ಮಂಗಳೂರಿಗೆ ಫಸ್ಟ್ ನ್ಯೂರೋ ಕಂಟಕ: ಜಿಲ್ಲೆಯಲ್ಲಿ ಇಂದು ಮತ್ತೆರಡು ಕೊರೊನಾ ಸೋಂಕು ದೃಢ
ಮಂಗಳೂರಿಗೆ ಫಸ್ಟ್ ನ್ಯೂರೋ ಕಂಟಕ: ಜಿಲ್ಲೆಯಲ್ಲಿ ಇಂದು ಮತ್ತೆರಡು ಕೊರೊನಾ ಸೋಂಕು ದೃಢ
ಮಂಗಳೂರು: ಕೊರೊನಾ ಎಂಬ ಮಹಾಮಾರಿ ಸದ್ಯ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಮಂಗಳೂರು ನಗರಕ್ಕೂ ವಕ್ಕರಿಸಿದೆ.
ಎಸ್.. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಇಂದು (ಎಪ್ರಿಲ್ 27) ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. 80 ವರ್ಷದ ತಾಯಿ ಮತ್ತು 45 ವರ್ಷದ ಮಗನಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಪಡೀಲ್ ಬಳಿಯ ಫಸ್ಟ್ ನ್ಯೂರೋ ಆಸ್ಪತ್ರೆ ಚಿಕಿತ್ಸೆಗಾಗಿ 80 ವರ್ಷದ ಮಹಿಳೆ ದಾಖಲಾಗಿದ್ದರು.
ಇದೀಗ ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ಮಂಗಳೂರಿನ ಶಕ್ತಿನಗರದ ನಿವಾಸಿಗಳಾದ ತಾಯಿ ಮತ್ತು ನೋಡಿಕೊಳ್ಳುತ್ತಿದ್ದ ಮಗನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಇದೀಗ ಪಾಸಿಟಿವ್ ಬಂದ ಮಹಿಳೆಯು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತಪಟ್ಟ ವೃದ್ದೆಯ ಪಕ್ಕದ ಬೆಡ್ ನಲ್ಲಿ ಮಲಗಿದ್ದರು.
ನಿನ್ನೆ ಸ್ವೀಪರ್ ಮಹಿಳೆಯೊಬ್ವರಲ್ಲಿ ಸೋಂಕು ಪತ್ತೆಯಾಗಿತ್ತು. ಎ.21ರಂದು ಮೃತಪಟ್ಟಿದ್ದ P-432 ವೃದ್ದೆಯ ಸಂಪರ್ಕದಿಂದ ಎಲ್ಲರಿಗೂ ಸೋಂಕು ಹರಡುತ್ತಿದೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ವೃದ್ದೆ, ಎ.23 ರಂದು ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದರು.
ಸದ್ಯ ಮೃತ ವೃದ್ದೆ ಸಂಪರ್ಕದಿಂದ ಆಸ್ಪತ್ರೆಯಲ್ಲಿದ್ದ 3 ಮಂದಿಗೆ ಸೋಂಕು ತಗುಲಿದೆ. ವೃದ್ದೆ ಮೃತಪಟ್ಟ ಹಿನ್ನಲೆಯಲ್ಲಿ ಎ.21ರಂದೇ ಫಸ್ಟ್ ನ್ಯೂರೋ ಆಸ್ಪತ್ರೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದಲ್ಲದೇ, ಆಸ್ಪತ್ರೆಯ 190 ಸಿಬ್ಬಂದಿ ಸಹಿತ 200 ಕ್ಕೂ ಅಧಿಕ ಜನರ ತಪಾಸಣೆ ಮಾಡಲಾಗಿತ್ತು.
ತಪಾಸಣೆಗೊಳಪಟ್ಟ ಎಲ್ಲರೂ ಕ್ವಾರೆಂಟೈನ್ ನಲ್ಲಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.
ಎ.19ರಂದು ಮೃತಪಟ್ಟಿದ್ದ ಬಂಟ್ವಾಳದ ಮಹಿಳೆಯಿಂದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ ಅತ್ತೆಗೆ ಸೋಂಕು ತಗುಲಿತ್ತು. ಬಳಿಕ ಬಂಟ್ವಾಳ ಕುಟುಂಬದ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದು, ಹೊರಗಿನ ಐದು ಜನರಿಗೆ ಸೋಂಕು ತಗುಲಿದೆ.
ಇದರಲ್ಲಿ ಒಂದೇ ಕುಟುಂಬದ ಇಬ್ಬರು ಸಾವು, ಇಬ್ಬರು ನೆರೆಮನೆಯವರು ಮತ್ತು ಮೂವರು ಆಸ್ಪತ್ರೆ ಸಂಪರ್ಕದಿಂದ ಸೋಂಕು ತಗುಲಿದವರಾಗಿದ್ದಾರೆ.
ಇದೀಗ ದ.ಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 12 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಸಾವನ್ನಪಿದ್ದಾರೆ. ಮತ್ತು 7 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರು ಪಾಲಿಕೆ ವ್ಯಾಪ್ತಿಯ ಶಕ್ತಿನಗರದ ತಾರಿಪಡ್ಪು ಸಮೀಪದ 85 ವರ್ಷದ ಮಹಿಳೆ ಮತ್ತು ಅವರ 45 ವರ್ಷದ ಮಗನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ, ಇದೀಗ ಇಡೀ ಶಕ್ತಿನಗರವನ್ನು ಕಂಟೈನ್ ಮೆಂಟ್ ವಲಯ ಎಂದು ಘೋಷಿಸಲಾಗಿದೆ.
LATEST NEWS
ತಿಮ್ಮಪ್ಪನ ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಕಲಬೆರಕೆ; ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್..!!
ಆಂಧ್ರಪ್ರದೇಶ/ಮಂಗಳೂರು: ತಿರುಪತಿ ಲಡ್ಡು ವಿಚಾರದಲ್ಲಿ ಇಡೀ ದೇಶದಲ್ಲೇ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ತಿರುಪತಿ ತಿರುಮಲಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡುವ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವನ್ನು ಕಲಬೆರಕೆ ಮಾಡಲಾಗುತ್ತಿತ್ತು ಅನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ತಿರುಪತಿ ಲಡ್ಡು ಅಪವಿತ್ರ ಆಗಿದೆ ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಂಡಿದ್ದಾರೆ.
ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ತುಪ್ಪದ ಜೊತೆಗೆ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಬಳಕೆ ಮಾಡಿರೋದು ಲ್ಯಾಬ್ ಟೆಸ್ಟ್ನಲ್ಲಿ ಕನ್ಫರ್ಮ್ ಆಗಿದೆ. ಇನ್ನು ಈ ಬಗ್ಗೆ ತನಿಖೆಗಾಗಿ ವಿಶೇಷ ತಂಡ ರಚಿಸುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ. ಅಲ್ಲದೇ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದಿರುವ ಅಪವಿತ್ರದ ಪರಿಹಾರಕ್ಕಾಗಿ ಪವನ್ ಕಲ್ಯಾಣ್ರವರು ವ್ರತಕೈಗೊಂಡಿದ್ದಾರೆ.
11 ದಿನಗಳ ಕಾಲ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲು ನಿರ್ಧರಿಸಿದ್ದಾರೆ. ಏಡುಕುಂಡಲವಾಡ ಕ್ಷಮಿಸು ಅಂತ ಪವನ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲಿದ್ದಾರೆ. ಇಂದು ಗುಂಟೂರಿನ ವೆಂಕ ದೇವಾಲಯದಲ್ಲಿ ಆಂಧ್ರ ಉಪಮುಖ್ಯಮಂತ್ರಿ ದೀಕ್ಷೆಯನ್ನು ಆರಂಭಿಸಲಿದ್ದಾರೆ. 11 ದಿನದ ಬಳಿಕ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಪವನ್ ಭೇಟಿ ನೀಡಿ ವ್ರತವನ್ನು ಕೈಬಿಡಲಿದ್ದಾರೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೇ ವಿಚಾರಕ್ಕೆ ಟ್ವೀಟ್ ಮಾಡಿರೋ ಡಿಸಿಎಂ ಪವನ್ ಕಲ್ಯಾಣ್, ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆ ಮಾಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು..! ವೈಎಸ್ಆರ್ ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
ಇನ್ಮುಂದೆ ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪ್ರತ್ಯೇಕ ಸಮಿತಿ ರಚಿಸಬೇಕು. ಸನಾತನ ಧರ್ಮ ರಕ್ಷಣಾ ಮಂಡಳಿಯನ್ನ ತಕ್ಷಣವೇ ಆರಂಭಿಸಬೇಕು. ಸನಾತನ ಧರ್ಮವನ್ನು ಅವಮಾನಿಸುವ ವಿಷಯಗಳನ್ನು ಕೊನೆಗಾಣಿಸಲು ಒಗ್ಗಟ್ಟಾಗಿ ಹೋರಾಡಬೇಕು ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ.
ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ
ಪವನ್ ಕಲ್ಯಾಣ್ ಟ್ವೀಟ್ಗೆ ನಟ ಪ್ರಕಾಶ್ ರಾಜ್ ಗೇಲಿ ಮಾಡಿದ್ದಾರೆ. ಸನಾತನ ಮಂಡಳಿ ಮಾಡೋದು ಬಿಟ್ಟು ಈ ಕೃತ್ಯ ಎಸಗಿದವರಿಗೆ ಮೊದಲು ಶಿಕ್ಷೆ ಕೊಡಿಸಿ ಅಂತ ಟೀಕೆ ಮಾಡಿದ್ದಾರೆ. “ಮಾನ್ಯ ಉಪ ಮುಖ್ಯಮಂತ್ರಿಗಳೇ.. ಈ ಘಟನೆ ನಿಮ್ಮ ಆಡಳಿತಾವಧಿಯಲ್ಲಿಯೇ ನಡೆದಿದೆ. ಈಗಾಗಲೇ ದೇಶದಲ್ಲಿ ಹಲವು ಸಮಸ್ಯೆಗಳಿವೆ. ಮತ್ತೆ ನೀವು ಹೊಸ ಸಮಸ್ಯೆಗಳನ್ನು ಇಲ್ಲಿಗೆ ತರುವುದು ಬೇಡ. ಮೊದಲು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸುವ ಕಡೆ ನಿಮ್ಮ ಗಮನವಿರಲಿ” ಎಂದು ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
DAKSHINA KANNADA
ಮೂಡುಬಿದಿರೆ : ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರ ಬಂಧನ
ಮೂಡುಬಿದಿರೆ : ಆತ ಒಬ್ಬ ಖತರ್ನಾಕ್ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಹಲವು ಪೊಲೀಸ್ ಠಾಣೆಯಲ್ಲಿ 42 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು. ಹಲವು ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ವಾರೆಂಟ್ ಇದ್ರೂ ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗ್ತಾನೆ ಇದ್ದ. ಇತ್ತೀಚೆಗೆ ಆಗಸ್ಟ್ ತಿಂಗಳಲ್ಲಿ ಮೂಡುಬಿದ್ರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆತ ವೃದ್ಧ ಮಹಿಳೆಯರನ್ನು ಗುರಿಯಾಗಿಸಿ ಅವರ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದ.
ಮೂಡಬಿದ್ರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ನಿರ್ಮಲಾ ಪಂಡಿತ್ ಎಂಬ 70 ವರ್ಷದ ವೃದ್ದೆಯ 24 ಗ್ರಾಂ ಚಿನ್ನದ ಸರ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಾರ್ನಾಡು ಗ್ರಾಮದ ಬಸದಿ ಬಳಿ 82 ವರ್ಷ ಪ್ರಾಯದ ಪ್ರೇಮಾ ಎಂಬ ವೃದ್ಧೆಯ 24 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಈ ಎರಡೂ ಪ್ರಕರಣದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಈ ಕೃತ್ಯ ನಡೆಸಿದ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು.
ಇದನ್ನೂ ಓದಿ :ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾ*ತ; ಸವಾರ ಸಾ*ವು
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿದಾಗ ಇದು ಖತರ್ನಾಕ್ ಖದೀಮ ಚೆಂಬುಗುಡ್ಡೆಯ ಹಬೀಬ್ ಹಸನ್ ಕೃತ್ಯ ಎಂಬುದು ಗೊತ್ತಾಗಿದೆ. ಈತನ ಮೇಲೆ ವಿವಿಧ ಠಾಣೆಯಲ್ಲಿ 15 ಕ್ಕೂ ಹೆಚ್ಚು ಬಂಧನದ ವಾರೆಂಟ್ ಇದ್ರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಇದೀಗ ಮೂಡುಬಿದ್ರೆಯಲ್ಲಿ ಕೊ*ಲೆ ಆರೋಪಿ ಬಂಟ್ವಾಳದ ಉಮ್ಮರ್ ಸಿಯಾಫ್ ಎಂಬಾತನ ಜೊತೆ ಸೇರಿ ಸರ ಕಳ್ಳತನಕ್ಕೆ ಇಳಿದಿದ್ದ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃ*ತ್ಯಕ್ಕೆ ಬಳಿಸಿದ್ದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.
LATEST NEWS
8 ವರ್ಷಗಳ ಬಳಿಕ ಆಗಮಿಸಿದ ಹಿಮಕರಡಿ ಹತ್ಯೆ
ಮಂಗಳೂರು/ರೇಕ್ಯವಿಕ್; ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ತೋಳಗಳ ಹಿಂಡು ಪುಟ್ಟ ಮಕ್ಕಳನ್ನು ಬೇಟೆಯಾಡುತ್ತಿವೆ. ಆರು ತೋಳಗಳಲ್ಲಿ ಐದನ್ನು ಸೆರೆಹಿಡಿದರೂ, ಈಗ ಒಂಟಿಯಾಗಿರುವ ತೋಳ ದಾಳಿ ನಿಂತಿಲ್ಲ. ಆದರೂ ಅದನ್ನು ಸಾಯಿಸದೆ ಸರ್ಕಾರವು ಎಲ್ಲವನ್ನೂ ಜೀವಂತ ಹಿಡಿಯುವ ಪ್ರಯತ್ನದಲ್ಲಿದೆ. ತೀರಾ ಅಪರೂಪದ್ದಾಗಿರುವ ಹಿಮ ಕರಡಿಗಳು ಅಳಿವಿನ ಅಂಚಿನಲ್ಲಿವೆ. ಐಸ್ಲ್ಯಾಂಡ್ನಲ್ಲಿ ಮನೆಯೊಂದರ ಸಮೀಪ ಬಂದ ಅಪರೂಪದ ಹಿಮಕರಡಿಯನ್ನು ಪೊಲೀಸರು ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.
ಹಿಮ ಪ್ರದೇಶಗಳು ಕರಗುತ್ತಿದ್ದು, ಇಲ್ಲಿ ಮಾತ್ರ ವಾಸಿವ ಪ್ರಾಣಿಗಳು ನಶಿಸುವ ಅಪಾಯಕ್ಕೆ ಸಿಲುಕಿವೆ. ಅಪರೂಪದಲ್ಲಿ ಅಪರೂಪ ಎನಿಸಿರುವ ಈ ಪ್ರಾಣಿಗಳನ್ನು ಕೂಡ ಮನುಷ್ಯ ಆಹುತಿ ಪಡೆಯುತ್ತಿರುವುದು ಆತಂಕ ಮೂಡಿಸಿದೆ. ಐಸ್ಲ್ಯಾಂಡ್ನ ಕುಗ್ರಾಮವೊಂದರ ಮನೆಯ ಹೊರಗೆ ಬಲು ಅಪರೂಪದ ಹಿಮ ಕರಡಿಯೊಂದು ಕಾಣಿಸಿಕೊಂಡಿದ್ದು,
ಒಂಟಿ ವೃದ್ಧೆಯ ನಿವಾಸದ ಬಳಿ ಈ ಹಿಮಕರಡಿ ಕಂಡುಬಂದಿದ್ದು, ಭಯಭೀತರಾಗಿ ತಮ್ಮ ಪುತ್ರಿಗೆ ಮಾಹಿತಿ ನೀಡಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. 2016 ರ ಬಳಿಕ ಮೊದಲ ಬಾರಿ ಹಿಮಕರಡಿ ಪತ್ತೆಯಾಗಿರುವುದು ಸುದ್ದಿಯಾಗಿದೆ.