Connect with us

    LATEST NEWS

    ಮುದ್ದಿನ ನಾಯಿಗೆ 2.5 ಲಕ್ಷ ರೂ. ಚಿನ್ನದ ಸರ ಉಡುಗೊರೆ ನೀಡಿದ ಮಹಿಳೆ..!

    Published

    on

    ಮಹಾರಾಷ್ಟ್ರ/ಮಂಗಳೂರು: ಅನೇಕರು ತಾವು ಮುದ್ದಿನಿಂದ ಸಾಕಿದ ನಾಯಿ, ಬೆಕ್ಕು ಅಥವಾ ಯಾವುದೇ ಸಾಕು ಪ್ರಾಣಿಗಳಿಗೆ ಹೊಸ ಉಡುಗೆಗಳನ್ನು ತೊಡಿಸುವುದು ಕಂಡಿದ್ದೇವೆ. ಆದರೆ ಇಲ್ಲೊಂದು ಮಹಿಳೆ ತನ್ನ ಮುದ್ದಿನ ನಾಯಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿಯ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾಳೆ. ಹೌದು, ಆಶ್ಚರ್ಯ ಎನಿಸಿದರು ಇದು ಸತ್ಯ. ಇದೀಗ ಈ ವೀಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ.

    ಉಡುಪಿ : ಪ್ರೇಯಸಿಯೊಂದಿಗೆ ಜಗಳ; ಅರ್ಧ ದಾರಿಯಲ್ಲೇ ಬಸ್ ನಿಲ್ಲಿಸಿ ಹೋದ ಡ್ರೈವರ್!

    ವೀಡಿಯೋದಲ್ಲಿ ಮಹಿಳೆಯೊಬ್ಬಳು ಜ್ಯುವೆಲ್ಲರಿಗೆ ತೆರಳಿದ್ದಾಳೆ. ಅಲ್ಲಿ ಚಿನ್ನದ ಸರವನ್ನು ಖರೀದಿಸಿ ತನ್ನ ಮುದ್ದಿನ ನಾಯಿಯ ಕೊರಳಿಗೆ ಧರಿಸುವುದನ್ನು ವಡಿಯೋದಲ್ಲಿ ಕಾಣಬಹುದಾಗಿದೆ. ಮಹಾರಾಷ್ಟ್ರದ ಜ್ಯುವೆಲ್ಲರ್ಸ್‌ ಅವರು ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೂ.16ರಂದು ಈ ವೀಡಿಯೋವನ್ನು ಹಂಚಿಕೊಂಡಿದ್ದು ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಇನ್ನು ಹಲವರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    DAKSHINA KANNADA

    ಮಾಜಿ ಶಾಸಕ ಮೋಯಿದ್ದೀನ್ ಬಾವ ಸಹೋದರ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಮಮ್ತಾಜ್ ಅಲಿ ಕಾರು ಪತ್ತೆ

    Published

    on

    ಕೂಳೂರು: ಮಾಜಿ ಶಾಸಕ ಮೋಯಿದ್ದೀನ್ ಬಾವ ಅವರ ಸಹೋದರ ಮಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಅ.6 ರ ರವಿವಾರ ಬೆಳಿಗ್ಗೆ ಕೂಳೂರು ಸೇತುವೆ ಮೇಲೆ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ.
    ಈ ಹಿನ್ನಲೆಯಲ್ಲಿ, ಅವರು ನದಿಗೆ ಹಾರಿರಬಹುದು ಅಥವಾ ಯಾರಾದರು ಎಸೆದಿರಬಹುದು ಎಂಬ ಶಂಕೆಯಿಂದ ನದಿಯಲ್ಲಿ ಎ.ಸ್.ಡಿ.ಆರ್.ಎಫ್. ಅಗ್ನಿಶಾಮಕ ದಳದ ತಂಡದವರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಾರು ಪತ್ತೆಯಾದ ಸ್ಥಳಕ್ಕೆ ಮಾಜಿ ಶಾಸಕ ಮೋಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದ್ದಾರೆ.


    ಘಟನೆ ಸಂಭವಿಸುವ ಮೊದಲು, ಮಮ್ತಾಜ್ ಅಲಿ ಮಗಳಿಗೆ ವಾಟ್ಸಾಪ್ ಮೂಲಕ ‘ಇನ್ನು ಹಿಂತಿರುಗಿ ಬರುವುದಿಲ್ಲ’ ಎಂಬ ಸಂದೇಶ ರವಾನಿಸಿರುವುದು ಆತಂಕಕ್ಕೆ ಕಾರಣವಾಗಿದೆ.
    ಸ್ಥಳಕ್ಕೆ ಮಂಗಳೂರು ಕಮೀಷನರ್ ಅನುಪಮ್ ಅಗರ್ವಾಲ್ ಆಗಮಿಸಿ ಪರಿಶೀಲನೆ ನಡೆಸಿದ್ದು, “ಮಮ್ತಾಜ್ ಅವರು ಮುಂಜಾನೆ ಮೂರು ಗಂಟೆಗೆ ಮನೆಯಿಂದ ಬಿಎಂಡಬ್ಲೂ ಕಾರ್ ಚಲಾಯಿಸಿಕೊಂಡು ಬಂದಿದ್ದರು. 5 ಗಂಟೆ ಸುಮಾರಿಗೆ ಕೂಳೂರು ಸೇತುವೆಯಲ್ಲಿ ಕಾರು ಅಪಘಾತವಾದ ಸ್ಥಿತಿಯಲ್ಲಿ ಕಂಡಿದ್ದು, ಅವರು ನಾಪತ್ತೆಯಾಗಿದ್ದಾರೆ.

    ಅವರ ಮಗಳು ಈ ಕುರಿತು ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ” ಎಂದರು.
    ನದಿಗೆ ಹಾರಿರುವ ಬಗ್ಗೆ ಸಂಶಯವಿದ್ದು ಶೋಧಕಾರ್ಯ ನಡೆಸಿದ್ದು, ಎಫ್.ಎಸ್.ಎಲ್ ಅಧಿಕಾರಿಗಳು ಆಗಮಿಸಿ ಕಾರು ಪರಿಶೀಲನೆ ಮಾಡಿದ್ದಾರೆ. ಕುಟುಂಬದ ಸದಸ್ಯರಿಂದಲೂ ಕೆಲವೊಂದು ಮಾಹಿತಿ ದೊರಕಿದ್ದು,ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    Continue Reading

    DAKSHINA KANNADA

    ಅಡವಿಯಲ್ಲಿ ಮಾನವನನ್ನು ಹೋಲುವ ದೈತ್ಯ ಪ್ರಾಣಿ ಪತ್ತೆ..!?

    Published

    on

    ಮಂಗಳೂರು (ನ್ಯೂಯಾರ್ಕ್‌ ಪೋಸ್ಟ್‌ ವರದಿ ) : ಉತ್ತರ ಅಮೆರಿಕಾದ ಜಾನಪದ ಹಿನ್ನಲೆಯುಳ್ಳ ಮನುಷ್ಯನನ್ನು ಹೋಲುವ ದೊಡ್ಡ ಪಾದದ ಜೀವಿಯನ್ನು ಕಾಡಿನಲ್ಲಿ ನೋಡಿರುವುದಾಗಿ ಬಹಳಷ್ಟು ಜನ ಹೇಳಿಕೊಂಡಿದ್ದರು. ಆದ್ರೆ ಇದುವರೆಗೂ ಇದನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ವ್ಯಕ್ತಿಯೊಬ್ಬರು ತಾನು ಓಕ್ಲಾಹಾಮಾದ ಲಾಟನ್‌ನಲ್ಲಿರುವ ಪ್ಯಾರಲಲ್ ಅಡವಿಯಲ್ಲಿ ಈ ಪ್ರಾಣಿಯನ್ನು ನೋಡಿದ್ದಾಗಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿ ಇದು ನನ್ನ ಜೀವನದ ಭಯಾನಕ ಕ್ಷಣ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.


    ನ್ಯೂಯಾರ್ಕ್‌ ಪೋಸ್ಟ್‌ ಈ ಕುರಿತಾದ ಒಂದು ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಈ  ದೊಡ್ಡ ಪಾದದ ಪ್ರಾಣಿ ಕಂಡು ಬಂದ ಬಗ್ಗೆ ಬರೆಯಲಾಗಿದೆ. ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ದೈತ್ಯಾಕಾರದ ಮಾನವನನ್ನು ಹೋಲುವ ಪ್ರಾಣಿಯೊಂದು ಮರದ ಬುಡದಲ್ಲಿ ಕುಳಿತು ಅಲ್ಲಿನ ಹೂವನ್ನು ಕೀಳುತ್ತಿರುವ ದೃಶ್ಯ ಸೆರೆಯಾಗಿದೆ. ಕೇವಲ ಒಂಬತ್ತು ಸೆಕೆಂಡ್ ಮಾತ್ರ ಈ ದೃಶ್ಯ ಕಂಡು ಬಂದಿದೆ. ಇಷ್ಟೇ ಅಲ್ಲದೆ ನ್ಯೂಯಾರ್ಕ್‌ ಪೋಸ್ಟ್ ಈ ಹಿಂದೆ ಇಂತಹ ಪ್ರಾಣಿ ಕಂಡು ಬಂದ ಕ್ಷಣ ಹಾಗೂ ಅದರ 16 ಇಂಚಿನ ಪಾದದ ಹೆಜ್ಜೆ ಗುರುತಿನ ಚಿತ್ರವನ್ನು ಪೋಸ್ಟ್ ಮಾಡಿದೆ.

    ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು, ನಿಜವಾಗಿಯೂ ಇಂತಹ ಒಂದು ಜೀವಿ ಇದೆಯಾ ಎಂಬ ಗೊಂದಲ ಸೃಷ್ಟಿಸಿದೆ. ಅನೇಖರು ಅಮೆರಿಕಾದ ಪೌರಾಣಿಕ ಹಿನ್ನಲೆ ಉಳ್ಳ ಜನಪದಲ್ಲಿ ಸೇರಿಕೊಂಡಿರುವ ಈ ಜೀವಿ ಈಗಲೂ ಇದೆ ಎಂದು ವಾದ ಮಂಡಿಸಿದ್ದಾರೆ. ಇನ್ನೂ ಕೆಲವರು ಇದೊಂದು ಅಸ್ಪಷ್ಟ ವಿಡಿಯೋ ಆಗಿದ್ದು ಇದು ನಂಬಿಕೆಗೆ ಅರ್ಹವಾಗಿಲ್ಲ ಎಂದಿದ್ದಾರೆ. ಹಾಗೇ ಇನ್ನೂ ಕೆಲವರು ನಾವೂ ಇದನ್ನು ನೋಡಿದ್ದು, ದೃಶ್ಯ ಸೆರೆ ಹಿಡಿದಿಲ್ಲ ಎಂದಿದ್ದಾರೆ.


    ಮನುಷ್ಯಂತೆ ದೇಹ ರಚನೆ ಹೊಂದಿರುವ ದೈತ್ಯಾಕಾರದ ಮೈಮೇಲೆ ರೋಮಗಳನ್ನು ಹೊಂದಿರುವ ಜೀವಿ ಇಂದಿಗೂ ಅರಣ್ಯ ಪ್ರದೇಶದಲ್ಲಿ ಇದೆ ಎಂದು ಅಮೆರಿಕಾದ ಜನರು ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಜೀವಿಯ ಬಗ್ಗೆ ಅನೇಕ ಕಥೆಗಳಿದ್ದು, ಇದಕ್ಕೆ ವೈಜ್ಞಾನಿಕ ಪುರಾವೆಗಳೂ ಸಿಕ್ಕಿದೆ ಎಂದು ಹೇಳಾಗಿದೆ. ಆದ್ರೆ ಈಗ ಹರಿದಾಡುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.

    ವಿಡಿಯೋ ವೀಕ್ಷಿಸಲು ಕ್ಲಿಕ್‌ ಮಾಡಿ :

    Continue Reading

    LATEST NEWS

    VIRAL VIDEO: ತಾಯಿಯೊಂದಿಗೆ ಎಂಟು ತಿಂಗಳ ಕಂದಮ್ಮನ ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಣ

    Published

    on

    ಮಂಗಳೂರು: ಪುಟ್ಟ ಕಂದಮ್ಮಗಳ ಜೊತೆ ತುಸು ಘಳಿಗೆ ಇದ್ದರೂ ಸಿಗುವ ಖುಷಿಯೇ ಬೇರೆ. ಮುಗ್ಧ ಮನಸ್ಸುಗಳು ನಿಸ್ವಾರ್ಥದಿಂದ ಆಡುವ ಪ್ರತಿಯೊಂದು ತೊದಲು ಮಾತನ್ನು ಕೇಳುವಾಗ ಕಿವಿಗೆ ಇಂಪೆನಿಸುತ್ತದೆ. ಮಕ್ಕಳ ಮುದ್ದಾದ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ತಾಯಿಯೊಂದಿಗೆ ಎಂಟು ತಿಂಗಳ ಮಗುವೊಂದು ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಿಸಿದ್ದು, ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.

    ಅರ್ಜುನನ ಪುತ್ರ ಅಭಿಮನ್ಯು ತಾಯಿಯ ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಭೇದಿಸುವ ಕಲೆಯನ್ನು ತಂದೆಯಿಂದ ಕಲಿತಿರುತ್ತಾನೆ. ಅಂತೆಯೇ ಈ ಮಗು ತಾಯಿಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಅನ್ನು ಕಲಿತಿದೆ ಎನ್ನುವ ಸಾಲುಗಳೊಂದಿಗೆ ಈ ವಿಡಿಯೋವನ್ನು Vaidik Gyaan ಹೆಸರಿನ ಖಾತೆಯಲ್ಲಿ  ಹಂಚಿಕೊಳ್ಳಲಾಗಿದೆ. ಶ್ರೀ ಕೃಷ್ಣ ದಾಮೋದರಾಷ್ಟಕಂ ಶ್ಲೋಕ ಪಠಿಸುತ್ತಿರುವಾಗ ಅದರ ಕೊನೆಯ ಪದವನ್ನು ಮಗುವು ಮುದ್ದಾಗಿ ಉಚ್ಚರಿಸುತ್ತಿದೆ.
    ಸಮಾಜಿಕ ಜಾಲತಾಣದಲ್ಲಿ ಅಧಿಕ ವೀಕ್ಷಣೆ ಕಂಡಿದ್ದು. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮಗುವಿನ ಈ ಆಧ್ಯಾತ್ಮಕ ಸಾಧನೆಯನ್ನು ಒಬ್ಬರು ಹೊಗಳಿದ್ದಾರೆ. ಮತ್ತೊಬ್ಬರು, ಜೈ ಸನಾತನ ಧರ್ಮ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಮಗುವಿನ ಬಾಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಣ ಕೇಳುವುದೇ ಕಿವಿಗೆ ಇಂಪು’ ಎಂದಿದ್ದಾರೆ.

     

    watch this video : 

    Continue Reading

    LATEST NEWS

    Trending