Connect with us

    LATEST NEWS

    ವಯನಾಡ್ ಭೂಕುಸಿತ: ಪರಿಹಾರ ಧನ ಏಕೆ ವಿತರಿಸಿಲ್ಲ; ಕೇಂದ್ರಕ್ಕೆ ಕೇರಳ ಹೈಕೋರ್ಟ್ ಪ್ರಶ್ನೆ

    Published

    on

    ವಯನಾಡ್ ಭೂಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಹಣ ವಿತರಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಕೇರಳ ಹೈಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.

    ಕರ್ನಾಟಕ ಮತ್ತು ತಮಿಳುನಾಡಿನಂತಹ ನೆರೆಯ ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಧನ ಒದಗಿಸಲಾಗಿದೆ ಎಂಬ ವಿಚಾರವನ್ನು ನ್ಯಾಯಮೂರ್ತಿ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ ಎಂ ಅವರಿದ್ದ ವಿಭಾಗೀಯ ಪೀಠ ಗಮನಿಸಿತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನಿಧಿ ವಿತರಿಸುವುದನ್ನು ಪರಿಗಣಿಸಬೇಕು ಎಂದು ಅದು ಸೂಚಿಸಿತು.

    ಭೂಕುಸಿತದಿಂದ ತೀವ್ರ ಹಾನಿ ಮತ್ತು ನಷ್ಟ ಅನುಭವಿಸಿದ್ದರೂ ಕೇರಳಕ್ಕೆ ಇನ್ನೂ ಯಾವುದೇ ಪರಿಹಾರ ಧನ ಒದಗಿಸಿಲ್ಲ ಎಂದು ಅಮಿಕಸ್ ಕ್ಯೂರಿ (ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವ ವಕೀಲ) ರಂಜಿತ್ ಥಂಪನ್ ಗಮನ ಸೆಳೆದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿತು.

    ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್, ಅಮಿಕಸ್ ನೀಡಿದ ಸಲಹೆಗಳಿಗೆ ಪ್ರತಿಕ್ರಿಯಿಸಲು ಸಮಯಾವಕಾಶ ಕೋರಿದರು. ಹೀಗಾಗಿ ಅಕ್ಟೋಬರ್ 18ರೊಳಗೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಮತ್ತು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

    ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಪತ್ತು ನಿರ್ವಹಣೆ ಮತ್ತುನಿಯಂತ್ರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿತ್ತು.

    Click to comment

    Leave a Reply

    Your email address will not be published. Required fields are marked *

    LATEST NEWS

    ನಿಯಂತ್ರಣ ತಪ್ಪಿ ಬೈಕ್ ಗದ್ದೆಗೆ; ಸವಾರ ಸಾ*ವು

    Published

    on

    ತೆಕ್ಕಟ್ಟೆ : ನಿಯಂತ್ರಣ ತಪ್ಪಿ ಬೈಕ್ ಗದ್ದೆಗೆ ಉರುಳಿ ಬಿದ್ದು ಸವಾರ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದ ಘಟನೆ ಕುಂದಾಪುರ ತೆಕ್ಕಟ್ಟೆ ಸಮೀಪದ ಕೊಮೆಯಲ್ಲಿ ಸಂಭವಿಸಿದೆ.

    ಪಡುಕರೆ ನಿವಾಸಿ ಮಹೇಂದ್ರ (32) ಮೃತ ದುರ್ದೈವಿ.

    ಸಂಬಂಧಿಕರ ಮನೆಯಲ್ಲಿ ದೀಪಾವಳಿ ಹಬ್ಬದ ಕಾರ್ಯಕ್ರಮವನ್ನು ಮುಗಿಸಿ ತಡರಾತ್ರಿ ಬೈಕ್ ನಲ್ಲಿ ಮಹೇಂದ್ರ ಬರುತ್ತಿದ್ದ ವೇಳೆ ತೆಕ್ಕಟ್ಟೆ– ಕೊಮೆ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಹಿತ ರಸ್ತೆ ಬದಿಯ ಗದ್ದೆಗೆ ಆಯತಪ್ಪಿ ಬಿದ್ದಿದ್ದಾರೆ. ಗದ್ದೆಯಲ್ಲಿ ನೀರಿದ್ದುದರಿಂದ ಉಸಿರುಗಟ್ಟಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ.

    ಕೃಷಿಭೂಮಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಕೊಂಡಿದ್ದು, ಬೈಕ್ ಚಾಲಕನ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ಮಗುಚಿ ಬಿದ್ದಿದ್ದರಿಂದ ನೀರಿನಲ್ಲಿ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    Continue Reading

    DAKSHINA KANNADA

    ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನಿಂದ ಮೆಸೇಜ್; ಯುವಕರಿಂದ ಹಲ್ಲೆ

    Published

    on

    ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನೋರ್ವ ವಿದ್ಯಾರ್ಥಿನಿಗೆ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಹಲ್ಲೆ ಮಾಡಿದ ಘಟನೆ ಸುಬ್ರಹ್ಮಣ್ಯದ ಗುತ್ತಿಗರುವಿನಲ್ಲಿ ನಡೆದಿದೆ.

    ಥಳಿತಕ್ಕೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದಾನೆ.

    ನಿಯಾಝ್ ಎಂಬಾತ ಹಲ್ಲೆಗೊಳಗಾದ ಯುವಕ.

    ಸ್ಥಳೀಯ ಯುವತಿಯೋರ್ವಳಿಗೆ ನಿಯಾಝ್ ಮೆಸೇಜ್ ಮಾಡುತ್ತಿರುವುದಾಗಿ ತಿಳಿದು ಬಂದ ಬಳಿಕ, ಅವನನ್ನು ಕರೆಸಿಕೊಂಡ ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ.

    ಈ ಪ್ರಕರಣದ ಕುರಿತು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಪ್ರಚಾರದ ವೇಳೆ ಬೈಕ್‌ನಿಂದ ಬಿದ್ದ ನಿಖಿಲ್‌ ಕುಮಾರಸ್ವಾಮಿ

    Published

    on

    ಮಂಗಳೂರು/ರಾಮನಗರ : ಚನ್ನಪಟ್ಟಣ ಉಪಚುನಾವಣಾ ಪ್ರಚಾರದ ವೇಳೆ ನಿಖಿಲ್‌ ಕುಮಾರಸ್ವಾಮಿ ಬೈಕ್‌ನಿಂದ ಬಿದ್ದಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿಯಲ್ಲಿ ನಿಖಿಲ್‌ ಕಾರ್ಯಕರ್ತನ ಬೈಕ್‌ ಏರಿ ಪ್ರಚಾರ ನಡೆಸುತ್ತಿದ್ದರು. ಈ ಸಂದರ್ಭ ಮಳೆ ನೀರಿನಿಂದ ಕೆಸರಾಗಿದ್ದ ರಸ್ತೆಯಲ್ಲಿ ಆಯತಪ್ಪಿ ಬಿದ್ದಿದ್ದಾರೆ.

    ಇದನ್ನೂ ಓದಿ : ಚಲಿಸುತ್ತಿದ್ದ ಬೈಕಿನಲ್ಲಿ ಪಟಾಕಿ ಸಿಡಿಸಿ ಪುಂಡಾಟ; ಇಬ್ಬರ ಬಂಧನ

    ತಕ್ಷಣವೇ ಸ್ಥಳೀಯ ಕಾರ್ಯಕರ್ತರು ನಿಖಿಲ್‌ ನೆರವಿಗೆ ಧಾವಿಸಿದ್ದಾರೆ. ಅವರನ್ನು ಮೇಲಕ್ಕೆತ್ತಿ ಉಪಚರಿಸಿದ್ದಾರೆ. ಸ್ವಲ್ಪಹೊತ್ತು ವಿಶ್ರಾಂತಿ ಪಡೆದ ಬಳಿಕ ಮತ್ತೆ ನಿಖಿಲ್‌ ಕುಮಾರಸ್ವಾಮಿ ಪ್ರಚಾರ ಕಾರ್ಯ ಮುಂದುವರಿಸಿದರು.

    Continue Reading

    LATEST NEWS

    Trending