Connect with us

    DAKSHINA KANNADA

    ಮನೆಗೆ ನುಗ್ಗಿ 5.ಲಕ್ಷ ರೂ‌. ಮೌಲ್ಯದ ಚಿನ್ನಾಭರಣ ಕಳವು – ಇಬ್ಬರ ಸೆರೆ..!

    Published

    on

    ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಮನೆ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಶನಿವಾರ ಬಂಧಿಸಿದ್ದು, ಸುಮಾರು 5.ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ತೌಸೀಫ್ ಅಹಮ್ಮದ್ (34) ಮತ್ತು ಕಸಬಾ ಬೇಂಗ್ರೆಯ ನಿವಾಸಿ ಮೊಹಮ್ಮದ್ ಫರಾಜ್ (27) ಬಂಧಿತರು.

    ಖಚಿತ ಮಾಹಿತಿ ಪಡೆದ ಪಣಂಬೂರು ಕುದ್ರೆಮುಖ ಜಂಕ್ಷನ್ ಬಳಿ ಬಜಪೆ ಠಾಣಾ ಉಪನಿರೀಕ್ಷಕ ಗುರಪ್ಪ ಕಾಂತಿ ಅವರ ನೇತೃತ್ವದ ತಂಡವು ಸೆ.29 ಶುಕ್ರವಾರ ಸಂಜೆ 4 ಗಂಟೆಯ ಸುಮಾರಿಗೆ  ತೌಸೀಫ್ ಅಹಮ್ಮದ್  ಮತ್ತು ಮೊಹಮ್ಮದ್ ಫರಾಜ್  ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಬಳಿಕ ಅವರಿಂದ ಸುಮಾರು 5 ಲಕ್ಷ ರೂ. ಮೌಲ್ಯದ 75 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಕಳವು ಮಾಡಲು ಬಳಸಿದ್ದ ವಾಹನ (ಬೈಕ್) ವಶಪಡಿಸಿಕೊಂಡಿದ್ದಾರೆ.

    ಆರೋಪಿಗಳ ವಿರುದ್ಧ  ಮಂಗಳೂರು ನಗರ, ಪಣಂಬೂರು, ಮಂಗಳೂರು ನಗರ ಉತ್ತರ, ಮಂಗಳೂರು ದಕ್ಷಿಣ, ಬಕಟ್ವಾಳ ನಗರ ಮತ್ತು ಉಡುಪಿ ಜಿಲ್ಲೆಯ ಉದ್ಯಾವರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುತ್ತವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    2021ರ ಮಾ.26ರಂದು ಬಡಗುಳಿಪಾಡಿ ಗ್ರಾಮದ ಮಣೇಲಪದವು ನಿವಾಸಿ ಸದಾಶಿವ ಸಾವಂತ ಎಂಬವರ ಮನೆಯ ಬೀಗ ಮುರಿದು ಸುಮಾರು 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು, 2023ರ ಜ.13 ರಂದು ಅಡ್ಡೂರು ಗ್ರಾಮದ ಪುಣಿಕೋಡಿ ನಿವಾಸ ಸದಾಶಿವ ಪೂಜಾರಿ ಎಂಬವರ ಮನೆಯ ಬೀಗ ಮುರಿದು ಮನೆಯ ಕಪಾಟಿನಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

    ಮಂಗಳೂರು ನಗರ ಪೊಲೀಸ್ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ಧಾರ್ಥ ಗೋಯೆಲ್, ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪವಿಭಾಗ ಎಸಿಪಿ ಮನೋಜ್ ಕುಮಾರ್ ಮತ್ತು ಬಜಪೆ ಪೊಲೀಸ್ ನಿರೀಕ್ಷಕ ಗುರುರಾಜ್ ಅವರ ನೇತೃತ್ವದಲ್ಲಿ ಉಪನಿರೀಕ್ಷಕರುಗಳಾದ ಗುರಪ್ಪ ಕಾಂತಿ, ರೇವಣಸಿದ್ದಪ್ಪ, ಕುಮಾರೇಶನ್, ಲತಾ, ಎ ಎಸ್ ಐ ರಾಮ ಪೂಜಾರಿ, ರಶೀದಾ ಶೇಖ್, ಸುಜನ್, ದುರ್ಗಾಪ್ರಸಾದ್ ಶೆಟ್ಟಿ, ಮಂಜುನಾಥ, ಬಸವರಾಜ್ ಪಾಟೀಲ್, ಜಗದೀಶ್, ದಯಾನಂದ, ಮಧು, ಅನಿಲ್, ಕೆಂಚಪ್ಪ ಮತ್ತಿತರರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     

    DAKSHINA KANNADA

    ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್‌ ಮಾಫಿಯಾ ಕಿಂಗ್‌ ಪಿನ್ ಅರೆಸ್ಟ್

    Published

    on

    ಮಂಗಳೂರು : ಡ್ರ*ಗ್ಸ್ ಜಾಲದ ಬೆನ್ನು ಹತ್ತಿ ಬೇಟೆಯಾಡಿದ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆರು ಕೋಟಿ ರೂ. ಮೌಲ್ಯದ ಡ್ರ*ಗ್ಸ್ ವಶಪಡಿಸಿಕೊಂಡಿದ್ದಾರೆ. ಡ್ರ*ಗ್‌ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೈಗೊಂಡ ಕಟ್ಟು ನಿಟ್ಟಿನ ಕ್ರಮಕ್ಕೆ ಇದೊಂದು ದೊಡ್ಡ ಗೆಲುವಾಗಿದೆ. ಈ ಕಾರ್ಯಾಚರಣೆಯ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

    ಸೆಪ್ಟಂಬರ್ 29 ರಂದು ಪಂಪ್‌ವೆಲ್ ಬಳಿಯ ಲಾಡ್ಜ್‌ ಒಂದರಲ್ಲಿ ಹೈದರ್ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಡ್ರಗ್ ಸಮೇತ ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿಗೆ ಡ್ರ*ಗ್ ಪೂರೈಕೆ ಮಾಡುವ ಜಾಲದ ತನಿಖೆ ಆರಂಭಿಸಿದ್ದರು.

    ಆರೋಪಿಯಿಂದ ಹಲವು ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿದ್ದ ನೈಜೇರಿಯಾ ಮೂಲದ ಪೀಟರ್ ಅಕೆಡಿ ಬೆಲನೋವು ಎಂಬಾತನ ಮನೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಒಟ್ಟು 6 ಕೋಟಿ ಮೌಲ್ಯದ 6 ಕೆಜಿ 310 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.

    ಇದನ್ನೂ ಓದಿ :  ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ; 5 ವರ್ಷದ ಮಗು ದಾರುಣ ಸಾ*ವು

    ಈತ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಈ ಮಾ*ದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂಬ ವಿಚಾರ ಕೂಡ ತಿಳಿದು ಬಂದಿದೆ. ಈತನ ಮೇಲೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಾ*ದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಮುಮ್ತಾಜ್ ಅಲಿ ಸಾ*ವಿನ ಹಿಂದೆ ಹನಿಟ್ರ್ಯಾಪ್ ಕೈವಾಡ! ಏನಂದ್ರು ಕಮಿಷನರ್?

    Published

    on

    ಮಂಗಳೂರು : ಮಂಗಳೂರು ಉತ್ತರದ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮುಮ್ತಾಜ್ ಆಲಿ ಆತ್ಮಹ*ತ್ಯೆ ಪ್ರಕರಣದಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಮ್ತಾಜ್ ಅಲಿ ಅವರನ್ನು ಕೆಲವೊಂದು ವ್ಯಕ್ತಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಈಗಾಗಲೇ 50 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದರು. ಈ ವಿಚಾರವನ್ನು ವಾಯ್ಸ್‌ ಮೆಸೇಜ್ ಮೂಲಕ ತಮ್ಮ ಕುಟುಂಬ ಸದಸ್ಯರಿಗೆ ಕಳುಹಿಸಿದ್ದ ಮುಮ್ತಾಜ್ ಆಲಿ ನಾಪತ್ತೆಯಾಗಿದ್ದರು.

    ಇದೀಗ ಅವರ ಮೃತ ದೇಹ ಪತ್ತೆಯಾಗಿದ್ದು, ಅವರ ಆತ್ಮಹತ್ಯೆಗೆ ಬ್ಲ್ಯಾಕ್‌ ಮೇಲ್‌ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮುಮ್ತಾಜ್ ಆಲಿ ಅವರ ವಾಯ್ಸ್ ಮೆಸೇಜ್ ಆಧಾರದಲ್ಲಿ ಆರು ಜನರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ : ನವಜಾತ ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿದ ಪಾಪಿ ತಾಯಿ

    ರೆಹಮತ್‌ ಎಂಬಾಕೆ ಮುಮ್ತಾಜ್‌ ಆಲಿ ಅವರನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿದ್ದು, ಅಬ್ದುಲ್ ಸತ್ತಾರ್, ಶಾಫೀ, ಮುಸ್ತಾಫ, ಶೋಯಿಬ್ ಹಾಗೂ ಸಿರಾಜ್‌ ಎಂಬವರು ಮುಮ್ತಾಜ್ ಆಲಿ ಅವರನ್ನು ಹಣಕ್ಕಾಗಿ ಪೀಡಿಸಿದ್ದಾರೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮುಮ್ತಾಜ್ ಅಲಿ ಅವರು ಮರ್ಯಾದೆಗೆ ಅಂಜಿ ಈ ಆತ್ಮಹ*ತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಇಲಾಖೆ ಹೆಚ್ಚಿನ ತನಿಖೆ ನಡೆಸಲಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

     

    Continue Reading

    DAKSHINA KANNADA

    ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು

    Published

    on

    ಮಂಗಳೂರು : ಕಾಮು*ಕ ಉಮೇಶ್ ರೆಡ್ಡಿಯ ಅವತಾರವೊಂದು ಮಂಗಳೂರಿನ ಕದ್ರಿಯಲ್ಲಿ ಕಾಣಿಸಿಕೊಂಡಿದ್ದು ಹಾಸ್ಟೆಲ್ ವಿದ್ಯಾರ್ಥಿನಿಯರು ಭಯಭೀತರಾಗಿದ್ದಾರೆ. ಮಂಗಳೂರಿನ ಕೆಪಿಟಿ ಬಳಿ ಇರುವ ದೇವರಾಜ ಅರಸು ಮಹಿಳಾ ವಿದ್ಯಾರ್ಥಿನಿ ನಿಲಯದ ಬಳಿ ಈತನ ಓಡಾಟ ಕಂಡು ಬಂದಿದೆ. ರಾತ್ರಿಯಾಗುತ್ತಿದ್ದಂತೆ ಹಾಸ್ಟೆಲ್ ಆವರಣದಲ್ಲಿ ಬೆತ್ತಲಾಗಿ ಓಡಾಡುವ ಈತ ವಿದ್ಯಾರ್ಥಿನಿಯರು ಗಮನಿಸಿದ್ರೆ ಅವರ ಮುಂದೆ ಅಸಭ್ಯವಾಗಿ ವರ್ತಿಸುತ್ತಾನಂತೆ.

    ಭಯದಲ್ಲಿ ವಿದ್ಯಾರ್ಥಿನಿಯರು :

    ಕಳೆದ ಸೆಪ್ಟಂಬರ್ 16 ರಂದು ಮೊದಲ ಬಾರಿಗೆ ಈತ ಹಾಸ್ಟೆಲ್‌ ಆವರಣಕ್ಕೆ ರಾತ್ರಿ ಸರಿ ಸುಮಾರು 10.30ಕ್ಕೆ ಎಂಟ್ರಿ ಕೊಟ್ಟು ವಿದ್ಯಾರ್ಥಿನಿಯರಿಗೆ ಭಯ ಹುಟ್ಟಿಸಿದ್ದ. ನಸುಕಿನ ಜಾವ ಸುಮಾರು 4.30 ರ ತನಕವೂ ಹಾಸ್ಟೆಲ್ ಸುತ್ತಮುತ್ತ ಓಡಾಡಿ ಕಿಟಕಿಗೆ ಕಲ್ಲೆಸೆದು , ಕಿಟಿಕಿ ಬಾಗಿಲು ಬಡಿದು ಕೀಟಲೆ ಮಾಡಿದ್ದ. ಈ ಬಗ್ಗೆ ಮರುದಿನ ಸಿಸಿ ಟಿವಿ ಫೂಟೇಜ್ ಸಹಿತವಾಗಿ ಕದ್ರಿ ಪೊಲೀಸರಿಗೆ ನಿಲಯ ಪಾಲಕರು ದೂರು ಕೂಡ ನೀಡಿದ್ದಾರೆ. ಇದಾಗಿ ವಾರಗಳ ಬಳಿಕ ಈತ ಮತ್ತೆ ಹಾಸ್ಟೆಲ್ ಬಳಿ ಪ್ರತ್ಯಕ್ಷವಾಗಿ ಮತ್ತದೇ ತನ್ನ ಹಳೇ ಆಟ ತೋರಿಸಿದ್ದಾನೆ. ಇದೀಗ ಈ ಕಾಮುಕ ಕ್ರಿಮಿಯಿಂದ ಹಾಸ್ಟೆಲ್ ವಿದ್ಯಾರ್ಥಿನಿಯರು ಭಯಗೊಂಡಿದ್ದು ಸಂಜೆಯಾಗುತ್ತಿದ್ದಂತೆ ಕೋಣೆ ಬಾಗಿಲು ಭದ್ರಪಡಿಸಿಕೊಳ್ಳುತ್ತಿದ್ದಾರೆ.

    ವಾರ್ಡನ್ ಇರೋಲ್ಲ…ಸೆಕ್ಯೂರಿಟಿ ಗಾರ್ಡ್ ಇಲ್ಲ:

    ಅಸಲಿಗೆ ವಿದ್ಯಾರ್ಥಿನಿಯರ ಈ ಹಾಸ್ಟೆಲ್‌ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿ ವಿದ್ಯಾರ್ಥಿನಿಯರಿಗೆ ಕಟ್ಟು ನಿಟ್ಟಿನ ಕ್ರಮ ಇದೆಯಾದ್ರೂ ಸಿಬಂದಿಯನ್ನು ಕೇಳೋರಿಲ್ಲ. ಹಾಸ್ಟೆಲ್ ವಾರ್ಡನ್‌ ರಾತ್ರಿ ಹೊತ್ತು ಹಾಸ್ಟೆಲ್‌ನಲ್ಲೇ ತಂಗಬೇಕಾಗಿದ್ರೂ ಸಂಜೆಯಾಗುತ್ತಿದ್ದಂತೆ ವಾರ್ಡನ್‌ ನಾಪತ್ತೆಯಾಗುತ್ತಾರೆ. ಇನ್ನು ವಾರ್ಡನ್‌ ಇಲ್ಲದ ಈ ಹಾಸ್ಟೆಲ್‌ನಲ್ಲಿ ಕನಿಷ್ಟ ಸೆಕ್ಯುರಿಟಿ ಗಾರ್ಡ್‌ ಇದ್ದಾರಾ ಅಂದ್ರೆ ಅವರು ಕೂಡ ಇಲ್ಲ.

    ಇದನ್ನೂ ಓದಿ : ಪುಣ್ಯ ಕ್ಷೇತ್ರದ ಕಲ್ಯಾಣ ಮಂಟಪ ಬಳಿ ದನದ ಮಾಂಸ ಮಾರಾಟ; ಆರೋಪಿ ನವೀನ್ ಅರೆಸ್ಟ್.!

    ಟೋಟಲ್‌ ಆಗಿ ಹೇಳೋದಾದ್ರೆ ಈ ಹಾಸ್ಟೆಲ್‌ನಲ್ಲಿರೋ ನೂರಾರು ವಿದ್ಯಾರ್ಥಿನಿಯರಿಗೆ ಇಲ್ಲಿ ಭದ್ರತೆಯೇ ಇಲ್ಲ. ಹೀಗಿರುವಾಗ ಮರಿ ಉಮೇಶ್ ರೆಡ್ಡಿ ಇಲ್ಲಿ ಸುತ್ತಾಡ್ತಾ ಇದ್ದಾನೆ ಅನ್ನೋ ವಿಚಾರ ತಿಳಿದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರಾ ಅಂದ್ರೆ ಅದೂ ಕೂಡಾ ಇಲ್ಲ. ಸದ್ಯಕ್ಕೆ ಆತ ಹಾಸ್ಟೆಲ್‌ ಒಳಗೆ ಎಂಟ್ರಿಕೊಡುವ ಪ್ರಯತ್ನ ಮಾಡಿಲ್ಲ. ಅಂತಹ ಒಂದು ಅಚಾತುರ್ಯ ನಡೆಯುವ ಮೊದಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕಾಗಿದೆ.

    ವಿಡಿಯೋ ನೋಡಿ:

     

    Continue Reading

    LATEST NEWS

    Trending