Monday, January 24, 2022

ಕಂದಮ್ಮನ ಹೊಟ್ಟೆ, ಮರ್ಮಾಂಗವನ್ನು ಬೆಂಕಿಯಲ್ಲಿ ಸುಟ್ಟು, ಪೊದೆಯಲ್ಲಿ ಬಿಸಾಡಿ ವಿಕೃತಿ

ಕೊಕಟನೂರ: ಹಾಲುಗಲ್ಲದ ಕಂದಮ್ಮನ ಹೊಟ್ಟೆ, ಮರ್ಮಾಂಗವನ್ನೇ ಬೆಂಕಿಯಲ್ಲಿ ಸುಟ್ಟು ವಿಕೃತಿ ಮೆರೆದು, ಪೊದೆಯಲ್ಲಿ ಬಿಸಾಡಿ ಹೋದ ಘಟನೆ ಬೆಳಗಾವಿಯ ಹಲ್ಯಾಳ ಗ್ರಾಮದ ಕೃಷ್ಣಾ ನದಿ ದಡದ ಜಾಬಗೌಡರ ತೋಟದ ವಸತಿ ಪ್ರದೇಶದಲ್ಲಿ ನಡೆದಿದೆ.


ಅಂದಾಜು 1 ವರ್ಷದ ಹೆಣ್ಣು ಮಗುವಿನ ಹೊಟ್ಟೆ ಹಾಗೂ ಮರ್ಮಾಂಗ ಜಾಗದಲ್ಲಿ ಸುಟ್ಟ ಗುರುತು ಪತ್ತೆಯಾಗಿದೆ. ಸಾರ್ವಜನಿಕರು ಮಗುವನ್ನು ರಕ್ಷಿಸಿ, ಚಿಕಿತ್ಸೆಗಾಗಿ ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಮಗುವಿನ ಪಾಲಕರು ಯಾರೆಂದು ತಿಳಿದುಬಂದಿಲ್ಲ. ವಾಮಾಚಾರ ಅಥವಾ ಅತ್ಯಾಚಾರ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Hot Topics

ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು: ಸ್ವಾತಂತ್ರ ಸೇನಾನಿ ನೇತಾಜಿ ಸುಭಾಸ್ ಚಂದ್ರ ಬೋಸ್ 125 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಿರುವೆರ್ ಕುಡ್ಲ(ರಿ) ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ...

“ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ”

ಮಂಗಳೂರು: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ. ಈ ಸಮಾಜದ ಯುವಕರನ್ನು ಪೂಜಾರಿಯವರಿಂದ ದೂರ ಮಾಡಿದ ಶ್ರೇಯಸ್ಸು ಯಾರಿಗಿದೆ ಎಂದರೆ ಅದೇ ಮಹಾನುಭಾವನಿಗೆ ಎಂದು...

ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1ಕೆ.ಜಿ, 300ಗ್ರಾಂ ಚಿನ್ನ ವಶಕ್ಕೆ

ದೇವನಹಳ್ಳಿ: ದುಬೈನಿಂದ ಬೆಂಗಳೂರಿಗೆ ಬಂದಿಳಿದ ಇಬ್ಬರು ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ನಗರದ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಮುಂಬೈಗೆ ಬಂದು ನಂತರ ಮುಂಬೈನಿಂದ ಬೆಂಗಳೂರಿಗೆ...