ಕಟೀಲು ಶ್ರೀ ದುರ್ಗಾ ಸನ್ನಿಧಿಯಲ್ಲಿ ನಡೆದ 88 ಸರಳ ವಿವಾಹದ ಸಂಭ್ರಮ..!
ಮಂಗಳೂರು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇಂದು ಒಟ್ಟು 88 ಸರಳ ವಿವಾಹಗಳು ನಡೆಯಿತು. ಈ ಹಿಂದೆ ನೂರಕ್ಕಿಂತ ಹೆಚ್ಚು ಸರಳ ವಿವಾಹಗಳು ನಡೆದಿದೆ.
ಆದರೆ ಈ ಬಾರಿ ಅನೇಕ ಸರಳ ವಿವಾಹಗಳು ನಡೆದಿದ್ದು, ಈ ವರ್ಷದಲ್ಲಿ ಇಂದು ಅತೀ ಹೆಚ್ಚಿನ ಸರಳ ವಿವಾಹಗಳಾಗಿದೆ.
ಇಂದು ಮದುವೆ ಮುಹೂರ್ತಕ್ಕೆ ಉತ್ತಮ ದಿನವಾಗಿದ್ದು , ನಾಳೆಯಿಂದ ಎರಡು ತಿಂಗಳ ಕಾಲ ಶುಭ ಮುಹೂರ್ತ ಇಲ್ಲದ ಕಾರಣ ಹೆಚ್ಚಿನ ಶುಭ ಸಮಾರಂಭಗಳು ಇಂದೇ ನಡೆಯುತ್ತಿದೆ.
ಪ್ರತೀ ವರ್ಷ ಅಕ್ಷಯ ತೃತೀಯ ದಿನದಂದು ಅತೀ ಹೆಚ್ಚಿನ ವಿವಾಹಗಳು ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸರಳ ಸಾಮೂಹಿಕ ವಿವಾಹ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದೆ.
ಇನ್ನು ಕಿಕ್ಕಿರಿದ ಸೇರಿದ ಭಕ್ತ ಸಮೂಹ , ಮದುವೆ ಸಂಭ್ರಮದ ಮನೆ ಮಂದಿಯಿಂದಾಗಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಗಿಜಿಗುಟ್ಟುತ್ತಿತ್ತು.