Connect with us

    LATEST NEWS

    ಶ್ರೀ ಸಿದ್ಧಿ ವಿನಾಯಕ ದೇಗುಲದ ಪ್ರಸಾದ ಪೊಟ್ಟಣದಲ್ಲಿ ಇಲಿ ಮರಿ ಪ್ರತ್ಯಕ್ಷ..!

    Published

    on

    ಮುಂಬೈ: ತಿರುಪತಿ ದೇವಾಲಯದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಕೆ ದೃಢ ಪಟ್ಟ ಬೆನ್ನಲೆ ಮುಂಬಯಿಯ ಹಿಂದೂ ದೇವಾಲಯದ ಪ್ರಸಾದದಲ್ಲಿ ಇಲಿ ಮರಿಗಳು ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಮುಂಬಯಿಯ ಶ್ರೀ ಸಿದ್ದಿ ವಿನಾಯಕ ದೇವಾಲಯವೊಂದು ಹೇಳಲಾದ ಪ್ರಸಾದದ ಪೊಟ್ಟಣಗಳ ಮೇಲೆ ಇಲಿ ಮರಿಗಳು ಪತ್ತೆಯಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಬಗ್ಗೆ ಶ್ರೀ ಸಿದ್ಧಿ ವಿನಾಯಕ ದೇವಾಲಯದ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿ “ದೇವಾಲಯದ ಲಡ್ಡು ಪ್ರಸಾದ ತಯಾರಿಸುವ ಸ್ಥಳ ಶುದ್ಧವಾಗಿದೆ. ಆದರೆ ವೀಡಿಯೋದಲ್ಲಿರುವ ಸ್ಥಳವು ಕೊಳಕಾಗಿದ್ದು, ಇದು ದೇವಾಲಯದ ಹೊರಗೆಲ್ಲೋ ಚಿತ್ರೀಕರಿಸಲಾದ ವೀಡಿಯೋ ಎಂದು ಹೇಳಿದೆ”. ಜೊತೆಗೆ ಈ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ.

    DAKSHINA KANNADA

    ಕಾಲಿಯಾ ರಫೀಕ್‌ ಹತ್ಯೆ ಪ್ರಕರಣ..! ಎಲ್ಲಾ 9 ಆರೋಪಿಗಳು ಖುಲಾಸೆ..!

    Published

    on

    ಮಂಗಳೂರು : ಏಳು ವರ್ಷಗಳ ಹಿಂದೆ ನಡೆದಿದ್ದ ನಟೋರಿಯಸ್ ರೌಡಿ ಕಾಲಿಯ ರಫೀಕ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ್ದ 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಎಲ್ಲಾ 9 ಆರೋಪಿಗಳನ್ನು ನಿರ್ದೋಶಿಗಳು ಎಂದು ತೀರ್ಪು ನೀಡಿದೆ. ಸರಕಾರಿ ಅಬಿಯೋಜಕರು ಈ ಪ್ರಕರಣದ ಸಂಬಂಧ 31 ಸಾಕ್ಷಿಗಳ ವಿಚಾರಣೆ ನಡೆಸಿದ್ದರು.


    ಉಳ್ಳಾಲದ ಕೋಟೆಕಾರ್ ಬಳಿಯ ಪೆಟ್ರೋಲ್ ಪಂಪ್‌ ಬಳಿ 2017 ರಲ್ಲಿ ಕಾಲಿಯಾ ರಫೀಕ್‌ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಟಿಪ್ಪರ್ ಲಾರಿಯನ್ನು ಕಾಲಿಯಾ ರಫೀಕ್‌ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಂಡು ಓಡುವ ವೇಳೆ ಪಿಸ್ತೂಲಿನಿಂದ ಗುಂಡು ಹಾರಿಸಿ ತಲವಾರಿನಿಂದ ದಾಳಿ ಮಾಡಿ ಕೊಲೆ ಮಾಡಲಾಗಿತ್ತು. ಕಾಸರಗೋಡು ಜಿಲ್ಲೆಯ ಉಪ್ಪಳದ ಹಿದಾಯತ್ ನಗರದ 9 ಜನ ಈ ಕೃತ್ಯ ನಡೆಸಿದ್ದಾಗಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾದ ನಂ.1 ನೂರಲಿ, ನಂ.2 ಜಿಯ @ ಇಸುಬು ಶಿಯಾದ್, ನಂ.5 ರಶೀದ್, ನಂ. 6 ಮಜಿಬ್ @ ಕಲ್ಲಟ ನಜೀಬ್ ಕೆ.ಎ. ಇವರನ್ನು ಮಾನ್ಯ ನಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಾದ ವಿವಾದಗಳನ್ನು ಆಲಿಸಿದ ದಕ್ಷಿಣ ಕನ್ನಡ ಗೌರವಾನ್ವಿತ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶರಾದ ಮಲ್ಲಿಕಾರ್ಜುನ ಸ್ವಾಮಿಯವರು ಈ ಮೇಲೆ ನಮೂದಿಸಿದ ಆರೋಪಿಗಳ ವಿರುದ್ಧ ಆರೋಪಗಳನ್ನು ಸಾಬೀತು ಪಡಿಸುವರೇ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗಳನ್ನು ಬಿಡುಗಡೆ ಮಾಡಿ ತೀರ್ಪನ್ನು ಕೊಟ್ಟಿರುತ್ತಾರೆ.

    Continue Reading

    LATEST NEWS

    ಕೊಲ್ಲೂರು ದೇಗುಲ ವ್ಯವಸ್ಥಾಪನ ಸಮಿತಿಗೆ ಡಾ.ಅಭಿಲಾಷ್ ಪಿ.ವಿ ಆಯ್ಕೆ.

    Published

    on

    ಮಂಗಳೂರು ( ಕೊಲ್ಲೂರು ) : ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಮಂಗಳೂರಿನ ಡಾ। ಅಭಿಲಾಷ್ ಪಿ.ವಿ. ನೇಮಕವಾಗಿದ್ದಾರೆ.


    2011ರಿಂದ 17ರ ವರೆಗೆ 2 ಅವಧಿಗೆ ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಸೆನೆಟ್ ಸದಸ್ಯರಾಗಿದ್ದ ಅವರು ಮೆಸ್ಕಾಂ ನಿರ್ದೇಶಕರಾಗಿ, ಕೇಂದ್ರೀಯ ಸೆನ್ಸಾರ್ ಮಂಡಳಿ ಸದಸ್ಯರಾಗಿ, 2018ರಿಂದ 2021ರ ವರೆಗೆ ಕೊಲ್ಲೂರು ದೇಗುಲದ ಟ್ರಸ್ಟಿಯಾಗಿದ್ದರು. ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋ ಥೆರಪಿಯಲ್ಲಿ ಅಸೋಸಿ ಯೆಟ್ ಪ್ರೊಫೆಸರ್ ಹಾಗೂ ಪಿಆರ್‌ಒ ಆಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    Continue Reading

    chikkamagaluru

    ಗೈರು ಹಾಜರಾದ ವಿದ್ಯಾರ್ಥಿಗಳಿಂದ ಹಣ ವಸೂಲಿ ಸಂಚು; ತಾವು ಬೀಸಿದ ಬಲೆಗೆ ತಾವೇ ಸಿಕ್ಕಿಬಿದ್ದ ಆರೋಪಿಗಳು

    Published

    on

    ಮಂಗಳೂರು/ಚಿಕ್ಕಮಗಳೂರು: ಅನಿವಾರ್ಯ ಕಾರಣಗಳಿಂದ ಕಾಲೇಜಿಗೆ ವಿದ್ಯಾರ್ಥಿಗಳು ಗೈರು ಹಾಜರಾಗುವುದು ಸಹಜ. ಹಾಗೆ ಬಾರದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಬೇಕೆಂದಿದ್ದರೆ, ಹಣ ನೀಡುವಂತೆ ಆದೇಶಿಸಿದ್ದ ಬೀರೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮತ್ತು ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


    ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಬಿ.ಟಿ.ಹರೀಶ್‌ ಮುಖಾಂತರ ಹಣದ ಬೇಡಿಕೆಯನ್ನಿಟ್ಟಿದ್ದ ಹಿನ್ನಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.
    ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ ಫೋನ್‌ ಪೇ ಮೂಲಕ 10 ಸಾವಿರ ಹಾಗೂ ಪ್ರಾಂಶುಪಾಲ ಎಂ.ಕೆ.ಪ್ರವೀಣ್ ಕುಮಾರ್‌ 5 ಸಾವಿರ ರೂ. ಕಸಿದುಕೊಂಡಿರುವುದಾಗಿ ಪ್ರಕರಣ ದಾಖಲಾಗಿದೆ.
    ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ತಿರುಮಲೇಶ್, ಬಿ.ಮಲ್ಲಿಕಾರ್ಜುನ್‌, ಅನಿಲ್ ರಾಥೋಡ್ ಇತರರು ಪಾಲ್ಗೊಂಡಿದ್ದರು.

    Continue Reading

    LATEST NEWS

    Trending