್ಲಿ ಇದೆ. ಜೊತೆಗೆ ಇನ್ನೊಂದು ವಿಶೇಷವಾದ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಿಗೆ ಏನು ಹೆಸರಿಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದ್ದರೆ. ಮುದ್ದಾದ ಮೊಗ್ಗಗನಿಗೆ ತಾತನ ಹೆಸರೇ ಇಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಅಂದರೆ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಮಗನಿಗೆ ಅಂಬರೀಷ್‌ ಅವರ ಹೆಸರೇ ಇಡಲಾಗುತ್ತದೆ. ಹಳೆಯ ಸಂಪ್ರದಾಯದಂತೆ ತಾತನ ಹೆಸರನ್ನೇ ಮೊಮ್ಮಗನಿಗೆ ಇಡುವ ಪದ್ಧತಿಯನ್ನು ಸುಮಲತಾ ಹಾಗೂ ಅಭಿಷೇಕ್‌ ಮುಂದುವರಿಸುತ್ತಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಕೆಲವರು ಹೊಸ ಹೆಸರಿಟ್ಟು ಸರ್‌ ನೇಮ್‌ ಅಂಬರೀಷ್‌ ಎಂದು ಇಡುವ ಸಾಧ್ಯತೆ ಎಂದು ಸಹ ಹೇಳುತ್ತಿದ್ದಾರೆ.

    ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಮತ್ತು ಅಭಿಷೇಕ್ ಅಂಬರೀಶ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಜೂನ್ 5, 2023ರಂದು ಪೋಷಕರ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.

    Continue Reading

    LATEST NEWS

    ಕಪ್ಪು ಮಗು ಹುಟ್ಟಿದ್ದಕ್ಕೆ ಹೆಂಡತಿ ಮೇಲೆ ಅನುಮಾನ; ಡೈವೋರ್ಸ್​ ಕೇಳಿದ ಗಂಡ!

    Published

    on

    ಬೀಜಿಂಗ್: ಚೀನಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಮಗೆ ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಅನುಮಾನಗೊಂಡ ವ್ಯಕ್ತಿ ಹೆಂಡತಿಯಿಂದ ವಿಚ್ಛೇದನ ಕೋರಿದ್ದಾನೆ. ತಾನು, ತನ್ನ ಹೆಂಡತಿ ಇಬ್ಬರೂ ಬಿಳಿ ಬಣ್ಣದವರಾಗಿದ್ದರೂ ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಆ ಗಂಡ ಡಿಎನ್​ಎ ಪರೀಕ್ಷೆಗೆ ಒತ್ತಾಯಿಸಿದ್ದಾನೆ. ಹೆಂಡತಿಯ ಚಾರಿತ್ರ್ಯ ಸರಿಯಿಲ್ಲವೆಂದು ಆತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.

    ಸುಮಾರು 1 ತಿಂಗಳ ಹಿಂದೆ 30 ವರ್ಷದ ಮಹಿಳೆ ಸಿ-ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಅವರಿಗೆ ಕಪ್ಪು ಬಣ್ಣದ ಮಗು ಹುಟ್ಟಿತ್ತು. ಆಕೆ ಮತ್ತು ಆಕೆಯ ಗಂಡ ಬಿಳಿ ಬಣ್ಣದವರಾಗಿದ್ದು, ಕಪ್ಪು ಮಗು ಹೇಗೆ ಹುಟ್ಟಿತು ಎಂದು ಆಕೆಯ ಪತಿ ಆಘಾತಕ್ಕೊಳಗಾದ. ಇದೇ ಕಾರಣವನ್ನಿಟ್ಟುಕೊಂಡು ಆತ ವಿಚ್ಛೇದನ ಕೋರಿದ್ದಾನೆ.

    ಈ ಘಟನೆಯನ್ನು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಸಲಹೆ ಕೇಳಿದ್ದಾರೆ. ತನ್ನ ಪತಿ ಮೊದಲು ಮಗುವನ್ನು ನೋಡಲು ಬಂದಾಗ ಅವನು ಆಶ್ಚರ್ಯಚಕಿತನಾದನು. ಕಪ್ಪು ಬಣ್ಣದ್ದೆಂಬ ಕಾರಣಕ್ಕೆ ಮಗುವನ್ನು ಹಿಡಿಯಲು ನಿರಾಕರಿಸಿದನು ಎಂದು ಆಕೆ ವಿವರಿಸಿದ್ದಾಳೆ. ನಂತರ ಡಿಎನ್ಎ ಪರೀಕ್ಷೆ ನಡೆಸಿ ಮಗು ಆತನಿಗೇ ಹುಟ್ಟಿದ್ದು ಎಂದು ದೃಢಪಡಿಸುವಂತೆ ಒತ್ತಾಯಿಸಿದನು. ಅದು ನಮ್ಮಿಬ್ಬರದೇ ಮಗು ಎಂದು ಎಷ್ಟೇ ಹೇಳಿದರೂ ಆತ ಕೇಳಲಿಲ್ಲ ಎಂದು ಆಕೆ ಹೇಳಿದ್ದಾಳೆ.

    ಮಗುವಿನ ಕಪ್ಪು ಮೈಬಣ್ಣದಿಂದ ತನಗೂ ಆಶ್ಚರ್ಯವಾಯಿತು ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಆದರೆ, ಮಗುವಿನ ಬಣ್ಣದ ಕಾರಣಕ್ಕೆ ನಾನು ಹೆತ್ತ ಮಗುವನ್ನು ಕೈಬಿಡುವುದಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ. ಆಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ವಿಷಯವನ್ನು ಚರ್ಚಿಸಿದರೆ, ಇತರರು ಬಿಳಿ ಚರ್ಮದ ದಂಪತಿಗಳು ಕಪ್ಪು ಚರ್ಮದ ಮಗುವನ್ನು ಹೊಂದುವುದು ಅಸಾಮಾನ್ಯವೇನಲ್ಲ ಎಂದಿದ್ದಾರೆ.

    Continue Reading

    LATEST NEWS

    Trending